Udayavni Special

ಸುಳ್ಯ ವ್ಯಕ್ತಿಯ ಮೋಸ ಬಯಲು : ಐದು ಮದುವೆಯಾಗಿದ್ದ  ಭೂಪ!


Team Udayavani, Aug 3, 2018, 10:40 AM IST

crime-symbolic-600.jpg

ಸುಳ್ಯ: ಹಣದ ಆಸೆಗೆ ಹಲವು ಮದುವೆಯಾಗಿ ವಂಚಿಸುತ್ತಿದ್ದ ಬಹುಪತ್ನೀ ವಲ್ಲಭನೊಬ್ಬನ ಮೋಸದ ಜಾಲ ಬೆಳಕಿಗೆ ಬರ ತೊಡಗಿವೆ. 22 ವರ್ಷಗಳ ಹಿಂದೆ ಊರು ತೊರೆದು ಕೆಲವು ದಿನಗಳ ಹಿಂದೆ ಪ್ರತ್ಯಕ್ಷನಾಗಿದ್ದ ಸುಳ್ಯದ ನಿವಾಸಿ ದಿನೇಶ್‌ ಕುರಿತ ಸುದ್ದಿಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲೂ ತೀವ್ರ ಸುದ್ದಿ ಮಾಡಿದ್ದು, ವೈರಲ್‌ ಆಗಿದೆ. ಈತ ಮಂಡೆಕೋಲಿನವನು ಎನ್ನಲಾಗಿದೆ.

ಊರೆಲ್ಲ ಮದುವೆಯಾಗಿದ್ದ
ದಿನೇಶ್‌ಗೆ ಹುಟ್ಟೂರಿನಲ್ಲಿ ಮೊದಲ ಮದುವೆಯಾಗಿತ್ತು. ಬಳಿಕ ಪತ್ನಿ, ಮಗುವನ್ನು ಬಿಟ್ಟು, ತನ್ನ ಜಾಗ ಮಾರಾಟ ಮಾಡಿ ಕೇರಳಕ್ಕೆ ಹೋಗಿ ನೆಲೆಸಿದ್ದ. ಮಂಗಳೂರು, ಬಂಟ್ವಾಳ, ಪುತ್ತೂರು, ಕೇರಳ ಹೀಗೆ ವಿವಿಧೆಡೆ ಮದುವೆಯಾಗಿದ್ದಾಗಿ ಹೇಳಲಾಗಿದೆ.

ಮನೆಯವರಿಗೂ ಗೊತ್ತಿಲ್ಲ?
ಹತ್ತು ವರ್ಷಗಳ ಹಿಂದೆ ಕುಟುಂಬದ ದೈವಸ್ಥಾನವೊಂದರ ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ದಿನೇಶ್‌ ಬಂದಿದ್ದ. ಆಗ ಕಾರಿನಲ್ಲೇ ಓಡಾಡುತ್ತಿದ್ದ. ಕೆಲವೊಮ್ಮೆ ಮಂಡೆಕೋಲಿಗೆ ಬರುತ್ತಿದ್ದ ಎನ್ನಲಾಗಿದೆ. ಈತನ ಹಿಂದಿನ ಕಥೆಗಳು ಮನೆ ಮಂದಿಗೂ ಗೊತ್ತಿರಲಿಲ್ಲ. ಕೆಲವು ತಿಂಗಳ ಹಿಂದೆ ಮಂಗಳೂರಿನಿಂದ ಕೆಲವರು ಹುಡುಕಿಕೊಂಡು ಬಂದಿದ್ದರು. ಆಗ ಅವರಿಂದ ತಪ್ಪಿಸಿಕೊಂಡು ಪರಾರಿಯಾದವ ಮರಳಿ ಬಂದಿಲ್ಲ. ಬಂದವರು ಯಾರು, ಈತ ತಪ್ಪಿಸಿಕೊಂಡದ್ದು ಏಕೆ ಎಂಬುದು ಮನೆ ಮಂದಿಗೂ ತಿಳಿದಿಲ್ಲ ಎನ್ನಲಾಗಿದೆ.

ಹುಡುಕುತ್ತಾ ಬಂದಿದ್ದ ಮಹಿಳೆ
ಆರೋಪಿ ದಿನೇಶ್‌ ಮಂಡೆಕೋಲಿನ ಮನೆಯೊಂದಕ್ಕೆ ಬರುತ್ತಿದ್ದ ಮಾಹಿತಿ ಪಡೆದ ಬೆನ್ನಲ್ಲೇ ವಂಚನೆಗೊಳಗಾಗಿದ್ದಾರೆನ್ನಲಾದ ಮಹಿಳೆ  ಮತ್ತು ಆಕೆಯ ಬಳಗದವರು ಆತ ಬಂದಿದ್ದ ಮನೆಗೆ 10 ದಿನಗಳ ಹಿಂದೆ ಆಗಮಿಸಿದ್ದಾರೆ, ಜತೆಗೆ ಆತ ಮದುವೆಯಾಗಿ ವಂಚಿಸಿದ ಬಗ್ಗೆ ಹೇಳಿಕೊಂಡಿದ್ದಾಳೆ. ಮನೆಯವರ ಜತೆ ಜಗಳವಾಡಿದ್ದಾಳೆ. ಮನೆಮಂದಿಗೆ ಮತ್ತು ದಿನೇಶ್‌ ಗೆ ಯಾವುದೇ ಸಂಪರ್ಕ ಸಂಬಂಧ ಇಲ್ಲ ಎಂದು ಊರವರು ಹೇಳಿದ್ದರೂ ಮಾತಿನ ಚಕಮಕಿ ನಡೆದಿತ್ತು. ಕೊನೆಗೆ ಊರವರು ಅವರನ್ನು ಸಮಾಧಾನಪಡಿಸಿ ಕಳುಹಿಸಿದ್ದರು ಎನ್ನಲಾಗಿದೆ. 

ಬಡವರು, ವಿಧವೆಯರೇ ಟಾರ್ಗೆಟ್‌ 
ದಿನೇಶ್‌ ಹಣದ ಆಸೆಗಾಗಿಯೇ ಹಲವರನ್ನು ಮದುವೆಯಾಗುತ್ತಿದ್ದುದಾಗಿ ಹೇಳಲಾಗಿದೆ. ಇದಕ್ಕಾಗಿ ಆತ ಬಡ ಯುವತಿಯರು ಮತ್ತು ವಿಧವೆಯರನ್ನೇ ಟಾರ್ಗೆಟ್‌ ಮಾಡುತ್ತಿದ್ದ. ವಿಧವೆಯರಿಗೆ ಆಸರೆಯಾಗುವ ಆಮಿಷವೊಡ್ಡಿ ಅವರನ್ನು ವಂಚಿಸುತ್ತಿದ್ದ. ಈತನಲ್ಲಿ ಹಲವು ದೂರವಾಣಿ ಸಂಖ್ಯೆಗಳಿದ್ದು, ಬೇರೆ-ಬೇರೆಯವರೊಂದಿಗೆ ವ್ಯವಹರಿಸುತ್ತಿದ್ದ. ತನ್ನ ಮಾತಿನ ಚಾತುರ್ಯ ಮತ್ತು ಸೌಂದರ್ಯದ ಮೂಲಕ ಮಹಿಳೆಯರನ್ನು ಖೆಡ್ಡಾಕ್ಕೆ ಬೀಳಿಸಿ, ವಿವಾಹದ ನಾಟಕವಾಡಿ ಕೊನೆಗೆ ಅವರ ಆಸ್ತಿ, ಚಿನ್ನಾಭರಣ ಲಪಟಾಯಿಸುತ್ತಿದ್ದ. ಪುತ್ತೂರಿನ ಮಹಿಳೆಗೆ 7 ಲಕ್ಷ ರೂ. ವಂಚಿಸಿದ್ದ ಎಂಬ ಮಾಹಿತಿ ಹಬ್ಬಿದೆ.

ತನ್ನ ಹೆಂಡತಿಯನ್ನೇ ಮಾರಲು ಯತ್ನಿಸಿದ್ದ!
ಆರೋಪಿ ದಿನೇಶ್‌ ತನ್ನ ಹೆಂಡತಿಯ ಮಾರಾಟಕ್ಕೆ ಯತ್ನಿಸಿದ್ದ. ಆಕೆಯನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿ, ಆಕೆ ಬಟ್ಟೆ ಬದಲಾಯಿಸುತ್ತಿದ್ದ ವೇಳೆ ಲಾಡ್ಜ್ ಕೋಣೆಯ ಬಾಗಿಲು ಹಾಕಿ ಖರೀದಿದಾರರನ್ನು ಕರೆತರಲು ಹೋಗಿದ್ದ. ಆಕೆ ಅದು ಹೇಗೋ ಆ ವಿಷವರ್ತುಲದಿಂದ ತಪ್ಪಿಸಿಕೊಂಡಿದ್ದಳು ಎನ್ನಲಾಗಿದೆ. ಒಟ್ಟು ಪ್ರಕರಣ ಸಂಬಂಧ ದೂರು ಕೊಟ್ಟರೆ ಸ್ವೀಕರಿಸಿ ತನಿಖೆ ಮಾಡುವುದಾಗಿ ಎಸ್ಪಿ ರವಿಕಾಂತೇಗೌಡ ಹಾಗೂ ಪೊಲೀಸ್‌ ಆಯುಕ್ತ ಟಿ.ಆರ್‌. ಸುರೇಶ್‌ ‘ಉದಯವಾಣಿ’ಗೆ ತಿಳಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಕಾಂಗ್ರೆಸ್ ಹೈಕಮಾಂಡ್ ದೇವೇಗೌಡರಿಗೆ ಅವಕಾಶ ಕೊಡಬೇಕು: ಕೆ.ಎಚ್.ಮುನಿಯಪ್ಪ

ಪಂಪ್ ವೆಲ್ ಫ್ಲೈಓವರ್ ಗೆ ಇನ್ನೊಂದು ಹೆಸರು ಯಾಕೆ: ಯು ಟಿ ಖಾದರ್ ಪ್ರಶ್ನೆ

ಪಂಪ್ ವೆಲ್ ಫ್ಲೈಓವರ್ ಗೆ ಇನ್ನೊಂದು ಹೆಸರು ಯಾಕೆ? ಯು ಟಿ ಖಾದರ್ ಪ್ರಶ್ನೆ

ಸಿದ್ದರಾಮಯ್ಯ ಭೇಟಿ ಮಾಡಲು ಮುಗಿಬಿದ್ದ ಕಾರ್ಯಕರ್ತರು: ಎಲ್ಲೂ ಕಾಣದ ಸಾಮಾಜಿಕ ಅಂತರ

ಸಿದ್ದರಾಮಯ್ಯ ಭೇಟಿ ಮಾಡಲು ಮುಗಿಬಿದ್ದ ಕಾರ್ಯಕರ್ತರು: ಎಲ್ಲೂ ಕಾಣದ ಸಾಮಾಜಿಕ ಅಂತರ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಯಡಿಯೂರಪ್ಪ ಸೂಚನೆ

ಸರ್ಕಾರಿ ಕಚೇರಿಗಳನ್ನು ಸುವರ್ಣಸೌಧಕ್ಕೆ ಸ್ಥಳಾಂತರಿಸಲು ಯಡಿಯೂರಪ್ಪ ಸೂಚನೆ

ಮುಂಬೈನ ಅಲಿಬಾಗ್ ಪ್ರದೇಶಕ್ಕೆ ಬಡಿದಪ್ಪಳಿಸಿದ ನಿಸರ್ಗ ಚಂಡಮಾರುತ, ಹೈ ಅಲರ್ಟ್

ಮುಂಬೈನ ಅಲಿಬಾಗ್ ಪ್ರದೇಶಕ್ಕೆ ಬಡಿದಪ್ಪಳಿಸಿದ ನಿಸರ್ಗ ಚಂಡಮಾರುತ, ಹೈ ಅಲರ್ಟ್

ದೇಶದ ಜಿಡಿಪಿ ಕುಸಿದು ಹೋಗಿದೆ, ಮೋದಿ ಸರ್ಕಾರದಲ್ಲಿ ಆರ್ಥಿಕ ಶಿಸ್ತಿಲ್ಲ : ಸಿದ್ದರಾಮಯ್ಯ

ದೇಶದ ಜಿಡಿಪಿ ಕುಸಿದು ಹೋಗಿದೆ, ಮೋದಿ ಸರ್ಕಾರದಲ್ಲಿ ಆರ್ಥಿಕ ಶಿಸ್ತಿಲ್ಲ : ಸಿದ್ದರಾಮಯ್ಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಅಡಿಕೆ ಹಳದಿ ರೋಗ ಬಾಧಿತ ಪ್ರದೇಶ ಸಮೀಕ್ಷೆ: 1,043.38 ಹೆಕ್ಟೇರ್‌ ಬಾಧಿತ ಪ್ರದೇಶ ಗುರುತು

ಅಡಿಕೆ ಹಳದಿ ರೋಗ ಬಾಧಿತ ಪ್ರದೇಶ ಸಮೀಕ್ಷೆ: 1,043.38 ಹೆಕ್ಟೇರ್‌ ಬಾಧಿತ ಪ್ರದೇಶ ಗುರುತು

ಕುಕ್ಕಾವು: ಮತ್ತೆ ನೆರೆ ಮುನ್ಸೂಚನೆ ನೀಡಿದ ನದಿ ಪಾತ್ರ  

ಕುಕ್ಕಾವು: ಮತ್ತೆ ನೆರೆ ಮುನ್ಸೂಚನೆ ನೀಡಿದ ನದಿ ಪಾತ್ರ  

ತ್ಯಾಜ್ಯ ಎಸೆಯುವವರ ಪತ್ತೆಗೆ ಕೆಮರಾ ಬಳಕೆಗೆ ನಿರ್ಣಯ

ತ್ಯಾಜ್ಯ ಎಸೆಯುವವರ ಪತ್ತೆಗೆ ಕೆಮರಾ ಬಳಕೆಗೆ ನಿರ್ಣಯ

ಕಾರು ಢಿಕ್ಕಿ : ಪಾದಚಾರಿ ಸಾವು

ಕಾರು ಢಿಕ್ಕಿ : ಪಾದಚಾರಿ ಸಾವು

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

ಮಿಡತೆ ಪತ್ತೆ ಸ್ಥಳಕ್ಕೆ ಕೃಷಿ ಅಧಿಕಾರಿ ಭೇಟಿ ; ಮಿಡತೆ, ಎಲೆಗಳ ಮಾದರಿ ಸಂಗ್ರಹ

MUST WATCH

udayavani youtube

ಭಾರತದಲ್ಲೇ ಅತೀ ಎತ್ತರದ Karaga ಕಟ್ಟಿ ಕುಣಿಯುವ Venkatesh Bangera | Udayavani

udayavani youtube

18 ಎಕರೆಯ ಮಾದರಿ ಕೃಷಿ ತೋಟ | Farmer who inspires youngsters to do Agriculture

udayavani youtube

COVID-19 : ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ Homeopathy Medicine | Udayavani

udayavani youtube

Preserving the heritage -World Famous Udupi Mattugulla Documentary by Udayavani

udayavani youtube

Mattu ಗದ್ದೆಯಲ್ಲಿ ಕೃಷಿಯ ಆಟಕ್ಕಿಳಿದ Football ಆಟಗಾರ Yashodara

ಹೊಸ ಸೇರ್ಪಡೆ

03-June-14

ಮಹಾರಾಷ್ಟ್ರದಿಂದ ಬಂದವರಿಗೆ ಸಾಂಸ್ಥಿಕ ಕ್ವಾರಂಟೈನ್‌ ಕಡ್ಡಾಯ

03-June-13

ಮಳೆ ಹಾನಿ ಪ್ರದೇಶಕ್ಕೆ ಬಸವಂತಪ್ಪ ಭೇಟಿ

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಮಂಗಳೂರು-ಕಾಸರಗೋಡು ಮಧ್ಯೆ ಉದ್ಯೋಗಿಗಳ ನಿತ್ಯ ಸಂಚಾರಕ್ಕೆ ಗ್ರೀನ್ ಸಿಗ್ನಲ್

ಭಾರತದಲ್ಲಿ ದಟ್ಸನ್ ನಿಂದ ಹೊಚ್ಚ ಹೊಸ ರೆಡಿ-ಗೋ ಬಿಡುಗಡೆ

ಭಾರತದಲ್ಲಿ ಡಟ್ಸನ್ ನಿಂದ ನೂತನ ರೆಡಿ-ಗೋ ಬಿಡುಗಡೆ

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಯತ್ನಕ್ಕೆ ಸಿಪಿಐಎಂ ಖಂಡನೆ

ವಿದ್ಯುತ್‌ ಕ್ಷೇತ್ರ ಖಾಸಗೀಕರಣ ಯತ್ನಕ್ಕೆ ಸಿಪಿಐಎಂ ಖಂಡನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.