ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ


Team Udayavani, Oct 24, 2021, 12:02 PM IST

8dharmasthala

ಶ್ರೀ ಕ್ಷೇತ್ರ ಧರ್ಮಸ್ಥಳ ಪವಿತ್ರ ಯಾತ್ರಾಸ್ಥಳವಿಂದು ಧಾರ್ಮಿಕ ಚೌಕಟ್ಟಿನ ಪರಿಧಿ ಮೀರಿ ಧರ್ಮದ ಪರಿಕಲ್ಪನೆಯನ್ನು ಮಾನವ ಧರ್ಮಕ್ಕೆ ವಿಸ್ತರಿಸುವ ಮೂಲಕ ಅನನ್ಯ ಸೇವಾ ದೀಕ್ಷೆಗಳಿಂದ ಜಗದ್ವಿಖ್ಯಾತವಾಗಿ ಬೆಳೆದಿದೆ ಎಂದಾದರೆ ಅದು ಧರ್ಮ ಸಾಮ್ರಾಜ್ಯದ ಸರ್ವಶಕ್ತ ಧರ್ಮತೇಜ ನಮ್ಮ ಪೂಜ್ಯ ಖಾವಂದರಿಂದ.

ಧಾರ್ಮಿಕ ಕ್ಷೇತ್ರವೊಂದು ಭಕ್ತಿ ಆಲಯವಾಗಿ ಮಾತ್ರ ಬೆಳಗದೆ, ಸಕಲಕೋಟಿ ಜೀವರಾಶಿಗಳ ಆಶಯಕ್ಕೆ ಬದ್ಧವಾಗಿ, ಅಣು ಅಣುಗಳಲ್ಲೂ ದಾನ ಧರ್ಮದ ಚಿಂತನೆ ಮೊಳಗಿ ‘ಸರ್ವೆ ಜನಾಃ ಸುಖೀನೋ ಭವಂತು’ಎಂಬ ಜಗದೋದ್ಧಾರಕನ ಪಟ್ಟವನ್ನು ಅರ್ಥಾರೂಢವಾಗಿ ಸಾಕಾರಗೊಳಿಸಿದವರು ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆ ಎಂಬ ಧರ್ಮ ಸಾಮ್ರಾಟರು.

ರಾಜ್ಯವಿರಲಿ, ರಾಷ್ಟ್ರವಿರಲಿ ರಾಷ್ಟ್ರೋತ್ಥಾನ ಪರಿಕಲ್ಪನೆ ಸಾಕಾರವಾಗುವುದೇ ಹಳ್ಳಿ, ಗ್ರಾಮಗಳ ಚೌಕಟ್ಟಿನ ಪರಂಪರೆಯಲ್ಲಿ. ಶತಮಾನಗಳ ಪರಂಪರೆಯನ್ನು ಸುದೀರ್ಘ‌ವಾಗಿ ಕಾಪಿಡುವುದು ಮತ್ತು ಅದರ ಮೂಲ ಸ್ವರೂಪವನ್ನು ಎಲ್ಲೆಡೆ ಸಾಕಾರಗೊಳಿಸುವುದರಿಂದ ಕುಟುಂಬ ವ್ಯವಸ್ಥೆ ಸುಭದ್ರ ಎಂಬುದನ್ನು ಕಂಡವರು ಧರ್ಮಪರಿಪಾಲಕ ಡಾ| ಹೆಗ್ಗಡೆ ಅವರು.

ವಾಸ್ತವದಲ್ಲಿ ಈಶ್ವರನ ಸೃಷ್ಟಿಯಲ್ಲಿ ಜ್ಞಾನಕ್ಕೆ ಮಿತಿಯೇ ಇಲ್ಲ ಹಾಗೂ ಜ್ಞಾನಿಗಳಿಗೂ, ಅದಕ್ಕಾಗಿಯೇ ಮಾತಾಡುವ ಮಂಜುನಾಥ ಎಂದೇ ಉಲ್ಲೇಖೀತ. ತಮ್ಮ ಜ್ಞಾನದ ಆಕಾರವನ್ನು ಸುಖ ಹಾಗೂ ವಿಶ್ರಾಂತಿಗಳಿಂದ ಅಂತರವಿರಿಸಿ ರಾಜ್ಯದೆಲ್ಲೆಡೆ ಯೋಜನೆ ಯೋಚನೆಗಳನ್ನು ಪ್ರತಿನಿತ್ಯ ಪ್ರತಿ ಸತ್ಯ ಎಂಬಂತೆ ವ್ಯಾಪಿಸಿದ್ದಾರೆ. ಶಿಸ್ತುಬದ್ಧ ಜೀವನ, ಅಭಯ ನೀಡಿದರೆಂದರೆ ಮಾತು ತಪ್ಪದ ಕೈಂಕರ್ಯ, ಅಚ್ಚುಕಟ್ಟಾದ ಕಾರ್ಯಯೋಜನೆಗೆ ಪೂಜ್ಯರು ಎಷ್ಟು ಅಭಾರಿ ಎಂದರೆ ಅವರು ಗ್ರಾಮಾಭಿವೃದ್ಧಿ ಮುಖೇನ 40 ಸಾವಿರಕ್ಕೂ ಅಧಿಕ ಕುಟುಂಬಕ್ಕೆ ಉದ್ಯೋಗ ಕಲ್ಪಿಸಿರುವುದು, ರಾಜ್ಯಾದ್ಯಂತ 300 ಕ್ಕೂ ಅಧಿಕ ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರಕ್ಕೆ ನೆರವು ಒದಗಿಸಿರುವುದೇ ಸಾಕ್ಷಿ.

ಸಮರ್ಪಣಾ ಭಾವ ಕಾರ್ಯದ ಹೆಸರಲ್ಲ, ಸಮರ್ಪಣಾ ಭಾವ ಹೃದಯದ ಭಾಗವಾಗಿರುತ್ತದೆ ಹಾಗೂ ಮನಸ್ಸಿನ ಸ್ಥಿತಿಯಾಗಿರುತ್ತದೆ. ಅರ್ಥಾತ್‌ ಪೂಜ್ಯರನ್ನು ಕಾಣಲು ನಾಡಿನೆಲ್ಲೆಡೆಯಿಂದ ಸಹಸ್ರಾರು ಮಂದಿ ಹಾತೊರೆಯುತ್ತಾರೆ. ವಿಭಿನ್ನ ವ್ಯಕ್ತಿತ್ವ, ವಿವಿಧ ಸಮಸ್ಯೆಗಳಿಂದ ಕೂಡಿರುವವರು ಅವರಿಗೆ ಎದುರಾಗುತ್ತಾರೆ. ಆದರೆ ಕೊಂಚವೂ ವಿಚಲಿತರಾಗದೆ ಅವರವರ ಸಮಸ್ಯೆಗೆ ಅನುಗುಣವಾಗಿ ಅವರ ಶ್ರೇಯಸ್ಸಿಗೋಸ್ಕರ ನುಡಿದಂತೆ ನಡೆಯುವ ಮಂಜುನಾಥನಾಗಿ ಅಭಯ ನೀಡುತ್ತಾರೆ. ಇಂತಹ ತಾಳ್ಮೆ ಹಾಗೂ ಚಿಂತನಾ ಸಾರಗಳು ಮಹಾನ್‌ ಪುರುಷರಿಗಷ್ಟೇ ಸಿದ್ಧಿಸುವಂತಹದ್ದು.

ಶ್ರೀಕೃಷ್ಣ ಹೇಳುವಂತೆ, ಒಬ್ಬ ವ್ಯಕ್ತಿ ಸ್ವಲ್ಪ ಸಮಯ ಶ್ರೇಷ್ಠನಾಗಬಲ್ಲ, ಆದರೆ ಶಾಶ್ವತರಾಗಿ ಶ್ರೇಷ್ಠನಾಗಿರಲು ಮೌಲ್ಯಗಳ ಅರಿವಿರಬೇಕು. ಮೌಲ್ಯ ಸ್ವತಃ ಎಷ್ಟು ಜ್ಞಾನ ಪಡೆದೆ ಎಂಬುದಕ್ಕಿಲ್ಲ, ಮೌಲ್ಯ ನಾವು ಪಡೆದ ಜ್ಞಾನ ಬೇರೆಯವರಿಗಿಂತ ಎಷ್ಟು ಅಧಿಕವಾಗಿದೆ ಎಂಬುದರಲ್ಲಿದೆ. ಖಾವಂದರ ಜ್ಞಾನಕ್ಕೆ ಖಾವಂದರೇ ಸಾಟಿ. ಅವರ ಆದರ ಆತಿಥ್ಯ, ಸಿದ್ಧಾಂತ, ಯೋಜನೆ ಯೋಚನೆ ಸಹಸ್ರ ಸಹಸ್ರ ವರ್ಷಕ್ಕೂ ಅನುಕರಣೀಯ. ಒಂದು ಸರಕಾರ ನೆರವೇರಿಸಲು ಸಾಧ್ಯವಾಗದ ಯೋಜನೆಗಳನ್ನು ಡಾ| ಹೆಗ್ಗಡೆಯವರು ಧಾರ್ಮಿಕ ಕ್ಷೇತ್ರದ ಮೂಲಕ ಒಂದು ಸಂಸ್ಥೆಯಾಗಿ ಕೈಗೂಡಿಸಿದ್ದಾರೆ ಎಂಬುದನ್ನು ರಾಜ್ಯವಾಳುವ ಮುಖ್ಯಮಂತ್ರಿಗಳು, ಜನಪ್ರತಿನಿಧಿಗಳು ಎಷ್ಟೋ ಭಾರಿ ಉಲ್ಲೇಖೀಸಿದ್ದುಂಟು.

ಪೂಜ್ಯ ಖಾವಂದರು ಯೋಜನಾ ಕೌಶಲ್ಯ ಅದ್ಭುತವಾದದ್ದು, ಧರ್ಮಸ್ಥಳದ ಚಾರಿತ್ರಿಕ ಮಹತ್ವ, ಪರಂಪರೆ ಮತ್ತು ತಮ್ಮ ವೈಯಕ್ತಿಕ ವ್ಯಕ್ತಿತ್ವಕ್ಕೆ ಸರಿದೂಗುವ ರೀತಿಯಲ್ಲಿಯೇ ಅವರು ಯೋಜನೆಗಳನ್ನು ರೂಪಿಸುತ್ತಾರೆ. ಬಹುಜನ ಸುಖಾಯ ಬಹುಜನ ಹಿತಾಯ ಅವರ ಧೋರಣೆ ಇಂದು ಭಾರತೀಯ ಸಮಾಜಕ್ಕೊಂದು ದಾರಿದೀಪ. ಸಕಲ ಜೀವರಾಶಿಯ ಹುಟ್ಟು ಸೂರ್ಯನ ಪ್ರತಿಬಿಂಬದ ಅಸ್ತಿತ್ವದ ಮೇಲಿದೆ, ದಿನ ಬೆಳಗಾದಾಗ ಸೂರ್ಯ ಉದಯಿಸುತ್ತಾನೆ ಎಂಬ ನಂಬಿಕೆ ಮೇಲೆ ಜೀವನ ನೆಟ್ಟಿದೆ. ಅದೇ ರೀತಿಯಾಗಿ ರಾಜ್ಯಾದ್ಯಂತ ಅದೆಷ್ಟೋ ಕುಟುಂಬ ಖಾವಂದರ ಯೋಜನೆಯ ಬೆಳಕಿನಿಂದ ಗೂಡು ಕಟ್ಟಿ ಆಶ್ರಯ ಪಡೆದಿದೆ ಎಂದರೆ ತಪ್ಪಾಗಲಾರದು.

ಧರ್ಮ, ಸಂಸ್ಕೃತಿ, ಶಿಕ್ಷಣ, ಕ್ರೀಡೆ, ಯಕ್ಷಗಾನ, ಕೃಷಿ, ಉದ್ದಿಮೆ, ಫೋಟೋಗ್ರಾಫಿ, ಪ್ರಕೃತಿ ಚಿಕಿತ್ಸೆ, ಆಯುರ್ವೇದ, ಹಳೆ ವಸ್ತುಗಳ ಸಂಗ್ರಹ ಹಾಗೂ ಸಂರಕ್ಷಣೆ ಮೊದಲಾದ ವಿಷಯ ಯಾವುದೇ ಇರಲಿ, ಹೆಗ್ಗಡೆಯವರು ತಜ್ಞರ ಜತೆ ಆಸಕ್ತಿಯಿಂದ ತೆರೆದ ಮನದಿಂದ ಚರ್ಚಿಸಬಲ್ಲವರು. ಉತ್ತಮ ಆಡಳಿತಗಾರರಾಗಿ, ವಿಚಾರವಾದಿಯಾಗಿ, ಭಾವಜೀವಿಯಾಗಿ ಪ್ರಗತಿಪರ ಮನೋಭಾವದಿಂದ ಚಿಂತಕರಾಗಿ, ದಣಿವರಿಯದ ಹೋರಾಟಗಾರರಾಗಿ ಹೀಗೆ ಅವರ ವ್ಯಕ್ತಿತ್ವ ತೆರೆದಷ್ಟೂ ಅನಾವರಣಗೊಳ್ಳುತ್ತಲೇ ಹೋಗುವಂಥದ್ದು.

ತಮ್ಮ ನ್ಯಾಯದಾನ ವ್ಯವಸ್ಥೆಯ ಮೂಲಕ ಪ್ರಜೆಗಳನ್ನೂ, ಧಾರ್ಮಿಕ ಕಾರ್ಯಕ್ರಮಗಳ ಮೂಲಕ ಧರ್ಮವನ್ನೂ, ಮದ್ಯವರ್ಜನ ಶಿಬಿರ, ಸ್ವ ಸಹಾಯ ಸಂಘಗಳು, ಜ್ಞಾನವಿಕಾಸ ಮಹಿಳಾ ಸಂಘಟನೆ ಮುಂತಾದ ಆರ್ಥಿಕ ಸೂತ್ರಗಳ ಮೂಲಕ ಸಂಪತ್ತನ್ನೂ ರಕ್ಷಿಸುತ್ತಿರುವುದರಿಂದ ನಿಜವಾದ ಅರ್ಥದಲ್ಲಿ ಅವರು ಪ್ರಜಾಧರ್ಮ ಸಂಪದ್ರಕ್ಷಕರಾಗಿದ್ದಾರೆ. ಯಾವುದೇ ರಾಷ್ಟ್ರಕ್ಕೆ ಧರ್ಮವನ್ನಾಚರಿಸುವ ಪ್ರಜೆಗಳಿಗಿಂತ ದೊಡ್ಡ ಸಂಪತ್ತು ಮತ್ತೂಂದಿಲ್ಲ. ಇಂತಹ ಸಂಪತ್ತನ್ನು ನಮ್ಮ ನಾಡಿಗೆ ದಿನನಿತ್ಯ ವಧಿಸುತ್ತಿರುವುದರಿಂದಲೂ ಅವರು ಪ್ರಜಾಧರ್ಮ ಸಂಪದ್ರಕ್ಷಕ. ಅವರ ವ್ಯಕ್ತಿತ್ವ ಒಂದೊಂದು ಮುಖವನ್ನೂ ಗುರುತಿಸಿ ಶಬ್ಧಗಳಲ್ಲಿ ಕಟ್ಟಿಕೊಡುವುದು ಕಷ್ಟದ ಕೆಲಸ.

ಶ್ರೀ ಧ.ಮಂ. ಎಜುಕೇಶನಲ್‌ ಟ್ರಸ್ಟ್‌ ಹಾಗೂ ಎಸ್‌ಡಿಎಂ ಎಜುಕೇಶನಲ್‌ ಸೊಸೈಟಿ ಮೂಲಕ ಪ್ರಾಥಮಿಕ, ಪ್ರೌಢ, ಕಾಲೇಜು ಶಿಕ್ಷಣದ ಜತೆಗೆ ಪದವೀಧರರಾಗುವವರಿಗಾಗಿ ಪದವಿ, ಕಾನೂನು, ಎಂಜಿನಿಯರಿಂಗ್‌, ಮೆಡಿಕಲ್‌, ಡೆಂಟಲ್‌, ಆಯುರ್ವೇದ, ನ್ಯಾಚುರೋಪಥಿ ಕಾಲೇಜು ಹಾಗೂ ಆಸ್ಪತ್ರೆಗಳನ್ನು ನಾಡಿನ ವಿವಿಧೆಡೆ ತೆರೆದು ಲಕ್ಷಾಂತರ ವಿದ್ಯಾರ್ಥಿಗಳ ಬಾಳಿಗೆ ಬೆಳಕು ತುಂಬಿದ್ದಾರೆ.

ಧರ್ಮಾಧಿಕಾರಿಯಾಗಿ ಕೇವಲ ತಮ್ಮ ಕ್ಷೇತ್ರದ ಅಭ್ಯುದಯವನ್ನು ಮಾತ್ರ ಬಯಸದ ಹೆಗ್ಗಡೆಯವರು ತಾವೇ ಸ್ಥಾಪಿಸಿದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಮೂಲಕ ನಾಡಿನ ನೂರಾರು ಪುರಾತನ ದೇವಾಲಯ, ಸ್ಮಾರಕಗಳ ನವೀಕರಣಕ್ಕೆ ನೆರವಾಗುತ್ತಿದ್ದಾರೆ. ಮಹರ್ಷಿ ಶ್ರೀ ವಾಲ್ಮೀಕಿಯವರ ರಾಮಾಯಣದಲ್ಲಿ 10 ಲಕ್ಷ ಪದಗಳ ಕುಂಚವಿದ್ದಂತೆ ಪೂಜ್ಯರ ಸಾಧನೆಯ ಮೈಲುಗಲ್ಲನ್ನು ವಿವರಿಸುವುದು ಅಸದಳ. ಎಷ್ಟು ಲೇಖಕರು, ಕವಿಗಳು, ಚಿಂತಕರು ಅವರ ಸಾಧನೆಯನ್ನು ಹೊತ್ತಗೆಯ ರೂಪದಲ್ಲಿ ಹೊರ ತಂದಿದ್ದಾರೆ. ಓದಿದಷ್ಟು ಪೂರ್ಣಗೊಳ್ಳದ, ಬರೆದಷ್ಟು ದಡ ಸೇರದ ಅವರ ಸಾಧನೆಯ ತೇಜಸ್ಸು ಪ್ರಕಾಶಿತ.

ಧರ್ಮೋ ರಕ್ಷತಿ ರಕ್ಷಿತಃ ಧರ್ಮವನ್ನು ರಕ್ಷಿಸಿದವನನ್ನು ಧರ್ಮವು ರಕ್ಷಿಸುತ್ತದೆ ಎಂಬಂತೆ ಈ ಯುಗವು ಕಂಡ ಸದ್ಗುಣಿ, ರಾಷ್ಟ್ರಸೇವಕ, ಅಸಮಾನ್ಯ ಚೈತನ್ಯಶಕ್ತಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ.ವೀರೇಂದ್ರ ಹೆಗ್ಗಡೆ ಅವರ ದೂರದೃಷ್ಟಿ ಪರಿಕಲ್ಪನೆ ಸೂರ್ಯಚಂದ್ರರಿರುವ ವರೆಗೂ ಅಜರಾಮರ.

53ವರ್ಷಗಳ ಹಿಂದೆ ಆಕಾಂಕ್ಷೆಗಳ ತ್ಯಾಗವನ್ನು ತ್ಯಜಿಸಿ, ಧರ್ಮಸ್ಥಳದ ಧರ್ಮಾಧಿಕಾರಿ ಪಟ್ಟವನ್ನು ಏರಿ ಪರಂಪರಾಗತ ಇತಿಹಾಸವನ್ನು ಅಗರ್ಭ ಪರಿಪಾಲಕರಾಗಿಸಿದವರು ಪೂಜ್ಯರು. ಪವಿತ್ರ ಯಾತ್ರಾಸ್ಥಳ ಭಕ್ತಿ-ಶ್ರದ್ಧೆಗಳ ಧಾರ್ಮಿಕ ಕೇಂದ್ರವಾಗಿ, ನಡೆ ನುಡಿ, ನ್ಯಾಯಗಳ ಧರ್ಮಕ್ಷೇತ್ರವಾಗಿ ಕರ್ನಾಟಕದ ಒಳಗೆ ಮತ್ತು ಹೊರಗೆ ಸಾಧನೆಯ ಪರಿಧಿ ಮೀರಿ ಸೇವಾ ಕೈಂಕರ್ಯ ಒದಗಿಸಿದವರು ಡಾ| ಹೆಗ್ಗಡೆಯವರು. ಭಾರತದ ಸಂಸ್ಕೃತಿಯನ್ನು ಜಗತ್ತಿಗೆ ಸಾರಿ ಹೇಳಿದ ಆಚಾರ್ಯತ್ರಯರಲ್ಲಿ ಶಂಕರಾಚಾರ್ಯರು ಮೊದಲಿಗರು, ಇಲ್ಲಿ ಧರ್ಮ ಸಾಮ್ರಾಜ್ಯವನ್ನು ಮಾನವ ಧರ್ಮದತ್ತ ಬೆಳಕು ಚೆಲ್ಲುವಂತೆ ಮಾಡಿದ ಮೊದಲಿಗರು ಪೂಜ್ಯ ಖಾವಂದರು. ಏಕೆಂದರೆ ಅಷ್ಠ ದಿಕ್ಕುಗಳಲ್ಲೂ ಧರ್ಮಸ್ಥಳದ ಬಹುಮುಖೀ ಚಟುವಟಿಕೆಗಳು ಒಂದಲ್ಲ ಒಂದು ರೂಪದಲ್ಲಿ ಕಾಣಸಿಗುವಂತಹದು. ಕೇವಲ ಧರ್ಮ ಶಿಕ್ಷಣ, ಧಾನ – ಧರ್ಮವೊಂದೇ ಜನರ ಕಲ್ಯಾಣವಲ್ಲ ಎಂಬುದನ್ನು ಅರಿತು ನಾಡಿನ ಸುಭೀಕ್ಷೆಗೆ ಅಷ್ಠ ದಿಕ್ಕುಗಳಲ್ಲೂ ಪರಿವರ್ತನೆ ಬಯಸಿ ಆಧುನಿಕ ಆಡಳಿತ ಪದ್ಧತಿಗೆ ಹೆಗ್ಗುರುತಾದವರು ಖಾವಂದರು.

1968, ಅ.24 ರಂದು ಪಟ್ಟಾಧೀಶರಾದ ಬಳಿಕ ವಿವಿಧ ಸ್ತರಗಳಲ್ಲಿ ಯೋಜನೆ ರೂಪಿಸುತ್ತಾ ಗ್ರಾಮ ಸುಭೀಕ್ಷೆಗೆ ಗ್ರಾಮಾಭಿವೃದ್ಧಿ ಯೋಜನೆ, ಶಿಕ್ಷಣ ಕ್ರಾಂತಿಗೆ ಶಿಕ್ಷಣ ಸಂಸ್ಥೆಗಳು, ಸೇವಾ ಕಾರ್ಯಕ್ಕಾಗಿ ಚತುರ್ಧಾನ, ಸಾಂಸ್ಕೃತಿಕ, ಸಾಮಾಜಿಕ ಸ್ಥರಗಳ ಸರ್ವಧರ್ಮ ಸಾಹಿತ್ಯ ಸಮ್ಮೇಳನ, ಅಶಕ್ತರ ಸಬಲೀಕರಣಕ್ಕಾಗಿ ಸ್ವ ಉದ್ಯೋಗ, ಧರ್ಮ ಶಿಕ್ಷಣಕ್ಕಾಗಿ ಆಲಯಗಳ ಜೀರ್ಣೋದ್ಧಾರ ಸೇರಿದಂತೆ ಸಹಸ್ರಾರು ಯೋಜನೆಗಳ ಹರಿಕಾರರಾಗಿ ವರ್ಷಗಳ ಪರಮೋತ್ಛ ಸ್ಥಾನವನ್ನು ಅರ್ಥಪೂರ್ಣವಾಗಿ ಮುನ್ನಡೆಸಿದ ಶಿರೋವರ್ಯರು ಖಾವಂದರು.

-ಚೈತ್ರೇಶ್‌ ಇಳಂತಿಲ

ಟಾಪ್ ನ್ಯೂಸ್

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

1-aewr

DRDO; ನಿರ್ಭಯ್‌ ಪರೀಕ್ಷಾರ್ಥ ಉಡಾವಣೆ ಯಶಸ್ವಿ

1eewqe

Iran ವಶದಲ್ಲಿದ್ದ ಹಡಗಿನ ಮಹಿಳಾ ಸಿಬಂದಿ ವಾಪಸ್‌

vachanananda

Panchamasali ಎಂಬ ಕಾರಣಕ್ಕೆ ಯತ್ನಾಳ್‌ಗೆ ಸಿಎಂ ಅವಕಾಶ ನಿರಾಕರಣೆ: ವಚನಾನಂದ ಶ್ರೀ

police crime

Chitradurga: ಅನ್ಯಕೋಮಿನ ಯುವತಿಗೆ ಡ್ರಾಪ್ ನೀಡಿದ್ದಕ್ಕೆ ಹಲ್ಲೆ

1-wewq-eqwe

IPL; ರೋಚಕ ಪಂದ್ಯದಲ್ಲಿ ಪಂಜಾಬ್‌ ಎದುರು 9 ರನ್ ಜಯ ಸಾಧಿಸಿದ ಮುಂಬೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

30

CET Exam: ಮೊದಲ ದಿನ ಸುಸೂತ್ರವಾಗಿ ನಡೆದ ಸಿಇಟಿ

1-wqeqwe

Maharashtra; ರತ್ನಾಗಿರಿ- ಸಿಂಧುದುರ್ಗದಲ್ಲಿ ರಾಣೆ vs ಠಾಕ್ರೆ ಕಾದಾಟ

1-HM

Mathura ನನ್ನನ್ನು ಗೋಪಿಕೆಯೆಂದು ಭಾವಿಸುವೆ: ಬಿಜೆಪಿ ಅಭ್ಯರ್ಥಿ ಹೇಮಾ

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ

1-qewqeqwe

TIME; ವಿಶ್ವದ 100 ಪ್ರಭಾವಿಗಳ ಪೈಕಿ ಆಲಿಯಾ, ಪ್ರಿಯಂವದ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.