ಲಯನ್ಸ್‌ ಜಿಲ್ಲೆಯಲ್ಲೇ ಸುಳ್ಯ ಲಯನ್ಸ್‌ ಕ್ಲಬ್‌ಗ ಪ್ರಥಮ ಸ್ಥಾನ

Team Udayavani, Jul 5, 2017, 3:40 AM IST

ಸುಳ್ಯ: ಲಯನ್ಸ್‌ ಸಂಸ್ಥೆಯ ಅಂತಾರಾಷ್ಟ್ರೀಯ ಮಟ್ಟದಲ್ಲಿ ಶತಮಾನೋತ್ಸವ ಸಂಭ್ರಮಾಚರಣೆ ಸ‌ಂದರ್ಭದಲ್ಲಿ, ಸುಳ್ಯ ಲಯನ್ಸ್‌ನ 43 ವರ್ಷಗಳ ಇತಿಹಾಸದಲ್ಲೇ ಪ್ರಥಮ ಬಾರಿಗೆ ಸುಳ್ಯ ಲಯನ್ಸ್‌ನ ವಿವಿಧ ಸೇವಾ ಚಟುವಟಿಕೆಗಳಿಗಾಗಿ ಲಯನ್ಸ್‌ ಸಂಸ್ಥೆ ಜಿಲ್ಲೆಯಲ್ಲೇ ಪ್ರಥಮ ಸ್ಥಾನವನ್ನು ಪಡೆದಿದೆ. 2016-17ನೇ ಸಾಲಿನ ಪ್ರಶಸ್ತಿ ಪ್ರದಾನ ಸಮಾರಂಭವು ಮಂಗಳೂರಿನ ವಾಮಂಜೂರು ಚರ್ಚ್‌ ಹಾಲ್‌ನಲ್ಲಿ ನಡೆಯಿತು. ಲಯನ್ಸ್‌ ಕ್ಲಬ್‌ನ ಜಿಲ್ಲಾ ಗವರ್ನರ್‌ ಅರುಣ್‌ ಶೆಟ್ಟಿ ಅವರು ಪ್ರಶಸ್ತಿ ಪ್ರದಾನ ಮಾಡಿದರು.

2016-17 ನೇ ಸಾಲಿನ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಅವರು ಸಂಸ್ಥೆಯನ್ನು ಮುನ್ನಡೆಸಿದ್ದು, ಸುಳ್ಯ ಲಯನ್ಸ್‌ ಸಂಸ್ಥೆಗೆ 39 ಪ್ರಶಸ್ತಿ ಹಾಗೂ ವೈಯಕ್ತಿಕವಾಗಿ 20 ಪ್ರಶಸ್ತಿಗಳೊಂದಿಗೆ ಒಟ್ಟು 59 ಪ್ರಶಸ್ತಿಗಳನ್ನು ಪಡೆದುಕೊಂಡಿದ್ದಾರೆ. ಅಲ್ಲದೆ ಸುಳ್ಯ ಲಯನೆಸ್‌ ಸಂಸ್ಥೆ ಕೂಡ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ. ಫಸ್ಟ್‌ ಬೆಸ್ಟ್‌ ಅಧ್ಯಕ್ಷೆ  ರೇಣುಕಾ ಸದಾನಂದ ಜಾಕೆ, ಕಾರ್ಯದರ್ಶಿ ಪಿ. ಎಂ. ರಂಗನಾಥ್‌, ಖಜಾಂಚಿ  ಡಾ| ಲಕ್ಷ್ಮೀಶ್‌ ಪುರಸ್ಕಾರವನ್ನು ಪಡೆದರು. ಡಾ| ರಂಗಯ್ಯ ಪಿ., ನಿಟ್ಟೆಗುತ್ತು ಕರ್ನಲ್‌ ಶರತ್‌ ಭಂಡಾರಿ, ಜಯರಾಂ ದೇರಪ್ಪಜ್ಜನ ಮನೆ, ಜಯಪ್ರಕಾಶ್‌ ರೈ, ರಾಮಚಂದ್ರ ಕೆ.ಬಿ.,  ಶಶಿಧರ ಶೆಟ್ಟಿ, ನಳಿನ್‌ ಕುಮಾರ್‌ ಕೊಡು¤ಗುಳಿ, ರಾಧಾಕೃಷ್ಣ ಮಾಣಿಬೆಟ್ಟು,  ಪ್ರೊ| ಬಾಲಚಂದ್ರ ಗೌಡ, ಜಯಂತ  ಶೆಟ್ಟಿ ಬನ್ನಂಜೆ, ಜಯಂತ್‌ ರೈ, ಡಿ.ಎಸ್‌. ಗಿರೀಶ್‌ ಮೊದಲಾದವರು ವಿವಿಧ ಪ್ರಶಸ್ತಿ ಗಳನ್ನು ಪಡೆದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ