60 ವರ್ಷ ದಾಟಿದ ಅಡುಗೆ ಸಿಬಂದಿ ಮನೆಗೆ! ದಕ್ಷಿಣ ಕನ್ನಡ, ಉಡುಪಿಯ 254 ಮಂದಿಯ ಕೆಲಸ ಖೋತಾ

Team Udayavani, May 12, 2022, 6:50 AM IST

60 ವರ್ಷ ದಾಟಿದ ಅಡುಗೆ ಸಿಬಂದಿ ಮನೆಗೆ! ದಕ್ಷಿಣ ಕನ್ನಡ, ಉಡುಪಿಯ 254 ಮಂದಿಯ ಕೆಲಸ ಖೋತಾ

ಸಾಂದರ್ಭಿಕ ಚಿತ್ರ

ಬಂಟ್ವಾಳ: ಸರಕಾರಿ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿ ಸಿಬಂದಿಗೆ 60 ವರ್ಷ ತುಂಬಿದ್ದರೆ ಕೆಲಸದಿಂದ ಬಿಡುಗಡೆಗೊಳಿಸುವಂತೆ (ರಿಲೀವ್‌) ಸರಕಾರ ಆದೇಶಿಸಿದ್ದು, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳ 254 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ.

ಅಕ್ಷರ ದಾಸೋಹ ಯೋಜನೆ ಸಿಬಂದಿಗೆ ಮಾಸಿಕ ಸಂಭಾವನೆ ಹೆಸರಿನಲ್ಲಿ ವೇತನ ನೀಡಲಾಗುತ್ತಿದೆ. ನಿವೃತ್ತಿಯ ಮಾನದಂಡ ಅಥವಾ ಆದೇಶ ಇರದ ಕಾರಣ 60 ದಾಟಿದ ಮಹಿಳೆಯರೂ ಕೆಲಸದಲ್ಲಿ ಮುಂದುವರಿದಿದ್ದರು. ಆದರೆ ಇದೀಗ ಶಿಕ್ಷಣ ಇಲಾಖೆಯ ಆಯುಕ್ತರ ಆದೇಶದಂತೆ 60 ದಾಟಿದವರು ಅನಿವಾರ್ಯವಾಗಿ ಮನೆಗೆ ಹೋಗಬೇಕಾಗಿದೆ. ಈ ವರೆಗೆ ಇರದಿದ್ದ ಆದೇಶವನ್ನು ಏಕಾಏಕಿ ಜಾರಿ ಮಾಡಿರುವುದು ಸಿಬಂದಿಯ ಆಕ್ರೋಶ ಮತ್ತು ಅಸಹಾಯಕತೆಗೆ ಕಾರಣವಾಗಿದೆ.

ಬರಿಗೈಯಲ್ಲಿ ಮನೆಗೆ
ಸರಕಾರ ಅಡುಗೆ ಸಿಬಂದಿಗೆ ಮಾಸಿಕ ಸಂಭಾವನೆ ಮಾತ್ರ ನೀಡುತ್ತಿದ್ದು, ಅದನ್ನೇ ಒಂದಷ್ಟು ಹೆಚ್ಚು ಮಾಡುತ್ತಿತ್ತು. ಭವಿಷ್ಯ ನಿಧಿಯಂತಹ ಇತರ ಯಾವುದೇ ಸೌಲಭ್ಯಗಳಿಲ್ಲ. ಆದ್ದರಿಂದ ಪ್ರಸ್ತುತ ಕೆಲಸ ಕಳೆದುಕೊಳ್ಳುವ ಸಿಬಂದಿ ಬರಿಗೈಯಲ್ಲೇ ಮನೆಗೆ ಹೋಗಬೇಕಾದ ಸ್ಥಿತಿ ಇದೆ. ಕಾರ್ಮಿಕ ಸಂಘಟನೆಗಳು ಸರಕಾರದ ನಿರ್ಧಾರವನ್ನು ಖಂಡಿಸುತ್ತಿದ್ದು, ಕೆಲಸದಿಂದ ಬಿಡುಗಡೆಗೊಳಿಸುವಾಗ ಒಂದಷ್ಟು ಗೌರವ ಮೊತ್ತವನ್ನು ನೀಡಬೇಕು. ಜತೆಗೆ ಅಕ್ಷರ ದಾಸೋಹ ಸಿಬಂದಿಯನ್ನು ಖಾಯಂಗೊಳಿಸಬೇಕು ಎಂಬ ಆಗ್ರಹದ ಜತೆಗೆ ಮನವಿಯನ್ನೂ ನೀಡುತ್ತಿವೆ.

ದ.ಕ.  178, ಉಡುಪಿ 76 ಮಂದಿ ಸಂತ್ರಸ್ತರು
ಸರಕಾರಿ, ಅನುದಾನಿತ ಶಾಲೆಗಳು ಸೇರಿ ದ.ಕ. ಜಿಲ್ಲೆಯಲ್ಲಿ 3,213 ಮಂದಿ ಅಡುಗೆ ಸಿಬಂದಿ ಇದ್ದು, ಆದೇಶದ ಪ್ರಕಾರ 178 ಮಂದಿ ಮನೆಗೆ ತೆರಳಬೇಕಿದೆ. ಉಡುಪಿ ಜಿಲ್ಲೆಯ ಒಟ್ಟು 1,866 ಮಂದಿಯಲ್ಲಿ 76 ಮಂದಿ ಕೆಲಸ ಕಳೆದುಕೊಳ್ಳಲಿದ್ದಾರೆ. ಸರಕಾರದ ಆದೇಶದ ಪ್ರಕಾರ ಕಳೆದ ಮಾರ್ಚ್‌ 31ಕ್ಕೆ 60 ವರ್ಷ ತುಂಬಿದವರನ್ನು ಬಿಡುಗಡೆಗೊಳಿಸಬೇಕಿದೆ.
ಮಂಗಳೂರು 48 ಬಂಟ್ವಾಳ 50
ಬೆಳ್ತಂಗಡಿ 37 ಪುತ್ತೂರು 30
ಸುಳ್ಯ 13 ಕಾರ್ಕಳ 56
ಉಡುಪಿ 12 ಕುಂದಾಪುರ 8

ಹಿಂದೆ 60 ದಾಟಿದವರನ್ನು ರಿಲೀವ್‌ ಮಾಡಲಾಗಿದೆಯೇ ಎಂಬ ಮಾಹಿತಿ ಇಲ್ಲ. ಕಳೆದ 2 ವರ್ಷಗಳಲ್ಲಿ ಮಾಡಿರಲಿಲ್ಲ. ಕಳೆದ ಮಾರ್ಚ್‌ 31ಕ್ಕೆ 60 ವರ್ಷ ದಾಟಿದವರನ್ನು ರಿಲೀವ್‌ ಮಾಡುವಂತೆ ಆದೇಶ ಬಂದಿದ್ದು, ಮುಂದೆ ಯಾವಾಗ ಸಿಬಂದಿ 60 ವರ್ಷ ಆಗುತ್ತದೆಯೋ ಆಗ ರಿಲೀವ್‌ ಮಾಡುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇಲಾಖೆಯ ಆಯುಕ್ತರ ಆದೇಶದಂತೆ ಕ್ರಮ ಕೈಗೊಳ್ಳುತ್ತಿದ್ದೇವೆ.
– ಉಷಾ / ವಿವೇಕ್‌ ಗಾಂವ್ಕರ್‌ ಶಿಕ್ಷಣಾಧಿಕಾರಿ (ಅಕ್ಷರ ದಾಸೋಹ), ದ.ಕ./ಉಡುಪಿ ಜಿಲ್ಲೆ

– ಕಿರಣ್‌ ಸರಪಾಡಿ

ಟಾಪ್ ನ್ಯೂಸ್

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

ಅನಂತಸ್ವಾಮಿ ಧಾಟಿಯಲ್ಲೇ ನಾಡಗೀತೆ; ರಾಜ್ಯ ಸರಕಾರದ ಆದೇಶ ಎತ್ತಿಹಿಡಿದ ಹೈಕೋರ್ಟ್‌

ಕೈಗೆ ಪಿತ್ರೋಡಾರ್ಜಿತ ಸಂಕಟ! ಬಿಜೆಪಿಗೆ ಸಿಕ್ಕಿದ ಹೊಸ ಅಸ್ತ್ರ ; ಕಂಗೆಟ್ಟ ಕಾಂಗ್ರೆಸ್‌

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

Lok Sabha Election 2024; ನಿಮ್ಮ ಮತವನ್ನು ಮಾರಿಕೊಳ್ಳಬೇಡಿ: ಗಣ್ಯರ ಮನವಿ

1-24-thursday

Daily Horoscope: ಉದ್ಯೋಗದಲ್ಲಿ ಮೇಲಧಿಕಾರಿಗಳಿಗೆ ತೃಪ್ತಿ, ಅಪೇಕ್ಷಿತ ಆರ್ಥಿಕ ನೆರವು ಲಭ್ಯ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Modi ಹಸಿ ಸುಳ್ಳು: ಸಿಎಂ ಸಿದ್ದರಾಮಯ್ಯ ಕೆಂಡ; ಒಬಿಸಿ, ಎಸ್‌ಸಿ ಮೀಸಲಾತಿ ಹೇಳಿಕೆಗೆ ವಿರೋಧ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

Uppinangady ಬಸ್ಸಿನಲ್ಲಿ ಲೈಂಗಿಕ ಕಿರುಕುಳ: ಪ್ರತಿರೋಧಿಸಿದ ವಿದ್ಯಾರ್ಥಿನಿಯ ನಡೆಗೆ ಶ್ಲಾಘನೆ

ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Lok Sabha Election; ಹಂತ 1: 14 ಕ್ಷೇತ್ರಗಳ ಬಹಿರಂಗ ಪ್ರಚಾರ ಅಂತ್ಯ: ನಾಳೆ ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.