Udayavni Special

ಸಮಾನ ಹಕ್ಕುಗಳಿಂದ ಅಸ್ಮಿತೆ


Team Udayavani, Dec 2, 2017, 9:01 AM IST

02-14.jpg

ಮೂಡಬಿದಿರೆ: ಸರ್ವ ಧರ್ಮ- ವಿಚಾರ- ಸಂಸ್ಕೃತಿ ಸಮಾನತೆ ಮತ್ತು ಭಿನ್ನತೆಯಲ್ಲಿ ಏಕತೆ ಎಂಬುದು ಬಹುತ್ವದ ಆಯಾಮಗಳು ಎಂದು ಖ್ಯಾತ ವಿಮರ್ಶಕ ಡಾ | ಸಿ. ಎನ್‌. ರಾಮಚಂದ್ರನ್‌ ಅವರು ಶುಕ್ರವಾರ ಇಲ್ಲಿ ಹೇಳಿದರು.

ಡಾ| ಎಂ. ಮೋಹನ್‌ ಆಳ್ವರ ನೇತೃತ್ವ ದಲ್ಲಿ ಇಲ್ಲಿ ಮೂರು ದಿನಗಳ ಕಾಲ ಡಾ| ನಾಗತಿಹಳ್ಳಿ ಚಂದ್ರಶೇಖರ್‌ ಅವರ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಆಳ್ವಾಸ್‌ ನುಡಿಸಿರಿ 14ನೇ ರಾಷ್ಟ್ರೀಯ ಸಮ್ಮೇಳನವನ್ನು ಅವರು ಉದ್ಘಾಟಿಸಿದರು. ಬಹುತ್ವದ ಕಲ್ಪನೆಯು ಸಹಸ್ರಮಾ ಗಳಿಂದಲೂ ಭಾರತದ ಬದುಕಿನಲ್ಲಿ ಹಾಸು ಹೊಕ್ಕಾಗಿದೆ. ಸಾಂಸ್ಕೃತಿಕ, ವೈಚಾರಿಕ ಬಹುತ್ವವೆಂದರೆ ಅನೇಕ ಸಹಭಾಗಿ ಸಂಸ್ಕೃತಿಗಳು, ವೈಚಾರಿಕ ಪ್ರಣಾಲಿ ಗಳು ಸಮಾನ ಹಕ್ಕುಗಳಿಂದ ತಮ್ಮ ತಮ್ಮ ಅಸ್ಮಿತೆಯನ್ನು ಉಳಿಸಿಕೊಂಡು ಸಮಾಜವೊಂದರಲ್ಲಿ ಸಹ ಬಾಳ್ವೆ ಯನ್ನು ನಡೆಸುವುದೆಂದು ಸಿಎನ್‌ಆರ್‌ ವಿವರಿಸಿದರು. ಪ್ರಾಚೀನ ಹಾಗೂ ಅರ್ವಾಚೀನ ಕನ್ನಡ ಸಾಹಿತ್ಯದ ಮೂಲಕವೇ “ಬಹುತ್ವದೆಡೆಗೆ’ ಎಂಬ ಶೋಧ ವನ್ನು ಕೈಗೊಂಡಿ ರುವ ಈ ನುಡಿಸಿರಿ ಜ್ಞಾನ ದಾಸೋಹದ ಕಾರ್ಯವು ಸಾರ್ಥಕ ವಾಗಲಿ ಎಂದು ಸಿ. ಎನ್‌. ರಾಮ ಚಂದ್ರನ್‌ ಅವರು ಹಾರೈಸಿದರು.

ಸಾರ್ವತ್ರಿಕ: ಬಳಿಗಾರ್‌
ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯಾಧ್ಯಕ್ಷ ಮನು ಬಳಿಗಾರ್‌ ಮುಖ್ಯ ಅತಿಥಿಯಾಗಿದ್ದರು. ಕನ್ನಡತನದ ಹಿರಿಮೆ ಗರಿಮೆ ಸಾರ್ವತ್ರಿಕವಾಗಲೆಂದು ಹಾರೈಸಿದರು. ಈ ನಿಟ್ಟಿನಲ್ಲಿ ಆಳ್ವಾಸ್‌ ನುಡಿಸಿರಿಯು ಆದರ್ಶವಾಗಿದೆ. ದೇಸಿ ಪರಂಪರೆಯ ಜತೆ ಆಧುನಿಕ ಚಿಂತನೆಯ ಬೆಸುಗೆ ಇಲ್ಲಿ  ನಡೆಯುತ್ತದೆ ಎಂದು ಹೇಳಿದರು. 

ಸಂಸದ ನಳಿನ್‌ಕುಮಾರ್‌ ಕಟೀಲು, ಶಾಸಕ ಕೆ. ಅಭಯಚಂದ್ರ ಜೈನ್‌, ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ, ವಿಧಾನ ಪರಿಷತ್‌ ವಿಪಕ್ಷ ಮುಖ್ಯ ಸಚೇತಕ ಕ್ಯಾ | ಗಣೇಶ್‌ ಕಾರ್ಣಿಕ್‌ ಗೌರವ ಅತಿಥಿಗಳಾಗಿದ್ದರು. ಏರ್ಯ ಲಕ್ಷ್ಮೀನಾರಾಯಣ ಆಳ್ವ, ಹರಿಕೃಷ್ಣ ಪುನರೂರು, ಪುರಸಭಾಧ್ಯಕ್ಷೆ ಹರಿಣಾಕ್ಷಿ ಸುವರ್ಣ, ಪ್ರದೀಪ್‌ ಕಲ್ಕೂರ, ರೆ| ಫಾ| ಗೋಮ್ಸ್‌ , ಐಕಳ ಹರೀಶ ಶೆಟ್ಟಿ, ಜಯಶ್ರೀ ಅಮರನಾಥ ಶೆಟ್ಟಿ ವೇದಿಕೆಯಲ್ಲಿದ್ದರು. ಆಳ್ವಾಸ್‌ನ ಅಧ್ಯಕ್ಷ ಡಾ| ಎಂ. ಮೋಹನ್‌ ಆಳ್ವ ಸ್ವಾಗತಿಸಿದರು. ಮನೋಹರ ಪ್ರಸಾದ್‌ ನಿರೂಪಿಸಿದರು. ವೇಣುಗೋಪಾಲ ಶೆಟ್ಟಿ ವಂದಿಸಿದರು. 

ಕೃತಿ ಬಿಡುಗಡೆ
ತೇಜಸ್ವಿನಿ ಹೆಗಡೆ ಅವರ ಹಂಸಯಾನ ಕೃತಿ, ಗಣೇಶ್‌ ಭಾರತೀ- ಅಬ್ದುಲ್‌ ಹಮೀದ್‌ ಕೆ. ಪಿ. ರವಿಶಂಕರ್‌ ಅವರ ಕೃತಿಗಳನ್ನು ನಾಗತಿಹಳ್ಳಿ ಬಿಡು ಗಡೆಗೊಳಿಸಿದರು. 

ನುಡಿಸಿರಿ ಅತ್ಯಂತ ಪ್ರಸ್ತುತ: ಸಿಎನ್‌ಆರ್‌
ಮೋಹನ್‌ ಆಳ್ವ ಅವರು ನಿಪುಣರು; “ನುಡಿಸಿರಿ’ಯಂತಹ ಸಾವಿರಾರು ಜನರು ಸೇರುವ ಜ್ಞಾನ ದಾಸೋಹವನ್ನು ಅಚ್ಚು ಕಟ್ಟಾಗಿ, ಯಾವ ಕುಂದು ಕೊರತೆಯೂ ಯಾರಿಗೂ ಆಗ ದಂತೆ ಆಯೋ ಜಿಸುವುದು ಅಸಾಧ್ಯ ವೆಂದೇ ತೋರು ತ್ತದೆ. ಈ ಬಾರಿಯ “ನುಡಿಸಿರಿ’ಯ ಮೂಲಾಶಯವಾದ ಬಹುತ್ವದ ಪರಿಕಲ್ಪನೆಯೂ ಇಂದಿನ ಸಂದರ್ಭ ಎಂದರೆ, ಒಂದು ಧರ್ಮ- ಒಂದು ಭಾಷೆ- ಒಂದು ಸಂಸ್ಕೃತಿ- ಒಂದು ಆರ್ಥಿಕ ಪ್ರಣಾಲಿ ಇವುಗಳ ದಿಕ್ಕಿನಲ್ಲಿ ಭರ ದಿಂದ ಓಡುತ್ತಿರುವ ನಮ್ಮ ರಾಷ್ಟ್ರದ ಇಂದಿನ ಪರಿಸ್ಥಿತಿಯಲ್ಲಿ ತುಂಬಾ ಪ್ರಸ್ತುತ. ತುಂಬಾ ತುರ್ತಿನ ಸವಾಲು ಕೂಡ.

ಟಾಪ್ ನ್ಯೂಸ್

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

RAILWAY

ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

captain

ಅಮರೀಂದರ್ ಸಿಂಗ್ ಬಿಜೆಪಿಯೊಂದಿಗೆ ಸೇರಿ ಕಾಗೆ ತಿನ್ನಲಿ : ಕಾಂಗ್ರೆಸ್ ಆಕ್ರೋಶ

ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

ಸಫಾಯಿ ಕರ್ಮಚಾರಿ ಸಾವು; ಸಾಂತ್ವನ ಹೇಳಲು ಬಂದ ಪ್ರಿಯಾಂಕಾಗೆ ತಡೆ

ಸುಭಾಸನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು

ಸುಭಾಸನಗರದಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಕಾರಂಜಿಯಂತೆ ಚಿಮ್ಮಿದ ನೀರು

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

ಪಂಚಭಾಷಾ ಹಿರಿಯ ನಟಿ ಲಕ್ಷ್ಮೀ ಕೊಲ್ಲೂರು ಕ್ಷೇತ್ರ ಭೇಟಿ

ಯುಎಇ ಉದ್ಯಮಿಗಳಿಂದ ರಾಜ್ಯದಲ್ಲಿ ಭಾರೀ ಹೂಡಿಕೆ: ಅಶ್ವತ್ಥನಾರಾಯಣ

ಯುಎಇ ಉದ್ಯಮಿಗಳಿಂದ ರಾಜ್ಯದಲ್ಲಿ ಭಾರೀ ಹೂಡಿಕೆ: ಅಶ್ವತ್ಥನಾರಾಯಣ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

ಉಳ್ಳಾಲ: ಅಕ್ರಮ ಮರಳುಗಾರಿಕೆ ಅಡ್ಡೆಗೆ ದಾಳಿ: ಇಬ್ಬರ ಬಂಧನ ; ಎಂಟು ಮಂದಿ ಪರಾರಿ

1-bb

ಬಜರಂಗದಳದಿಂದ ಐವನ್ ಡಿಸೋಜ ಮನೆಗೆ ಮುತ್ತಿಗೆ ಯತ್ನ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಕಂಬಳ: ಈ ಋತುವಿನ ಸಂಭಾವ್ಯ ಪಟ್ಟಿ ಸಿದ್ಧ

ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ

ಚೇತರಿಕೆ ಹಾದಿಯಲ್ಲಿ ಕರಾವಳಿ ಜವುಳಿ ಉದ್ಯಮ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

ಎಂಆರ್‌ಪಿಎಲ್‌ಗೆ ಒಎನ್‌ಜಿಸಿ ಅಧ್ಯಕ್ಷರ ಭೇಟಿ

MUST WATCH

udayavani youtube

ಗೂಟಿ ಕೃಷಿ ( air layering ) ಮಾಡುವ ಸಂಕ್ಷಿಪ್ತ ಮಾಹಿತಿ ಇಲ್ಲಿದೆ ನೋಡಿ

udayavani youtube

ಭಾರತ – ಪಾಕ್‌ ಟಿ20 ವಿಶ್ವಕಪ್‌ ಪಂದ್ಯ ರದ್ದಾಗದು

udayavani youtube

‘ಅಂಬಾರಿ’ಯಲ್ಲಿ ಕುಳಿತು ಅರಮನೆ ನಗರಿ ನೋಡಿ

udayavani youtube

ಹುಣಸೂರು : ಟಿಬೆಟ್ ಕ್ಯಾಂಪ್ ನೊಳಗೆ ನುಗ್ಗಿ ದಾಂದಲೆ ನಡೆಸಿದ ಒಂಟಿ ಸಲಗ

udayavani youtube

ಭತ್ತ ಕಟಾವು ಯಂತ್ರಕ್ಕೆ ಗಂಟೆಗೆ 2500ರೂ : ದುಬಾರಿ ಬಾಡಿಗೆಗೆ ಬೇಸತ್ತ ರೈತರು

ಹೊಸ ಸೇರ್ಪಡೆ

25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

25ರಿಂದ 724 ಕಿರಿಯ ಪ್ರಾಥಮಿಕ ಶಾಲೆಗಳು ಓಪನ್‌

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

ಮನುಷ್ಯನ ದೇಹಕ್ಕೆ ಹಂದಿಯ ಕಿಡ್ನಿ ಯಶಸ್ವಿ ಕಸಿ! ಹೊಸ ಪ್ರಯೋಗದಲ್ಲಿ ಅಮೆರಿಕ ವಿಜ್ಞಾನಿಗಳು

RAILWAY

ಕ್ಯಾಶ್‌ಲೆಸ್‌ ವ್ಯವಹಾರದತ್ತ ಕೊಂಕಣ ರೈಲ್ವೇ : ಎಸ್ ಬಿಐನೊಂದಿಗೆ ಕೊಂಕಣ ರೈಲ್ವೇ ಒಪ್ಪಂದ

captain

ಅಮರೀಂದರ್ ಸಿಂಗ್ ಬಿಜೆಪಿಯೊಂದಿಗೆ ಸೇರಿ ಕಾಗೆ ತಿನ್ನಲಿ : ಕಾಂಗ್ರೆಸ್ ಆಕ್ರೋಶ

soraba news

ಸೊರಬ: ಸಂಭ್ರಮದ ಸೀಗೆ ಹುಣ್ಣಿಮೆ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.