ತೆಂಗಿನ ಮರಗಳಿಗೆ ಹೆಚ್ಚಿದ ಬಿಳಿನೊಣ ರೋಗ ಹಾವಳಿ

Team Udayavani, Jun 1, 2018, 12:38 PM IST

1june-4.jpg

ಸಂಪಾಜೆ : ಸಂಪಾಜೆ ಪರಿಸರದಲ್ಲಿ ತೆಂಗಿನ ಮರಗಳ ಗರಿಗಳಿಗೆ ಬಿಳಿ ನೊಣಗಳ ಹಾವಳಿ ತೀವ್ರಗೊಂಡಿದೆ.

ಕರಾವಳಿ ಜಿಲ್ಲೆಗಳಲ್ಲಿ ತೆಂಗಿನ ಮರಗಳ ಗರಿಗಳಿಗೆ ಈ ರೋಗ ವ್ಯಾಪಕವಾಗಿ ಕಂಡುಬಂದಿದ್ದು, ಸಂಪಾಜೆ, ಅರಂತೋಡು, ತೊಡಿಕಾನ, ಐವರ್ನಾಡು ಪ್ರದೇಶಗಳಿಗೆ ಹರಡಿದೆ. ಸುಳ್ಯ ತಾಲೂಕಿನಲ್ಲಿ ನಗರ, ಗ್ರಾಮೀಣ ಪ್ರದೇಶಗಳ ರೈತರ ತೆಂಗಿನ ತೋಟಗಳಿಗೆ ಬಿಳಿ ನೊಣಗಳು ಲಗ್ಗೆ ಇಡುತ್ತಿವೆ. ಹಲವು ವರ್ಷಗಳಿಂದ ತಾಲೂಕಿನಲ್ಲಿ ನುಸಿ ಬಾಧೆ ಸಹಿತ ಹಲವು ಸಮಸ್ಯೆಗಳು ತೆಂಗಿನ ಕೃಷಿಗೆ ಅಪ್ಪಳಿಸಿ, ತೆಂಗಿ ಕೃಷಿಯ ಮೇಲೆ ಪರಿಣಾಮ ಬೀರುತ್ತಿದೆ. ಇದೀಗ ಬಿಳಿ ನೊಣಗಳ ಹಾವಳಿ ತೆಂಗು ಕೃಷಿಕರಿಗೆ ಹೊಸ ತಲೆ ನೋವು ಹುಟ್ಟು ಹಾಕಿದೆ.

ರೋಗ ಲಕ್ಷಣ
ಹಸಿರು ನಳನಳಿಸುವ ತೆಂಗಿನ ಗರಿಗಳ ಕೆಳಭಾಗದಲ್ಲಿ ಕುಳಿತುಕೊಳ್ಳುವ ಬಿಳಿ ನೊಣಗಳು ಗರಿಯ ರಸ ಹೀರುತ್ತವೆ ಮತ್ತು ಸಿಹಿಯಾದ ಪದಾರ್ಥ ವಿಸರ್ಜನೆ ಮಾಡುತ್ತದೆ. ಈ ಪದಾರ್ಥಗಳ ಮೇಲೆ ಬೂದು ಬಣ್ಣದ ಶಿಲೀಂದ್ರಗಳು ಉತ್ಪತಿಯಾಗುತ್ತವೆ. ಇದರಿಂದ ಎಲೆಗಳ ಹಸಿರು ಮಾಯವಾಗಿ ಬಿಳಿ ಬಣ್ಣಕ್ಕೆ ತಿರುಗುತ್ತವೆ. ಆಹಾರೋತ್ಪಾದನೆ ಕಡಿಮೆಯಾಗಿ ತೆಂಗಿನ ಮರಗಳ ಬೆಳವಣಿಗೆ ಕುಂಠಿತಗೊಳ್ಳುತ್ತದೆ. ಈ ರೋಗದಿಂದ ತೆಂಗಿನ ಮರಗಳು ಸಾಯುವುದಿಲ್ಲ. ಆದರೆ ಬೆಳವಣಿಗೆ ತಗ್ಗುವ ಜತೆಗೆ, ಇಳುವರಿಯೂ ಕುಸಿಯುವ ಭೀತಿ ಎದುರಾಗಿದೆ. ಸುಳ್ಯ ನಗರ ಮತ್ತು ಪರಿಸರದಲ್ಲಿ ಹಲವು ತೆಂಗಿನ ಮರಗಳ ಗರಿಗಳು ಬಿಳಿ ನೊಣಗಳ ಹಾವಳಿಗೆ ತುತ್ತಾಗಿವೆ. ದೊಡ್ಡ ತೆಂಗಿನ ಮರಗಳ ಗರಿಗಳು ಬಿಳಿಯಾಗುತ್ತಿದ್ದು, ಕ್ರಮೇಣ ಕಪ್ಪು ಬಣ್ಣಕ್ಕೆ ತಿರುಗುತ್ತಿವೆ. ಬಿಳಿನೊಣಗಳ ಹಾವಳಿಯಿಂದ ಕೃಷಿಕರು ಕಂಗಾಲಾಗಿದ್ದು, ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಮೊರೆ ಹೋಗಿದ್ದಾರೆ.

ನಿವಾರಣೆ ಕ್ರಮಗಳು
ಬಿಳಿ ನೊಣದ ಹಾವಳಿಯಿಂದ ತೆಂಗಿನ ತೋಟವನ್ನು ರಕ್ಷಣೆ ಮಾಡಲು ತೋಟಗಾರಿಕಾ ಇಲಾಖೆ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ಸೂಚಿಸಿದೆ. ಬಿಳಿ ನೊಣ ಕಂಡುಬಂದಲ್ಲಿ ಒಂದು ಲೀಟರ್‌ ನೀರಿಗೆ 3ರಿಂದ4 ಮಿ.ಲೀ. ಬೇವಿನ ಎಣ್ಣೆಯನ್ನು ಬೆರೆಸಿ ಸಿಂಪಡಿಸಬೇಕು. ತೆಂಗಿನ ತೋಟಗಳಲ್ಲಿ ಹಳದಿ ಅಂಟು ಪರದೆಯನ್ನು 6ರಿಂದ 7 ಅಡಿ ಎತ್ತರದಲ್ಲಿ ಕಟ್ಟಬೇಕು. ಪರದೆ ಕಟ್ಟುವುದರಿಂದ ಈ ಪರದೆಗೆ ಕೀಟಗಳು ಅಂಟಿಕೊಂಡು ಸಾಯುತ್ತವೆ. ಈ ರೀತಿ ಮಾಡಿದರೆ ಬಿಳಿ ನೊಣಗಳನ್ನು ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು ಎಂದು ಇಲಾಖೆ ತಿಳಿಸುತ್ತದೆ.

ಮರ ಸಾಯುವುದಿಲ್ಲ
ಸುಳ್ಯ ತಾಲೂಕಿನ ಹಲವು ತೆಂಗಿನ ತೋಟಗಳಲ್ಲಿ ಬಿಳಿ ನೊಣ ಬಾಧೆ ಕಂಡುಬಂದಿದೆ. ಇದೀಗ ಸ್ವಲ್ಪ ಮಟ್ಟಿಗೆ ಹತೋಟಿಗೂ ಬಂದಿದೆ. ಈ ರೋಗದಿಂದ ತೆಂಗಿನ ಮರಗಳು ಸಾಯುವುದಿಲ್ಲ. ಮರಗಳ ಬೆಳವಣಿಗೆ ಕುಂಠಿತವಾಗಿ, ಇಳುವರಿ ಕಡಿಮೆ ಆಗುತ್ತದೆ. ಈ ಬಗ್ಗೆ ತೋಟಗಾರಿಕೆ ಇಲಾಖೆ ಪರಿಶೀಲನೆ ನಡೆಸುತ್ತಿದೆ. 
ಅರಬನ ಪೂಜೇರಿ,
  ಪ್ರಭಾರ ಹಿರಿಯ ಸಹಾಯಕ ತೋಟಗಾರಿಕಾ
  ನಿರ್ದೇಶಕರು, ಸುಳ್ಯ

ಬಾಧಿಸುತ್ತಿದೆ
ರೈತರು ಕೃಷಿ ಉತ್ಪನಗಳಿಗೆ ಬೆಲೆ ಕುಸಿತ, ಕೃಷಿಗಳಿಗೆ ಬಾಧಿಸುತ್ತಿರುವ ವಿವಿಧ ರೋಗಳಿಂದ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಬಿಳಿ ನೊಣ ರೋಗಬಾಧೆ ನಮ್ಮ ತೆಂಗಿನ ಮರಗಳಿಗೂ ಬಾಧಿಸಿದೆ. ಇಂತಹ ರೋಗಗಳ ಬಗ್ಗೆ ಇಲಾಖೆ ತಕ್ಷಣ ಮುಂಜಾಗ್ರತಾ ಕ್ರಮ ಸೂಚಿಸಿ, ರೈತರು ಹೆಚ್ಚು ನಷ್ಟಕ್ಕೆ ಒಳಗಾಗದಂತೆ ನೋಡಿಕೊಳ್ಳಬೇಕು.
– ತಿರುಮಲ ಸಂಪಾಜೆ
ತೆಂಗಿನ ಕೃಷಿಕರು

 ತೇಜೇಶ್ವರ್‌ ಕುಂದಲ್ಪಾಡಿ

ಟಾಪ್ ನ್ಯೂಸ್

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

4-gadaga

Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್‌ಪಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ

3-gadaga

Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ

2-hunsur

Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.