ಚಾಲಕರಿಗೆ ದಂಡದ ಬಿಸಿ

ದ.ಕ. 1.61, ಉಡುಪಿ 1.64 ಲ. ರೂ. ಸಂಗ್ರಹ

Team Udayavani, Sep 12, 2019, 5:03 AM IST

ಮಂಗಳೂರು: ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ನಾಲ್ಕು ಸಂಚಾರ ಪೊಲೀಸ್‌ ಠಾಣೆಗಳ ವ್ಯಾಪ್ತಿಯಲ್ಲಿ ಬುಧವಾರ ಸಂಚಾರ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿ ಹೊಸ ಮೋಟಾರು ವಾಹನ ಕಾಯ್ದೆಯಡಿ 245 ವಿವಿಧ ಪ್ರಕರಣಗಳಿಗೆ ಒಟ್ಟು 1,61,400 ರೂ. ದಂಡ ಶುಲ್ಕ ವಿಧಿಸಲಾಗಿದೆ.

ಕಮಿಷನರೆಟ್‌ ವ್ಯಾಪ್ತಿಯಲ್ಲಿ ಉತ್ತರ, ದಕ್ಷಿಣ, ಪೂರ್ವ ಮತ್ತು ಪಶ್ಚಿಮ ಟ್ರಾಫಿಕ್‌ ಪೊಲೀಸ್‌ ಠಾಣೆಗಳು ಬರುತ್ತಿವೆ. ಉತ್ತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಅಧಿಕ ಪ್ರಕರಣಗಳು ಮತ್ತು ಅಧಿಕ ದಂಡ ಮೊತ್ತ ವಿಧಿಸಲಾಗಿದೆ. ಹೆಲ್ಮೆಟ್‌ ಧರಿಸದೆ ವಾಹನ ಚಾಲನೆ ಮಾಡಿದ ಪ್ರಕರಣಗಳು ಅಧಿಕ ಪ್ರಮಾಣದಲ್ಲಿ ವರದಿಯಾಗಿವೆ ಎಂದು ಪೊಲೀಸ್‌ ಮೂಲಗಳು ಉದಯವಾಣಿಗೆ ತಿಳಿಸಿವೆ.

ಉಡುಪಿ: 290 ಪ್ರಕರಣ; 1.64 ಲ.ರೂ. ದಂಡ
ಉಡುಪಿ: ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿ ಜಿಲ್ಲೆಯಲ್ಲಿ ಬುಧವಾರ 290 ಪ್ರಕರಣಗಳು ದಾಖಲಾಗಿದ್ದು 1,64,300 ರೂ. ದಂಡ ವಸೂಲಿ ಮಾಡಲಾಗಿದೆ.

ವಾಹನ ವಿಮೆ: ಆಯುಕ್ತರ ಸ್ಪಷ್ಟನೆ
ಪೊಲೀಸ್‌ ಆಯುಕ್ತರ ವಾಹನದ ವಿಮೆ ನವೀಕರಣ ಆಗಿಲ್ಲ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಅನಾಮಧೇಯ ವ್ಯಕ್ತಿಗಳು ಹರಿಯ ಬಿಟ್ಟ ಸುದ್ದಿ ವೈರಲ್‌ ಆಗಿದ್ದು, ಈ ಬಗ್ಗೆ ಸ್ಪಷ್ಟನೆ ನೀಡಿರುವ ಪೊಲೀಸ್‌ ಆಯುಕ್ತ ಡಾ| ಹರ್ಷ ಪಿ.ಎಸ್‌. ಅವರು, ಸರಕಾರಿ ವಾಹನಗಳ ಬಗ್ಗೆ ಮಾಹಿತಿ ಅಪಪ್ರಚಾರ ಮಾಡುವುದು ಸರಿಯಲ್ಲ ಎಂದು ತಿಳಿಸಿದ್ದಾರೆ.
ಸರಕಾರಿ ವಾಹನಗಳಿಗೆ ಸರಕಾರವೇ ವಿಮೆ ಪಾವತಿಸುತ್ತದೆ. ಸರಕಾರ ವಿಮೆ ಪಾವತಿಸಿದ ವಾಹನಗಳನ್ನು ಸಾರಿಗೆ (ಪರಿವಾಹನ್‌) ವಾಹನಗಳ ಜತೆ ತುಲನೆ ಮಾಡುವುದು ಸರಿಯಲ್ಲ; ಏಕೆಂದರೆ ಈ ವಾಹನಗಳಲ್ಲಿ ಪ್ರಾರಂಭಿಕ ದತ್ತಾಂಶ ಮಾತ್ರ ಲಭಿಸುತ್ತಿದೆ; ನಂತರದ ನವೀಕರಣದ ಮಾಹಿತಿ ಇಲ್ಲ ಎಂದು ವಿವರಿಸಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ