Udayavni Special

ಕೊನೆಗೂ ಮೂಡುಬಿದಿರೆ, ಕಡಬ ತಾಲೂಕು ಉದ್ಘಾಟನೆ


Team Udayavani, Mar 9, 2019, 12:30 AM IST

0803mood1taluk.jpg

ಮೂಡುಬಿದಿರೆ/ಕಡಬ: ದಿನ ನಿಗದಿಯಾಗಿಯೂ ನಾಲ್ಕು ಬಾರಿ ಮತ್ತು ಆರು ಬಾರಿ ಮುಂದೂಡಿಕೆಯಾಗಿದ್ದ ನೂತನ ಮೂಡುಬಿದಿರೆ ಮತ್ತು ಕಡಬ ತಾಲೂಕುಗಳಿಗೆ ಕೊನೆಗೂ ಉದ್ಘಾಟನೆಯ ಭಾಗ್ಯ ಕೂಡಿಬಂದಿದೆ. 

ರಾಜ್ಯ ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅವರು ಶುಕ್ರವಾರ ಈ ಎರಡೂ ತಾಲೂಕುಗಳನ್ನು ಉದ್ಘಾಟಿಸಿದರು. ಇದಕ್ಕೂ ಮುನ್ನ ಅವರು ಎರಡೂ ತಾಲೂಕುಗಳ ಮಿನಿ ವಿಧಾನಸೌಧ ಕಟ್ಟಡಗಳಿಗೂ ಶಂಕುಸ್ಥಾಪನೆ ನೆರವೇರಿಸಿದರು.

ಮೂಡುಬಿದಿರೆಯ ಪದ್ಮಾವತಿ ಕಲಾಮಂದಿರದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ದೀಪ ಬೆಳಗಿ, ತಾಲೂಕು ನಕಾಶೆ ಮತ್ತು ಮಿನಿ ವಿಧಾನ ಸೌಧದ ಬ್ಲೂಪ್ರಿಂಟ್‌ ಅನಾವರಣಗೊಳಿಸುವ ಮೂಲಕ ಸಚಿವ ಆರ್‌.ವಿ. ದೇಶಪಾಂಡೆ ಅವರು ನೂತನ ತಾಲೂಕನ್ನು ಉದ್ಘಾಟಿಸಿದರು. ಅದಕ್ಕೂ ಮುನ್ನ ತಹಶೀಲ್ದಾರರ ಕಚೇರಿಯ ಬಳಿ 3 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಗೊಳ್ಳಲಿರುವ ನೂತನ ಮಿನಿ ವಿಧಾನಸೌಧದ ಕಾಮಗಾರಿಗೆ ಶಂಕುಸ್ಥಾಪನೆಯನ್ನು ಅವರು ನೆರವೇರಿಸಿದರು.

ಕಂದಾಯ ಇಲಾಖೆ ದಿಟ್ಟ ಹೆಜ್ಜೆ
ಕೇವಲ ಪಹಣಿ ಪತ್ರ, ಮ್ಯುಟೇಶನ್‌ ಎಂಟ್ರಿ, ಅಫಿದವಿತ್‌ ಇವಿಷ್ಟೇ ದಾಖಲೆಗಳಿದ್ದು ಭೂಪರಿವರ್ತನೆ ಸಾಧ್ಯವಾಗುವಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಕಂದಾಯ ಇಲಾಖೆ ಇರಿಸಿದೆ. ಇಲಾಖೆಯಲ್ಲಿರುವ ಸಿಬಂದಿ ಕೊರತೆ ನಿವಾರಿಸಲು 109 ತಹಶೀಲ್ದಾರರು, 800 ಸರ್ವೇಯರ್‌ಗಳ ನೇಮಕಾತಿ ನಡೆಯಲಿದೆ. ಗ್ರಾಮಕರಣಿಕರು, ಪ್ರಥಮ, ದ್ವಿತೀಯ ದರ್ಜೆ ಗುಮಾಸ್ತರ ಹುದ್ದೆಗಳನ್ನು ತುಂಬುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ ಎಂದು ಸಚಿವ ದೇಶಪಾಂಡೆ ಮೂಡುಬಿದಿರೆ ತಾಲೂಕು ಉದ್ಘಾಟನೆಯ ಸಂದರ್ಭದಲ್ಲಿ ಪ್ರಕಟಿಸಿದರು.

ರಾಜಕೀಯ ಚುನಾವಣೆಗೆ ಮಾತ್ರ ಸೀಮಿತವಾಗಿರಲಿ, ಅಭಿವೃದ್ಧಿಗೆ ಎಲ್ಲರೂ ಜತೆಯಾಗಿ ಕೆಲಸ ಮಾಡಬೇಕು ಎಂಬುದನ್ನು ಅವಿಭಜಿತ ದ.ಕ. ಜಿಲ್ಲೆಯವರು ತೋರಿಸಿ ಕೊಟ್ಟಿದ್ದಾರೆ. ಆ ಪರಂಪರೆ ಇಂದಿಗೂ ಮುಂದುವರಿದಿದೆ ಎಂದು ದೇಶಪಾಂಡೆ ಮೆಚ್ಚುಗೆ ವ್ಯಕ್ತಪಡಿಸಿದರು.ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಉಮಾನಾಥ ಕೋಟ್ಯಾನ್‌ ವಹಿಸಿದ್ದರು. ಸಚಿವ ಯು.ಟಿ. ಖಾದರ್‌ ಉಪಸ್ಥಿತರಿದ್ದರು.

ಮಿನಿ ವಿಧಾನಸೌಧಕ್ಕೆ
10 ಕೋ.ರೂ.

ಕಡಬದಲ್ಲಿ, ತಹಶೀಲ್ದಾರ್‌ ಕಚೇರಿಯ ಆವರಣದಲ್ಲಿ ಫಲಕ ಅನಾವರಣ ನಡೆಸುವ ಮೂಲಕ ಸಚಿವ ದೇಶಪಾಂಡೆ ಅವರು ತಾಲೂಕನ್ನು ಉದ್ಘಾಟಿಸಿದರು. 10 ಕೋಟಿ ರೂ. ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಮಿನಿ ವಿಧಾನಸೌಧಕ್ಕೆ ಶಂಕುಸ್ಥಾಪನೆ ನಡೆಸಿದರು. ಬಳಿಕ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಕಡಬದ ಸರಕಾರಿ ಆಸ್ಪತ್ರೆಗೆ 4.85 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಕಟ್ಟಡದ ಉದ್ಘಾಟನೆ ನಡೆಯಿತು. ಹೊಸಮಠ ಮತ್ತು ಬಿಳಿನೆಲೆ-ನೆಟ್ಟಣ ನಡುವೆ ನಿರ್ಮಾಣಗೊಂಡಿರುವ ನೂತನ ಸೇತುವೆಗಳನ್ನೂ ಉದ್ಘಾಟಿಸಲಾಯಿತು.

ಆರಂಭಿಕ ಹಂತವಾಗಿ ತಾಲೂಕಿಗೆ 2 ಕೋಟಿ ರೂ. ಬಿಡುಗಡೆಯಾಗಿದೆ. ಎಲ್ಲ ಇಲಾಖೆಗಳು ಒಂದೇ ಸೂರಿನಡಿ ಬರಲು ಮಿನಿ ವಿಧಾನಸೌಧ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆಯಾಗಿದೆ. ಇನ್ನೂ ಹೆಚ್ಚಿನ ಅನುದಾನ ಒದಗಿಸಲು ಸರಕಾರ ಬದ್ಧವಾಗಿದೆ. ಸ್ಥಳೀಯ ಶಾಸಕರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯ ಚಟುವಟಿಕೆಗಳನ್ನು ಮಾಡಲಾಗುವುದು ಎಂದರು.

ಟಾಪ್ ನ್ಯೂಸ್

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Untitled-1

ಸೆಕ್ಯೂರಿಟಿ ಗಾರ್ಡ್‌ ಸೋಗಿನಲ್ಲಿ ಮನೆ ಕಳವು: ನಾಲ್ವರು ಭದ್ರತಾ ಸಿಬ್ಬಂದಿ ಸೇರಿ ಐವರ ಬಂಧನ

ಮುಕ್ತ ವ್ಯಾಪಾರ’ ಮಾತುಕತೆಗೆ ಮರುಚಾಲನೆ

ಮುಕ್ತ ವ್ಯಾಪಾರ’ ಮಾತುಕತೆಗೆ ಮರುಚಾಲನೆ

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಸಿಎಂ ಕಚೇರಿ ನೌಕರನ ಭ್ರಷ್ಟಾಚಾರ ಬಯಲಾದರೂ ಸಿಎಂ ಮೌನ ಯಾಕೆ?

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

crim

ಪಂಪ್‌ ವೆಲ್‌ ಲಾಡ್ಜ್ ನಲ್ಲಿ ಕೊಲೆ : ಇನ್ನೋರ್ವ ಆರೋಪಿ ಬಂಧನ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಇ-ಅಂಕಪಟ್ಟಿ; ವಿದ್ಯಾರ್ಥಿಗಳಿಗಾಗಿ ಮಂಗಳೂರು ವಿ.ವಿ. ಕ್ರಮ

ಈದ್‌ ಮಿಲಾದ್‌ ಸರಳ ಆಚರಣೆ: ಜಿಲ್ಲಾಧಿಕಾರಿ ಆದೇಶ

ಈದ್‌ ಮಿಲಾದ್‌ ಸರಳ ಆಚರಣೆ: ಜಿಲ್ಲಾಧಿಕಾರಿ ಆದೇಶ

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

ಕೋವಿಡ್‌ ಬಳಿಕ ಚಿನ್ನಾಭರಣ ವ್ಯವಹಾರ, ಉದ್ಯಮ ಚೇತರಿಕೆ

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಾಲಯ, ತರಬೇತಿ

ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಾಲಯ, ತರಬೇತಿ

MUST WATCH

udayavani youtube

ತೆರೆದ ಹೊಂಡದಲ್ಲಿ ಬಿದ್ದು ಸಾಯುತ್ತಿವೆ ಪ್ರಾಣಿಗಳು : ಕಣ್ಣು ಮುಚ್ಚಿ ಕುಳಿತ ನಗರ ಸಭೆ

udayavani youtube

ದುರಸ್ತಿಗೊಂಡು ಎರಡೇ ದಿನಕ್ಕೆ ಹಳೆ ಚಾಳಿಯನ್ನು ಮುಂದುವರಿಸಿದ ವಾಚ್ ಟವರ್

udayavani youtube

ಕೊನೆಗೂ ರಾಜ್ಯದಲ್ಲಿ 1 ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸರಕಾರದ ಗ್ರೀನ್ ಸಿಗ್ನಲ್

udayavani youtube

ಮಹಿಳೆಯರಿಗೆ ಉದ್ಯೋಗ ಕಲ್ಪಿಸಿದ ಯಶಸ್ವೀ ಮಹಿಳಾ ಉದ್ಯಮಿ

udayavani youtube

ಹಳೆ ದ್ವೇಷ : ICU ವಾರ್ಡ್ ನಲ್ಲೆ ನಡೆಯಿತು ಎರಡು ತಂಡಗಳ ಮಾರಾಮಾರಿ

ಹೊಸ ಸೇರ್ಪಡೆ

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಕ್ಯಾಮರಾನ್‌ ನೂರಿ, ಪೌಲಾ ಬಡೋಸಾ ಚಾಂಪಿಯನ್ಸ್‌

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

ಶ್ರೀಲಂಕಾ ವಿರುದ್ಧ 96ಕ್ಕೆ ಉದುರಿದ ನಮೀಬಿಯಾ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಪ್ರತ್ಯೇಕ ಚುನಾವಣಾ ಪ್ರಚಾರದಿಂದ ಅನುಕೂಲ: ಯಡಿಯೂರಪ್ಪ

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ಸಾಸಿವೆ ಜಾತಿಯ ಗಿಡದಿಂದ ಜೆಟ್‌ ಇಂಧನ!

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

ರಾಹುಲ್‌ಗೆ ಕಾಂಗ್ರೆಸ್‌ ನೇತೃತ್ವ ವಹಿಸಲು ನಿರ್ಣಯ; ಮಲ್ಲಿಕಾರ್ಜುನ ಖರ್ಗೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.