Udayavni Special

ಕಿದು ಕೇಂದ್ರದ ಬೆನ್ನು ಬಿಟ್ಟಿಲ್ಲ ಸ್ಥಳಾಂತರ ಭೂತ!

ವಿದ್ಯುತ್‌ ಕಡಿತಗೊಳಿಸುವಂತೆ ಮೆಸ್ಕಾಂಗೆ ಅರಣ್ಯ ಇಲಾಖೆ ಪತ್ರ

Team Udayavani, Sep 9, 2019, 5:44 AM IST

0809SUB3C

ಸುಬ್ರಹ್ಮಣ್ಯ: ಕಿದುವಿನ ಅಂತಾರಾಷ್ಟ್ರೀಯ ತೆಂಗು ಅಭಿವೃದ್ಧಿ ಕೇಂದ್ರದ ಭವಿಷ್ಯ ಮತ್ತೆ ತೂಗುಯ್ಯಾ ಲೆಯಲ್ಲಿದೆ. ಇಲ್ಲಿಗೆ ವಿದ್ಯುತ್‌ ಸಂಪರ್ಕ ಸ್ಥಗಿತಗೊಳಿಸುವಂತೆ ಕೋರಿ ಮೆಸ್ಕಾಂಗೆ ಅರಣ್ಯ ಇಲಾಖೆ ಪತ್ರ ನೀಡಿದ್ದು, ಸಂಶೋಧನ ಕೇಂದ್ರಕ್ಕೆ ಮೆಸ್ಕಾಂನ ಸೂಚನ ಪತ್ರ ಸೆ. 6ರಂದು ತಲುಪಿದೆ.

ಮಂಗಳೂರು ಉಪ ಅರಣ್ಯ ಸಂರಕ್ಷಣಾಧಿಕಾರಿ ಕಚೇರಿ ಯಿಂದ ಮೆಸ್ಕಾಂ ಪುತ್ತೂರು ವಿಭಾಗಕ್ಕೆ ಆ. 31ರಂದು ಪತ್ರ ಬರೆದಿದ್ದು, ಕಿದು ಕೇಂದ್ರವು ಲೀಸ್‌ ಪಡೆದ ಭೂಮಿಯ ಸಂಬಂಧ ಅರಣ್ಯ ಇಲಾಖೆಗೆ ಪಾವತಿಸಲು ಬಾಕಿ ಇರಿಸಿರುವ ಮೊತ್ತವನ್ನು ಉಲ್ಲೇಖೀಸಲಾಗಿದೆ. ಈ ಸಂಬಂಧ ಅದು ಕೇಂದ್ರದ ವಿದ್ಯುತ್‌ ಸಂಪರ್ಕವನ್ನು ಕಡಿತಗೊಳಿಸುವಂತೆ ಮೆಸ್ಕಾಂಗೆ ಸೂಚಿಸಿದೆ.

1972ರಲ್ಲಿ ಕಿದು ರಕ್ಷಿತಾರಣ್ಯದಲ್ಲಿ 300 ಎಕರೆ ಭೂಮಿಯನ್ನು ಅರಣ್ಯ ಇಲಾಖೆಯಿಂದ 30 ವರ್ಷಗಳ ಅವಧಿಗೆ ಲೀಸಿಗೆ ಪಡೆದು ಸಂಶೋಧನ ಉಪಕೇಂದ್ರವನ್ನು ಸ್ಥಾಪಿಸಲಾಗಿತ್ತು. ಲೀಸ್‌ ಅವಧಿ 2000ನೇ ಇಸವಿಗೆ ಮುಗಿದಿತ್ತು. ಈ ಭೂಮಿಯನ್ನು ಮರಳಿ ಪಡೆಯಬೇಕು ಎಂಬ ಸುಪ್ರೀಂ ಕೋರ್ಟ್‌ ಆದೇಶದಂತೆ ಅರಣ್ಯ ಇಲಾಖೆ ಈ ಹಿಂದೆ ನೋಟಿಸ್‌ ಜಾರಿಗೊಳಿಸಿತ್ತು. ಲೀಸ್‌ ಅವಧಿ ಮುಗಿದಿದ್ದರೂ ನವೀಕರಿಸದೆ, ಮೊತ್ತವನ್ನೂ ಬಾಕಿ ಇರಿಸಿರುವುದರಿಂದ ಅರಣ್ಯ ಭೂಮಿ ಯನ್ನು ಹಿಂಪಡೆಯುವುದಾಗಿ ಅರಣ್ಯ ಇಲಾಖೆ ತಿಳಿಸಿತ್ತು. ಜಾಗ ಮರಳಿಸುವುದು ಅಥವಾ ಬದಲಾಗಿ 300 ಎಕರೆ ಖಾಲಿ ಜಾಗ ದಲ್ಲಿ ಅರಣ್ಯ ಬೆಳೆಸಲು ತಗಲುವ 12 ಕೊ.ರೂ. ಭರಿಸಿ ಮತ್ತೆ 30 ವರ್ಷಗಳ ಅವಧಿಗೆ ಲೀಸ್‌ ಮುಂದುವರಿಸಲು ಅವಕಾಶ ಕಲ್ಪಿಸಿತ್ತು.

ಎಚ್ಚರಿಸಿದ್ದ ‘ಉದಯವಾಣಿ’ ವರದಿ
ಲೀಸಿನ ಅವಧಿ ಮುಗಿದಿದ್ದರೂ ಸಿಪಿಸಿಆರ್‌ಐಯ ಹಿರಿಯ ಅಧಿಕಾರಿಗಳು ಭೂಮಿ ನವೀಕರಣಕ್ಕೆ ಆಸಕ್ತಿ ತೋರದೆ, ಆಂಧ್ರಕ್ಕೆ ಸ್ಥಳಾಂತರಿಸುವ ಹುನ್ನಾರ ನಡೆಸಿದ್ದ ಬಗ್ಗೆ ‘ಉದಯವಾಣಿ’ ವರದಿ ಪ್ರಕಟಿಸಿತ್ತು. ಬಳಿಕ ಸ್ಥಳೀಯರು, ಕೃಷಿಕರು ಎಚ್ಚೆತ್ತು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಮೇಲೆ ಒತ್ತಡ ತಂದಿದ್ದರು. ಕೇಂದ್ರ ಸರಕಾರದ ಮಟ್ಟದಲ್ಲೂ ಕೇಂದ್ರ ಸ್ಥಳಾಂತರಿಸದಂತೆ ಪ್ರಯತ್ನಗಳು ನಡೆದಿದ್ದವು.

ಆದರೂ ಮುಚ್ಚುಗಡೆ ಆತಂಕ ದೂರವಾಗಿಲ್ಲ. ಲೀಸ್‌ ನವೀಕರಣ, ಶುಲ್ಕ ಭರಿಸುವ ಪ್ರಕ್ರಿಯೆಗಳು ನನೆಗುದಿಗೆ ಬಿದ್ದಿವೆ. ಸರಕಾರದ ಮಟ್ಟದಲ್ಲಿ ನಿರೀಕ್ಷಿತ ಬೆಳವಣಿಗೆ ನಡೆಯದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಮೇಲೆ ಒತ್ತಡ ಹೆಚ್ಚುತ್ತಿದೆ. ಹೀಗಾಗಿ ಅದು ಒಂದೊಂದೇ ಅಸ್ತ್ರಗಳನ್ನು ಪ್ರಯೋಗಿಸುತ್ತಿದೆ.

ಮಾಹಿತಿ ನೀಡಿದ್ದೇವಷ್ಟೆ
ಅರಣ್ಯ ಇಲಾಖೆಯಿಂದ ಪತ್ರ ಬಂದದ್ದು ನಿಜ. ಅದರ ಮಾಹಿತಿಯನ್ನು ಕೇಂದ್ರಕ್ಕೆ ತಲುಪಿಸಿದ್ದೇವೆ.– ನರಸಿಂಹ, ಇ.ಇ., ಮೆಸ್ಕಾಂ ಪುತ್ತೂರು ಉಪ ವಿಭಾಗ

-ಬಾಲಕೃಷ್ಣ ಭೀಮಗುಳಿ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

BANTWAL

ಬಂಟ್ವಾಳ: ಅಂಗವೈಕಲ್ಯ ಮೆಟ್ಟಿನಿಂತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ

ನಾನು ಚುನಾವಣೆ ಗೆಲ್ಲಿಸಿಕೊಟ್ಟೆ, ಗೆಹ್ಲೋಟ್ ಸಿಎಂ ಆದರು! ಬೇಜಾರಿದೆ ಆದರೆ ಬಿಜೆಪಿ ಸೇರಲ್ಲ

facebook

ಫೇಸ್ ಬುಕ್ ಡಿಲೀಟ್ ಮಾಡಿ, ಇಲ್ಲವೇ ಸೇನೆಯಿಂದ ಹೊರನಡೆಯಿರಿ: ಸೇನಾಧಿಕಾರಿಗೆ ಹೈಕೋರ್ಟ್ ಸೂಚನೆ

covid-sentury-star

ಕೋವಿಡ್ ನಿಂದ ಗುಣಮುಖರಾದ ಶತಾಯುಷಿ: ಆಸ್ಪತ್ರೆಯಲ್ಲಿಯೇ ಬರ್ತ್ ಡೇ ಆಚರಣೆ !

donald-trump

ಹುವಾಯ್ ಭದ್ರತಾ ವೈಫಲ್ಯ: ಅನೇಕ ದೇಶಗಳಿಗೆ ಈ ನೆಟ್ ವರ್ಕ್ ಬಳಸದಂತೆ ತಿಳಿಸಿದ್ದೇವೆ: ಟ್ರಂಪ್

ಮಕ್ಕಳ ಸ್ಕ್ರೀನ್‌ ಟೈಂಗೆ ಮಿತಿ: ಕೇಂದ್ರದಿಂದ ಮಾರ್ಗಸೂಚಿ

ಮಕ್ಕಳ ಸ್ಕ್ರೀನ್‌ ಟೈಂಗೆ ಮಿತಿ: ಕೇಂದ್ರದಿಂದ ಮಾರ್ಗಸೂಚಿ
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಉಜಿರೆ: ರೆಸಾರ್ಟ್‌ನಲ್ಲಿ ಹೊಡೆದಾಟ, ಇತ್ತಂಡಗಳ ವಿರುದ್ಧ ದೂರು

ಉಜಿರೆ: ರೆಸಾರ್ಟ್‌ನಲ್ಲಿ ಹೊಡೆದಾಟ, ಇತ್ತಂಡಗಳ ವಿರುದ್ಧ ದೂರು

ಸುಬ್ರಹ್ಮಣ್ಯ: ಎಂಡೋ ಪೀಡಿತ ವಿದ್ಯಾರ್ಥಿಯ ಅಂಕ ಸಾಧನೆ

ಸುಬ್ರಹ್ಮಣ್ಯ: ಎಂಡೋ ಪೀಡಿತ ವಿದ್ಯಾರ್ಥಿಯ ಅಂಕ ಸಾಧನೆ

ಉಜಿರೆ ಟಿ.ಬಿ. ಆಸ್ಪತ್ರೆ ಕ್ವಾರಂಟೈನ್‌ ಕೇಂದ್ರ; ಬೆಳ್ತಂಗಡಿ ಶಾಸಕರ ಮಾದರಿ ಪ್ರಯತ್ನ

ಉಜಿರೆ ಟಿ.ಬಿ. ಆಸ್ಪತ್ರೆ ಕ್ವಾರಂಟೈನ್‌ ಕೇಂದ್ರ; ಬೆಳ್ತಂಗಡಿ ಶಾಸಕರ ಮಾದರಿ ಪ್ರಯತ್ನ

ಕೋವಿಡ್ 19 ಸೋಂಕಿಗೆ ಪುತ್ತೂರಿನಲ್ಲಿ ಎರಡನೇ ಬಲಿ; 4 ಪಾಸಿಟಿವ್‌

ಕೋವಿಡ್ 19 ಸೋಂಕಿಗೆ ಪುತ್ತೂರಿನಲ್ಲಿ ಎರಡನೇ ಬಲಿ; 4 ಪಾಸಿಟಿವ್‌

ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಪುತ್ತೂರಿನ ಮಾಡ್ನೂರು ಗ್ರಾಮದ ವ್ಯಕ್ತಿ ಸಾವು

ಕೋವಿಡ್ ಸೋಂಕಿಗೆ ಮತ್ತೊಂದು ಬಲಿ: ಪುತ್ತೂರಿನ ಮಾಡ್ನೂರು ಗ್ರಾಮದ ವ್ಯಕ್ತಿ ಸಾವು

MUST WATCH

udayavani youtube

ಆಧಾರ್ ಕಾರ್ಡ್ ತೋರಿಸಿ COVID ಗೆ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆ ಪಡೆಯಿರಿ

udayavani youtube

ಭಾರತೀಯ ನ್ಯಾಯಾಂಗ ವ್ಯವಸ್ಥೆಗೆ Digital ಸ್ಪರ್ಶ | Udayavani Straight Talk

udayavani youtube

How TV & Mobile Screens Damage Our Eyes ( And HOW TO BE SAFE ) | Udayavani

udayavani youtube

Dragon Fruit ಬೆಳೆದು ಯಶಸ್ವಿಯಾದ ರೈತ | Successful Farmer Vegetable | Udayavani

udayavani youtube

ವಿಶ್ವಾದ್ಯಂತ COVID-19 ಸ್ಥಿತಿಗತಿ & Vaccine ಪ್ರಗತಿ | Udayavani Straight Talk


ಹೊಸ ಸೇರ್ಪಡೆ

ಉಪಯೋಗಕ್ಕೆ ಬಾರದ ಬಹುಗ್ರಾಮದ ಯೋಜನೆ

ಉಪಯೋಗಕ್ಕೆ ಬಾರದ ಬಹುಗ್ರಾಮದ ಯೋಜನೆ

ಪೊಲೀಸ್‌ಗೆ ಸೋಂಕು; ಠಾಣೆ ಸೀಲ್‌ಡೌನ್‌

ಪೊಲೀಸ್‌ಗೆ ಸೋಂಕು; ಠಾಣೆ ಸೀಲ್‌ಡೌನ್‌

BANTWAL

ಬಂಟ್ವಾಳ: ಅಂಗವೈಕಲ್ಯ ಮೆಟ್ಟಿನಿಂತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ಬೀದರ್ ಸಂಸದ ಭಗವಂತ ಖೂಬಾಗೆ ಕೋವಿಡ್ ಸೋಂಕು ದೃಢ

ತುಮಕೂರು: ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ

ತುಮಕೂರು: ಸೋಂಕಿತರ ಸಂಖ್ಯೆ 565ಕ್ಕೆ ಏರಿಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.