ಫಾಸ್ಟ್ ಟ್ಯಾಗ್ ಕಡ್ಡಾಯ: ಲಾಸ್ಟ್ ಸ್ಟಾಪ್ ಬದಲಾಯಿಸಿದ ಖಾಸಗಿ ಬಸ್ ಗಳು
Team Udayavani, Dec 15, 2019, 3:39 PM IST
ಉಳ್ಳಾಲ: ಫಾಸ್ಟ್ ಟ್ಯಾಗ್ ಕಡ್ಡಾಯದಿಂದಾಗಿ ತಲಪಾಡಿ ಟೋಲ್ ಎದುರು ಟ್ಯಾಗ್ ನೋಂದಾಯಿಸದ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಖಾಸಗಿ ಬಸ್ಸು ಚಾಲಕರು ಟೋಲ್ ಸಿಬ್ಬಂದಿ ಜತೆಗೆ ಗಲಾಟೆ ನಡೆಸಿದ ಘಟನೆ ತಲಪಾಡಿ ಟೋಲ್ ಗೇಟ್ ನಲ್ಲಿ ನಡೆಯಿತು.
ತಲಪಾಡಿಯಿಂದ ಮಂಗಳೂರಿಗೆ ಹಲವು ಖಾಸಗಿ ಬಸ್ ಗಳು ಸಂಚರಿಸುತ್ತಿವೆ. ಟೈಮಿಂಗ್ ಸ್ಪರ್ಧೆಯಲ್ಲಿರುವ ಬಸ್ಸುಗಳಿಗೆ ಟೋಲ್ ನಲ್ಲಿ ಫಾಸ್ಟ್ ಟ್ಯಾಗ್ ಕಡ್ಡಾಯದಿಂದ ತೊಂದರೆಯಾಗಿದೆ. ಕೇವಲ ಒಂದೇ ಕ್ಯಾಷ್ ಕೌಂಟರ್ ತೆರೆಯಲಾದ ಹಿನ್ನೆಲೆಯಲ್ಲಿ ಬಸ್ಸುಗಳು ಸಾಲುಗಟ್ಟಿ ನಿಲ್ಲುವಂತಹ ಸ್ಥಿತಿ ಎದುರಾಯಿತು.
ಇದರಿಂದಾಗಿ ಬಸ್ಸು ಸಿಬ್ಬಂದಿ ಟೋಲ್ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡು, ಹೆಚ್ಚುವರಿ ಕೌಂಟರ್ ತೆರೆಯುವಂತೆ ಒತ್ತಾಯಿಸಿದರು. ಭಾನುವಾರವೇ ಉದ್ದದ ಸಾಲಿನಲ್ಲಿ ನಿಲ್ಲಬೇಕಾಯಿತು. ಇನ್ನು ಉಳಿದ ದಿನಗಳಲ್ಲಿ ಹೇಗೆ ಅನ್ನುವುದನ್ನು ಬಸ್ ಸಿಬ್ಬಂದಿ ಪ್ರಶ್ನಿಸಿದರು.
ಲಾಸ್ಟ್ ಸ್ಟಾಪ್ ಬದಲಾಯಿಸಿದ ಬಸ್ಸುಗಳು!
ಮೇಲಿನ ತಲಪಾಡಿಯಲ್ಲಿ ಲಾಸ್ಟ್ ಸ್ಟಾಪ್ ನೀಡುತ್ತಿದ್ದ ಬಸ್ಸುಗಳು, ಟೋಲ್ ಎದುರುಗಡೆಯೇ ಭಾನುವಾರ ಬೆಳಗ್ಗಿನಿಂದ ತಿರುಗುತ್ತಿದೆ. ಪ್ರಯಾಣಿಕರು ಒಂದು ಕಿ.ಮೀ ಉದ್ದ ನಡೆದುಕೊಂಡು ಸಾಗಿ ಬಸ್ಸುಗಳನ್ನು ಹತ್ತುವಂತಹ ಸ್ಥಿತಿ ತಲಪಾಡಿಯಲ್ಲಿ ನಿರ್ಮಾಣ ಆಗಿದೆ.
ಫಾಸ್ಟ್ ಟ್ಯಾಗ್ ಇಲ್ಲದ ಮತ್ತೆ ಎರಡು ಹೆಚ್ಚುವರಿ ಕೌಂಟರ್ ಇಲ್ಲವೇ ಖಾಸಗಿ ಬಸ್ಸುಗಳಿಗೆ ಬೇರೆಯೇ ಟ್ರ್ಯಾಕ್ ನೀಡುವವರೆಗೂ ಬಸ್ಸುಗಳನ್ನು ಲಾಸ್ಟ್ ಸ್ಟಾಪ್ ವರೆಗೆ ಕೊಂಡೊಯ್ಯುವುದಿಲ್ಲ ಎಂದು ಬಸ್ ಸಿಬ್ಬಂದಿ ಪಟ್ಟು ಹಿಡಿದಿದ್ದಾರೆ
ಇನ್ನು ಕಾಸರಗೋಡು ಹೋಗುವ ಬರುವ ಕೇರಳ, ಕರ್ನಾಟಕ ಸಾರಿಗೆ ಬಸ್ಸುಗಳು ಹಲವು ನಿಮಿಷಗಳ ಕಾಲ ಟೋಲ್ ನಲ್ಲಿ ನಿಲ್ಲುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ
ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್ ಬ್ರಿಜೇಶ್ ಚೌಟ
ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್ ಬೆಂಬಲಿಸಿ: ಪದ್ಮರಾಜ್ ಪೂಜಾರಿ
MUST WATCH
ಹೊಸ ಸೇರ್ಪಡೆ
Bellary; ಲೋಕಾಯುಕ್ತ ಬಲೆಗೆ ಬಿದ್ದ 6 ಮಂದಿ ಭ್ರಷ್ಟ ಅಧಿಕಾರಿಗಳು: ಲಕ್ಷ ಲಕ್ಷ ರೂ. ಲಂಚ!
Lok Sabha Election: ಮೋದಿಗೆ ಮತ ಕೇಳುವ ಹಕ್ಕಿಲ್ಲ: ಸಿದ್ದರಾಮಯ್ಯ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಭಕ್ತಿಯ ಸಂಗಮ- ಶಾಂತಲಿಂಗ ಸ್ವಾಮೀಜಿ