ಸುಳ್ಯ-ಸಂಪಾಜೆಯಲ್ಲಿ ಮತ್ತೆ ಕಂಪನ; ಒಂದೇ ವಾರದಲ್ಲಿ ನಾಲ್ಕನೇ ಬಾರಿ ನಡುಗಿದ ಭೂಮಿ!
Team Udayavani, Jul 1, 2022, 9:14 AM IST
ಸುಳ್ಯ/ ಅರಂತೋಡು: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ- ಸಂಪಾಜೆ ಗಡಿ ಭಾಗದಲ್ಲಿ ನಡುರಾತ್ರಿ ಮತ್ತೆ ಭೂಮಿ ಕಂಪಿಸುವ ಮೂಲಕ ಒಂದೇ ವಾರದಲ್ಲಿ ನಾಲ್ಕನೇ ಭಾರಿಗೆ ಭೂ ಕಂಪನದ ಅನುಭವ ಜನತೆಗೆ ಆಗಿದೆ.
ಮಧ್ಯರಾತ್ರಿ ಉಂಟಾದ ಭೀಕರ ಶಬ್ದ ಮತ್ತು ಕಂಪನದಿಂದ ಜನತೆ ನಲುಗಿ ಎಚ್ಚರಗೊಂಡಿದ್ದಾರೆ. ರಾತ್ರಿ 1.15 ರ ವೇಳೆಗೆ ಭಾರೀ ಶಬ್ದದೊಂದಿಗೆ ಭೂಮಿ ಕಂಪಿಸಿದೆ ಎಂದು ಜನರು ತಮ್ಮ ಅನುಭವ ಹಂಚಿದ್ದಾರೆ. ಸಂಪಾಜೆ, ಗುತ್ತಿಗಾರು, ಉಬರಡ್ಕ, ಗೂನಡ್ಕ ಹಾಗು ಸಮೀಪದ ಪ್ರದೇಶ, ಸುಳ್ಯ ನಗರ, ಎಲಿಮಲೆ, ದರ್ಖಾಸು ಸೇರಿ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಭೂ ಕಂಪನದ ಅನುಭವವಾಗಿದೆ.
ಇದನ್ನೂ ಓದಿ:ಕೋವಿಡ್ ವೇಳೆ ರಾಜ್ಯದಲ್ಲಿ ಪ್ರಾಥಮಿಕ, ಪ್ರೌಢಶಾಲೆಗಳಲ್ಲಿ ಮಕ್ಕಳ ದಾಖಲಾತಿ ತೀವ್ರ ಕುಸಿತ
ವಾರದಲ್ಲಿ ನಾಲ್ಕನೇ ಬಾರಿ ಭೂ ಕಂಪನ ಉಂಟಾಗಿದ್ದು ಜನರ ಆತಂಕ ಹೆಚ್ಚಿದೆ. ಜೂ.25 ರಂದು ಬೆಳಿಗ್ಗೆ 9.10 ಕ್ಕೆ 2.3 ತೀವ್ರತೆಯ ಭೂ ಕಂಪನ ಆಗಿತ್ತು. ಜೂ.28 ರಂದು ಎರಡು ಬಾರಿ ಭೂಮಿ ನಲುಗಿತ್ತು. ಬೆಳಿಗ್ಗೆ ರಿಕ್ಟರ್ ಮಾಪಕದಲ್ಲಿ 3 ತೀವ್ರತೆಯ ಹಾಗು ಸಂಜೆ 1.8 ತೀವ್ರತೆಯ ಕಂಪನ ಉಂಟಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಮೆಂತ್ಯೆ ಸೊಪ್ಪು ತಿನ್ನಿ…ರಕ್ತದ ಕೊಲೆಸ್ಟ್ರಾಲ್, ಡಯೆಟ್ಗೆ ಸಹಕಾರಿ
ಆಗ ಇಂದಿರಾಗಾಂಧಿಗೆ ಧಿಕ್ಕಾರ, ಈಗ ಸಿಎಂ ಆಗಲು ಜೈಕಾರ: ಸಿದ್ದು ವಿರುದ್ಧ ಈಶ್ವರಪ್ಪ ವಾಗ್ದಾಳಿ
ಕೇಂದ್ರ ಸಚಿವ ಅಮಿತ್ ಶಾ, ಬಿಎಸ್ ವೈ ಭೇಟಿ ವೇಳೆ ಸಿಎಂ ಬೊಮ್ಮಾಯಿ ಬಗ್ಗೆ ಚರ್ಚೆಯಾಗಿದ್ದೇನು?
ಕುತ್ಯಾರು : ಸಾವಿನಲ್ಲೂ ಒಂದಾದ ಕೃಷಿಕ ದಂಪತಿ : ಒಂದೇ ಚಿತೆಯಲ್ಲಿ ಅಂತಿಮ ಸಂಸ್ಕಾರ
ನಾಲ್ವರ ಹಂತಕ ಪ್ರವೀಣ್ ಕುಮಾರ್ ಬಿಡುಗಡೆ ವಿಚಾರ: ಅಧಿಕಾರಿಗಳ ಸಭೆ ಬಳಿಕ ನಿರ್ಧಾರ; ಗೃಹ ಸಚಿವ