ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ವಿಧಾನ ಪರಿಷತ್‌ ಚುನಾವಣೆ

Team Udayavani, Dec 1, 2021, 5:36 AM IST

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಮಂಗಳೂರು: ಪ್ರಥಮ ಪ್ರಾಶಸ್ತ್ಯದ ಮತಕ್ಕೆ ಬೆಂಬಲಿತ ಮತದಾರರನ್ನು ಸೀಮಿತಗೊಳಿಸುವ ತಂತ್ರ ಗಾರಿಕೆಯನ್ನು ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್‌ ಅನುಸರಿಸಿದೆ.

ಎರಡು ಸದಸ್ಯತ್ವದ ದ.ಕ. ಸ್ಥಳೀಯಾಡಳಿತ ಚುನಾ ವಣ ಕೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್‌ ಹಾಗೂ ಎಸ್‌ಡಿಪಿಐ ಒಂದೊಂದು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು, ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಒಟ್ಟು 6,046 ಮತ ದಾರರಲ್ಲಿ ಬಿಜೆಪಿ 3,592, ಕಾಂಗ್ರೆಸ್‌-1,900, ಎಸ್‌ಡಿಪಿಐ 220 ಹಾಗೂ ಜೆಡಿಎಸ್‌, ಪಕ್ಷೇತರರು ಸೇರಿ 328 ಮತದಾರರಿದ್ದಾರೆ.

ಕಣದಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಇರುವುದು ಓರ್ವರೇ. ಹೀಗಾಗಿ ಅವರಿಗೆ ಪ್ರಥಮ ಪ್ರಾಶಸ್ತ್ಯದ ಮತವನ್ನು ತಮ್ಮ ಪಕ್ಷ ಬೆಂಬಲಿಸುವ ಮತದಾರರು ನೀಡುತ್ತಾರೆ. ದ್ವಿತೀಯ ಪ್ರಾಶಸ್ತ್ಯದ ಅಥವಾ ಇತರ ಪ್ರಾಶಸ್ತ್ಯದ ಮತಗಳನ್ನು ನೀಡುವ ಪ್ರಶ್ನೆಯೇ ಇಲ್ಲ ಎಂದು ಈಗಾಗಲೇ ಬಿಜೆಪಿ ಹಾಗೂ ಕಾಂಗ್ರೆಸ್‌ ಸ್ಪಷ್ಟಪಡಿಸಿದೆ. ಈ ಎರಡೂ ಪಕ್ಷಗಳು ತಮ್ಮ ಅಭ್ಯರ್ಥಿಗಳ ಪರವಾಗಿ ಪ್ರಚಾರ ಕಾರ್ಯದಲ್ಲಿ ಈ ಬಗ್ಗೆ ಜಾಗೃತಿಯನ್ನು ಮೂಡಿಸುತ್ತಿದ್ದು, ತಮ್ಮ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಥಮ ಪ್ರಾಶಸ್ತ್ಯದ ಮತವನ್ನು ಮಾತ್ರ ಚಲಾಯಿಸುವಂತೆ ಕೋರುತ್ತಿದೆ. ಒಂದೊಂದೇ ಅಭ್ಯರ್ಥಿಯನ್ನು ಕಣ ಕ್ಕಿಳಿಸಿರುವ ಕಾರಣದಿಂದ ಚುನಾವಣ ಲೆಕ್ಕಾಚಾರದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಗೆಲುವು ಸಲೀಸು.

ಯಾವುದೇ ಅಭ್ಯರ್ಥಿ ಆಯ್ಕೆಗೆ ನಿಗದಿಯಾಗಿರುವ ಮತವನ್ನು ಪ್ರಥಮ ಸುತ್ತಿನಲ್ಲಿ ಪಡೆಯದಿದ್ದರೆ ಆಗ ದ್ವಿತೀಯ ಪ್ರಾಶಸ್ತ್ಯದ ಮತಗಳು ನಿರ್ಣಾ ಯಕವೆನಿಸಲಿದ್ದು ಅವುಗಳನ್ನು ಪರಿ ಗಣಿಸಲಾಗುತ್ತದೆ.

ಇದನ್ನೂ ಓದಿ:ಲಾಕ್‌ಡೌನ್‌ ಪ್ರಸ್ತಾಪ ಸರ್ಕಾರದ ಮುಂದಿಲ್ಲ: ನಿರಾಣಿ

ಹಿಂದಿನ ಚುನಾವಣೆಯ ಹಿನ್ನೋಟ
ದ.ಕ. ಸ್ಥಳೀಯಾಡಳಿತ ಚುನಾವಣ ಕ್ಷೇತ್ರಕ್ಕೆ 2015ರ ಡಿ.27ರಂದು ನಡೆದಿದ್ದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಇಬ್ಬರು ಬಂಡಾಯ ಅಭ್ಯರ್ಥಿಗಳು ಸೇರಿದಂತೆ ಒಟ್ಟು 8 ಅಭ್ಯರ್ಥಿಗಳು ಕಣದಲ್ಲಿದ್ದರು. ದ.ಕ.ದಲ್ಲಿ 3,844 ಹಾಗೂ ಉಡುಪಿ ಜಿಲ್ಲೆಯಲ್ಲಿ 2,715 ಸೇರಿ ಒಟ್ಟು 6,559 ಮತದಾರರಿದ್ದರು. ಇದರಲ್ಲಿ ಬಿಜೆಪಿ ಬೆಂಬಲಿತ ಸದಸ್ಯರ ಸಂಖ್ಯೆ ಸುಮಾರು 3,500 ಹಾಗೂ ಕಾಂಗ್ರೆಸ್‌ ಬೆಂಬಲಿತ ಸದಸ್ಯರ ಸಂಖ್ಯೆ ಸುಮಾರು 2,800 ಆಗಿತ್ತು. ಚಲಾಯಿತ ಮತಗಳಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಯವರು 2,977, ಕಾಂಗ್ರೆಸ್‌ನ ಪ್ರತಾಪಚಂದ್ರ ಶೆಟ್ಟಿಯವರು 2,237 ,ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಕೆ. ಜಯಪ್ರಕಾಶ ಹೆಗ್ಡೆ 459 ಮತಗಳನ್ನು ಪಡೆದಿದ್ದರು.

ಮತ ಚಲಾವಣೆ
ವಿಧಾನ ಪರಿಷತ್‌ ಚುನಾವಣೆಯಲ್ಲಿ ಮತಯಂತ್ರಗಳಿರುವುದಿಲ್ಲ. ಬದಲಿಗೆ, ಮತಪತ್ರಗಳಲ್ಲಿ ನಡೆಯುತ್ತಿದ್ದು ಪ್ರಾಶಸ್ತ್ಯದ ಮತಗಳಿರುತ್ತವೆ. ಸ್ಥಳೀಯ ಪ್ರಾಧಿಕಾರದ ಸದಸ್ಯ ಮತದಾರರು ಮತಪತ್ರದಲ್ಲಿ ಪ್ರಾಶಸ್ತ್ಯದ ಮತವನ್ನು 1,2,3 ಸಂಖ್ಯೆಗಳಲ್ಲಿ ಮತಗಟ್ಟೆಯಲ್ಲಿ ನೀಡುವ ಸ್ಕೇಚ್‌ ಪೆನ್ನಿನಲ್ಲಿ ಗುರುತು ಹಾಕಬೇಕು. 1 ಪ್ರಾಶಸ್ತ್ಯ ಮತವನ್ನು ಹಾಕದೆ 2,3, ಇತ್ಯಾದಿ ಸಂಖ್ಯೆಗಳಲ್ಲಿ ಗುರುತಿಸಿದಲ್ಲಿ ಅವರ ಮತವು ತಿರಸ್ಕರಿಸಲ್ಪಡುತ್ತದೆ. ಆದರೆ ಕೇವಲ 1 ಪ್ರಾಶಸ್ತ್ಯವನ್ನು ಮಾತ್ರ ದಾಖಲಿಸಿ ಇತರ ಪ್ರಾಶಸ್ತ್ಯ ಮತಗಳನ್ನು ದಾಖಲಿಸದಿದ್ದರೆ ಆ ಮತ ಸಿಂಧುವಾಗುತ್ತದೆ. ಪ್ರಾಶಸ್ತ್ಯವನ್ನು ಸಂಖ್ಯೆಯಲ್ಲಿ ಮಾತ್ರ ಬರೆಯಬೇಕು. ಅಕ್ಷರದಲ್ಲಿ ಬರೆಯಬಾರದು.

ಟಾಪ್ ನ್ಯೂಸ್

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಮಣಿಪಾಲ: ಮಂಚಿಯ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಮಣಿಪಾಲ: ಮಂಚಿ ರಾಜೀವನಗರದ ಮೀಸಲು ಅರಣ್ಯದಲ್ಲಿ ಬೆಂಕಿ ಅವಘಡ; ತಪ್ಪಿದ ಭಾರೀ ದುರಂತ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಫೇಸ್‌ಬುಕ್‌ ಸರಿಪಡಿಸಿ ಕೊಡುವುದಾಗಿ ವಂಚನೆ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಸಾಧ್ಯವಿಲ್ಲ: ಡಾ| ಅಶ್ವತ್ಥ ನಾರಾಯಣ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

ಟಾಟಾ ಸಫಾರಿ ಎಸ್‌ಯುವಿಯ ಡಾರ್ಕ್‌ ಎಡಿಶನ್‌ ಜ.17ರಂದು ಬಿಡುಗಡೆ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನ

29 ಹುಲಿಗಳಿಗೆ ಜನ್ಮನೀಡಿ, 17 ವರ್ಷದಷ್ಟು ದೀರ್ಘಾವಧಿ ಬದುಕಿದ ಮಹಾಮಾತೆ ನಿಧನಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

“ಮಿಯಾವಾಕಿ’ ಸೃಷ್ಟಿಸುತ್ತಿದೆ ಗ್ರೀನ್‌ ಮಂಗಳೂರು!

“ಮಿಯಾವಾಕಿ’ ಸೃಷ್ಟಿಸುತ್ತಿದೆ ಗ್ರೀನ್‌ ಮಂಗಳೂರು!

ಮಂಗಳೂರು: ಪಿಕಪ್ ವಾಹನ ಢಿಕ್ಕಿಯಾಗಿ ವೃದ್ಧ ಸಾವು

ಮಂಗಳೂರು: ಪಿಕಪ್ ವಾಹನ ಢಿಕ್ಕಿಯಾಗಿ ವೃದ್ಧ ಸಾವು

thumb 1

ಕರಾವಳಿಗರಿಗೆ ಆತಂಕ; ಆರ್ಥಿಕತೆಗೂ ಹೊಡೆತ ಭೀತಿ; ಶಿರಾಡಿ ಘಾಟಿ ಆರು ತಿಂಗಳು ಬಂದ್‌ ಪ್ರಸ್ತಾವ

ವಾರಾಂತ್ಯ ಕರ್ಫ್ಯೂ: ಬಹುತೇಕ ವಾಣಿಜ್ಯ ಚಟುವಟಿಕೆ ಸ್ತಬ್ಧ

ವಾರಾಂತ್ಯ ಕರ್ಫ್ಯೂ: ಬಹುತೇಕ ವಾಣಿಜ್ಯ ಚಟುವಟಿಕೆ ಸ್ತಬ್ಧ

ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ| ಹೆಗ್ಗಡೆ

ಹುಟ್ಟೂರಿನತ್ತ ಯುವಜನತೆ ಸ್ವಾಗತಾರ್ಹ ಬೆಳವಣಿಗೆ: ಡಾ| ಹೆಗ್ಗಡೆ

MUST WATCH

udayavani youtube

ಸಾಲಿಗ್ರಾಮ ಗುರುನರಸಿಂಹ, ಆಂಜನೇಯ ರಥೋತ್ಸವ ಸಂಪನ್ನ

udayavani youtube

ನನ್ನಮ್ಮ ಸೂಪರ್ ಸ್ಟಾರ್ ‘ಸಮನ್ವಿ’ ಅಸ್ತಿ ಕಾವೇರಿ ನದಿಯಲ್ಲಿ ವಿಸರ್ಜನೆ

udayavani youtube

ಮೈಸೂರು ಮೃಗಾಲಯದಲ್ಲಿ ಹುಟ್ಟುಹಬ್ಬ ಆಚರಣೆಗೊರಿಲ್ಲಾ ‘Demba’ ಗೆ ಖುಷಿಯೋ ಖುಷಿ

udayavani youtube

ವಿವಿಧ ಮುಹೂರ್ತಗಳು ಪರ್ಯಾಯದ ವಿಶೇಷತೆ

udayavani youtube

ಮೂಡಿಗೆರೆ : ಇಡೀ ಹಳ್ಳಿಯ ಜನರಿಗೆ ಕೆಮ್ಮು! ಇದು ಹೆದ್ದಾರಿ ಪ್ರಾಧಿಕಾರದ ಕಾಮಗಾರಿಯ ಫಲ

ಹೊಸ ಸೇರ್ಪಡೆ

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ನೊವಾಕ್‌ ಜೊಕೋವಿಕ್‌ ಇಲ್ಲದ ಆಸ್ಟ್ರೇಲಿಯನ್‌ ಓಪನ್‌

ತರಯರುತಗ್ದಸ

ಸಿದ್ದರಾಮೇಶ್ವರರ ತತ್ವ ಪಾಲನೆಯಿಂದ ಆಪತ್ತು ದೂರ

ಉಉಹಜಗದ

ಶ್ರೀಚನ್ನ ಬಸವಸ್ವಾಮಿ  ಜೋಡು ರಥೋತ್ಸವ ಸರಳ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ ಮೇಲೆ ಸವಾರಿ ಮಾಡಿದ ಪಾಟ್ನಾ ಪೈರೇಟ್ಸ್‌

rತಯಿಕಜಹತಯಹ

ಅತಿಥಿ ಉಪನ್ಯಾಸಕರ ಸೇವಾ ವಿಲೀನತೆಯಾಗಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.