ಕೊನೆಗೂ ಕಾರು ಚಾಲಕನ ಗುರುತು ಪತ್ತೆ !

ಪಂಪ್‌ವೆಲ್‌ ಫ್ಲೈಓವರ್‌ನಲ್ಲಿ ಸಂಭವಿಸಿದ್ದ ಅಪಘಾತ

Team Udayavani, Feb 18, 2020, 4:43 AM IST

ben-33

ಮಹಾನಗರ: ಪಂಪ್‌ವೆಲ್‌ ಫ್ಲೈಓವರ್‌ನಲ್ಲಿ ಫೆ. 8ರಂದು ಸಂಭವಿಸಿದ್ದ ಅಪಘಾತದಲ್ಲಿ ಓಬ್ಬರ ಸಾವಿಗೆ ಕಾರಣವಾದ ಮಾರುತಿ ಆಲ್ಟೋ ಕಾರನ್ನು ಚಲಾಯಿಸುತ್ತಿದ್ದ ವ್ಯಕ್ತಿ ಯಾರು ಹಾಗೂ ಅದರಲ್ಲಿ ಯಾರೆಲ್ಲ ಇದ್ದರು ಎಂಬುದನ್ನು ಪೊಲೀಸರು ಕೊನೆಗೂ ಪತ್ತೆ ಹಚ್ಚಿದ್ದಾರೆ.

ಕಾರನ್ನು ಚಲಾಯಿಸುತ್ತಿದ್ದ ಯುವಕ ಉಳ್ಳಾಲದ ಮಹಮದ್‌ ಮುಝಾಫಿರ್‌ (21) ಎಂದು ಗುರುತಿಸಲಾಗಿದೆ. ಮಹಮದ್‌ ಮುಝಾಫಿರ್‌ ಉಳ್ಳಾಲ ಕಾಲೇಜೊಂದರಲ್ಲಿ ತೃತೀಯ ವರ್ಷದ ಬಿಎಸ್‌ಸಿ ಓದುತ್ತಿದ್ದಾನೆ ಎಂದು ಮಂಗಳೂರು ನಗರ ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯ ಪೊಲೀಸರು ಉದಯವಾಣಿಗೆ ತಿಳಿಸಿದ್ದಾರೆ.

ಕಾರಿನಲ್ಲಿ 5 ಮಂದಿ ಪ್ರಯಾಣಿಸುತ್ತಿದ್ದು, ಅಪಘಾತ ಸಂಭವಿಸಿದ ಸಂದರ್ಭ ಈ ಐವರಲ್ಲಿ ಕಾರು ಚಲಾಯಿಸುತ್ತಿದ್ದವರು ಯಾರು ಎನ್ನುವುದು ತಿಳಿದಿರಲಿಲ್ಲ. ಬಾಲಕನೊಬ್ಬ ಕಾರು ಚಲಾಯಿಸುತ್ತಿ¤ದ್ದನು ಎಂಬುದಾಗಿ ವ್ಯಾಪಕ ಸಂಶಯ, ಆರೋಪವೂ ಕೇಳಿ ಬಂದಿತ್ತು. ಆದರೆ ಪೊಲೀಸರು ಈಗ ಆತನ ಪತ್ತೆ ಹಚ್ಚಿ ಕೇಸು ದಾಖಲಿಸುವ ಮೂಲಕ ಎಲ್ಲ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಪೊಲೀಸರು ವಿವಿಧೆಡೆ ಸಿಸಿ ಕೆಮರಾ, ಆಲ್ಟೋ ಕಾರಿನಲ್ಲಿದ್ದವರ ಮೊಬೈಲ್‌ ಫೋನ್‌ ಕರೆ ವಿವರ ಇತ್ಯಾದಿಗಳನ್ನು ಕಲೆ ಹಾಕಿ ಕೊನೆಗೂ ಕಾರನ್ನು ಯಾರು ಚಲಾಯಿಸುತ್ತಿದ್ದರು ಎನ್ನುವುದನ್ನು ಪತ್ತೆ ಹಚ್ಚಿದ್ದಾರೆ.

ಜಾಲಿ ರೈಡ್‌ ತಂದ ದುರಂತ!
ವಿದ್ಯಾರ್ಥಿ ಸ್ನೇಹಿತರಾದ ಮಹಮದ್‌ ಮುಝಾಫಿರ್‌, ಖಲೀಲ್‌, ಇಬ್ಬರು ಯುವತಿಯರು ಮತ್ತು ಓರ್ವ ಬಾಲಕ ಸಹಿತ 5 ಮಂದಿ ಫೆ. 8ರಂದು ಮಧ್ಯಾಹ್ನ ಪಿಲಿಕುಳಕ್ಕೆ ತಿರುಗಾಡಲು ಜಾಲಿ ರೈಡ್‌ ಹೋಗಿದ್ದರು. ಪಿಲಿಕುಳ ಹಾಗೂ ಮಾಲ್‌ನಲ್ಲಿ ತಿರುಗಾಡಿದ ಬಳಿಕ ತೊಕ್ಕೊಟ್ಟಿಗೆ ವಾಪಸಾಗಿದ್ದರು. ಹಾಗೆ ತೊಕ್ಕೊಟ್ಟು ತನಕ ಹೋಗಿದ್ದ ಅವರು ಜಾಲಿ ರೈಡ್‌ನ‌ ಮೂಡ್‌ನ‌ಲ್ಲಿ ಪುನಃ ಮಂಗಳೂರಿಗೆ ಬಂದು ಕೆಲವು ತಾಣಗಳಲ್ಲಿ ಸುತ್ತಾಡಿ ವಾಪಸ್‌ ತೊಕ್ಕೊಟ್ಟು ಕಡೆಗೆ ಹೊರಟಿದ್ದರು. ಈ ಸಂದರ್ಭ ಪಂಪ್‌ವೆಲ್‌ ಫ್ಲೈಓವರ್‌ ಮೇಲೆ ಕಾರನ್ನು ಅತಿ ವೇಗವಾಗಿ ಚಲಾಯಿಸಿದ್ದರು. ಆಗ ಕಾರು ಇಂಡಿಯಾನಾ ಆಸ್ಪತ್ರೆ ಎದುರು ತಲಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ಬಲಗಡೆ ಇದ್ದ ಡಿವೈಡರ್‌ ದಾಟಿ ವಿರುದ್ಧ ದಿಕ್ಕಿನ ರಸ್ತೆಯಲ್ಲಿ ಉಜೊjಡಿಯಿಂದ ನಂತೂರು ಕಡೆ ಸಂಚರಿಸುತ್ತಿದ್ದ ಡಸ್ಟರ್‌ ಕಾರಿಗೆ ಢಿಕ್ಕಿ ಹೊಡೆದು ಬಳಿಕ ಸರ್ವಿಸ್‌ ರಸ್ತೆಗೆ ಪಲ್ಟಿಯಾಗಿತ್ತು. ಈ ಸಂದರ್ಭ ಡಸ್ಟರ್‌ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಪ್ರವೀಣ್‌ ಫೆರ್ನಾಂಡಿಸ್‌ ಸಾವನ್ನಪ್ಪಿದ್ದರು.

ಮೃತ ಪ್ರವೀಣ್‌ ಫೆರ್ನಾಂಡಿಸ್‌ ಮಂಗಳೂರಿನ ಪ್ರಮುಖ ಕಾರು ಮೆಕ್ಯಾನಿಕ್‌ಗಳ ಪೈಕಿ ಓರ್ವರಾಗಿದ್ದರು. ನಂತೂರಿನ ಸ್ವಾಗತ್‌ ಗ್ಯಾರೇಜಿನ ಮಾಲಕರಾಗಿದ್ದ ಅವರು ನಗರದ ರಮೇಶ್‌ ಮೆಂಡನ್‌ ಅವರ ಡಸ್ಟರ್‌ ಕಾರನ್ನು ಆಗ ತಾನೇ ರಿಪೇರಿ ಮಾಡಿ ಟೆಸ್ಟ್‌ ಡ್ರೈವ್‌ಗಾಗಿ ನಂತೂರಿನಿಂದ ಉಜ್ಜೋಡಿ ತನಕ ಸಂಚರಿಸಿ ಅಲ್ಲಿಂದ ವಾಪಸ್‌ ಬರುತ್ತಿದ್ದಾಗ ಅಪಘಾತ ಸಂಭವಿಸಿತ್ತು. ಪ್ರವೀಣ್‌ ಅವರು ರಿಪೇರಿ ಮಾಡಿ ಕೊಟ್ಟ ಕಾರನ್ನು ಸ್ವತಃ ರಮೇಶ್‌ ಮೆಂಡನ್‌ ಚಲಾಯಿಸಿದ್ದು, ಪ್ರವೀಣ್‌ ಅವರು ಕಾರಿನ ಮುಂಬದಿಯ ಎಡ ಭಾಗದ ಸೀಟಿನಲ್ಲಿ ಕುಳಿತು ಕಾರಿನ ಚಲನೆಯನ್ನು ಗಮನಿಸುತ್ತಿದ್ದರು. ಈ ಸಂದರ್ಭ ಪಕ್ಕದ ರಸ್ತೆಯಲ್ಲಿ ವಿರುದ್ಧ ದಿಕ್ಕಿಗೆ ಚಲಿಸುತ್ತಿದ್ದ ಆಲ್ಟೋ ಕಾರು ಡಿವೈಡರ್‌ ದಾಟಿ ಬಂದು ಡಸ್ಟರ್‌ ಕಾರಿಗೆ ಢಿಕ್ಕಿ ಹೊಡೆದಿತ್ತು. ಢಿಕ್ಕಿಯ ರಭಸಕ್ಕೆ ಪ್ರವೀಣ್‌ ಫೆರ್ನಾಂಡಿಸ್‌ ಅವರು ತೀವ್ರ ಗಾಯಗೊಂಡು ಬಳಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು.

ಐವರಲ್ಲಿ ಇಬ್ಬರು ಯುವತಿಯರು!
ಅಪಘಾತಕ್ಕೆ ಕಾರಣವಾದ ಈ ಕಾರಿನಲ್ಲಿದ್ದ ಐವರ ಪೈಕಿ ಇಬ್ಬರು ಯುವತಿಯರು ಇದ್ದರು ಹಾಗೂ ಓರ್ವ ಬಾಲಕ ಕೂಡ ಇದ್ದ ಎಂಬ ಸಂಗತಿಯನ್ನು ಪೊಲೀಸರು ಬಹಿರಂಗ ಪಡಿಸಿದ್ದಾರೆ. ಅವಘಡ ಸಂಭವಿಸಿದಾಗ ಅದರಲ್ಲಿದ್ದ ಖಲೀಲ್‌ ಮತ್ತು ಓರ್ವ ಯುವತಿ ಗಾಯಗೊಂಡಿದ್ದು, ಅವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಇನ್ನುಳಿದಂತೆ ಚಾಲಕ ಮಹಮದ್‌ ಮುಝಾಫಿರ್‌, ಇನ್ನೋರ್ವ ಯುವತಿ, ಬಾಲಕ ಸಣ್ಣ ಪುಟ್ಟ ಗಾಯಗೊಂಡ ಕಾರಣ ಹೊರ ರೋಗಿಗಳಾಗಿ ಚಿಕಿತ್ಸೆ ಪಡೆದಿದ್ದರು.

ಟಾಪ್ ನ್ಯೂಸ್

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

Delhi: ದುಬಾರಿ ಮರ್ಸಿಡೆಸ್‌ ಕಾರಿನಲ್ಲಿ ಡ್ರಗ್ಸ್‌ ಸಾಗಾಟ-ರಾಷ್ಟ್ರಮಟ್ಟದ ಕುಸ್ತಿಪಟು ಬಂಧನ!

11-

Thirthahalli: ರಾಜ್ಯದ 28 ಕ್ಷೇತ್ರವನ್ನೂ ಗೆಲ್ಲಿಸಬೇಕೆಂದು ಜೆಡಿಎಸ್ ಪಕ್ಷದೊಂದಿಗೆ ಮೈತ್ರಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

Tollywood: ಸಿದ್ಧಾರ್ಥ್ – ಅದಿತಿ ರಾವ್ ಮದುವೆ ಆಗಿಲ್ಲ: ಎಂಗೇಜ್‌ ಮೆಂಟ್‌ ಮಾಡಿಕೊಂಡ ಜೋಡಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Dakshina Kannada ಸದ್ಯಕ್ಕೆ ನೀರಿನ ಸಮಸ್ಯೆ ಇಲ್ಲ: ಜಿಲ್ಲಾಧಿಕಾರಿ

Moodabidri: ಬೃಹತ್ ಜೈನ ಆರಾಧನಾ ಕೋಶ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Moodabidri: ಬೃಹತ್ ಜೈನ ಆರಾಧನಾ ಕೋಶದ ಸಂಪಾದಕ ಎಂ. ಧರ್ಮರಾಜ ಇಂದ್ರ ನಿಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

Mangaluru: CCB ಪೊಲೀಸರ ಕಾರ್ಯಾಚರಣೆ… ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯ ಬಂಧನ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

1—-wewqe

Punjab ಮುಖ್ಯಮಂತ್ರಿ ಭಗವಂತ್ ಮಾನ್ ಅವರಿಗೆ ಹೆಣ್ಣು ಮಗುವಿನ ಜನನ

8

ʼAadujeevithamʼ Twitter review: ಪೃಥ್ವಿರಾಜ್‌ ಅಭಿನಯಕ್ಕೆ ಬಹುಪರಾಕ್; ಹೇಗಿದೆ ಸಿನಿಮಾ?

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

ಮೈಸೂರು:ಶೃಂಗೇರಿ ಶಂಕರ ಮಠ-ಮಾ. 30ರಿಂದ ಅಭಿನವ ಶಂಕರಾಲಯದ ಶತಮಾನೋತ್ಸವ ಆಚರಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.