ಗೆಜ್ಜೆಗಿರಿ ನಂದನ ಬಿತ್ತಿಲ್‌ ಕ್ಷೇತ್ರ: ಕೊಡಿಮರ, ಬಿಂಬಮರ ಸಮರ್ಪಣೆ


Team Udayavani, Dec 10, 2018, 11:22 AM IST

gejje.jpg

ಪುತ್ತೂರು: ತುಳುನಾಡಿನ ಅವಳಿ ವೀರ ಪುರುಷರಾದ ಕೋಟಿ – ಚೆನ್ನಯರು ಹಾಗೂ ತಾಯಿ ದೇಯಿ ಬೈದ್ಯೆತಿಯ ಮೂಲಸ್ಥಾನ ಬಡಗನ್ನೂರು ಗ್ರಾಮದ ಗೆಜ್ಜೆಗಿರಿ ನಂದನ ಬಿತ್ತಿಲ್‌ ಕ್ಷೇತ್ರದ ಪುನರುತ್ಥಾನ ಹಿನ್ನೆಲೆಯಲ್ಲಿ ಕೊಡಿಮರ – ಬಿಂಬಮರವನ್ನು ರವಿವಾರ ಮೆರವಣಿಗೆಯಲ್ಲಿ ತಂದು ಸಮರ್ಪಿಸಲಾಯಿತು.

ಉಬರಡ್ಕದಿಂದ ತರಲಾದ ಬಿಂಬ ಮರಕ್ಕೆ ಶನಿವಾರ ಸುಳ್ಯದಲ್ಲಿ ಸ್ವಾಗತ ಕೋರಲಾಗಿತ್ತು. ಕೊಳ್ತಿಗೆ ಗ್ರಾಮದಿಂದ ಕೊಡಿಮರವನ್ನು ತಂದು ರವಿವಾರ ಬೆಳಗ್ಗೆ ಅಮಿನಡ್ಕದಿಂದ ಎರಡೂ ಮರಗಳ ಮೆರವಣಿಗೆ ನಡೆಯಿತು. ಕೌಡಿಚ್ಚಾರಿನಲ್ಲಿ ಸಿಂಗಾರಿ ಮೇಳ, ಪೂರ್ಣಕುಂಭ ಸ್ವಾಗತ ಕೋರಿ ಪಟ್ಟೆ ಮಾರ್ಗವಾಗಿ ಗೆಜ್ಜೆಗಿರಿ ಕ್ಷೇತ್ರಕ್ಕೆ ತರಲಾಯಿತು.

ಮೆರವಣಿಗೆಗೆ ಚಾಲನೆ
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಎನ್‌. ಸುಧಾಕರ ಶೆಟ್ಟಿ ತೆಂಗಿನಕಾಯಿ ಒಡೆಯುವ ಮೂಲಕ ಕೌಡಿಚ್ಚಾರಿನಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ, ಪುಡಾ ಅಧ್ಯಕ್ಷ ಪ್ರಸಾದ್‌ ಕೌಶಲ್‌ ಶೆಟ್ಟಿ, ಗೆಜ್ಜೆಗಿರಿ ನಂದನ ಬಿತ್ತಿಲ್‌ನ ಯಜಮಾನ ಶ್ರೀಧರ ಪೂಜಾರಿ, ಪ್ರಮುಖರಾದ ರಾಜಶೇಖರ ಕೋಟ್ಯಾನ್‌, ಅರಿಯಡ್ಕ ಗ್ರಾ.ಪಂ. ಅಧ್ಯಕ್ಷೆ ಸವಿತಾ ಎಸ್‌., ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮಹಮ್ಮದ್‌ ಬಡಗನ್ನೂರು, ಪಡುಮಲೆ ಕೂವೆಶಾಸ್ತಾರ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಕೆ.ಪಿ. ಸಂಜೀವ ರೈ, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಸಾಯಿರಾಮ್‌, ಕೋಶಾಧಿಕಾರಿ ಪದ್ಮರಾಜ್‌ ಕರ್ಕೇರ, ಮೋಹನದಾಸ್‌ ಕಾವೂರು, ಪೀತಾಂಬರ ಹೇರಾಜೆ, ಸಂಜೀವ ಪೂಜಾರಿ, ಶೈಲೇಂದ್ರ ಪೂಜಾರಿ, ಚಂದ್ರಶೇಖರ, ರವಿ ಪೂಜಾರಿ, ಚಂದ್ರಹಾಸ ಉಚ್ಚಿಲ, ಎಂಜಿನಿಯರ್‌ ಸಂತೋಷ್‌, ಉದಯ ಭಟ್‌, ನವೀನ್‌ ಸುವರ್ಣ, ದೀಪಕ್‌ ಕೋಟ್ಯಾನ್‌, ಉಲ್ಲಾಸ ಕೋಟ್ಯಾನ್‌, ದೇವೇಂದ್ರ ಪೂಜಾರಿ, ನವೀನ ಸುವರ್ಣ ಸಹಿತ ನೂರಾರು ಮಂದಿ ಉಪಸ್ಥಿತರಿದ್ದರು. ಗೆಜ್ಜೆಗಿರಿ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಜಯಂತ ನಡುಬೈಲು ಸ್ವಾಗತಿಸಿ, ಸುಧಾಕರ ಸುವರ್ಣ ತಿಂಗಳಾಡಿ ಪ್ರಸ್ತಾವನೆಗೈದರು. ಶಶಿಧರ ಕಿನ್ನಿಮಜಲು ನಿರ್ವಹಿಸಿದರು.

ಕೊಡಿಮರ, ಬಿಂಬಮರ
ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದ್ಯೆತಿ ಹಾಗೂ ಕೋಟಿ – ಚೆನ್ನಯರ ಮೂರ್ತಿಯನ್ನು ಒಂದೇ ಮರದಲ್ಲಿ ನಿರ್ಮಿಸಲಾಗುತ್ತದೆ. ಬಿಂಬ ಮರವನ್ನು ಸುಳ್ಯದ ಉಬರಡ್ಕ ಗ್ರಾಮದ ನೈಯೋಣಿಯ ಶಶಿಧರ ಭಟ್‌ ಅವರ ಜಾಗದಿಂದ, ಕೊಡಿಮರವನ್ನು ಕೊಳ್ತಿಗೆ ಗ್ರಾಮದ ಚಿಮುಲಗುಂಡಿ ಓರ್ಕೊಡು ಸುದರ್ಶನ ಅವರ ಜಾಗದಿಂದ ತರಲಾಗಿದೆ. ಇವು ಕೋಟಿ-ಚೆನ್ನಯರ ಐತಿಹಾಸಿಕ ಹಿನ್ನೆಲೆಯಲ್ಲಿ ಬರುವ ಜಾಗಗಳಾಗಿವೆ.

ಟಾಪ್ ನ್ಯೂಸ್

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

ಸಿಡಿದ ಅಸಲಂಕ; ಘರ್ಜಿಸಿದ ಶ್ರೀಲಂಕಾ

Untitled-1

ಕನ್ನಡದಲ್ಲೇ ಸಹಿ ಮಾಡುವ ಅಭ್ಯಾಸ ಬೆಳೆಸಿ ಕೊಳ್ಳೋಣ: ಸಚಿವ ಸುನಿಲ್‌ ಕುಮಾರ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

8dharmasthala

ಡಾ. ವೀರೇಂದ್ರ ಹೆಗ್ಗಡೆಯವರ 54ನೇ ಪಟ್ಟಾಭಿಷೇಕ ವರ್ಧಂತ್ಯುತ್ಸವ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದೇಗುಲ ಹಣ ಹಿಂದೂ ಸಮಾಜೋದ್ಧಾರಕ್ಕಿರಲಿ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ದಿಡುಪೆ-ಸಂಸೆ ರಸ್ತೆ: ಮುಕ್ತಾಯ ಹಂತದಲ್ಲಿ ಸರ್ವೇ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಮುರದಮೇಲುವಿನಲ್ಲಿ ಇಂದು ಲೋಕಾರ್ಪಣೆ

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

ಪುತ್ತೂರು ಎಪಿಎಂಸಿ ರಸ್ತೆ: ಅಂಡರ್‌ಪಾಸ್‌ ನಿರ್ಮಾಣ ಶೀಘ್ರ ಅಂತಿಮ ಮುದ್ರೆ: ನಳಿನ್‌

MUST WATCH

udayavani youtube

ದಾಂಡೇಲಿ ನಗರದಲ್ಲಿ ಸಕ್ರೀಯಗೊಳ್ಳುತ್ತಿದೆ ಪೆಟ್ರೋಲ್ ಕಳ್ಳರ ಹಾವಳಿ

udayavani youtube

ಕಾಳಿ ನದಿ ದಂಡೆಯಿಂದ ಬಾಲಕನನ್ನು ಎಳೆದೊಯ್ದ ಮೊಸಳೆ : ಆತಂಕದಲ್ಲಿ ಸ್ಥಳೀಯರು

udayavani youtube

ರಸ್ತೆ ಬದಿ ಮಲಗಿದ್ದ ಗೋವು ಕಳ್ಳತನ : ಘಟನೆ ಕೃತ್ಯ ಸಿಸಿ ಕ್ಯಾಮೆರಾದಲ್ಲಿ ಬಯಲು

udayavani youtube

ಶಾರುಖ್ ಖಾನ್ ಬಿಜೆಪಿ ಸೇರಿದರೆ ಡ್ರಗ್ಸ್ ಪೌಡರ್ ಶುಗರ್ ಪೌಡರ್ ಆಗಿ ಬದಲಾಗಲಿದೆ

udayavani youtube

ಕುಮ್ಕಿ ಹಕ್ಕು ಅಂದ್ರೇನು?

ಹೊಸ ಸೇರ್ಪಡೆ

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಕಿತ್ತೂರಿನಲ್ಲಿ ಮೋಡಿ ಮಾಡಿದ ವಿಜಯಪ್ರಕಾಶ ಹಾಡು

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಪಾಕ್‌ ಪ್ರಚಂಡ ಪ್ರದರ್ಶನ; ಭಾರತ ಪರಾಭವ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಅ.29-ನ.2ರ ವರೆಗೆ ಪ್ರಧಾನಿ ವಿದೇಶ ಪ್ರವಾಸ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಬಿಜೆಪಿ-ಜೆಡಿಎಸ್‌ಗೆ ನಾನೇ ಟಾರ್ಗೆಟ್‌: ಸಿದ್ದರಾಮಯ್ಯ

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

ಸಾಕು ನಾಯಿಗೆ ಸಸ್ಯಹಾರಿ ಊಟ ಕೊಟ್ಟರೆ ಜೈಲು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.