Udayavni Special

ಕಿತ್ತು ಹೋದ ರಬ್ಬರ್‌ ಕೋನ್‌: ಸಂಚಾರ ಸಂಕಷ್ಟ


Team Udayavani, Feb 23, 2020, 5:28 AM IST

ram-32

ಲಕ್ಷಾಂತರ ರೂಪಾಯಿ ವ್ಯಯಿಸಿ ಅಳವಡಿಸಿರುವ ರಬ್ಬರ್‌ ಕೋನ್‌ಗಳ ಪ್ರಸ್ತುತ ಸ್ಥಿತಿ ಹೇಗಿದೆ ಎಂದು ತಿಳಿಯುವ ನಿಟ್ಟಿನಲ್ಲಿ “ಸುದಿನ’ ತಂಡವು ರಿಯಾಲಿಟಿ ಚೆಕ್‌ ನಡೆಸಿದೆ. ವಿವಿಧ ಜಂಕ್ಷನ್‌ಗಳು, ಬಸ್‌ ಬೇಗಳಲ್ಲಿ ಅಳವಡಿಸಲಾದ ಬಹುತೇಕ ರಬ್ಬರ್‌ ಕೋನ್‌ಗಳು ಈಗಾಗಲೇ ಕಿತ್ತು ಹೋಗಿದೆ. ಕೆಲವೊಂದು ಕಡೆಗಳಲ್ಲಿ ಇರುವ ಕೆಲವೊಂದು ರಬ್ಬರ್‌ ಕೋನ್‌ಗಳು ವಾಹನಗಳ ಚಕ್ರದೆಡೆಗೆ ಸಿಲುಕಿಕೊಳ್ಳುತ್ತಿವೆ. ಇದರಿಂದ ವಾಹನ ಅಪಘಾತವಾಗುವ ಸಾಧ್ಯತೆ, ಪಾದಚಾರಿಗಳು ರಸ್ತೆ ದಾಟುವಾಗಲೂ ತೊಂದರೆ ಅನುಭವಿಸುವ ಸಂಭವವಿದೆ.

ಮಹಾನಗರ: ಸುಗಮ ವಾಹನ ಸಂಚಾರ ಮತ್ತು ವಾಹನಗಳ ಚಾಲನೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯು ನಗರದ ವಿವಿಧ ಜಂಕ್ಷನ್‌ಗಳಲ್ಲಿ ಈಗಾಗಲೇ ಅಳವಡಿಸಿರುವ ರಬ್ಬರ್‌ ಕೋನ್‌ಗಳು ಕಿತ್ತು ಹೋಗಿದ್ದು, ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ತೊಂದರೆ ಅನುಭವಿಸುತ್ತಿದ್ದಾರೆ.

ನಗರದ ಜ್ಯೋತಿ ಚಿತ್ರ ಮಂದಿರ ಬಳಿ ಇರುವ ಬಸ್‌ ಬೇಗೆ ಅಳವಡಿಸಲಾದ ಕೋನ್‌ಗಳಲ್ಲಿ ಬಹುತೇಕ ಈಗಾಗಲೇ ತುಂಡಾಗಿದೆ. ಕಾಸರಗೋಡು, ಬೆಂಗಳೂರು, ತಲಪಾಡಿ, ಇನ್ನಿತರ ಕಡೆಗಳಿಗೆ ತೆರಳುವ ಸರಕಾರಿ ಮತ್ತು ಖಾಸಗಿ ಬಸ್‌ಗಳು ಇದೇ ಬಸ್‌ ಬೇ ಮುಖೇನ ಸಂಚರಿಸುತ್ತಿದ್ದು, ಬಸ್‌ಗಳ ಪರಸ್ಪರ ಪೈಪೋಟಿಯ ವೇಗದಲ್ಲಿ ಕೋನ್‌ಗಳು ಚಕ್ರದಡಿಗೆ ಸಿಲುಕಿ ಮುರಿದು ಹೋಗಿವೆ.

ವಾಹನಗಳಿಂದ ಸದಾ ಗಿಜಿಗಿಡುತ್ತಿರುವ ಹಂಪನಕಟ್ಟೆ ಬಸ್‌ ನಿಲ್ದಾಣದ ಬಳಿ ಪೊಲೀಸ್‌ ಇಲಾಖೆಯು ಈ ಹಿಂದೆ ಕೋನ್‌ಗಳನ್ನು ಅಳವಡಿಸಿದ್ದು, ಸದ್ಯ ಕೆಲವೊಂದು ಕೋನ್‌ಗಳು ಮಾತ್ರ ಉಳಿದುಕೊಂಡಿವೆ. ಅದೇ ರೀತಿ ನಗರದ ಎಂ.ಜಿ. ರಸ್ತೆಯಲ್ಲಿರುವ ಕೋನ್‌ಗಳು ತುಂಡಾಗಿ ಅದಕ್ಕೆ ಅಳವಡಿಸಿದ ಬೋಲ್ಟ್, ನೆಟ್‌ಗಳು ರಸ್ತೆಯಲ್ಲಿ ಕಾಣುತ್ತಿವೆ. ಒಂದು ವೇಳೆ ವಾಹನಗಳ ಚಕ್ರದಡಿಗೆ ಸಿಲುಕಿದರೆ ಅಪಘಾತವಾಗುವ ಸಾಧ್ಯತೆ ಇದೆ. ಉಡುಪಿ, ಮಣಿಪಾಲ, ಸುರತ್ಕಲ್‌ ಕಡೆಗೆ ತೆರಳುವ ಬಸ್‌ಗಳು ಪ್ರವೇಶಿಸುವ ಲೇಡಿಹಿಲ್‌ನಲ್ಲಿ ಅಳವಡಿಸಿದ ಹತ್ತಾರು ರಬ್ಬರ್‌ ಕೋನ್‌ಗಳ ಪೈಕಿ ಕೆಲವೊಂದು ಮಾತ್ರ ಉಳಿದಿವೆ.

ಅದೇ ರೀತಿ, ಬಂಟ್ಸ್‌ ಹಾಸ್ಟೆಲ್‌, ಆರ್‌.ಟಿ.ಒ. ರಸ್ತೆ, ಲಾಲ್‌ಬಾಗ್‌ ಸಹಿತ ವಿವಿಧ ಕಡೆಗಳಲ್ಲಿ ಅಳವಡಿಸಿರುವ ಕೋನ್ಸ್‌ಗಳು ಕಿತ್ತುಹೋದ ಕಾರಣ, ರಾತ್ರಿ ವೇಳೆ ಸಂಚಾರಿಸುವಾಗ ಸವಾರರಿಗೆ ಅರೆಬರೆ ಕೋನ್‌ಗಳನ್ನು ಗುರುತಿಸುವುದು ಕಷ್ಟವಾಗುತ್ತಿದೆ. ಏಕೆಂದರೆ ಕೆಲವೊಂದು ಕಡೆಗಳಲ್ಲಿ ರಿಫ್ಲೆಕ್ಟರ್‌ ಅನ್ನು ಕೂಡ ಅಳವಡಿಸಿಲ್ಲ. ಉರ್ವ ಮಾರುಕಟ್ಟೆ ಬಳಿ ರಸ್ತೆಯಲ್ಲಿ ಇತ್ತೀಚೆಗೆ ರಬ್ಬರ್‌ ಕೋನ್‌ಗಳು ಅಳವಡಿಸಿದ ಕಾರಣ ಸದ್ಯ ಸುಸ್ಥಿತಿಯಲ್ಲಿದೆ.

ಪ್ರಕರಣ ದಾಖಲಿಸಲಾಗಿತ್ತು
ನಗರದ ಕರಂಗಲ್ಪಾಡಿ ಜಂಕ್ಷನ್‌ ಬಳಿ ಜೈಲ್‌ ರೋಡ್‌ಗೆ ತೆರಳುವಲ್ಲಿ ಅಳವಡಿಸಲಾಗಿದ್ದ ರಬ್ಬರ್‌ ಕೋನ್‌ಗಳ ಮೇಲೆ ಬಸ್‌ ಚಲಾಯಿಸಿ ಹಾನಿಗೊಳಿಸಿದ ಕಾರಣಕ್ಕೆ ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ ಚಾಲಕನೊಬ್ಬನ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು. ಅಲ್ಲದೆ ಇದಾದ ಕೆಲವು ದಿನಗಳ ಬಳಿಕ ಜ್ಯೋತಿ ಚಿತ್ರಮಂದಿರ ಬಳಿ ಕೋನ್‌ಗಳಿಗೆ ಹಾನಿ ಎಸಗಿದ ಮೂರು ಕರ್ನಾಟಕ ಸಾರಿಗೆ ಬಸ್‌ ಮತ್ತು ಎರಡು ಖಾಸಗಿ ಬಸ್‌ ಚಾಲಕರ ವಿರುದ್ಧ ಕ್ರಮ ಜರಗಿಸಲಾಗಿತ್ತು.

ಪರ್ಯಾಯ ಯೋಜನೆ ಬಗ್ಗೆ ಚಿಂತನೆ
ನಗರದ ವಿವಿಧ ಕಡೆಗಳಲ್ಲಿ ಅಳವಡಿಸಿರುವಂತ ರಬ್ಬರ್‌ ಕೋನ್‌ಗಳು ಇದೀಗ ಮುರಿದು ಹೋಗಿವೆ. ಸದ್ಯದಲ್ಲಿ ಹೊಸ ಕೋನ್‌ಗಳನ್ನು ಅಳವಡಿಸಲಾಗುವುದು ಅಥವಾ ಪರ್ಯಾಯ ಯೋಜನೆಯ ಬಗ್ಗೆ ಅಧಿಕಾರಿಗಳ ಜತೆ ಮಾತುಕತೆ ನಡೆಸುತ್ತೇನೆ.
– ಮಂಜುನಾಥ ಶೆಟ್ಟಿ, ಟ್ರಾಫಿಕ್‌ ಎಸಿಪಿ, ಮಂಗಳೂರು

 ನವೀನ್‌ ಭಟ್‌ ಇಳಂತಿಲ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮತ್ತೆ 12 ಹೊಸ ಸೋಂಕಿತರು: ರಾಜ್ಯದಲ್ಲಿ 175ಕ್ಕೇರಿದ ಕೋವಿಡ್ 19 ಸೋಂಕಿತರ ಸಂಖ್ಯೆ

ಮತ್ತೆ 12 ಹೊಸ ಸೋಂಕಿತರು: ರಾಜ್ಯದಲ್ಲಿ 175ಕ್ಕೇರಿದ ಕೋವಿಡ್ 19 ಸೋಂಕಿತರ ಸಂಖ್ಯೆ

ಕೋವಿಡ್ ಸಂಕಷ್ಟದಲ್ಲೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ!

ಕೋವಿಡ್ ಸಂಕಷ್ಟದಲ್ಲೂ ಅನ್ನ ಭಾಗ್ಯ ಯೋಜನೆಯ ಅಕ್ಕಿ ಕಳ್ಳಸಾಗಣೆ!

ಕೋವಿಡ್ 19: ಏಪ್ರಿಲ್ 15ರಿಂದ ಲಾಕ್ ಡೌನ್ ಸಡಿಲಿಕೆ-ಷರತ್ತುಗಳು ಅನ್ವಯ!: ಮೇಘಾಲಯ ಘೋಷಣೆ

ಕೋವಿಡ್ 19: ಏಪ್ರಿಲ್ 15ರಿಂದ ಲಾಕ್ ಡೌನ್ ಸಡಿಲಿಕೆ-ಷರತ್ತುಗಳು ಅನ್ವಯ!: ಮೇಘಾಲಯ ಘೋಷಣೆ

ದಿಲ್ಲಿ ಕೋವಿಡ್ 523ಕ್ಕೆ ಏರಿಕೆ: 330 ಮಂದಿ ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರು

ದಿಲ್ಲಿ ಕೋವಿಡ್ 523ಕ್ಕೆ ಏರಿಕೆ: 330 ಮಂದಿ ನಿಜಾಮುದ್ದೀನ್ ಸಭೆಯಲ್ಲಿ ಭಾಗಿಯಾದವರು

Emergency declaration likely in Japan

ಜಪಾನ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಸಾಧ್ಯತೆ

ಸರಕಾರಿ ನೌಕರರಿಗೂ ಸಮಸ್ಯೆಗಳಿವೆ, ಅವರ ಸಂಬಳ ಕಡಿತ ಮಾಡಬೇಡಿ: ಡಿ ಕೆ ಶಿವಕುಮಾರ್ ಆಗ್ರಹ

ಸರಕಾರಿ ನೌಕರರಿಗೂ ಸಮಸ್ಯೆಗಳಿವೆ, ಅವರ ಸಂಬಳ ಕಡಿತ ಮಾಡಬೇಡಿ: ಡಿ ಕೆ ಶಿವಕುಮಾರ್ ಆಗ್ರಹ

ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

ಸಾವಿನ ಮನೆಯ ಪಕ್ಕದಲ್ಲಿದ್ದರೂ ಕ್ಷೇಮ; ಕೋಟೆಯೂರಿನಲ್ಲಿ ಕೋವಿಡ್-19 ಇಲ್ಲ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ  ದಾಖಲಿಸಿ ಮಾನವೀಯತೆ ಮೆರೆದ: ಖಾದರ್

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ: ಖಾದರ್

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ಪೆಟ್ರೋಲ್‌, ಡೀಸೆಲ್‌ ಉತ್ಪಾದನೆ ಅರ್ಧದಷ್ಟು ಕಡಿತ!

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು

ವೆನ್ಲಾಕ್  ಹೊಸ ಬ್ಲಾಕ್‌ ಕೋವಿಡ್‌ 19 ಚಿಕಿತ್ಸೆಗೆ ಸಜ್ಜು

ಗ್ರಾಹಕರೇ ಎಚ್ಚರ! ಅವಧಿ ಮೀರಿದ ತಿಂಡಿ ತಿನಿಸು ಖರೀದಿಸದಿರಿ

ಗ್ರಾಹಕರೇ ಎಚ್ಚರ! ಅವಧಿ ಮೀರಿದ ತಿಂಡಿ ತಿನಿಸು ಖರೀದಿಸದಿರಿ

ಕರಾವಳಿಯ ಸಾಂಸ್ಕೃತಿಕ ರಂಗ ಸ್ತಬ್ಧ !

ಕರಾವಳಿಯ ಸಾಂಸ್ಕೃತಿಕ ರಂಗ ಸ್ತಬ್ಧ !

MUST WATCH

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

udayavani youtube

ಒಂದೆರಡು ದಿನಗಳಲ್ಲಿ ರೈತರ ಎಲ್ಲಾ ಸಮಸ್ಯೆ ಸರಿಹೋಗಲಿದೆ : ಕೃಷಿ ಸಚಿವರಿಂದ ರೈತರಿಗೆ ಅಭಯ

ಹೊಸ ಸೇರ್ಪಡೆ

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ  ದಾಖಲಿಸಿ ಮಾನವೀಯತೆ ಮೆರೆದ: ಖಾದರ್

ಅನಾರೋಗ್ಯ ಸ್ಥಿತಿಯಲ್ಲಿದ್ದ ವ್ಯಕ್ತಿಯನ್ನ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ: ಖಾದರ್

ತ್ಯಾಜ್ಯ ಸಂಸ್ಕರಣ ಘಟಕ ಸ್ಥಳಾಂತರಕ್ಕೆ ಆಗ್ರಹ

ತ್ಯಾಜ್ಯ ಸಂಸ್ಕರಣ ಘಟಕ ಸ್ಥಳಾಂತರಕ್ಕೆ ಆಗ್ರಹ

ಕಲಬುರಗಿಯ ಮತ್ತಿಬ್ಬರಿಗೆ ಕೋವಿಡ್19 ದೃಢ: ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೂ ಸೋಂಕು!

ಕಲಬುರಗಿಯ ಮತ್ತಿಬ್ಬರಿಗೆ ಕೋವಿಡ್19 ದೃಢ: ಟ್ರಾವೆಲ್ ಹಿಸ್ಟರಿ ಇಲ್ಲದ ವ್ಯಕ್ತಿಗೂ ಸೋಂಕು!

07-April-14

ರೈತರ ಉತ್ಪನ್ನಗಳ ಖರೀದಿಗೆ ಕ್ರಮ

bng-tdy-8

ಆಶ್ರಯ ಫಲಾನುಭವಿಗಳಿಗೂ ಕೋವಿಡ್ 19 ಕಾಟ