ಕುಡುಪು: ಮನೆಯಿಂದ ಹಾಡಹಗಲೇ ಕಳವು

Team Udayavani, Jun 16, 2018, 11:32 AM IST

ಮಂಗಳೂರು: ಕುಡುಪು ಸಮೀಪದ ಪಂಜಿರೇಲು ನಿವಾಸಿ ಮಹಿಳೆ ಮ್ಯಾಗ್ಲಿನ್‌ ಡಿ’ಸಿಲ್ವಾ (78) ಅವರ ಮನೆಯಿಂದ ಶುಕ್ರವಾರ ಹಾಡ ಹಗಲೇ ಕಳ್ಳರು ಸುಮಾರು 10 ಪವನ್‌ ತೂಕದ ಚಿನ್ನಾಭರಣ ಮತ್ತು ನಗದು 1,500 ರೂ.ನಗದು ಸಹಿತ ಒಟ್ಟು 2,01500 ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಿದ್ದಾರೆ.

ಮ್ಯಾಗ್ಲಿನ್‌ ಅವರು ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದು, ಪ್ರತಿನಿತ್ಯ ಮನೆಗೆ ಬೀಗ ಹಾಕಿ ತೋಟಕ್ಕೆ ಹೋಗುತ್ತಿದ್ದರು. ಶುಕ್ರವಾರ ಕೂಡ ಬೆಳಗ್ಗೆ ಮನೆಗೆ ಬೀಗ ಹಾಕಿ ಕಪಾಟು ಮತ್ತು ಮನೆಯ ಕೀಯನ್ನು ಮನೆಯ ಎದುರಿನಲ್ಲೇ ನೇತು ಹಾಕಿ ಹೊರಟು ಹೋಗಿದ್ದರು. ಇದರ ಬಗ್ಗೆ ಅರಿವಿದ್ದ ಕಳ್ಳರು ಮನೆಯ ಬೀಗ ತೆಗೆದು ಒಳಪ್ರವೇಶಿಸಿ ಗೋದ್ರೆಜ್‌ನಲ್ಲಿದ್ದ 10 ಪವನ್‌ ಚಿನ್ನಾಭರಣ ಮತ್ತು ನಗದು ಕಳವು ಮಾಡಿದ್ದಾರೆ. ಬಳಿಕ ಯಥಾಸ್ಥಿತಿಯಲ್ಲಿರುವಂತೆ ಕಪಾಟು ಮತ್ತು ಮನೆಯ ಬೀಗ ಹಾಕಿ ಅದರ ಕೀಯನ್ನು ಮತ್ತೆ ಮನೆಯ ಎದುರಲ್ಲೇ ನೇತು ಹಾಕಿ ಪರಾರಿಯಾಗಿದ್ದಾರೆ.

ಸಂಜೆ 4 ಗಂಟೆಗೆ ಮ್ಯಾಗ್ಲಿನ್‌ ಮನೆಗೆ ಬಂದು ಕಾರ್ಮಿಕರಿಗೆ ಸಂಬಳ ಕೊಡಲು ಗೋದ್ರೆಜ್‌ ಕಪಾಟಿನ ನ ಬಾಗಿಲು ತೆರೆದಾಗ ಚಿನ್ನಾಭರಣ ಮತ್ತು ನಗದು ಕಳವಾಗಿರುವುದು ಬೆಳಕಿಗೆ ಬಂದಿದೆ.

3 ಪವನು ತೂಕದ ಚಿನ್ನದ ಬಳೆ, ಎರಡು ಪವನು ತೂಕದ ಎರಡು ಬಳೆಗಳು, 4 ಪವನು ತೂಕದ ಸರ, ಅರ್ಧ ಪವನು ತೂಕದ ಉಂಗುರ ಕಳವಾಗಿದೆ. ಮಂಗಳೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ