Udayavni Special

ಕಲ್ಲಡ್ಕ ಶಾಲೆಗೆ ‘ಭಿಕ್ಷಾಂದೇಹಿ’ ಅಭಿಯಾನದಡಿ ದೇಣಿಗೆ ಸಂಗ್ರಹ


Team Udayavani, Aug 16, 2017, 8:35 AM IST

Bhikshamdehi-16-8.jpg

ಮಂಗಳೂರು: ಆರ್‌ಎಸ್‌ಎಸ್‌ ಮುಖಂಡ ಡಾ| ಕಲ್ಲಡ್ಕ ಪ್ರಭಾಕರ ಭಟ್‌ ನೇತೃತ್ವದ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಬಂಟ್ವಾಳ ಪುಣಚದ ಶ್ರೀದೇವಿ ಶಾಲೆಗೆ ಬಿಸಿಯೂಟ ಪೂರೈಕೆಯನ್ನು ಸರಕಾರ ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ ಮಕ್ಕಳ ಬಿಸಿಯೂಟಕ್ಕೆ ಆನ್‌ಲೈನ್‌ ಮೂಲಕ ದೇಣಿಗೆ ಸಂಗ್ರಹ ಆರಂಭವಾಗಿದೆ.

ಕಳೆದ 10 ವರ್ಷಗಳಿಂದ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರದಿಂದ ಅನ್ನದಾನಕ್ಕಾಗಿ ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ ಹಾಗೂ ಬಂಟ್ವಾಳ ಪುಣಚದ ಶ್ರೀದೇವಿ ಶಾಲೆಗೆ ಅನುದಾನ ಬರುತ್ತಿತ್ತು. ಆದರೆ ಅನುದಾನವನ್ನು ರಾಜ್ಯ ಸರಕಾರ ಕಳೆದ ವಾರ ಕಡಿತಗೊಳಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್‌ ಆವರು ‘ನನ್ನ ಪ್ರಾಣ ಇರುವವರೆಗೆ ಭಿಕ್ಷೆ ಬೇಡಿಯಾದರೂ ಮಕ್ಕಳಿಗೆ ಒಂದು ಹೊತ್ತಿನ ಊಟ ಹಾಕುತ್ತೇನೆ’ ಎಂದು ಸರಕಾರಕ್ಕೆ ಸವಾಲು ಹಾಕಿದ್ದರು. ಇದರಿಂದ ಬೇಸರಗೊಂಡ ಮಂಗಳೂರು ಮೂಲದ ಯುವಕರ ತಂಡವೊಂದು ನಾವೇ ಭಿಕ್ಷಾಟನೆ ಮಾಡಿ ಮಕ್ಕಳಿಗೆ ಅನ್ನ ನೀಡುತ್ತೇವೆ ಎಂಬ ಹೇಳಿಕೆಯ ಮೂಲಕ ಆನ್‌ಲೈನ್‌ನಲ್ಲಿ ದೇಣಿಗೆ ಸಂಗ್ರಹ ಮಾಡುತ್ತಿದ್ದಾರೆ.

ಶಾಲೆಯ ಮಕ್ಕಳ ಬಿಸಿಯೂಟಕ್ಕಾಗಿ ಮುಂಬಯಿ ಮೂಲದ ಮೂವರ ತಂಡ ಸಾಮಾಜಿಕ ಜಾಲ ತಾಣದ ಮೂಲಕ ‘ಬಿಕ್ಷಾಮ್ ದೇಹಿ” ಎಂಬ ಹೆಸರಿನಲ್ಲಿ ಅಭಿಯಾನ ಆರಂಭಿಸಿದ್ದು, ಕೇವಲ ಎರಡೇ ದಿನದಲ್ಲಿ ಲಕ್ಷಾಂತರ ರೂಪಾಯಿ ದೇಣಿಗೆ ಹರಿದು ಬಂದಿದೆ. ದೇಶ ವಿದೇಶಗಳಿಂದ ಅಕ್ಕಿ ಹಾಗೂ ನಗದು ರೂಪದಲ್ಲಿ ದೇಣಿಗೆಯನ್ನು ಮಕ್ಕಳ ಬಿಸಿಯೂಟಕ್ಕಾಗಿ ದಾನಿಗಳು ನೀಡಿದ್ದಾರೆ. ಮೂಲತಃ ಮಂಗಳೂರಿನವರಾದ ಮಹೇಶ್‌, ವಿಕ್ರಮ್‌ ಮತ್ತು ವಿವೇಕ್‌ ಶೆಟ್ಟಿ ಅವರು ಸದ್ಯ ಮುಂಬಯಿಯಲ್ಲಿ ನೆಲೆಸಿದ್ದು, ಬಿಕ್ಷಾಮ್ ದೇಹಿ ಅಭಿಯಾನಕ್ಕೆ ಚಾಲನೆ ನೀಡಿದವರು.

ಆರ್‌ಎಸ್‌ಎಸ್‌ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಅವರ ಮೇಲಿನ ದ್ವೇಷಕ್ಕಾಗಿ ಶಾಲೆಯ ಮಕ್ಕಳ ಬಿಸಿಯೂಟಕ್ಕೆ ಕತ್ತರಿ ಹಾಕಿದ ಸರಕಾರ ಕ್ರಮದ ವಿರುದ್ಧ ಬೇಸರಗೊಂಡ ಈ ಯುವಕರ‌ ತಂಡ ಪೋಸ್ಟ್‌ಕಾರ್ಡ್‌ ಡಾಟ್‌ ಕಾಂ ವೆಬ್‌ ಸೈಟ್‌ ಮೂಲಕ ಬಿಕ್ಷಾಮ್ ದೇಹಿ ಎಂಬ ಆನ್‌ಲೈನ್‌ ಆಂದೋಲನವನ್ನು ಆರಂಭಿಸಿದ್ದಾರೆ. ಅದರಲ್ಲಿ ಶಾಲೆ, ಅನುದಾನ, ಸರಕಾರದ ನಿಲುವಿನ ಬಗ್ಗೆ ಸ್ಪಷ್ಟವಾಗಿ ವಿವರಿಸಲಾಗಿದೆ.

5.60 ಲಕ್ಷ ರೂ. ಸಂಗ್ರಹ
ಯುವಕರ ಈ ಆಂದೋಲನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು, ಬ್ಯಾಂಕ್‌ ರಜೆ ಇದ್ದರೂ ಮೂರು ದಿನಗಳಲ್ಲಿ 5.60 ಲಕ್ಷ ರೂ. ಸಂಗ್ರಹವಾಗಿದೆ. 2,600 ಕೆಜಿ ಅಕ್ಕಿಯೂ ಈವರೆಗೆ ಸಂಗ್ರಹವಾಗಿದೆ. ಅಲ್ಲದೆ ಶಾಸಕ ಸಿ.ಟಿ. ರವಿ 1 ಲಕ್ಷ ರೂ. ನೆರವು ನೀಡುವುದಾಗಿ ಟ್ವೀಟರ್‌ನಲ್ಲಿ ಘೋಷಿಸಿದ್ದಾರೆ. ದೇಶ ವಿದೇಶಗಳ ಹಲವಾರು ದಾನಿಗಳು ಲಕ್ಷಾಂತರ ರೂಪಾಯಿ ಘೋಷಿಸಿದ್ದಾರೆ. ಕೆಲವು ಉದ್ಯಮಿಗಳು ಅಕ್ಕಿ ಹಾಗೂ ಇನ್ನಿತರ ವಸ್ತುಗಳನ್ನು ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌, ಟ್ವೀಟರ್‌ಗಳಲ್ಲಿ ಈ ಬಿಕ್ಷಾಮ್ ದೇಹಿ ಆಂದೋಲನ ವೈರಲ್‌ ಆಗಿದೆ. ಈ ಸಂಸ್ಥೆ ಒಟ್ಟು 80 ಲಕ್ಷ ರೂ. ಬಿಕ್ಷಾಟನೆ ಹೆಸರಿನಲ್ಲಿ ದಾನ ಪಡೆದು ಆ ಹಣವನ್ನು ಕಲ್ಲಡ್ಕ ಪ್ರಭಾಕರ್‌ ಭಟ್‌ ನಡೆಸುತ್ತಿರುವ ಶಾಲೆಗಳಿಗೆ ದೇಣಿಗೆ ರೂಪದಲ್ಲಿ ನೀಡಲು ತೀರ್ಮಾನಿಸಿದೆ. ಆ ಮೂಲಕ ಶಾಲೆಗಳ ಅನುದಾನ ಕಡಿತಗೊಳಿಸಿರುವ ರಾಜ್ಯ ಸರಕಾರದ ಕ್ರಮಕ್ಕೆ ಸೆಡ್ಡುಹೊಡೆಯುವ ನಿರ್ಧರಿಸಿರುವುದು ಗಮನಾರ್ಹ. ರಾಜ್ಯ ಸರಕಾರ ಇನ್ನು 8 ತಿಂಗಳ ಕಾಲವಿದ್ದು ಆ 8 ತಿಂಗಳಿಗೆ ಬೇಕಾಗುವ 80 ಲಕ್ಷ ರೂ. ಗಳನ್ನು ಬಿಕ್ಷಾಟನೆ ಮೂಲಕ ಸಂಗ್ರಹಿಸಲು ಈ ತಂಡ ನಿರ್ಧರಿಸಿದೆ.

15 ದಿನಗಳಲ್ಲಿ 80 ಲಕ್ಷದ ಗುರಿ
ಬಡ ಮಕ್ಕಳ ಹೊಟ್ಟೆಯ ಮೇಲೆ ಹೊಡೆದಿರುವ ರಾಜ್ಯ ಸರಕಾರದ ಕ್ರಮದ ವಿರುದ್ಧ ನಾವು ಈ ಅಭಿಯಾನ ಆರಂಭಿಸಿದ್ದೇವೆ. ಇದರಲ್ಲಿ ಯಾವುದೇ ಪಕ್ಷ ಸಂಘಟನೆ ಎನ್ನುವ ಭೇದ ಭಾವವಿಲ್ಲ. ಇನ್ನೂ 15 ದಿನಗಳಲ್ಲಿ 80 ಲಕ್ಷ ರೂ. ಸಂಗ್ರಹ ಮಾಡಿ ಶಾಲೆಗೆ ನೀಡಲಿದ್ದೇವೆ. ಈ ಹಿಂದೆಯೂ ಕಷ್ಟದಲ್ಲಿರುವ ಜನರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ದೇಣಿಗೆ ಸಂಗ್ರಹಿಸಿ ನೀಡಿದ್ದೇವೆ.
– ಮಹೇಶ್‌, ಆಂದೋಲನದ ಸದಸ್ಯ

– ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

rain

ಉತ್ತರಾಖಂಡದಲ್ಲಿ ಭಾರಿ ಮಳೆ ಎಚ್ಚರಿಕೆ : ತುರ್ತು ಪರಿಸ್ಥಿತಿಗೆ ಅಗತ್ಯ ವ್ಯವಸ್ಥೆ

ಹಣಕಾಸು ಸಚಿವಾಲಯ ಸರ್ಕಾರಿ ಆಸ್ತಿಗಳ ಮೋನಿಟೈಷೇಶನ್ ಗಾಗಿ ಕ್ಯಾಬಿನೆಟ್‌ ಅನುಮೋದನೆ ಪಡೆಯಲಿದೆ

ಸಿಪಿಎಸ್‌ಇ ಒಡೆತನದ ಭೂಮಿ: ಹಣಕಾಸು ಸಚಿವಾಲಯದಿಂದ ಹೊಸ ಚಿಂತನೆ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ

ನಾವು ಮಾತು ತಪ್ಪುವವರಲ್ಲ, ಕಾಂಗ್ರೆಸ್ಸಿಗರು ಸುಳ್ಳು ಹೇಳಿ ಓಡಿ ಹೋಗುವವರು: ಸಿಎಂ ಬೊಮ್ಮಾಯಿ

hgyuy

“ಗೋರ್ಖಾ” ಪೋಸ್ಟರ್‍ ನ  ತಪ್ಪು ತಿದ್ದಿದ ಮಾಜಿ ಯೋಧನಿಗೆ ಅಕ್ಷಯ್‌ ಧನ್ಯವಾದ

BCCI invites Job Applications for Team India mens team

ದ್ರಾವಿಡ್ ನೇಮಕ ಸುದ್ದಿಯ ನಡುವೆ ಟೀಂ ಇಂಡಿಯಾ ಕೋಚ್ ಹುದ್ದೆಗೆ ಅರ್ಜಿ ಆಹ್ವಾನಿಸಿದ ಬಿಸಿಸಿಐ

anjan

ಅಂಜನಾದ್ರಿಗೆ ಹರಿದು ಬಂದ ಪ್ರವಾಸಿಗರ ದಂಡು : ಬೆಟ್ಟ ಹತ್ತಲು ಕ್ಯೂ





ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ನೆಲ್ಲಿತೀರ್ಥ : ಪವಿತ್ರ ಗುಹಾ ಪ್ರವೇಶ, ತೀರ್ಥಸ್ನಾನಕ್ಕೆ ಚಾಲನೆ

ನೆಲ್ಲಿತೀರ್ಥ : ಪವಿತ್ರ ಗುಹಾ ಪ್ರವೇಶ, ತೀರ್ಥಸ್ನಾನಕ್ಕೆ ಚಾಲನೆ

ನಾಗನ ಬ್ರಹ್ಮ ಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

ದೈವಸ್ಥಾನ ಮತ್ತು ನಾಗನ ಬ್ರಹ್ಮ ಪೀಠಕ್ಕೆ ದುಷ್ಕರ್ಮಿಗಳಿಂದ ಹಾನಿ

ಕಾಲ್ನಡಿಗೆಯಲ್ಲಿ ಭಾರತ ಸುತ್ತಾಡಿ ಸೈಬೀರಿಯಾಕ್ಕೆ ಯಾತ್ರೆ

ಕಾಲ್ನಡಿಗೆಯಲ್ಲಿ ಭಾರತ ಸುತ್ತಾಡಿ ಸೈಬೀರಿಯಾಕ್ಕೆ ಯಾತ್ರೆ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ತ್ಯಾಜ್ಯ ಸಂಸ್ಕರಣ ಘಟಕ ಇಲ್ಲದ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ದಂಡ

ತ್ಯಾಜ್ಯ ಸಂಸ್ಕರಣ ಘಟಕ ಇಲ್ಲದ ದೊಡ್ಡ ಅಪಾರ್ಟ್‌ಮೆಂಟ್‌ಗಳಿಗೆ ದಂಡ

MUST WATCH

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

udayavani youtube

ಸಮಾಜ ಮೆಚ್ಚುವಂತೆ ಬಾಳುವೆ: ಆರ್ಯನ್‌ ಖಾನ್ |UDAYAVANI NEWS BULLETIN|17/10/2021

udayavani youtube

ಅರಕಲಗೂಡು: ಅಕ್ರಮವಾಗಿ ಗೋಮಾಂಸ ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪೊಲೀಸರ ದಾಳಿ

udayavani youtube

ಲಾರಿ ಹತ್ತಲು ಅಶ್ವತ್ಥಾಮ ಆನೆ ಹಿಂದೇಟು.

udayavani youtube

ಪರಸ್ಪರ ಮಜ್ಜಿಗೆ ಎರಚಿಕೊಂಡು ಗೌಳಿ ಬುಡಕಟ್ಟು ಸಮುದಾಯದಿಂದ ದಸರಾ ಆಚರಣೆ

ಹೊಸ ಸೇರ್ಪಡೆ

ಸಂವಿಧಾನ ಓದು ಅಭಿಯಾನದಡಿ ಮನೆ-ಮನೆಗೂ ಸಂವಿಧಾನ ಕಾರ್ಯಕ್ರಮ

ಸಂವಿಧಾನ ಓದು ಅಭಿಯಾನದಡಿ ಮನೆ-ಮನೆಗೂ ಸಂವಿಧಾನ ಕಾರ್ಯಕ್ರಮ

ಆರೋಗ್ಯದ ಅರಿವಿಗೆ ಸಂಚಾರಿ ರಥ

ಆರೋಗ್ಯದ ಅರಿವಿಗೆ ಸಂಚಾರಿ ರಥ

ಹಸನ್ಮಾಳದಲ್ಲಿ ದನಗರ ಗೌಳಿ ಸಮುದಾಯದವರಿಂದ ಶಿಲಂಗಾಣ ಕಾರ್ಯಕ್ರಮ

ಹಸನ್ಮಾಳದಲ್ಲಿ ದನಗರ ಗೌಳಿ ಸಮುದಾಯದವರಿಂದ ಶಿಲಂಗಾಣ ಕಾರ್ಯಕ್ರಮ

k-r

ಮಹಾ ಮಳೆಗೆ 21 ಮಂದಿ ಬಲಿ: ಕೇರಳ ಸಿಎಂಗೆ ಪ್ರಧಾನಿ ಮೋದಿ ಕರೆ

ಅಂಬೇಡ್ಕರ್‌ರಿಂದ  ಬೌದ್ಧ ಧರ್ಮಕ್ಕೆ  ಮರುಹುಟ್ಟು

ಅಂಬೇಡ್ಕರ್‌ರಿಂದ  ಬೌದ್ಧ ಧರ್ಮಕ್ಕೆ ಮರುಹುಟ್ಟು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.