ದ.ಕ. ಜಿ.ಪಂ. ಸ್ಥಾಯೀ ಸಮಿತಿ: ಅಂತಿಮ ಹಂತದಲ್ಲಿ ಅವಿರೋಧ ಆಯ್ಕೆ


Team Udayavani, Mar 20, 2018, 9:00 AM IST

Samithi-19-3.jpg

ಮಂಗಳೂರು: ದ.ಕ. ಜಿ.ಪಂ. 2ನೇ ಅವಧಿಯ 21 ತಿಂಗಳಿಗೆ 5 ಸ್ಥಾಯೀ ಸಮಿತಿಗಳಿಗೆ ಸದಸ್ಯರ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು. ಚುನಾವಣೆ ನಡೆಸುವುದೆಂದು ಮೊದಲಿಗೆ ತೀರ್ಮಾನಿಸಲಾಯಿತಾದರೂ ಅಂತಿಮವಾಗಿ ನಾಯಕರ ಸಂಧಾನದ ಬಳಿಕ ಅವಿರೋಧವಾಗಿಯೇ ಸದಸ್ಯರ ಆಯ್ಕೆ ನಡೆಸಲಾಯಿತು.

ಬೆಳಗ್ಗೆ 11ಕ್ಕೆ ಆಯ್ಕೆ ಪ್ರಕ್ರಿಯೆಗೆ ಸಿದ್ಧತೆ ಪ್ರಾರಂಭಗೊಂಡು, 11 ಗಂಟೆಗೆ ಸದಸ್ಯರು ನಾಮಪತ್ರ ಸಲ್ಲಿಕೆ ಆರಂಭಿಸಿದರು. ನಾಮಪತ್ರ ಸಲ್ಲಿಕೆಯ ಬಳಿಕ ಬಿಜೆಪಿ, ಕಾಂಗ್ರೆಸ್‌ ಸದಸ್ಯರು ಪರಸ್ಪರ ಮಾತುಕತೆ ನಡೆಸಿದರೂ ಸಂಧಾನ ಫಲ ನೀಡಲಿಲ್ಲ. ಅರ್ಧ ತಾಸು ಕಳೆದ ಬಳಿಕ ಯಾವುದೇ ನಾಮಪತ್ರ ಅಸಿಂಧುಗೊಳ್ಳಲಿಲ್ಲ ಹಾಗೂ ಯಾರೂ ನಾಮಪತ್ರ ಹಿಂಪಡೆಯಲಿಲ್ಲ. ಹೀಗಾಗಿ ಚುನಾವಣೆ ನಡೆಯುವುದು ಬಹುತೇಕ ಖಾತರಿಯಾಯಿತು. ಜತೆಗೆ ಪ್ರತಿ ಸದಸ್ಯರು ಎಷ್ಟು ಮತ ಹಾಕಬೇಕು ಎಂಬ ಕುರಿತ ವಿವರಗಳನ್ನು ಅಧಿಕಾರಿಗಳು ನೀಡಿದರು. ಇದಕ್ಕಾಗಿ ಐದು ಮತಪೆಟ್ಟಿಗೆಗಳನ್ನೂ ಪರಿಶೀಲಿಸಿ ಸಿದ್ಧಪಡಿಸಲಾಯಿತು.


ಈ ವೇಳೆ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಅಂಗಾರ, ವಿಧಾನ ಪರಿಷತ್‌ ಸದಸ್ಯ ಕ್ಯಾ|ಗಣೇಶ್‌ ಕಾರ್ಣಿಕ್‌ ಆಗಮಿಸಿ ಮಾತುಕತೆ ಆರಂಭಿಸಿದರು. ಸಚಿವ ರಮಾನಾಥ ರೈ, ಯು.ಟಿ. ಖಾದರ್‌, ಶಾಸಕರಾದ ಜೆ.ಆರ್‌. ಲೋಬೊ, ಮೊದಿನ್‌ ಬಾವಾ, ವಸಂತ ಬಂಗೇರ, ಅಭಯಚಂದ್ರ ಜೈನ್‌, ಶಕುಂತಳಾ ಶೆಟ್ಟಿ, ವಿಧಾನ ಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಜತೆಗೂಡಿ ಜಿ.ಪಂ. ಸಭಾಂಗಣದಲ್ಲೇ ಮಾತುಕತೆ ನಡೆಸಿದರು. ಕಳೆದ ಬಾರಿಯ ಮಾದರಿಯಲ್ಲೇ ಎರಡು ಸ್ಥಾಯೀ ಸಮಿತಿಗಳ ಅಧ್ಯಕ್ಷ ಸ್ಥಾನ ನೀಡುವಂತೆ ಕಾಂಗ್ರೆಸ್‌ ಒತ್ತಾಯಿಸಿದರೆ, ಬಿಜೆಪಿ ಒಂದೇ ಸ್ಥಾನ ನೀಡಲು ಮುಂದಾದಿದ್ದರಿಂದ ಪರಿಸ್ಥಿತಿ ಚುನಾವಣೆ ನಡೆಯುವವರೆಗೆ ಮುಂದುವರಿಯಿತು. ಕೊನೆಗೆ ಜಿ.ಪಂ.ನಲ್ಲಿ ಒಟ್ಟು 52 ಮತಗಳಿದ್ದು, ಕಾಂಗ್ರೆಸ್‌ ಹಾಗೂ ಬಿಜೆಪಿ ಸಮಾನ ಮತಗಳನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಬಿಗಿಪಟ್ಟು ಮುಂದುವರಿಸಿ 2 ಸ್ಥಾನ ಪಡೆದುಕೊಂಡಿತು. ಕಳೆದ ಬಾರಿಯಂತೆ ಶಿಕ್ಷಣ ಮತ್ತು ಆರೋಗ್ಯ ಹಾಗೂ ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿಗಳ ಅಧ್ಯಕ್ಷ ಸ್ಥಾನವನ್ನು ಕಾಂಗ್ರೆಸ್‌ಗೆ ನೀಡಲು ಒಪ್ಪಿಕೊಳ್ಳಲಾಯಿತು.

ಆಯ್ಕೆಯಾದ ಸದಸ್ಯರು
ಸಾಮಾನ್ಯ ಸ್ಥಾಯೀ ಸಮಿತಿ:
ಕಸ್ತೂರಿ ಪಂಜ, ಮಮತಾ ಗಟ್ಟಿ, ಶಯನಾ ಜಯಾನಂದ, ಶಾಹುಲ್ ಹಮೀದ್‌, ಆಶಾ ತಿಮ್ಮಪ್ಪ ಗೌಡ, ವಿನೋದ್‌ ಕುಮಾರ್‌, ಪುಷ್ಪಾವತಿ.

ಹಣಕಾಸು, ಲೆಕ್ಕಪರಿಶೋಧನೆ ಮತ್ತು ಯೋಜನಾ ಸಮಿತಿ: ಮೀನಾಕ್ಷಿ ಶಾಂತಿಗೋಡು, ಶೇಖರ ಕುಕ್ಕೇಡಿ, ಸುಜಾತಾ ಕೆ.ಪಿ., ಮನ್ಮಥ ಎನ್‌.ಎಸ್‌., ಹರೀಶ್‌ ಕಂಜಿಪಿಲಿ, ಧರಣೇಂದ್ರ ಕುಮಾರ್‌, ಸೌಮ್ಯಲತಾ.

ಸಾಮಾಜಿಕ ನ್ಯಾಯ ಸಮಿತಿ: ಚಂದ್ರಪ್ರಕಾಶ್‌ ಶೆಟ್ಟಿ, ಜನಾರ್ದನ ಗೌಡ, ಜಯಶ್ರೀ ಕೋಡಂದೂರು, ಧನಲಕ್ಷ್ಮೀ ಗಟ್ಟಿ, ನಮಿತಾ, ಮಮತಾ ಶೆಟ್ಟಿ, ತುಂಗಪ್ಪ ಬಂಗೇರ.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯೀ ಸಮಿತಿ: ಕೊರಗಪ್ಪ ನಾಯ್ಕ, ಪ್ರಮೀಳಾ ಜನಾರ್ದನ್‌, ಎಂ.ಎಸ್‌. ಮುಹಮ್ಮದ್‌, ಮಂಜುಳಾ ಮಾಧವ ಮಾವೆ, ರಶೀದಾ ಬಾನು, ಸುಚರಿತಾ ಶೆಟ್ಟಿ, ಅನಿತಾ ಹೇಮನಾಥ ಶೆಟ್ಟಿ.

ಕೃಷಿ ಮತ್ತು ಕೈಗಾರಿಕೆ ಸ್ಥಾಯೀ ಸಮಿತಿ: ಯು.ಪಿ. ಇಬ್ರಾಹಿಂ, ಕಮಲಾಕ್ಷಿ ಪೂಜಾರಿ, ಪದ್ಮಶೇಖರ ಜೈನ್‌, ಪಿ.ಪಿ. ವರ್ಗೀಸ್‌, ವಸಂತಿ, ಸರ್ವೋತ್ತಮ ಗೌಡ, ರವೀಂದ್ರ ಕಂಬಳಿ.

ಟಾಪ್ ನ್ಯೂಸ್

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಪ್ರಯಾಣಿಕರು ಇನ್ನು ಅತಿಥಿಗಳು: ಏರ್‌ ಇಂಡಿಯಾ ಟಾಟಾ ಸನ್ಸ್‌ಗೆ ಹಸ್ತಾಂತರ ಪೂರ್ಣ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆ

ಸವಾಲು, ಸಂಘರ್ಷದ ಮಧ್ಯೆ ಉತ್ತಮ ಆಡಳಿತದ ಭರವಸೆ ಬಿತ್ತನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

Untitled-1

ಶುಲ್ಕ ವಿನಾಯಿತಿ ಮೊತ್ತ ಖಜಾನೆಗೆ ವಾಪಸ್‌!  

ಜಾನುವಾರುಗಳಿಗೂ ಲಸಿಕೆ

ಜಾನುವಾರುಗಳಿಗೂ ಲಸಿಕೆ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಕಿಂಡಿ ಅಣೆಕಟ್ಟಿನ ನಿರ್ವಹಣೆ: ಜಲ ಸಂರಕ್ಷಣೆಗೆ ಪೂರಕ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

ಇಂದು ಪಾಲಿಕೆ ಬಜೆಟ್‌: ಬಹುನಿರೀಕ್ಷೆಯ ಲೆಕ್ಕಾಚಾರ

MUST WATCH

udayavani youtube

ತುಳುನಾಡಿನ ರಾಜಧಾನಿ ಬಾರ್ಕೂರನ್ನು ಆಳಿದ ರಾಜರ ಹೆಸರೇನು ಗೊತ್ತೇ ?

udayavani youtube

ಉತ್ತರಪ್ರದೇಶ ಚುನಾವಣೆ ಭಾರತದ ಭವಿಷ್ಯವನ್ನು ನಿರ್ಧರಿಸಲಿದೆ

udayavani youtube

ಮನೆಯಿಂದ ಹೊರ ಬಂದ್ರೆ ತಲೆಗೇ ಕುಕ್ಕುತ್ತೆ ಈ ಕಾಗೆ.!

udayavani youtube

ದೇಶದ ಧ್ವಜದ ಜೊತೆ ಘೋಷಣೆ ಕೂಗಿದ್ದಕ್ಕೆ ಬಂಧನ!

udayavani youtube

ಮೈಕೊರೆಯುವ ಚಳಿಯನ್ನೂ ಲೆಕ್ಕಿಸದೇ ವಾರದಿಂದ ಭಕ್ತರು ಯಲ್ಲಮ್ಮನ ಕ್ಷೇತ್ರಕ್ಕೆ ಬರುತ್ತಿದ್ದಾರೆ

ಹೊಸ ಸೇರ್ಪಡೆ

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

6 ತಿಂಗಳು ಬಂದ್‌: ಪರ್ಯಾಯ, ಪರಿಹಾರ ಸಾಧ್ಯತೆಗಳು

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಬೆಂಗಳೂರು, ಮಂಗಳೂರಿಗೆ ಮಾಲಿನ್ಯದ ಮಸಿ

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

ಕ್ಷೀರಪಥದಲ್ಲಿ ಕಂಡಿತು ವಿಚಿತ್ರ ಶಕ್ತಿ ಪುಂಜ!

astrology today

ಶುಕ್ರವಾರದ ರಾಶಿ ಫಲ, ಇಲ್ಲಿವೆ ನಿಮ್ಮ ರಾಶಿ ಫಲ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

ಭಾರತ-ಮಧ್ಯ ಏಷ್ಯಾ ಬಾಂಧ‌ವ್ಯ ಅತಿ ಮುಖ್ಯ: ಏಷ್ಯಾ ಶೃಂಗಸಭೆಯಲ್ಲಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.