ಸಾರಸ್ವತ ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಬಲಿಷ್ಠವಾಗಲಿ

ಕಾಶೀ ಮಠ ಸಂಸ್ಥಾನದ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಶಯ

Team Udayavani, Nov 29, 2021, 5:57 AM IST

ಸಾರಸ್ವತ ಬ್ರಾಹ್ಮಣ ಸಮಾಜ ಒಗ್ಗಟ್ಟಿನಿಂದ ಬಲಿಷ್ಠವಾಗಲಿ

ಮಂಗಳೂರು: ಜಗತ್ತಿನಾದ್ಯಂತ ಇರುವ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರನ್ನು ಒಂದೇ ವೇದಿಕೆಯಡಿ ತಂದು ಒಗ್ಗೂಡಿಸುವ ಕೆಲಸ ಆರಂಭವಾಗಿದ್ದು, ಇದನ್ನು ಮುಂದುವರಿಸಲಾಗುವುದು. ಸಮಾಜದ ಸರ್ವತೋಮುಖ ಅಭಿವೃದ್ಧಿಯ ನಿಟ್ಟಿನಲ್ಲಿ ಇದು ಅಗತ್ಯ ಎಂದು ಕಾಶೀ ಮಠ ಸಂಸ್ಥಾನದ ಶ್ರೀಮತ್‌ ಸಂಯಮೀಂದ್ರ ತೀರ್ಥ ಸ್ವಾಮೀಜಿ ಅವರು ಹೇಳಿದರು.

ನಗರದ ಕೊಂಚಾಡಿಯ ವನಿತಾ ಅಚ್ಯುತ್‌ ಪೈ ಸಭಾಂಗಣದಲ್ಲಿ ರವಿವಾರ ವಿಶ್ವ ಸಾರಸ್ವತ ಫೆಡರೇಶನ್‌ ವತಿಯಿಂದ ನಡೆದ ಜಾಗತಿಕ ಸಾರಸ್ವತ ಸಂಗಮ ಕಾರ್ಯಕ್ರಮದ ಸಮಾರೋಪದಲ್ಲಿ ಅವರು ಆಶೀರ್ವಚನ ನೀಡಿದರು.

ಸಾರಸ್ವತ ಸಮಾಜದಲ್ಲಿ ಬೇರೆ ಬೇರೆ ಸಂಸ್ಕೃತಿ ಮತ್ತು ಸಿದ್ಧಾಂತಕ್ಕೆ ಸೇರಿದ ಮಂದಿ ಇದ್ದರೂ, ಒಟ್ಟು ಸಮಾಜದ ಅಭಿವೃದ್ಧಿಯ ದೃಷ್ಟಿಯಲ್ಲಿ ಬಲಿಷ್ಟ ಸಮಾಜ ಕಟ್ಟಿ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಬೇಕಾದ ಆವಶ್ಯಕತೆ ಇದೆ. ನಮ್ಮ ಉದ್ದೇಶ ಈಡೇರಲು ದೇವರ ಅನುಗ್ರಹವೂ ಬೇಕು. ಈ ದಿಶೆಯಲ್ಲಿ ತಾನು ಪ್ರಾರ್ಥನೆ ಸಲ್ಲಿಸು ತ್ತೇನೆ ಎಂದು ಸ್ವಾಮೀಜಿ ನುಡಿದರು.

ಭಾರತದಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿ ತನಕ ಸಾರಸ್ವತ ಬ್ರಾಹ್ಮಣ ಸಮಾಜದವರು ಇದ್ದಾರೆ. ದೇಶದ ಅತ್ಯಂತ ವಿಶಾಲವಾದ ಏಕೈಕ ಸಮಾಜವಿದ್ದರೆ ಅದು ಸಾರಸ್ವತ ಬಾಹ್ಮಣ ಸಮಾಜ ಎಂದರು.

ಸಾರಸ್ವತರು ಸರಸ್ವತಿ ಪುತ್ರರು. ಸರಸ್ವತಿ ನದಿ ಕಾಶ್ಮೀರದಲ್ಲಿ ಹುಟ್ಟುತ್ತದೆ. ಈ ನದಿಯ ಉಗಮ ಸ್ಥಾನ ಈಗ ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿದೆ. ಸರಕಾರ ದೃಢ ನಿರ್ಧಾರ ತಳೆದರೆ ಅದನ್ನು ಭಾರತದ ಒಳಗೆ ತರ ಬಹುದು ಎಂದು ಅಭಿಪ್ರಾಯಪಟ್ಟರು.

ಇದನ್ನೂ ಓದಿ:ಒಂದೇ ದಿನದಲ್ಲಿ ಕೇಸ್​​ ವಿಚಾರಣೆ, ಆದೇಶ: ನ್ಯಾಯಾಂಗ ಇತಿಹಾಸದಲ್ಲೇ ತ್ವರಿತ ತೀರ್ಪು

ತನ್ನ ಕಾಶ್ಮೀರ‌ ಭೇಟಿಯ ಅನುಭವ ವನ್ನು ವಿವರಿಸಿದ ಸ್ವಾಮೀಜಿ, ತಾನು ಅಲ್ಲಿ ಹಲವಾರು ದೇವಸ್ಥಾನಗಳನ್ನು ಸಂದರ್ಶಿಸಿದ್ದೇನೆ, ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರ ಜನರ ಜೀವನವನ್ನು ಕಂಡಿದ್ದೇನೆ. ಅಂತಹ ಪರಿಸ್ಥಿತಿ ಯಾರಿಗೂ ಬರಬಾರದು. ಅಲ್ಲಿನವರ ಸ್ಥಿತಿಯನ್ನು ನೋಡಿ ಅವರ ಕಷ್ಟ ನಿವಾರಣೆಗಾಗಿ ಏನಾದರೂ ಮಾಡಬೇಕೆಂದೆನಿಸಿತು ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್‌ ಸ್ವಾಗತಿಸಿ ದೇಶ ವಿದೇಶಗಳಲ್ಲಿ ಇರುವ ಸಾರಸ್ವತ ಸಮಾಜದವರನ್ನು ಒಂದೇ ವೇದಿಕೆಗೆ ಕರೆ ತಂದು ಸಮಾಜದ ಅಭಿವೃದ್ಧಿಗೆ ಸಂಘಟಿತವಾಗಿ ಕಾರ್ಯ ನಿರ್ವಹಿಸಬೇಕೆಂದು ಆಗಿನ ಸ್ವಾಮೀಜಿ ಸುಧೀಂದ್ರ ತೀರ್ಥರು 2002ರಲ್ಲಿ ವಿಶ್ವ ಸಾರಸ್ವತ ಫೆಡರೇಶನ್‌ ಸ್ಥಾಪಿಸಿದ್ದು, ಅವರ ಕನಸನ್ನು ಸಾಕಾರಗೊಳಿಸಲು ಈಗಿನ ಸ್ವಾಮೀಜಿಯವರು ಶ್ರಮಿಸುತ್ತಿದ್ದಾರೆ ಎಂದರು.

ಸಮ್ಮೇಳನದ ನಿರ್ಣಯಗಳ ಬಗ್ಗೆ ಸಾರಸ್ವತ ಸಮಾಜದ ದೇವಸ್ಥಾನಗಳ ಒಕ್ಕೂಟದ ಅಧ್ಯಕ್ಷ ಜಗನ್ನಾಥ ಕಾಮತ್‌ ವಿವರ ನೀಡಿದರು.

ನಿರ್ಣಯಗಳು
– 2022 ಮೇ ತಿಂಗಳಲ್ಲಿ 2ನೇ ವಿಶ್ವ ಸಾರಸ್ವತ ಸಂಗಮ ವಾಶಿಯಲ್ಲಿ ಈ ಎಲ್ಲ ಮಠಗಳ (ಕಾಶೀ ಮಠ, ಕವಳೆ ಮಠ, ಪರ್ತಗಾಳಿ, ಚಿತ್ರಾಪುರ ಮಠ ) ಸ್ವಾಮೀಜಿಗಳನ್ನು ಸೇರಿಸಿ ನಡೆಸುವುದು.
– ಕಾಶ್ಮೀರದ 101 ವಿದ್ಯಾರ್ಥಿಗಳಿಗೆ ವಿಶ್ವ ಸಾರಸ್ವತ ಫೆಡರೇಶನ್‌ ವತಿಯಿಂದ ವಿದ್ಯಾರ್ಥಿ ವೇತನ ನೀಡುವುದು. ಈ ವಿದ್ಯಾರ್ಥಿ ವೇತನ ನಿಧಿಗೆ ವಿವಿಧ ಸಂಘ ಸಂಸ್ಥೆಗಳು ಆರ್ಥಿಕ ನೆರವು ಒದಗಿಸುವುದು.
– ಮುಂದಿನ 6 ತಿಂಗಳಲ್ಲಿ ಹಿರಿಯರ ಮಾರ್ಗದರ್ಶನದಲ್ಲಿ ಅತುಲ್‌ ಕುಡ್ವ ಅವರ ನೇತೃತ್ವದಲ್ಲಿ ಸಾರಸ್ವತ ಸಮಾಜದ ಬಗ್ಗೆ ಸಂಶೋಧನೆ ನಡೆಸಿ ಚರಿತ್ರೆಯ ಪುಸ್ತಕವನ್ನು ಪ್ರಕಟಿಸುವುದು.

ಟಾಪ್ ನ್ಯೂಸ್

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ಗಣರಾಜ್ಯೋತ್ಸವ: ಅಬೈಡ್‌ ವಿತ್‌ ಮಿ ಗೀತೆ ಬಳಕೆಯಿಲ್ಲ

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವು

ರಾಜ್ಯದಲ್ಲಿ ಇಂದು 42,470 ಕೋವಿಡ್ ಪ್ರಕರಣ ಪತ್ತೆ : 26 ಮಂದಿ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ ಭರದಿಂದ ಸಾಗಿದ ಹಳಿ ಕಾಮಗಾರಿ

ಹಳೆಯಂಗಡಿ ರೈಲ್ವೇ ಕ್ರಾಸಿಂಗ್‌ ಭರದಿಂದ ಸಾಗಿದ ಹಳಿ ಕಾಮಗಾರಿ

ಪಶು ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಸಿದ್ಧ; ಪ್ರಾಣಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ

ಪಶು ಆಸ್ಪತ್ರೆಯ ಸುಸಜ್ಜಿತ ಕಟ್ಟಡ ಸಿದ್ಧ; ಪ್ರಾಣಿಗಳಿಗೆ ಅತ್ಯಾಧುನಿಕ ಚಿಕಿತ್ಸಾ ವ್ಯವಸ್ಥೆ

1-fdsfdsf

ಬಂಟ್ವಾಳ : ಹಿಂಸಾತ್ಮಕ ರೀತಿಯಲ್ಲಿ ಅಕ್ರಮ ದನ ಸಾಗಾಟ ಪತ್ತೆ

1death

ವೈದ್ಯಕೀಯ ನಿರ್ಲಕ್ಷ್ಯ ಆರೋಪ: ಆಸ್ಪತ್ರೆಯಲ್ಲಿ ತಾಯಿ, ಮಗು ಸಾವು; ಕುಟುಂಬಿಕರ ಆಕ್ರೋಶ

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

ಮೈಸೂರು-ಮಂಗಳೂರು ರೈಲ್ವೇ: ಹಳಿಯೇರದ ವಿದ್ಯುದೀಕರಣ!

MUST WATCH

udayavani youtube

ಮಧ್ವರಾಜ್ ಮನದಾಳದ ಮಾತು

udayavani youtube

ಫಾರ್ಮ್‌ಹೌಸ್‌ನಲ್ಲಿ ಸಿನಿಮಾ ತಾರೆಯರ ಶವ ಸಮಾಧಿ ಆರೋಪ ! ನ್ಯಾಯಾಲಯದ ಮೊರೆ ಸಲ್ಲು

udayavani youtube

ಅಮಿತ್ ಶಾರಿಂದ ಮನೆ ಮನೆ ಪ್ರಚಾರ

udayavani youtube

ಗಣರಾಜ್ಯೋತ್ಸವ paradeಗಾಗಿ ಭಾರತೀಯ ನೌಕಾಪಡೆ ಉತ್ಸಾಹದಿಂದ ತಯಾರಿ ನಡೆಸುತ್ತಿದೆ

udayavani youtube

Viral Video: ನೀರಿನಲ್ಲಿ ಮುಳುಗುತ್ತಿದ್ದ ಜಿಂಕೆ ಮರಿಯನ್ನು ರಕ್ಷಿಸಿದ ನಾಯಿ

ಹೊಸ ಸೇರ್ಪಡೆ

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಆಸ್ಟ್ರೇಲಿಯನ್‌ ಓಪನ್‌-2022: ನಾಲ್ಕನೇ ಸುತ್ತಿಗೆ ನೆಗೆದ ಮಿನೌರ್‌, ಮೆಡ್ವೆಡೇವ್‌, ಹಾಲೆಪ್‌

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಒಮಿಕ್ರಾನ್‌ನ ಉಪತಳಿ ಪತ್ತೆ; ಭಾರತಕ್ಕೂ ಹಬ್ಬಿರುವ ಸಾಧ್ಯತೆ

ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

ಕೋವಿಡ್‌ ಸೋಂಕು ದೃಢಪಟ್ಟವರಿಗೆ 3 ತಿಂಗಳ ಬಳಿಕವೇ ಮುನ್ನೆಚ್ಚರಿಕಾ ಡೋಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.