ಅಚಾರಿಜೋರದಲ್ಲಿ ಕಾಲುದಾರಿ ಸಮಸ್ಯೆ


Team Udayavani, Jul 7, 2018, 11:42 AM IST

7-july-4.jpg

ಎಡಪದವು: ಕುಪ್ಪೆ ಪದವು ಸಮೀಪದ ಅಚಾರಿಜೋರ ಮಸೀದಿ ಪಕ್ಕ ಹಾದುಹೋಗುವ ಪ್ರದೇಶದಲ್ಲಿ ಸೂಕ್ತ ಕಾಲುದಾರಿ ಇಲ್ಲದೆ ಇರುವುದರಿಂದ ಸಂಕಷ್ಟ ಅನುಭವಿಸುತ್ತಿದ್ದು, ಪಂಚಾಯತ್‌ಗೆ ಹದಿನೈದು ವರ್ಷಗಳಿಂದ ಗ್ರಾಮಸ್ಥರು ಮನವಿ ಸಲ್ಲಿಸಿದರೂ ಸಮಸ್ಯೆ ಬಗೆಹರಿದಿಲ್ಲ.

ಅಚಾರಿಜೋರದ ಡಾಮರು ರಸ್ತೆಯಿಂದ ಮಸೀದಿ ಪಕ್ಕದಲ್ಲಿ ಹಾದುಹೋಗಿರುವ ಸುಮಾರು 200 ಮೀಟರ್‌ ಉದ್ದದ ಕಾಲು ದಾರಿ ಕುಸಿದುಹೋಗಿದೆ. ಇದರಿಂದ ಇಲ್ಲಿನವರು ಸಂಚರಿಸಲು ಸಂಕಷ್ಟ ಅನುಭವಿಸುತ್ತಿದ್ದಾರೆ. ಕೇವಲ 2ರಿಂದ 3 ಅಡಿಯಷ್ಟೇ ಅಗಲವಾಗಿರುವ ಈ ಕಾಲುದಾರಿ ನಾದುರಸ್ಥಿಯಲ್ಲಿದ್ದು, ಅದರ ಪಾರ್ಶ್ವದ ಭಾಗಗಳೆಲ್ಲಾ ಕುಸಿದು  ಸರಿನಿಂದ ಆವೃತವಾಗಿದೆ. ಅದರ ಪಕ್ಕ 15 ಅಡಿಯಷ್ಟು ಆಳವಿದ್ದು, ಸ್ವಲ್ಪ ಎಡವಿದರೂ ಕಂದಕಕ್ಕೆ ಬೀಳುವ ಅಪಾಯವಿದೆ.

ಕಿರಿದಾದ ರಸ್ತೆ
ಇಲ್ಲಿನ ಸುಮಾರು 10 ಮನೆಗಳಿಗೆ ಏಕೈಕ ಸಂಪರ್ಕ ದಾರಿ ಇದಾಗಿದ್ದು, ಯಾರಿಗಾದರೂ ಅನಾರೋಗ್ಯ ಕಾಣಿಸಿದರೆ
ಡಾಮರು ರಸ್ತೆಯವರೆಗೆ ಹೊತ್ತುಕೊಂಡೇ ಸಾಗಬೇಕಾಗುತ್ತದೆ. ಕಾಲುದಾರಿ ಅಗಲ ಕಿರಿದಾಗಿರುವುದರಿಂದ ಎದುರುಬದುರು ಸಾಗುವಂತಿಲ್ಲ. ಈ ಕಾಲುದಾರಿಯನ್ನು ಕಾಂಕ್ರೀಟ್‌ ಮೂಲಕವಷ್ಟೇ ಸರಿಪಡಿಸಲು ಸಾಧ್ಯ. ಮಳೆಗಾಲದಲ್ಲಿ ಕಾಲುದಾರಿ ಕುಸಿದರೆ ಮತ್ತೆ ಸಂಪರ್ಕವೇ ಇಲ್ಲದಂತಾಗುತ್ತದೆ ಎಂದು ಇಲ್ಲಿನ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

 ಶೀಘ್ರ ಕಾಂಕ್ರೀಟ್‌
ಅಚಾರಿಜೋರದ ಹಲವು ಮನೆಗಳಿಗೆ ಕಾಲುದಾರಿ ಸಮಸ್ಯೆ ಇದೆ. ಈ ದಾರಿ ಕಿರಿದಾಗಿದ್ದು, ಹಲವಾರು ಮನೆಗಳು ಕೂಡಾ ಇವೆ. ಶೀಘ್ರದಲ್ಲೇ ಇಲ್ಲಿಗೆ ತಡೆಗೋಡೆ ಹಾಗೂ ಕಾಂಕ್ರೀಟ್‌ ಕಾಲುದಾರಿ ನಿರ್ಮಿಸಿಕೊಡಲಾಗುವುದು.
– ಲೀಲಾವತಿ,ಅಧ್ಯಕ್ಷರು, ಕುಪ್ಪೆಪದವು ಗ್ರಾ.ಪಂ.

 ಹಲವು ವರ್ಷಗಳ ಸಮಸ್ಯೆ
‘ಕಾಲುದಾರಿ ಇಲ್ಲದೆ ಹಲವಾರು ವರ್ಷಗಳಿಂದ ಸಂಕಷ್ಟ ಅನುಭವಿಸುತ್ತಿದ್ದು, ನಡೆದಾಡಲು ಕಷ್ಟವಾಗುತ್ತಿದೆ. ಆರೋಗ್ಯ ಕೆಟ್ಟರೆ ರೋಗಿಯನ್ನು ಹೊತ್ತುಕೊಂಡು ಹೋಗಬೇಕಾಗುತ್ತದೆ. ರಾತ್ರಿ ಹೊತ್ತಲ್ಲಿ ನಡೆದಾಡಲು ಸಾಧ್ಯವಾಗುತ್ತಿಲ್ಲ.
 -ಅಶ್ರಫ್ ಅಶೂರು, ಸ್ಥಳೀಯರು

ಟಾಪ್ ನ್ಯೂಸ್

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

naksal (2)

Chhattisgarh:ಎನ್‌ಕೌಂಟರ್‌ನಲ್ಲಿ ಐದು ಮಾವೋವಾದಿಗಳ ಹತ್ಯೆ

Pannu Singh

ಉಗ್ರ ಪನ್ನೂ ಹತ್ಯೆಗೆ ಯತ್ನ: ಆರೋಪಿ ಅಮೆರಿಕಕ್ಕೆ ಹಸ್ತಾಂತರ

rain

ಸದ್ಯ ಮುಂಗಾರು ದುರ್ಬಲ: ಮಾಸಾಂತ್ಯಕ್ಕೆ ಚೇತರಿಕೆ ಸಾಧ್ಯತೆ

BJP 2

Election: ಮಹಾರಾಷ್ಟ್ರ ಸೇರಿ 4 ರಾಜ್ಯ ಉಸ್ತುವಾರಿ ನೇಮಿಸಿದ ಬಿಜೆಪಿ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.