ಎಸೆಸೆಲ್ಸಿ ತುಳುಪಠ್ಯ: ಶೇ. 100 ಫಲಿತಾಂಶ


Team Udayavani, May 22, 2017, 3:34 PM IST

sslc-exam-2017-22.jpg

ಪುತ್ತೂರು: ಎಸೆಸೆಲ್ಸಿಯಲ್ಲಿ ತುಳು ಪಠ್ಯವನ್ನು ತೃತೀಯ ಭಾಷೆಯನ್ನಾಗಿ ಕಲಿತು ಪರೀಕ್ಷೆ ಬರೆದ ದ.ಕ. ಜಿಲ್ಲೆಯ 12 ಶಾಲೆಗಳ ಎಲ್ಲ 283 ವಿದ್ಯಾರ್ಥಿಗಳು ಉತೀರ್ಣಗೊಂಡು ಶೇ. 100 ಫಲಿತಾಂಶ ದಾಖಲಾಗಿದೆ.

ಪರೀಕ್ಷೆ ಬರೆದವರಲ್ಲಿ 158 ಬಾಲಕರು ಮತ್ತು 125 ಬಾಲಕಿಯರಿದ್ದರು. ಇವರಲ್ಲಿ 134 ವಿದ್ಯಾರ್ಥಿಗಳು  ಎ ಪ್ಲಸ್‌, 40 ಮಂದಿ ಎ, 42 ಮಂದಿ ಬಿ ಪ್ಲಸ್‌, 40 ಮಂದಿ ಬಿ, 12 ಮಂದಿ ಸಿ ಪ್ಲಸ್‌ 15 ಮಂದಿ ಸಿ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.

ಶಾಲಾವಾರು ಫಲಿತಾಂಶ
ಪುತ್ತೂರು ತಾಲೂಕಿನ ಕೊಂಬೆಟ್ಟು ಸರಕಾರಿ ಪ್ರೌಢಶಾಲೆ – 30, ಉಪ್ಪಿನಂಗಡಿ ಸರಕಾರಿ ಪ್ರೌಢಶಾಲೆ – 61, ಸುಳ್ಯಪದವು ಸರ್ವೋದಯ ಪ್ರೌಢಶಾಲೆ – 36, ಕಬಕ ಸರಕಾರಿ ಪ್ರೌಢಶಾಲೆ – 15, ಸವಣೂರು ಸರಕಾರಿ ಪ್ರೌಢಶಾಲೆ – 25, ಪಾಪೆಮಜಲು ಸರಕಾರಿ ಪ್ರೌಢಶಾಲೆ – 5, ಕಾಣಿಯೂರು ಪ್ರಗತಿ ಆಂಗ್ಲ ಮಾಧ್ಯಮ ಶಾಲೆ – 20, ಕಾಣಿಯೂರು ಪ್ರಗತಿ ಕನ್ನಡ ಮಾಧ್ಯಮ ಶಾಲೆ – 23, ರಾಮಕುಂಜ ಶ್ರೀ ರಾಮಕುಂಜೇಶ್ವರ ಪ್ರೌಢಶಾಲೆ – 14, ಬಂಟ್ವಾಳ ತಾಲೂಕಿನ ವಿಟ್ಲ ವಿಠಲ ಪ್ರೌಢಶಾಲೆ – 29, ಸರಪಾಡಿ ಸರಕಾರಿ ಪ್ರೌಢಶಾಲೆ – 17, ಬೆಳ್ತಂಗಡಿ ತಾಲೂಕಿನ ಕೊಯ್ಯೂರು ಸರಕಾರಿ ಪ್ರೌಢಶಾಲೆ – 8 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ, ಎಲ್ಲರೂ ಉತ್ತೀರ್ಣರಾಗಿದ್ದಾರೆ.

25ರಿಂದ 283ಕ್ಕೆ ಏರಿಕೆ: 2015-16ರಲ್ಲಿ ತುಳು ಪಠ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳ ಸಂಖ್ಯೆ-25. ಪುತ್ತೂರು ತಾಲೂಕಿನ 3 ಪ್ರೌಢಶಾಲೆಯ ವಿದ್ಯಾರ್ಥಿಗಳಾಗಿದ್ದರು. ಪರೀಕ್ಷೆಗೆ ಹಾಜರಾದ ಎಲ್ಲ ವಿದ್ಯಾರ್ಥಿಗಳು ಉತೀರ್ಣರಾಗಿ ಶೇ. 100 ಫಲಿತಾಂಶ ಬಂದಿತ್ತು. ಓರ್ವ ವಿದ್ಯಾರ್ಥಿನಿ 100ಕ್ಕೆ 100 ಅಂಕ ಪಡೆದಿದ್ದರೆ,4 ಮಂದಿ ವಿದ್ಯಾರ್ಥಿಗಳು 95 ಶೇ. ಅಧಿಕ ಅಂಕ ಗಳಿಸಿದ್ದರು. 2016-17ನೇ ಸಾಲಿನಲ್ಲಿ ವಿದ್ಯಾರ್ಥಿಗಳ ಸಂಖ್ಯೆ 283ಕ್ಕೆ ಏರಿತ್ತು. 3 ಶಾಲೆಗಳಿಂದ 12 ಶಾಲೆಗೆ ವಿಸ್ತರಣೆಗೊಂಡಿತ್ತು.

ಪುತ್ತೂರು ಗರಿಷ್ಠ
ದ.ಕ. ಜಿಲ್ಲೆಯ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕಿನ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಪುತ್ತೂರು ತಾಲೂಕಿನ 9 ಶಾಲೆಗಳಿಂದ 229, ಬೆಳ್ತಂಗಡಿ ತಾಲೂಕಿನ 1 ಶಾಲೆಯಿಂದ 8, ಬಂಟ್ವಾಳ ತಾಲೂಕಿನ 2 ಶಾಲೆಯಿಂದ 46 ವಿದ್ಯಾರ್ಥಿಗಳಿದ್ದರು. ಉಪ್ಪಿನಂಗಡಿ ಸ.ಪ.ಪೂ. ಪ್ರೌಢ ಶಾಲೆಯ 63 ವಿದ್ಯಾರ್ಥಿ ಸಂಖ್ಯೆ ಶಾಲಾವಾರು ಮಟ್ಟದ ಗರಿಷ್ಠ ಸಂಖ್ಯೆ. ತಾಲೂಕುವಾರು ಮಟ್ಟದಲ್ಲಿ ಪುತ್ತೂರು ತಾಲೂಕಿನಿಂದ ಗರಿಷ್ಠ ವಿದ್ಯಾರ್ಥಿಗಳು ತುಳು ಪಠ್ಯ ಆಯ್ದುಕೊಂಡಿದ್ದರು.

ಈ ಬಾರಿ ಪರೀಕ್ಷೆ ಬರೆದ 283 ವಿದ್ಯಾರ್ಥಿಗಳು ಉತೀರ್ಣರಾಗಿ ಶೇ. 100 ಫಲಿತಾಂಶ ಬಂದಿದೆ. ಇದರಲ್ಲಿ 38 ವಿದ್ಯಾರ್ಥಿಗಳು ತುಳು ಪಠ್ಯದಲ್ಲಿ 100ಕ್ಕೆ 100 ಅಂಕ ಗಳಿಸಿದ್ದಾರೆ. 138 ವಿದ್ಯಾರ್ಥಿಗಳು 90ಕ್ಕಿಂತ ಅಧಿಕ ಅಂಕ ಪಡೆದಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಏರಲಿದೆ.                        
 – ಚಂದ್ರಹಾಸ ರೈ, 
ರಿಜಿಸ್ಟ್ರಾರ್‌, ತುಳು ಅಕಾಡೆಮಿ

ಟಾಪ್ ನ್ಯೂಸ್

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Ashika

ಗ್ಲಾಮರಸ್ ಪಾತ್ರ, ಬೋಲ್ಡ್ ಲುಕ್.. ಕಾಣೆಯಾದವರ ಜೊತೆ ಆಶಿಕಾ ರಂಗನಾಥ್‌!

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

ಫ್ಯಾಟ್‌ ಸರ್ಜರಿ ಜೀವಕ್ಕೇ ವರಿ: ಹೆಚ್ಚುತ್ತಿದೆ ಸೌಂದರ್ಯ ಚಿಕಿತ್ಸೆ ಟ್ರೆಂಡ್‌

1-sdsa-d

ನನ್ನನ್ನು ಎನ್‌ಕೌಂಟರ್ ಮಾಡುವುದಾಗಿ ಬೆದರಿಕೆ ಹಾಕಲಾಗಿತ್ತು : ಅಜಂ ಖಾನ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಎಸ್.ಆರ್.ಪಾಟೀಲ್ ಗೆ ಟಿಕೆಟ್ ವಿಚಾರವಾಗಿ ನನ್ನ ಬಳಿ ಚರ್ಚೆ ಮಾಡಿಲ್ಲ: ಎಂ.ಬಿ.ಪಾಟೀಲ್

ಮೇ 27ಕ್ಕೆ ವೀಲ್ ಚೇರ್ ರೋಮಿಯೋ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮೇ 27ಕ್ಕೆ “ವೀಲ್ ಚೇರ್ ರೋಮಿಯೋ” ಸಿನಿಮಾ ರಾಜ್ಯಾದ್ಯಂತ ಬಿಡುಗಡೆ

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?

ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 458 ಅಂಕ ಜಿಗಿತ; ಮೇ 23ರಂದು ಲಾಭಗಳಿಸಿದ ಷೇರು ಯಾವುದು?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Untitled-1

ಪುತ್ತೂರು: ಗಾಂಜಾ ಸರಬರಾಜುದಾರ ಪೊಲೀಸರ ಬಲೆಗೆ; 5.86 ಲಕ್ಷ ಮೌಲ್ಯದ ಸೊತ್ತುಗಳು ವಶಕ್ಕೆ

tree

ಹೆದ್ದಾರಿ ಅಭಿವೃದ್ಧಿ: ಮರಗಳ ತೆರವಿಗೆ ಕ್ಷಣಗಣನೆ

narega

ಕಡಬ: 2ನೇ ಬಾರಿ ಜಿಲ್ಲೆಯಲ್ಲೇ ಗುರಿ ಮೀರಿದ ಸಾಧನೆ

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ. ಯಶೋವರ್ಮ ನಿಧನ

ಉಜಿರೆ ಎಸ್ ಡಿಎಂ ಎಜ್ಯುಕೇಶನ್ ಸೊಸೈಟಿ ಕಾರ್ಯದರ್ಶಿ ಡಾ.ಯಶೋವರ್ಮ ನಿಧನ

azan

2.35 ಕೋ.ರೂ. ವೆಚ್ಚದಲ್ಲಿ ಮೌಲಾನಾ ಆಜಾದ್‌ ಮಾದರಿ ಶಾಲೆಗೆ ಕಟ್ಟಡ ಸಿದ್ಧ

MUST WATCH

udayavani youtube

ಶಿರೂರು ಆಳ ಸಮುದ್ರದಲ್ಲಿ‌ ಮುಳುಗಿದ ಮೀನುಗಾರಿಕಾ ದೋಣಿ

udayavani youtube

ಉಡುಪಿಯಲ್ಲಿ ‘ ಮಾವಿನ ಮೇಳ ‘ | ನಾಳೆ ( may 23) ಕೊನೇ ದಿನ

udayavani youtube

ಶಿರ್ವ : ನೂತನ ಹೈಟೆಕ್‌ ಬಸ್ಸು ನಿಲ್ದಾಣ ಲೋಕಾರ್ಪಣೆ

udayavani youtube

ಬೆಳ್ತಂಗಡಿಯಲ್ಲೊಂದು ಗೋಡಂಬಿಯಾಕಾರದ ಮೊಟ್ಟೆ ಇಡುವ ಕೋಳಿ..

udayavani youtube

ಆಗ ನಿಮ್ಮಲ್ಲಿ 2 ಆಯ್ಕೆಗಳಿರುತ್ತವೆ .. ಅದೇನಂದ್ರೆ..

ಹೊಸ ಸೇರ್ಪಡೆ

12

ಶಿಕ್ಷಣದಿಂದ ಬದಲಾವಣೆ ಸಾಧ್ಯ: ಪರಶುರಾಮ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

ಪರಿಚಯಸ್ಥ ಮಹಿಳೆಯ ಫೋಟೋ ಬಳಸಿ ಅಶ್ಲೀಲವಾಗಿ ಮಾರ್ಫಿಂಗ್‌: ಆರೋಪಿ ಸೆರೆ

result

‌ಫಲಿತಾಂಶದಿಂದ ಕಾಂಗ್ರೆಸ್‌ಗೆ ಮರ್ಮಾಘಾತ ­

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

ಬೆಂಗಳೂರು: ಉಡುಗೊರೆ, ಲಾಟರಿ ನೆಪದಲ್ಲಿ ವಂಚನೆ

1-dfdsf

ದಾವೋಸ್ ನಲ್ಲಿ ಸಿಎಂ: ವರ್ಲ್ಡ್ ಎಕನಾಮಿಕ್ ಫೋರಮ್ ಸಮಾವೇಶದಲ್ಲಿ ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.