ಭೂ ಮಾಲಕತ್ವಕ್ಕೆ ಇ-ಪ್ರಾಪರ್ಟಿ ಕಾರ್ಡ್‌

ಡ್ರೋನ್‌ ಮ್ಯಾಪಿಂಗ್‌ ಮೂಲಕ ಸರ್ವೇ ಕಾರ್ಯ

Team Udayavani, May 19, 2022, 9:22 AM IST

e-property

ಪುತ್ತೂರು: ಗ್ರಾಮಾಂತರದಲ್ಲಿ ಭೂ ದಾಖಲೆ ಇಲ್ಲದವರಿಗೆ ಮಾಲಕತ್ವದ ಹಕ್ಕು ನೀಡುವ ನಿಟ್ಟಿನಲ್ಲಿ ಭೂಮಾಪನ ಇಲಾಖೆ ಸಹ ಭಾಗಿತ್ವದಲ್ಲಿ ಡ್ರೋನ್‌ ಮ್ಯಾಪಿಂಗ್‌ ನಡೆ ಯುತ್ತಿದ್ದು ಈ ತನಕ ದ.ಕ.ಜಿಲ್ಲೆಯಲ್ಲಿ 1,500 ಫಲಾನುಭವಿಗಳಿಗೆ ಇ-ಪ್ರಾಪರ್ಟಿ ಕಾರ್ಡ್‌ ನೀಡಲಾಗಿದೆ.

2020 ಎಪ್ರಿಲ್‌ನಲ್ಲಿ ಕೇಂದ್ರ ಸರಕಾರವು ಸ್ವಾಮಿತ್ವ ಯೋಜನೆ ಆರಂಭಿಸಿತು. ಈ ಯೋಜನೆಯಡಿ ತಂತ್ರಜ್ಞಾನದ ಸಹಾಯದಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಮತ್ತು ಮ್ಯಾಪಿಂಗ್‌ ಸಮೀಕ್ಷೆ ಆರಂಭಿಸಿ ಇ-ಪೋರ್ಟಲ್‌ ಪ್ರಮಾಣಪತ್ರ ನೀಡುವ ಕಾರ್ಯ ದೇಶದೆಲ್ಲೆಡೆ ಪ್ರಗತಿಯಲ್ಲಿದೆ.

ಏನಿದು ಸ್ವಾಮಿತ್ವ ಯೋಜನೆ?

ನೂರಾರು ವರ್ಷಗಳಿಂದ ಒಂದೇ ಸ್ಥಳದಲ್ಲಿ ವಾಸವಿದ್ದರೂ ಮನೆಗಳ ಮಾಲಕತ್ವದ ಹಕ್ಕು ಹೊಂದಿರದ ವಾರಸುದಾರರಿಗೆ ಮನೆ ಸ್ಥಳದ ನಾಲ್ಕು ದಿಕ್ಕಿನಲ್ಲೂ ಗಡಿ ನಿಗದಿಪಡಿಸಿ ಮನೆ ಮಾಲಕತ್ವದ ಹಕ್ಕುಪತ್ರ ನೀಡುವ ಯೋಜನೆ ಇದಾಗಿದೆ. ಹಳ್ಳಿಗಳಲ್ಲಿ ಯಾರ ಬಳಿ ಭೂ ದಾಖಲೆ ಲಭ್ಯ ಇಲ್ಲವೋ ಅಂಥವರಿಗೆ ಮಾಲಕತ್ವ ಒದಗಿಸುವುದು ಈ ಯೋಜನೆಯ ಉದ್ದೇಶ. ಇದು ಕೇಂದ್ರ ಅನುದಾನಿತ ಯೋಜನೆಯಾಗಿದ್ದು, ಪಂಚಾಯತ್‌ ರಾಜ್‌ ಇಲಾಖೆ ಈ ಯೋಜನೆ ನೋಡೆಲ್‌ ಇಲಾಖೆಯಾಗಿದೆ. ಯೋಜನೆಯ ಅನುಷ್ಠಾನಕ್ಕೆ ಸರ್ವೇ ಆಫ್‌ ಇಂಡಿಯಾ ತಾಂತ್ರಿಕ ಸಹಭಾಗಿತ್ವ ಹೊಂದಿದೆ.

ಯೋಜನೆಯ ಉದ್ದೇಶ

ಪಿಎಂ ಸ್ವಾಮಿತ್ವ ಯೋಜನೆಯಡಿ ಡ್ರೋನ್‌ ಮ್ಯಾಪಿಂಗ್‌ ಮಾಡಲಾಗುತ್ತದೆ. ಭೂಮಿಯ ನಿಜವಾದ ಮಾಲಕರಿಗೆ ಅದರ ಹಕ್ಕು ದೊರೆಕಿಸ ಲಾಗುತ್ತದೆ. ಗ್ರಾಮೀಣ ಪ್ರದೇಶದಲ್ಲಿ ರೈತರಿಗೆ ಮನೆ/ಕೃಷಿ ಸಾಲ ಸುಲಭವಾಗಿ ದೊರೆ ಯಲು ಆ ಆಸ್ತಿಗೆ ಸಂಬಂಧಿಸಿದ ಡಿಜಿಟಲ್‌ ಕಾರ್ಡ್‌ಗಳನ್ನು ರೈತರಿಗೆ ವಿತರಿ ಸುವುದು ಈ ಯೋಜನೆಯ ಉದ್ದೇಶ.

ಅರ್ಜಿ ಪ್ರಕ್ರಿಯೆ ಹೇಗೆ?

ಪಿಎಂ ಸ್ವಾಮಿತ್ವ ಯೋಜನೆಯ ಅಧಿ ಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಲು ಅವಕಾಶ ಇದೆ. ಫಾರ್ಮ್ನಲ್ಲಿರುವ ಮಾಹಿತಿ ಭರ್ತಿ ಮಾಡಬೇಕು. ಸಮೀಕ್ಷೆ ಮುಗಿದು ಇ- ಪ್ರಾಪರ್ಟಿ ಆದ ಬಳಿಕ ಆಸ್ತಿಯ ಮಾಲಕರ ಮೊಬೈಲ್‌ಗೆ ಸಂದೇಶ ಬರುತ್ತದೆ. ಪ್ರಾಪರ್ಟಿ ಕಾರ್ಡ್‌ಗಳನ್ನು ಕಂದಾಯ ಇಲಾಖೆ ಮೂಲಕ ಆಯಾ ಆಸ್ತಿ ಮಾಲಕರಿಗೆ ಹಂಚಲಾಗುತ್ತಿದೆ.

ಏನು ಲಾಭ?

ಇ-ಪ್ರಾಪರ್ಟಿ ಕಾರ್ಡ್‌ ಅನ್ನು ಪಡೆಯುವುದರಿಂದ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಅನುಕೂಲವಾಗುತ್ತದೆ. ಇತರ ಹಣಕಾಸು ಸೌಲಭ್ಯ ಪಡೆಯಲು ಕೂಡ ಇದನ್ನು ದಾಖಲಾತಿಯಾಗಿ ಬಳಸಿಕೊಳ್ಳಬಹುದು. ಅನೇಕ ಮಂದಿಗೆ ಈಗಲೂ ತಮ್ಮದೇ ಭೂಮಿಯಾದರೂ, ಮಾಲಕತ್ವ ಕುರಿತ ದಾಖಲಾತಿ ಇಲ್ಲದೆ ಅನೇಕ ಯೋಜನೆಗಳ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿಲ್ಲ. ಬ್ಯಾಂಕ್‌ಗಳಿಂದಲೂ ಸಾಲ ಪಡೆಯಲು ದಾಖಲಾತಿಗಳ ಕೊರತೆ ಉಂಟಾಗುತ್ತಿದೆ. ಸ್ವಾಮಿತ್ವ ಯೋಜನೆಯಿಂದ ಈ ಸಮಸ್ಯೆ ನೀಗಲಿದೆ.

ಮುಂದುವರಿದ ಸರ್ವೇ

ದ.ಕ. ಜಿಲ್ಲೆಯಲ್ಲಿ ಸ್ವಾಮಿತ್ವ ಯೋಜನೆಯಡಿ 8 ಸಾವಿರ ಸರ್ವೇ ನಡೆದಿದ್ದು 1,500 ಮಂದಿಗೆ ಇ-ಪ್ರಾಪರ್ಟಿ ಕಾರ್ಡ್‌ ವಿತರಿಸಲಾಗಿದೆ. ಸರ್ವೇ ಕಾರ್ಯ ಮುಂದುವರಿದಿದೆ. ಡಾ| ಕುಮಾರ್‌, ಸಿಇಒ ದ.ಕ. ಜಿ.ಪಂ.

ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!

Rahul Gandhi 3

BJP ಮಾಧ್ಯಮಗಳಿಂದ ನನಗೆ ನಿತ್ಯ ನಿಂದನೆ: ರಾಹುಲ್‌ ಗಾಂಧಿ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

ಆಲೆಟ್ಟಿ: ಅರಣ್ಯಕ್ಕೆ ತಗುಲಿದ ಬೆಂಕಿ

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Payaswini river: ಪಯಸ್ವಿನಿ ನದಿಯಲ್ಲಿ ಮುಳುಗಿ ಓರ್ವ ಸಾವು

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

Beltangady: ಮನೆ ಮಾಲಕಿ ಮೇಲೆ ಸಾಕು ನಾಯಿ ದಾಳಿ

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

ಶೇ. 100 ಮತದಾನದ ಭರವಸೆ ನೀಡಿದ ಬಾಂಜಾರು ಮಲೆ, ಎಳನೀರು ಗ್ರಾಮಸ್ಥರು

CAR-D

Sullia: ರಸ್ತೆ ಬದಿ ನಿಲ್ಲಿಸಿದ್ದ ಕಾರಿಗೆ ಕಂಟೈನರ್‌ ಢಿಕ್ಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.