Udayavni Special

ತೋಟಗಳಿಗೆ ಕಾಡಾನೆ ಲಗ್ಗೆ : ಕೃಷಿಕರು ಕಂಗಾಲು!


Team Udayavani, Aug 6, 2018, 10:13 AM IST

6-agust-2.jpg

ಸುಳ್ಯ : ಹಲವು ವರ್ಷಗಳಿಂದ ಆನೆ ದಾಳಿಗೆ ತತ್ತರಿಸಿರುವ ತಾಲೂಕಿನ ವಿವಿಧ ಭಾಗದ ಕೃಷಿ ತೋಟಗಳಲ್ಲಿ ನಿಯಂತ್ರಣ ರೇಖೆ ದಾಟಿ ಕಾಡಾನೆಗಳು ಮತ್ತೆ-ಮತ್ತೆ ನುಸುಳುತ್ತಿವೆ. ಒಂದು ವಾರದಿಂದ ಮೇನಾಲ, ಆಲೆಟ್ಟಿ, ಹಾಸ್ಪರೆ, ತುದಿಯಡ್ಕ ಮೊದಲಾದ ಪ್ರದೇಶಗಳ ಕೃಷಿ ತೋಟಗಳಿಗೆ ಲಗ್ಗೆ ಇಟ್ಟು, ಕೃಷಿ ನಷ್ಟ ಉಂಟು ಮಾಡಿದೆ. ಕೊಳೆರೋಗದ ಚಿಂತೆಯಲ್ಲಿರುವ ಕೃಷಿಕರಿಗೆ ಆನೆ ಕಾಟ ನಿದ್ದೆಗೆಡಿಸಿದೆ. ಆರು ತಿಂಗಳ ಹಿಂದೆ ಕಾಡಾನೆ ಅಟ್ಟುವ ಕಾರ್ಯಾಚರಣೆ ನಡೆದ ಅನಂತರ ಕೃಷಿ ತೋಟ ಕೊಂಚ ನಿರಾಳವಾಗಿತ್ತು. ಈಗ ಮತ್ತೆ ಅಂತಹ ಆತಂಕ ಕಾಡಿದೆ. 

ಬಗೆಹರಿಯದ ಸಮಸ್ಯೆ
ಸಂಪಾಜೆ, ಅರಂತೋಡು, ಆಲೆಟ್ಟಿ, ಮಂಡೆಕೋಲು, ಮರ್ಕಂಜ, ಮಡಪ್ಪಾಡಿ, ಕಲ್ಮಕಾರು, ಕೊಲ್ಲಮೊಗ್ರು ಮೊದಲಾದ ಆನೆ ಬಾಧಿತ ಪ್ರದೇಶಗಳಲ್ಲಿ ವರ್ಷದ ಹಲವು ದಿನಗಳಲ್ಲಿ ಆನೆ ಕಾಟ ಸಾಮಾನ್ಯವಾಗಿದೆ. ಅರಣ್ಯ ಇಲಾಖೆ ಸಾಂಪ್ರದಾಯಿಕ ಪರಿಕರಗಳ ಮೂಲಕ ತಡೆ ಒಡ್ಡುವ ಪ್ರಯತ್ನ ನಡೆಸಿದ್ದರೂ ಅದರಿಂದ ಶಾಶ್ವತ ಪರಿಹಾರ ಸಿಗುತ್ತಿಲ್ಲ. ಬಾಳೆ, ಅಡಿಕೆ, ತೆಂಗಿನ ತೋಟದಲ್ಲಿ ಫಸಲು ಭರಿತ ಗಿಡಗಳು ಆನೆ ದಾಳಿಗೆ ನಲುಗುತ್ತಿವೆ.

ಸೌರ ಬೇಲಿ
ಎರಡು ವರ್ಷಗಳ ಹಿಂದೆ ಭಸ್ಮಡ್ಕ ಬಳಿ ಕಾಡಾನೆ ಹಿಂಡು ಲಗ್ಗೆ ಇಟ್ಟಿತ್ತು. ನಗರದೊಳಗೆ ನುಸುಳಿತ್ತು. ಆಗ ಸ್ಥಳಕ್ಕೆ ಭೇಟಿ ನೀಡಿದ ಜನಪ್ರತಿನಿಧಿಗಳು ಸೌರವಿದ್ಯುತ್‌ ಬೇಲಿ, ರೈಲ್ವೇ ಹಳಿ ಕಂಬ ಮೊದಲಾದ ಸುರಕ್ಷಾ ಕ್ರಮದ ಬಗ್ಗೆ ಭರವಸೆಯ ಮಳೆ ಹರಿಸಿದ್ದರು. ಅದು ಇನ್ನೂ ಈಡೇರಿಲ್ಲ. ಸೌರಬೇಲಿ ಅಳವಡಿಕೆ ವೆಚ್ಚ ದುಬಾರಿ ಆಗಿರುವ ಕಾರಣ ಕೃಷಿಕರ ಪಾಲಿಗದು ತ್ರಾಸವೆನಿಸಿತ್ತು. ಅರ್ಧ ಹಣ ಸಬ್ಸಿಡಿ ರೂಪದಲ್ಲಿ ಒದಗಿಸುವ ಭರವಸೆ ನೀಡಿ ದ್ದರೂ, 1 ಕಿ.ಮೀ. ಉದ್ದದ ಬೇಲಿಗೆ 1.15 ಲಕ್ಷ ರೂ. ವೆಚ್ಚವನ್ನು ಕೃಷಿ ಕರು ಭರಿಸುವುದು ಕಷ್ಟ.

ಗರ್ನಲ್‌ ಗತಿ
ಅರಣ್ಯ ಪ್ರದೇಶದಿಂದ ಕೃಷಿ ತೋಟಕ್ಕೆ ಕಾಡಾನೆ ಬಂದರೆ, ಅರಣ್ಯ ಇಲಾಖೆ ಬಳಿ ಆನೆ ಓಡಿಸಲು ಇರುವುದು ಗರ್ನಲ್‌ ಮಾತ್ರ. ಬೆಂಕಿ ಹಚ್ಚಿ ಓಡಿಸುವ ತಂತ್ರಗಾರಿಕೆ ಇನ್ನೊಂದೆಡೆ. ಇವೆರಡು ಹಳೆ ತಂತ್ರ ಬಿಟ್ಟರೆ ಹೊಸತೇನು ಇಲ್ಲ. ಹಾಗಾಗಿ ಕೃಷಿ ತೋಟಕ್ಕೆ ಆನೆ ಬಂದರೆ ಸ್ವತಃ ರೈತರೇ ಈ ತಂತ್ರ ಅನುಸರಿಸಬಹುದು. ಇಲ್ಲಿ ಅರಣ್ಯ ಇಲಾಖೆ ಸಿಬಂದಿ ಬಂದರೂ, ಹೆಚ್ಚೇನು ಪ್ರಯೋಜನ ಆಗದು ಅನ್ನುತ್ತಾರೆ ಕೃಷಿಕರು.

ಆನೆ ಅಗರ್‌
ಆನೆ ಅಗರ್‌ ಅಳವಡಿಸಿದ ಕಾಡಿನ ಬದಿಗಳಲ್ಲಿ ಒಂದಷ್ಟು ನಿಯಂತ್ರಣ ಸಾಧ್ಯವಾಗಿದೆ ಅನ್ನುವುದು ಇಲಾಖೆಯ ವಾದ. ಕೆಲವೆಡೆ ಆನೆ ಅಗರ್‌ ದಾಟಿದ್ದೂ ಇದೆ ಅನ್ನುತ್ತಾರೆ ಕೃಷಿಕರು. ಅರಣ್ಯ ಭಾಗದಲ್ಲಿ ಮನೆಗಳಿಗೆ ರಸ್ತೆ ಸಂಪರ್ಕ ಇರುವ, ತೋಡು ಹರಿದು ಹೋಗಿರುವ ಕಡೆಗಳಲ್ಲಿ ಆನೆ ನಿಯಂತ್ರಣ ಅರಣ್ಯ ಇಲಾಖೆಯ ಮತ್ತು ಕೃಷಿಕರ ಪಾಲಿಗೆ ಸಾಧ್ಯವಾಗುತ್ತಿಲ್ಲ. ಅಲ್ಲಿ ಚೂಪಾದ ಕಬ್ಬಿಣದ ಸಲಕರಣೆ ಅಳವಡಿಸುವ ಪ್ರಸ್ತಾಪ ಅರಣ್ಯ ಇಲಾಖೆ ಮುಂದಿರಿಸಿದ್ದರೂ ಅದಿನ್ನೂ ಕಾರ್ಯಗತವಾಗಿಲ್ಲ.

ಸಮಸ್ಯೆ ಆಲಿಸುವವರಿಲ್ಲ
ಪ್ರತಿ ವರ್ಷ ಆನೆ ಕಾಟ ತಪ್ಪುತ್ತಿಲ್ಲ. ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನ ಆಗುತ್ತಿಲ್ಲ. ಬೆಳೆ ನಷ್ಟದಿಂದ ಕೃಷಿಕರು ಸಂಕಷ್ಟಕ್ಕೆ ಈಡಾಗಿದ್ದಾರೆ.
– ಕೃಪಾಶಂಕರ ತುದಿಯಡ್ಕ ಕೃಷಿಕರು

ಪರಿಣಿತ ತಂಡದ ಬಳಕೆ
ಆರು ತಿಂಗಳ ಹಿಂದೆ ಆನೆ ಅಟ್ಟುವ ಕಾರ್ಯಾಚರಣೆ ಅನಂತರ ಈಗ ಮತ್ತೆ ಕೃಷಿ ತೋಟಕ್ಕೆ ಬಂದಿದೆ. ಮರಳಿ ಕಾಡಿಗೆ ಅಟ್ಟಲು ಪ್ರಯತ್ನ ನಡೆಸುತ್ತೇವೆ. ಅಗತ್ಯ ಬಿದ್ದರೆ ನಾಗರಹೊಳೆ ಭಾಗದಿಂದ ಪರಿಣಿತರ ತಂಡ ಕರೆಸಿ ಕಾರ್ಯಾಚರಣೆ ನಡೆಸಲಾಗುವುದು.
-ಮಂಜುನಾಥ ಎನ್‌.
ವಲಯ ಅರಣ್ಯಧಿಕಾರಿ, ಸುಳ್ಯ

ಕಿರಣ್‌ ಪ್ರಸಾದ್‌ ಕುಂಡಡ್ಕ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

web-tdy-1

ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

Shivangi

ಕಾಶಿಯ ಸುಪುತ್ರಿ ಶಿವಾಂಗಿ ರಫೆಲ್‌ನ ಮೊದಲ ಮಹಿಳಾ ಪೈಲಟ್‌

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

ಬೆಳಗಾವಿ ಎಪಿಎಂಸಿಗೆ ಅನುದಾನಕ್ಕಾಗಿ ಸಚಿವರಿಗೆ ಮನವಿ

KKR-vs-MI

ರನ್‌ ಮಳೆಗೆ ಸಾಕ್ಷಿಯಾಗುತ್ತಾ MI vs KKR ಪಂದ್ಯ; ಬೌಲಿಂಗ್‌ ಆಯ್ದ ತಂಡ ಗೆಲ್ಲುವ ಪೆವರೀಟ್‌ !

ಲೈಂಗಿಕ ದೌರ್ಜನ್ಯ: ನಟಿ ಪೂನಂ ಪಾಂಡೆ ಪತಿಗೆ ಷರತ್ತುಬದ್ಧ ಜಾಮೀನು ಮಂಜೂರು

ಲೈಂಗಿಕ ದೌರ್ಜನ್ಯ ಆರೋಪ: ನಟಿ ಪೂನಂ ಪಾಂಡೆ ಪತಿಗೆ ಷರತ್ತುಬದ್ಧ ಜಾಮೀನು ಮಂಜೂರು

ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ

ವಿಶ್ವ ವಿಖ್ಯಾತ ಐಫೆಲ್ ಟವರ್ ಗೆ ಬಾಂಬ್ ಬೆದರಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರುಹೊಸ ಸೇರ್ಪಡೆ

web-tdy-1

ವೃತ್ತಿಯಲ್ಲಿ ಲಾಯರ್, ಪ್ರವೃತ್ತಿಯಲ್ಲಿ “ಚಾಯಿವಾಲಿ”ಯ ಓನರ್ : ಇವರ ಕಥೆ ಗೊತ್ತಾ ?

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ರೈಲ್ವೇ ಖಾತೆ ರಾಜ್ಯ ಸಚಿವ ಸಂಸದ ಸುರೇಶ್ ಅಂಗಡಿ ಕೋವಿಡ್ ಸೋಂಕಿಗೆ ಬಲಿ

ಅವಳಿಗೂ ಒಂದು ದಿನ ಇರಬೇಕಿತ್ತು…

ಅವಳಿಗೂ ಒಂದು ದಿನ ಇರಬೇಕಿತ್ತು…

ಗಾಂಜಾ ಸಂಗ್ರಹ ಮಾಡಿದ್ದವನನ್ನು ಬಂಧಿಸಲು ತೆರಳಿದ್ದವರಿಗೆ ಸಿಕ್ಕಿತು ಗಂಧದ ತುಂಡು!

ಗಾಂಜಾ ಸಂಗ್ರಹ ಮಾಡಿದ್ದವನನ್ನು ಬಂಧಿಸಲು ತೆರಳಿದ್ದವರಿಗೆ ಸಿಕ್ಕಿತು ಗಂಧದ ತುಂಡು!

avalu-tdy-4

ಅಕ್ಕನೆಂಬ ಅಮ್ಮ ತಂಗಿ ಎಂಬ ಕಂದ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.