ಮಾಣಿ: ಬೆಂಕಿ ತಗುಲಿ ಅಂಗಡಿ ನಾಶ
Team Udayavani, Mar 27, 2019, 6:30 AM IST
ವಿಟ್ಲ: ಮಾಣಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಫ್ಯಾನ್ಸಿ ಅಂಗಡಿಯೊಂದು ಬೆಂಕಿಗೆ ಆಹುತಿಯಾದ ಘಟನೆ ಮಂಗಳವಾರ ಸಂಭವಿಸಿದೆ. ಧರ್ಣಪ್ಪ ಬರಿಮಾರು ಅವರ ಅಂಗಡಿ ಬೆಂಕಿಗೆ ಆಹುತಿಯಾಗಿ ಸುಮಾರು ಒಂದು ಲಕ್ಷ ನಷ್ಟ ಸಂಭವಿಸಿದೆ .ಅಂಗಡಿಗೆ ವಿದ್ಯುತ್ ಸಂಪರ್ಕ ಇಲ್ಲ.ಯಾವ ರೀತಿಯಲ್ಲಿ ಬೆಂಕಿ ತಗುಲಿದೆ ಎಂಬುದು ಸ್ಪಷ್ಟ ವಾಗಿಲ್ಲ. ಧರ್ಣಪ್ಪ ಅವರು ಸಾಮಗ್ರಿ ತರಲೆಂದು ಪುತ್ತೂರಿಗೆ ತೆರಳಿದ್ದಾಗ ಈ ಘಟನೆ ಸಂಭವಿಸಿದೆ. ವಿಟ್ಲ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.