ನಾರಾವಿಯಲ್ಲಿ  ಜರ್ಮನ್‌ ಮಾದರಿ ಬಸ್‌ ನಿಲ್ದಾಣ

Team Udayavani, Jan 22, 2018, 11:15 AM IST

22-19.jpg

ಬೆಳ್ತಂಗಡಿ: ತಾಲೂಕಿನ ನಾರಾವಿಯಲ್ಲಿ  ಜರ್ಮನ್‌ ಮಾದರಿಯ ಸರ್ವಸೌಲಭ್ಯಗಳುಳ್ಳ ಬಸ್‌ ನಿಲ್ದಾಣ ರವಿವಾರ ಲೋಕಾರ್ಪಣೆಯಾಗಿದ್ದು, ಇಂತಹ ಅತ್ಯಾಧುನಿಕ ಬಸ್‌ನಿಲ್ದಾಣ ಪ್ರಾಯಃ ರಾಜ್ಯದಲ್ಲಿಯೇ ಮೊತ್ತ ಮೊದಲನೆಯದು. ನಾರಾವಿಯ ರಾಮೆರೆಗುತ್ತು ಕುಟುಂಬದ ನಿರಂಜನ ಅಜ್ರಿ ಅವರು ತನ್ನ ತಂದೆ ಎನ್‌. ಮಂಜಪ್ಪ ಅತಿಕಾರಿ ಹಾಗೂ ತಾಯಿ ಬಿ. ಮಿತ್ರಾವತಿ ಅವರ ನೆನಪಿನಲ್ಲಿ 12 ಲಕ್ಷ  ರೂ. ವೆಚ್ಚದಲ್ಲಿ ಈ ತಂಗುದಾಣವನ್ನು ನಿರ್ಮಿಸಿದ್ದಾರೆ. 

ವಿದೇಶಗಳಲ್ಲಿ ಕಾಣಸಿಗುವ ಬಸ್‌ ನಿಲ್ದಾಣಗಳಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವುದು ಇದರ ವೈಶಿಷ್ಟ é. ಸಾಮಾನ್ಯವಾಗಿ ಬಸ್‌ ತಂಗುದಾಣ ಎಂದರೆ ಕಸದ ರಾಶಿ, ಕೊಳೆತ ವಾಸನೆ, ಗಲೀಜು, ಅಲ್ಲಲ್ಲಿ ಅಂಟಿಸಿ ಹರಿದ ಭಿತ್ತಿಪತ್ರಗಳು, ಭಗ್ನ ವಿರಹಿಗಳ ಪ್ರೇಮವಾಕ್ಯದ ಸಾಲುಗಳು ಎಂದು ಅಂದುಕೊಂಡವರನ್ನು ನಾಚಿಸುವಂತಹ ತಂಗುದಾಣ ಇದು.

ಏನೆಲ್ಲ  ಇವೆ ಇಲ್ಲಿ ?
ಕುಡಿಯಲು ಶುದ್ಧ ತಂಪು ಹಾಗೂ ಬಿಸಿ ನೀರು, ಸಿಸಿಟಿವಿ ವ್ಯವಸ್ಥೆ, ಸೋಲಾರ್‌ ಬೆಳಕು, ರಾಜ್ಯದ ಮ್ಯಾಪ್‌, ಈ ದಾರಿಯಲ್ಲಿ ಹಾದು ಹೋಗುವ ಬಸ್‌ಗಳ ವೇಳಾಪಟ್ಟಿ, ದಣಿವಾರಿಸಿಕೊಳ್ಳಲು ಫ್ಯಾನ್‌, ಸುದ್ದಿ ಮಾಹಿತಿ ಹಾಗೂ ಪದ್ಯಗಳನ್ನು ಆಲಿಸಲು ಎಫ್‌ಎಂ ರೇಡಿಯೋ, ನೋಟಿಸ್‌ ಬೋರ್ಡ್‌, ಸಮಯ ತಿಳಿದುಕೊಳ್ಳಲು ಗಡಿಯಾರ, ಎಲ್‌ಇಡಿ ಬೋರ್ಡ್‌, ಕಸದ ಬುಟ್ಟಿ ಇಲ್ಲಿವೆ.

ವಿಶಿಷ್ಟ  ವಿನ್ಯಾಸ
ದೂರದಿಂದ ನೋಡುವಾಗ ಬಡಗು ತಿಟ್ಟು ಯಕ್ಷಗಾನದ ಕೇದಗೆ ಮುಂದಲೆಯನ್ನು ಹೋಲುವ ನಿಲ್ದಾಣ ಅಶ್ವತ್ಥ ಎಲೆ ಆಕಾರದ ಛಾವಣಿಯನ್ನು ಹೊಂದಿದೆ. ಛಾವಣಿಗೆ ವಿದೇಶದಿಂದ ತರಿಸಲಾದ ದೀರ್ಘ‌ ಬಾಳಿಕೆಯ ಶೀಟ್‌ ಅಳವಡಿಸಲಾಗಿದೆ. ಅದರ ಕೆಳಗೆ ಸಿಮೆಂಟ್‌ ಶೀಟ್‌, ಅದಕ್ಕೂ ಕೆಳಗೆ ಫೈಬರ್‌ ಶೀಟ್‌ ಅಳವಡಿಸಲಾಗಿದೆ. 5,000 ಚದರ ಅಡಿಗೆ ಇಂಟರ್‌ಲಾಕ್‌ ಹಾಕಲಾಗಿದೆ. 15×15 ಅಳತೆಯ ಈ ತಂಗುದಾಣದ ಪಕ್ಕದಲ್ಲಿ ಮನ ಹಸಿರಾಗಿಸಲು ಪುಟ್ಟ ಉದ್ಯಾನವನವೂ ಇದೆ. ಇಡೀ ತಂಗುದಾಣ ಎರಡೇ ಕಂಬ ಗಳ ಆಧಾರದಲ್ಲಿ ರಚನೆಯಾಗಿದೆ.

ಪ್ರೇರಣೆ
ಇಷ್ಟೊಂದು ವೆಚ್ಚದಲ್ಲಿ ಸಾರ್ವಜನಿಕ ಉಪಯೋಗಕ್ಕೆ ಈ ಪುಟ್ಟ ಊರಿನಲ್ಲಿ ದೊಡ್ಡ ಮಾದರಿಯ ಬಸ್‌ ನಿಲ್ದಾಣ ರಚನೆಗೆ ಕಾರಣವೇನೆಂದು ನಿರಂಜನ ಅಜ್ರಿ ಅವರನ್ನು “ಉದಯವಾಣಿ’ ಕೇಳಿದಾಗ, ತಮ್ಮ ಪುತ್ರಿ ಪ್ರತೀಕ್ಷಾ, ಅಳಿಯ  ಸಮ್ಮೇದ್‌ ಜರ್ಮನಿ ಯಲ್ಲಿ ದ್ದಾರೆ. ಅವರ ಮನೆಗೆ ಹಾಗೂ ಇನ್ನೂ ಐದಾರು ದೇಶಗಳನ್ನು ಸುತ್ತಾಡಲು ಹೋದಾಗ ಅಲ್ಲಿನ ಸಕಲ ಸೌಲಭ್ಯಗಳಿರುವ ಬಸ್‌ತಂಗುದಾಣ ಕಂಡು ಆಕರ್ಷಿತನಾದೆ. ನಮ್ಮ ಊರಿನಲ್ಲೂ ನನ್ನ ತಂದೆ ತಾಯಿಯ ಹೆಸರಿನಲ್ಲಿ ಇಂತಹ ಶಾಶ್ವತ ನಿರ್ಮಾಣ ಆಗಬೇಕು ಎಂದು ನಿಶ್ಚಯಿಸಿ ಪಂಚಾಯತ್‌ ಅನುಮತಿ ಕೇಳಿದೆ. ನಾರಾವಿ ಚರ್ಚ್‌ಗೆ ಹೋಗುವ ದಾರಿಯಲ್ಲಿ ಒಂದು ಬದಿ ಮಾತ್ರ ತಂಗುದಾಣ ಇದ್ದು, ಮತ್ತೂಂದು ಬದಿ ಶಾಲೆಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆ ಯಾಗುತ್ತಿತ್ತು. ಆದ್ದರಿಂದ ಇದೇ ಜಾಗ ಸೂಕ್ತವೆಂದು ತೀರ್ಮಾ ನಿಸಿದೆವು. ಪಕ್ಕದಲ್ಲಿಯೇ ನನ್ನ ಸಹೋ ದರನ ಅಂಗಡಿ ಇರುವ ಕಾರಣ ನಿರ್ವಹಣೆ ಸುಲಭವಾಗಲಿದೆ. ನಮ್ಮ ಮನೆಯ ಬಾವಿಯಿಂದ ನೀರು ಒದ ಗಿಸು ತ್ತಿದ್ದೇವೆ. ಈಗಲೇ ದಿನಕ್ಕೆ 1,000 ಲೀ. ನೀರು ಖರ್ಚಾಗುತ್ತಿದೆ. ಎಸ್‌ಕೆಎಫ್‌ನವರ ಕುಡಿಯುವ ನೀರಿನ ಫಿಲ್ಟರ್‌ ಅಳವಡಿಸಿದ ಕಾರಣ ಮಕ್ಕಳು, ಪ್ರಯಾಣಿಕರು ಬಾಟಲಿಯಲ್ಲಿ ತುಂಬಿಸಿ ಕೊಂಡೊಯ್ಯುತ್ತಿದ್ದಾರೆ. ತಂದೆ ತಾಯಿಯ ಫೋಟೋವನ್ನು ಗ್ರಾನೈಟ್‌ನಲ್ಲಿ ಹಾಕಿದ್ದು, ಇತರ ಮಾಹಿತಿ ಫಲಕ, ನಕಾಶೆಯನ್ನು ಹಾಳು ಮಾಡದಂತೆ ಗಾಜಿನ ಫ್ರೇಮ್‌ ಅಳವಡಿಸಲಾಗಿದೆ ಎಂದರು.

ನಗರಗಳ ಬೃಹತ್‌ ಬಸ್‌ ನಿಲ್ದಾಣಗಳಲ್ಲಿ ಇಂತಹ ಸರ್ವ ಸೌಲಭ್ಯಗಳು ಇರುತ್ತವಾದರೂ ಸಣ್ಣ ಊರಿನಲ್ಲಿ ಇಂತಹ ಸೌಲಭ್ಯಗಳಿರುವ ಅತ್ಯಾಧುನಿಕ ಬಸ್‌ ತಂಗುದಾಣ ಬಹುಶಃ ರಾಜ್ಯದಲ್ಲಿ ಬೇರೆಡೆ ಇಲ್ಲ. ರವಿವಾರ ನಡೆದ ಉದ್ಘಾಟನ ಕಾರ್ಯ ಕ್ರಮದಲ್ಲಿ ಮೂಡಬಿದಿರೆ ಶಾಸಕ ಕೆ. ಅಭಯಚಂದ್ರ ಜೈನ್‌, ಕೆನರಾ ಬಸ್‌ ಮಾಲಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್‌ ಮೊದ ಲಾದವ ರಿದ್ದರು. 25 ವರ್ಷಗಳಿಂದ ಈ ಮಾರ್ಗ ದಲ್ಲಿ ಸೇವೆ ಸಲ್ಲಿಸುತ್ತಿರುವ ಮೂವರು ಚಾಲಕರನ್ನು ಸಮ್ಮಾನಿಸಲಾಯಿತು.

ಟಾಪ್ ನ್ಯೂಸ್

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

Olympic Games Paris 2024; ಬೆಳಗಿತು ಪ್ಯಾರಿಸ್‌ ಒಲಿಂಪಿಕ್‌ ಜ್ಯೋತಿ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

UPSC Exam: 30ಕ್ಕಿಂತ ಅಧಿಕ ಕನ್ನಡಿಗರ ಆಯ್ಕೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

ಶ್ರೀ ಕ್ಷೇತ್ರ ಗೆಜ್ಜೆಗಿರಿ ಮೇಳದಿಂದ ವಿದೇಶದಲ್ಲಿ ಯಕ್ಷಗಾನ ಪ್ರದರ್ಶನ

banPuttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Puttur ಚುನಾವಣೆ ಕರ್ತವ್ಯ ನಿರತ ಅಂಗನವಾಡಿ ಕಾರ್ಯಕರ್ತೆಗೆ ಹಲ್ಲೆ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Bantwal: ಮನೆಯಲ್ಲೇ ಮತ ಚಲಾಯಿಸಿದ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

Election Campaign 25 ವರ್ಷಗಳ ಹಿಂದೆ; ಆಗ ದುಡ್ಡಿನ ಆಸೆ ಇರಲಿಲ್ಲ…! 

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

ವಿಟ್ಲ:ಅಡ್ಯನಡ್ಕ ಸಮೀಪ ಗುಡ್ಡಕ್ಕೆ ಬೆಂಕಿ

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನಾರಾಯಣ್‌,ಬಟ್ಲರ್‌ ಶತಕ ಮೇಲಾಟ; ರನ್‌ ಚೇಸ್‌ನಲ್ಲಿ ರಾಜಸ್ಥಾನ್‌ ರಾಯಲ್ಸ್‌ಗೆ ಬೃಹತ್‌ ಗೆಲುವು

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

ನ್ಯಾಯಾಲಯದಲ್ಲೇ ಕುಸಿದು ಬಿದ್ದ ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗ ಮೈಕಲ್‌ ಸ್ಲೇಟರ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

FIDE Candidates 2024; ಜಂಟಿ ಅಗ್ರಸ್ಥಾನದಲ್ಲೇ ಉಳಿದ ಗುಕೇಶ್‌

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

ಹೃದಯ ಗೆದ್ದ ದಿನೇಶ್‌ ಕಾರ್ತಿಕ್‌; ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ?

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

IPL ಬ್ರೇಕ್‌ ಪಡೆದ ಗ್ಲೆನ್‌ ಮ್ಯಾಕ್ಸ್‌ವೆಲ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.