ಡ್ರೋನ್‌ ಮೇಲೆ ಕಣ್ಗಾವಲು ಬಿಗಿ: ಪರವಾನಿಗೆ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ

Team Udayavani, Dec 6, 2022, 7:45 AM IST

ಡ್ರೋನ್‌ ಮೇಲೆ ಕಣ್ಗಾವಲು ಬಿಗಿ: ಪರವಾನಿಗೆ ಕಡ್ಡಾಯ, ನಿಯಮ ಉಲ್ಲಂಘಿಸಿದರೆ ಶಿಸ್ತುಕ್ರಮ

ಮಂಗಳೂರು: ಅನಧಿಕೃತ ಡ್ರೋನ್‌ಗಳ ಬಳಕೆಗೆ ಕಡಿವಾಣ ಹಾಕಲು ಮಂಗಳೂರು ಪೊಲೀಸರು ಮುಂದಾಗಿದ್ದು ಡ್ರೋನ್‌ ನಿಯಮವನ್ನು ಕಟ್ಟುನಿಟ್ಟಾಗಿ ಅನುಷ್ಠಾನಿಸಲು ಸಿದ್ಧತೆ ನಡೆಸಿದ್ದಾರೆ.

ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ಬೃಹತ್‌ ಕೈಗಾರಿಕೆಗಳು, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ, ಬಂದರು, ತೈಲ ಸಂಗ್ರಹ ಕೇಂದ್ರ, ಧಾರ್ಮಿಕ ಕ್ಷೇತ್ರಗಳು, ಶಿಕ್ಷಣ ಸಂಸ್ಥೆಗಳು ಸೇರಿದಂತೆ ಪ್ರಮುಖ ಸೂಕ್ಷ್ಮ ತಾಣಗಳು ಇರುವುದರಿಂದ ಹಾಗೂ ಇತ್ತೀಚೆಗೆ ಕುಕ್ಕರ್‌ ಬಾಂಬ್‌ ಸ್ಫೋಟದ ಸಂದರ್ಭ ಬೆದರಿಕೆಯ ಸಂದೇಶಗಳು ಹರಿದಾಡಿದ ಹಿನ್ನೆಲೆಯಲ್ಲಿ ಭದ್ರತೆ
ಯನ್ನು ದೃಢಪಡಿಸುವ ಉದ್ದೇಶದಿಂದ ಕೇಂದ್ರ ನಾಗರಿಕ ವಿಮಾನ ಯಾನ ನಿರ್ದೇಶನಾಲಯ (ಡಿಜಿಸಿಎ) ರೂಪಿಸಿರುವ “ಡ್ರೋನ್‌ ನಿಯಮ-2021′ ರಂತೆ ಕ್ರಮಕ್ಕೆ ಮುಂದಾಗಿದ್ದಾರೆ.

ನಿಯಮವೇನು?
ನಿಯಮದಂತೆ ನ್ಯಾನೋ ಡ್ರೋನ್‌ (250 ಗ್ರಾಂ ವರೆಗಿನ ತೂಕ) ಹೊರತು ಉಳಿದೆಲ್ಲಾ ಡ್ರೋನ್‌ಗಳಿಗೆ ಡಿಜಿಸಿಎಯಿಂದ ಅನುಮತಿ ಕಡ್ಡಾಯ. ಡಿಜಿಸಿಎ ಅವರಿಂದ ಪಡೆದ ಯುಐಎನ್‌/ಯುಎಒಪಿಯ ಪ್ರತಿ, ಡ್ರೋನ್‌ನ ನಿರ್ದಿಷ್ಟ ಮಾಹಿತಿ, ಆಪರೇಟರ್‌ಗಳ ತರಬೇತಿ ಪ್ರಮಾಣಪತ್ರ, ಭೂಮಿ/ಆಸ್ತಿ ಮಾಲಕರ ಅನುಮತಿ ಪತ್ರ (ಡ್ರೋನ್‌ ಅನ್ನು ಟೇಕ್‌ ಆಫ್ ಮತ್ತು ಲ್ಯಾಂಡಿಂಗ್‌ ಮಾಡಲು ಬಳಸುವ ಪ್ರದೇಶಕ್ಕೆ ಮಾತ್ರ), ಡ್ರೋನ್‌ ಹಾರಿಸುವಾಗ ಏನಾದರೂ ಘಟನೆ/ಅಪಘಾತ ಸಂಭವಿಸಿದರೆ ಮೂರನೇ ವ್ಯಕ್ತಿಗೆ ಆಗುವ ಹಾನಿಯನ್ನು ಭರಿಸುವ ವಿಮೆ, ಮಾನ್ಯವಿರುವ ಪಿಪಿಸಿ ಮೊದಲಾದ ದಾಖಲೆಗಳನ್ನು ಪೊಲೀಸ್‌ ಕಮಿಷನರೆಟ್‌ ಕಚೇರಿ ಅಥವಾ ಸ್ಥಳೀಯ ಪೊಲೀಸ್‌ ಅಧಿಕಾರಿಗಳ ಕಚೇರಿಗೆ ನೀಡಬೇಕು. ಡ್ರೋನ್‌ ಹಾರಿಸಲು ಸೂಕ್ತ ಕಾರಣ ಹಾಗೂ ಸಂಬಂಧಪಟ್ಟ ದಾಖಲೆ ಸಲ್ಲಿಸಬೇಕು. ಅನುಮತಿ ಇಲ್ಲದೆ ಹಾರಿಸಿದರೆ ಏರ್‌ಕ್ರಾಫ್ಟ್ ಆ್ಯಕ್ಟ್ 1934ನ ಸೆಕ್ಷನ್‌ 10,11,11 ಎ ಮತ್ತು ಡ್ರೋನ್‌ ನಿಯಮಗಳು 2021ರ ನಿಯಮ 49 ಮತ್ತು 50ರಂತೆ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ.

ಇಬ್ಬರಲ್ಲಷ್ಟೇ ಪರವಾನಿಗೆ!
ಕಮಿಷನರೆಟ್‌ ವ್ಯಾಪ್ತಿಯಲ್ಲಿ ಇದುವರೆಗೆ ನಿಯಮಾನುಸಾರ ಪರವಾನಿಗೆ ಪಡೆದಿರುವವರು ಇಬ್ಬರು ಮಾತ್ರ. ಡಿಜಿಸಿಎಯ ಡಿಜಿಟಲ್‌ ಸ್ಕೈ ಪ್ಲಾಟ್‌ಫಾರ್ಮ್ ಮೂಲಕ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿ ಆನ್‌ಲೈನ್‌ನಲ್ಲಿಯೇ ಅಗತ್ಯ ದಾಖಲೆ, ಮಾಹಿತಿಯನ್ನು ಸಲ್ಲಿಸಿ ಪರವಾನಿಗೆ ಪಡೆದುಕೊಳ್ಳಬಹುದಾಗಿದೆ.

ಕಡಿವಾಣ ಏಕೆ?
ಡ್ರೋನ್‌ಗಳನ್ನು ರಕ್ಷಣೆ, ಕಾನೂನು ಸುವ್ಯವಸ್ಥೆ, ಕೃಷಿ, ಗಣಿಗಾರಿಕೆ, ಸರ್ವೆಲೆನ್ಸ್‌, ತುರ್ತು ಕಾರ್ಯಾಚರಣೆ ಮೊದಲಾದವುಗಳಿಗೆ ಬಳಸಲಾಗು ತ್ತದೆ. ಕೆಲವೊಮ್ಮೆ ಇವುಗಳ ದುರುಪ ಯೋಗದ ಸಾಧ್ಯತೆ ಇರುವುದರಿಂದ ಮತ್ತು ಭದ್ರತೆಗೆ ಸವಾಲು ಎದುರಾಗುವ ಅಪಾಯ ಇರುವುದರಿಂದ ಡಿಜಿಸಿಎ ನಿಯಮಾವಳಿ ರೂಪಿಸಿದೆ.

ಬಳಕೆಯಲ್ಲಿರುವ ಡ್ರೋನ್‌ಗಳು
– 250 ಗ್ರಾಂ ವರೆಗಿನ ತೂಕದ್ದು
– 250 ಗ್ರಾಂನಿಂದ 2 ಕೆಜಿಯದ್ದು
– 2 ಕೆಜಿಗಿಂತ 25 ಕೆಜಿ ವರೆಗಿನ ತೂಕದ್ದು
– 25 ಕೆಜಿಗಿಂತ 150 ಕೆಜಿ ವರೆಗಿನ ತೂಕದ್ದು

ನಗರ ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಮದುವೆ, ಪ್ರತಿಭಟನೆ, ವಿಐಪಿ ಕಾರ್ಯಕ್ರಮಗಳಲ್ಲಿ ಅವ್ಯಾಹತ ವಾಗಿ ಡ್ರೋನ್‌ಗಳ ಬಳಕೆ ಕಂಡು ಬಂದಿದೆ. ಆರಂಭದಲ್ಲಿ ಡ್ರೋನ್‌ ಹಾರಾಟ ನಿಯಮದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಬಳಿಕ ನಿಯಮ ಉಲ್ಲಂಘಿಸುವವರ ಡ್ರೋನ್‌ಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಳ್ಳಲಾಗುವುದು.
– ಅನ್ಶುಕುಮಾರ್‌, ಮಂಗಳೂರು ಡಿಸಿಪಿ
– ಎನ್‌. ಶಶಿಕುಮಾರ್‌, ಪೊಲೀಸ್‌ ಆಯುಕ್ತ

ಟಾಪ್ ನ್ಯೂಸ್

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್

ಕಪ್ಪತ್ತಗುಡ್ಡದಲ್ಲಿ ಚಿರತೆ ಪ್ರತ್ಯಕ್ಷ: ಗ್ರಾಮಸ್ಥರು ಎಚ್ಚರವಹಿಸಲು ಅರಣ್ಯ ಅಧಿಕಾರಿಗಳ ಸೂಚನೆ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ: ಓರ್ವನ ಸೆರೆ, ಇನ್ನೋರ್ವ ಪರಾರಿ

ಬಂಧಿಸಲು ಹೋದ ಪೊಲೀಸರ ಮೇಲೆ ಆರೋಪಿಗಳಿಂದ ದಾಳಿ ಯತ್ನ: ಓರ್ವನ ಸೆರೆ, ಇನ್ನೋರ್ವ ಪರಾರಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತಸ್ವೀಪ್‌ ಚಿತ್ತ!

ಮತದಾರ ಜಾಗೃತಿ ಅಭಿಯಾನ; ಮತದಾರರನ್ನು ಮತಗಟ್ಟೆಗೆ ಸೆಳೆಯುವತ್ತ ಸ್ವೀಪ್‌ ಚಿತ್ತ!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ಮಂಗಳೂರು: ಇಕ್ಕಟ್ಟಿನಲ್ಲಿ ಮತ ಕೇಳುವವರು; ನೀರು ಹರಿದರೆ ಮತವೂ ಹರಿದೀತು!

ajit kumar rai maladi

ಬಂಟರು ಯಾನೆ ನಾಡವರನ್ನು ಪ್ರವರ್ಗ 2(ಎ)ಗೆ ಸೇರಿಸಿ- ನಿಗಮ ಸ್ಥಾಪಿಸಿ

ಹಂಪ್‌ನಲ್ಲಿ ಬಸ್‌ ಜಂಪ್‌: ಪ್ರಯಾಣಿಕನಿಗೆ ಗಂಭೀರ ಗಾಯ

ಹಂಪ್‌ನಲ್ಲಿ ಬಸ್‌ ಜಂಪ್‌: ಪ್ರಯಾಣಿಕನಿಗೆ ಗಂಭೀರ ಗಾಯ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

ಭೂಮಾಲಕರ ಜತೆ ಸಂವಾದ: ರಾ.ಹೆ. 169 ಚತುಷ್ಪಥ ಕಾಮಗಾರಿ ಕೈಬಿಡುವ ಆತಂಕ

MUST WATCH

udayavani youtube

ಜಗತ್ತಿನ ಅಳಿವಿನಂಚಿನಲ್ಲಿರುವ ಪ್ರಾಣಿಗಳನ್ನೊಮ್ಮೆ ನೋಡಿಬಿಡಿ | Udayavani

udayavani youtube

ಎವರೆಸ್ಟ್ ತುದಿಯಲ್ಲಿ 14 ವರ್ಷಗಳಿಂದಲೂ ಇದೇ ಆ ಒಂದು ಮೃತ ದೇಹ

udayavani youtube

ನಮ್ಮ ಅಪ್ಪು ಕುರಿತ ಒಂದಷ್ಟು ಸುಂದರ ವಿಚಾರಗಳು

udayavani youtube

ವಿವಿಧ ದೇಶದ 2500 ವಿಭಿನ್ನ ರೀತಿಯ ನಾಯಿಗಳ ಸ್ಟ್ಯಾಂಪ್ ಸಂಗ್ರಹ

udayavani youtube

ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಮಠದಲ್ಲಿ ಬೈಬಲ್ ಕೃತಿ, ಮೊಹರಂ ಪಂಜಾ

ಹೊಸ ಸೇರ್ಪಡೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಕಾಪು: ಸುಗ್ಗಿ ಮಾರಿಪೂಜೆಗೆ ಸಂಭ್ರಮದ ಚಾಲನೆ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಚಾಮರಾಜನಗರ: ದಾಖಲೆ ಇಲ್ಲದೆ ಸಾಗಿಸುತ್ತಿದ್ದ 45 ಲಕ್ಷ ರೂ. ನಗದು ವಶ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಮುಸ್ಲಿಮರು, ಒಕ್ಕಲಿಗರನ್ನು ಎತ್ತಿಕಟ್ಟಲು ಉರಿಗೌಡ ನಂಜೇಗೌಡ ಪಾತ್ರ ಸೃಷ್ಟಿ: ಸಿ.ಎಂ.ಇಬ್ರಾಹಿಂ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಬೆಳಗಾವಿ: ದಾಖಲೆ ಇಲ್ಲದೇ ಕಾರಿನಲ್ಲಿ ಸಾಗಿಸುತ್ತಿದ್ದ 9 ಲಕ್ಷ ರೂ. ನಗದು ವಶ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ರಥಾರೋಹಣ ಸಂಪನ್ನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.