28 ಲ.ರೂ. ಮೌಲ್ಯದ ಗೋಡಂಬಿ ಪೂರೈಸದೆ ವಂಚನೆ: ದೂರು
Team Udayavani, Aug 3, 2022, 12:03 AM IST
ಮಂಗಳೂರು: ಮಂಗಳೂರು ಬಂದರಿನಿಂದ ಮಹಾರಾಷ್ಟ್ರಕ್ಕೆ ಸುಮಾರು 28 ಲ.ರೂ. ಮೌಲ್ಯದ 25.586 ಮೆಟ್ರಿಕ್ ಟನ್ ಗೋಡಂಬಿ ಪೂರೈಕೆ ಮಾಡದೆ ವಂಚಿಸಲಾಗಿದೆ ಎಂದು ರಮಾಕಾಂತ್ ವಸಂತ ಅವರು ಮಂಗಳೂರು ಉತ್ತರ ಠಾಣಾ ಪೊಲೀಸರಿಗೆ ದೂರು ನೀಡಿದ್ದಾರೆ.
ಜು. 7ರಂದು ಪಶ್ಚಿಮ ಆಫ್ರಿಕಾದಿಂದ ಬಂದರಿಗೆ ಕಚ್ಚಾ ಗೋಡಂಬಿ ಬಂದಿದ್ದು ಅದನ್ನು ಆಂಜಲ್ ಟ್ರಾನ್ಸ್‌ಪೊರ್ಟ್ ಮೂಲಕ ಜು. 25ರಂದು ಲಾರಿಯಲ್ಲಿ ತುಂಬಿಸಿ ಮಹಾರಾಷ್ಟ್ರದ ಸಿಂದುದುರ್ಗ ಜಿಲ್ಲೆಗೆ ಜು. 27ರಂದು ತಲುಪಿಸಬೇಕಾಗಿತ್ತು. ಆದರೆ ಗೋಡಂಬಿ ತಲುಪಿಸದೆ ವಂಚಿಸಲಾಗಿದೆ ಎಂದವರು ದೂರಿನಲ್ಲಿ ತಿಳಿಸಿದ್ದಾರೆ.