ಮಹಾಮಸ್ತಕಾಭಿಷೇಕ: ಬಿಸಿಲ ಬೇಗೆ ತಣಿಸಲು ಅಡಿಕೆ ಹಾಳೆ  ಬೀಸಣಿಕೆ!

Team Udayavani, Feb 4, 2019, 5:34 AM IST

bisanike.jpg

ಬೆಳ್ತಂಗಡಿ: ಪರಮ ವಿರಾಗಿ ಗೊಮ್ಮಟನೇನೋ ವರುಷ ವರುಷಗಳಿಂದ ಮಳೆ-ಬಿಸಿಲು-ಚಳಿಯೆನ್ನದೆ ಉನ್ನತ ಮೂರ್ತಿಯಾಗಿ ನಿಂತಿದ್ದಾನೆ, ಹನ್ನೆರಡು  ವರುಷಗಳಿಗೊಮ್ಮೆ ಮಹಾಮಸ್ತಕಾಭಿಷೇಕವನ್ನು ಪಡೆಯುತ್ತಿದ್ದಾನೆ. ಆದರೆ ಪದತಲದಲ್ಲಿನಿಂತು ಮಹಾಮಜ್ಜನವನ್ನು ವೀಕ್ಷಿಸುವವರು ಮನುಷ್ಯಮಾತ್ರರಲ್ಲವೆ!ಅವರಿಗೆ ಉರಿಬಿಸಿಲು-ತಾಪಗಳನ್ನು ತಾಳಿಕೊಳ್ಳಲಾಗುವುದೆ!

ಧರ್ಮಸ್ಥಳದ ಬಾಹುಬಲಿ ಮೂರ್ತಿಗೆ ಮಹಾಮಸ್ತಕಾಭಿಷೇಕವನ್ನು ಹಮ್ಮಿಕೊಂಡಿರುವ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಮತ್ತು ಕುಟುಂಬದವರು ಅಭಿಷೇಕ ಕಾರ್ಯದಲ್ಲಿ ಪಾಲ್ಗೊಳ್ಳುವವರ ಬಿಸಿಲ ಬೇಗೆಯನ್ನು ತಣಿಸುವುದಕ್ಕಾಗಿ ಪರಿಸರ ಸ್ನೇಹಿ ಅಡಿಕೆ ಹಾಳೆಯಿಂದ ಬರೋಬ್ಬರಿ ಮೂರು ಸಾವಿರ ಬೀಸಣಿಗೆಗಳನ್ನು ಸಿದ್ಧಪಡಿಸಿ ಇರಿಸಿಕೊಳ್ಳಲು ಸೂಚಿಸಿದ್ದಾರೆ. ಮುಂಡಾಜೆ ಗ್ರಾಮದ ಕಾಲೇಜು ರಸ್ತೆಯಲ್ಲಿರುವ ಅಡಿಕೆ ಹಾಳೆ ತಟ್ಟೆ ಘಟಕವೊಂದರಲ್ಲಿ ಈ ಬೀಸಣಿಕೆಗಳನ್ನು ತಯಾರಿಸಲಾಗುತ್ತಿದೆ. ಈಗಾಗಲೇ ಬಹುತೇಕ ಪೂರ್ಣಗೊಂಡಿದೆ.

ಹಾಳೆಗೊಂದೇ ಬೀಸಣಿಕೆ!
ಬೀಸಣಿಕೆ ಗಾತ್ರದಲ್ಲಿ ಸಣ್ಣದಾಗಿ ಕಂಡರೂ ಬಹುತೇಕ ಅಡಿಕೆ ಹಾಳೆಗಳಿಂದ ಒಂದೇ ಬೀಸಣಿಗೆ ಮಾಡಲು ಸಾಧ್ಯ. 30 ಇಂಚುಗಳಷ್ಟು ಉದ್ದವಾದ ಹಾಳೆ ಸಿಕ್ಕಿದರೆ ಮಾತ್ರ 2 ಬೀಸಣಿಗೆಗಳನ್ನು ತಯಾರಿಸಬಹುದು. ಘಟಕದವರು ಇಂತಹ ಬೀಸಣಿಕೆಗಳನ್ನು ತಯಾರಿಸುತ್ತಿರುವುದು ಇದೇ ಮೊದಲು. ಹೀಗಾಗಿ ಆರಂಭದಲ್ಲಿ 100ರಷ್ಟು ಬೀಸಣಿಕೆಗಳು ಹಾಳಾದವು ಎಂದು ಘಟಕದ ಭವಾನಿ ಹೇಳುತ್ತಾರೆ.

ಪ್ರತಿ ಬೀಸಣಿಕೆಯೂ ನಿರ್ದಿಷ್ಟ ಅಳತೆಯಲ್ಲೇ ರಚನೆಗೊಂಡಿದೆ, ಅದಕ್ಕಾಗಿ ಸಿರಿ ಸಂಸ್ಥೆಯವರು ತಗಡಿನ ಅಚ್ಚನ್ನು ನೀಡಿದ್ದರು. ಅಚ್ಚನ್ನು ಹಾಳೆಯ ಮೇಲಿರಿಸಿ, ಗುರುತು ಮಾಡಿ ಕತ್ತರಿಸಲಾಗಿದೆ. ಅದು ಬಹಳ ಎಚ್ಚರಿಕೆಯಿಂದ ನಡೆಯಬೇಕು, ಹೀಗಾಗಿ ಒಂದು ಬೀಸಣಿಕೆ ತಯಾರಿಗೆ 10ರಿಂದ 15 ನಿಮಿಷ ವ್ಯಯಿಸಿದ್ದಾರೆ. ಕತ್ತರಿಸಿದ ಬಳಿಕ ವಿನ್ಯಾಸ ಕೊಡುವುದಕ್ಕೆ ಹೆಚ್ಚು ಸಮಯ ತಗಲಿದೆ ಎನ್ನುತ್ತಾರೆ ಭವಾನಿಯವರು.

ಮಹಾಮಸ್ತಕಾಭಿಷೇಕದಲ್ಲಿ ಪಾಲ್ಗೊಳ್ಳುವ ಭಕ್ತರಿಗೆ ಗಾಳಿ ಬೀಸುವ ವಸ್ತು ಒದಗಿಸುವುದೂ ಒಂದು ಪುಣ್ಯ ಕಾರ್ಯ. ಮುಂಡಾಜೆಯ ಘಟಕದವರು ಬೀಸಣಿಗೆಯ ರಚನೆಯ ಜವಾಬ್ದಾರಿ ನಿರ್ವಹಿಸಿದ್ದಾರೆ. ರಚನೆಯ
ಕಾರ್ಯ ಸಾಗುತ್ತಿದ್ದು, ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ ಎಂದು ಮೇಲ್ವಿಚಾರಕ ಗಣೇಶ್‌ ತಿಳಿಸಿದ್ದಾರೆ.

ಒಂದು ತಿಂಗಳಿಂದ ತಯಾರಿ
ಅಡಿಕೆ ಹಾಳೆಯ ಬೀಸಣಿಕೆ ಸರಳವಾಗಿ ಕಂಡರೂ ಅದರ ತಯಾರಿ ಅಷ್ಟು ಸುಲಭವಲ್ಲ. ಅಡಿಕೆ ಹಾಳೆಗಳ ಸಂಗ್ರಹದಿಂದ ಹಿಡಿದು ಬೀಸಣಿಕೆಯಾಗಿ ಅವನ್ನು ರೂಪಿಸುವುದು ಸವಾಲಿನ ಕಾರ್ಯವೇ ಸರಿ. ಘಟಕದ ಐವರು ಕಾರ್ಮಿಕರು ಒಂದು ತಿಂಗಳಿನಿಂದ ಇದಕ್ಕಾಗಿ ಹಗಲು-ರಾತ್ರಿ ಪರಿಶ್ರಮ ಪಟ್ಟಿದ್ದಾರೆ.

ಸಂಪಾದನೆಯ ದೃಷ್ಟಿಗಿಂತಲೂ ಮಸ್ತಕಾಭಿಷೇಕದ ಪುಣ್ಯಕಾರ್ಯದಲ್ಲಿ ನಮ್ಮದೂ ಕಿಂಚಿತ್‌ ಸೇವೆ ಇರಲಿ ಎಂಬ ದೃಷ್ಟಿಯಿಂದ ಅವರು ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದಾರೆ. ಆರಂಭದಲ್ಲಿ ಅಡಿಕೆ ಹಾಳೆಗಳನ್ನು ನೀರಿನಲ್ಲಿ ನೆನೆಸಿ ಹದ ಮಾಡಬೇಕಾಗುತ್ತದೆ. ಬಳಿಕ ನಿರ್ದಿಷ್ಟ ಅಳತೆಯಲ್ಲಿ ಕತ್ತರಿಸಲಾಗುತ್ತದೆ. ಒಂದು ಬೀಸಣಿಕೆ 8 ಇಂಚು ಸುತ್ತಳತೆಯದ್ದಾಗಿದ್ದರೆ ಹಿಡಿಕೆ 4 ಇಂಚಿನದ್ದಾಗಿದೆ.

ಪ್ರತಿ 10 ಬೀಸಣಿಗೆಗಳನ್ನು ಕತ್ತರಿಸಿ ರೂಪಿಸಿದ ಬಳಿಕ ಸಮತಲದಲ್ಲಿ ಪೇರಿಸಿಟ್ಟು ಅದರ ಮೇಲೆ ಭಾರವಾದ ವಸ್ತುವನ್ನು ಇರಿಸಲಾಗುತ್ತದೆ. ಅಡಿಕೆ ಹಾಳೆಯ ಉಬ್ಬುತಗ್ಗು ನಿವಾರಿಸುವುದಕ್ಕೆ ಹೀಗೆ ಮಾಡಬೇಕು. ಹೀಗೆ ಒಂದು ದಿನ ಇರಿಸಿದ ಬಳಿಕ ನೀರಿನಂಶ ಹೋಗಲಾಡಿಸಲು ಗಾಳಿಗೆ ಬಿಡಿಸಿಡಬೇಕಾಗುತ್ತದೆ. ಹೀಗೆ ಮಾಡಿದರೆ ಮಾತ್ರ ಅದು ನೆಟ್ಟಗಿರುತ್ತದೆ, ಇಲ್ಲವಾದರೆ ಸುರುಟಿಕೊಂಡು ಉಪಯೋಗಿಸಲಾಗದ ಸ್ಥಿತಿಗೆ ಬರುತ್ತದೆ.

ಟಾಪ್ ನ್ಯೂಸ್

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Tamil Nadu BJP chief Annamalai demands re-poll due to missing voter names

Loksabha Election; ತಮಿಳುನಾಡಿನಲ್ಲಿ ಮರು ಮತದಾನಕ್ಕೆ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಆಗ್ರಹ

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

MSD ಎಂಟ್ರಿ ಶಬ್ಧಕ್ಕೆ ಕಿವುಡುತನ ಸಾಧ್ಯತೆ; ವೈರಲ್ ಆಯ್ತು ಡಿಕಾಕ್ ಪತ್ನಿಯ ಇನ್ಸ್ಟಾ ಪೋಸ್ಟ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

3-blthngady

ತಾಲೂಕಿನೆಲ್ಲೆಡೆ ಮುಂಜಾನೆ ಭಾರಿ ಮಳೆ;ಕೆಸರುಮಯ ರಾಷ್ಟ್ರೀಯ ಹೆದ್ದಾರಿಯಾಗಿಸಿದ ಗುತ್ತಿಗೆದಾರರು

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

High Court ಮೆಟ್ಟಿಲೇರಿದ್ದ ಕೋವಿ ಪರವಾನಿಗೆದಾರರು

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

Lok Sabha Elections; ಕಾಂಗ್ರೆಸ್‌ಗೆ ಉತ್ತಮ ಅವಕಾಶ: ದಿನೇಶ್‌ ಗುಂಡೂರಾವ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

Hubli;ತಪ್ಪಿತಸ್ಥರಿಗೆ ಶಿಕ್ಷೆ ಆಗಲೇಬೇಕು: ನೇಹಾ ಮನೆಗೆ ಫಕೀರ ಸಿದ್ಧರಾಮೇಶ್ವರ ಶಿವಯೋಗಿ ಭೇಟಿ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ

4-shirva

Rain: ಕಟಪಾಡಿ-ಶಿರ್ವ ರಾಜ್ಯ ಹೆದ್ದಾರಿ; ಮೊದಲ ಮಳೆಯ ಅವಾಂತರ; ರಸ್ತೆ ಕೆಸರುಮಯ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Gadag ಬೆಳ್ಳಂಬೆಳಗ್ಗೆ ವರುಣಾರ್ಭಟ ಆರಂಭ; ಮುಂಗಾರು ನಿರೀಕ್ಷೆ ಹೆಚ್ಚಿಸಿದ ಅಶ್ವಿನಿ ಮಳೆ

Boat Capsizes In Odisha’s Mahanadi River

Mahanadi River Tragedy: ಮಗುಚಿದ 50 ಜನರಿದ್ದ ದೋಣಿ; ಇಬ್ಬರು ಸಾವು; ಎಂಟು ಮಂದಿ ನಾಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.