
ದಾಖಲೆ ಪೂರ್ಣವಾಗಿದ್ದರೆ ತತ್‌ಕ್ಷಣ ತೀರ್ಮಾನ : ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ
ಹಿರ್ಗಾನ, ಅತಿಕಾರು ಬೆಟ್ಟು ಗ್ರಾಮ
Team Udayavani, Aug 21, 2022, 9:13 AM IST

ಮೂಲ್ಕಿ : ಸರಕಾರವು ಅಧಿಕಾರಿಗಳ ಹಳ್ಳಿಯ ಕಡೆಗೆ ನಡಿಗೆ ಆರಂಭಿಸಿರುವುದು ನಮಗೂ ಆಸಕ್ತಿ ತಂದಿದೆ ಮಾತ್ರವಲ್ಲ ಜನರ ಜತೆಗೆ ಬೆರೆತು ಅವರ ಸಮಸ್ಯೆಗಳನ್ನು ಅರಿತು ಶಾಶ್ವತ ಪರಿಹಾರವನ್ನು ಕೊಡುವ ಉದ್ದೇಶದಿಂದ ನಿಮ್ಮ ಮನೆ ಬಾಗಿಲಿಗೆ ಬಂದು ನಿಂತಿದ್ದೇನೆ ಎಂದು ದ.ಕ. ಜಿಲ್ಲಾಧಿಕಾರಿ ಡಾ| ರಾಜೇಂದ್ರ ಕೆ.ವಿ. ಅವರು ಹೇಳಿದರು.
ಮೂಲ್ಕಿ ತಾಲೂಕಿನ ಅತಿಕಾರಿ ಬೆಟ್ಟು ಗ್ರಾ. ಪಂ. ಸಭಾಂಗಣದಲ್ಲಿ ಜಿಲ್ಲಾಧಿಕಾರಿಗಳ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಜನರು ಸಮಸ್ಯೆಗಳ ಬಗ್ಗೆ ಎಲ್ಲ ದಾಖಲೆ ಗಳನ್ನು ಒದಗಿಸಿದರೆ ಸ್ಥಳದಲ್ಲಿಯೇ ವಿಲೇವಾರಿ ಮಾಡುವುದು ಸಾಧ್ಯ ವಾಗುತ್ತದೆ ಎಂದರು.
ಒಟ್ಟು 48 ಅರ್ಜಿ ಸ್ವೀಕಾರ ಆಗಿದೆ 15 ದಾಖಲೆ ವಿಲೇವಾರಿ ಆಗಿದೆ.33 ಪೂರ್ಣ ಪ್ರಮಾಣದ ತನಿಖೆ ದಾಖಲೆಗಾಗಿ ಬಾಕಿಯಾಗಿದೆ.
ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಜನರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಸಿಗುವಲ್ಲಿ ನಿತ್ಯವೂ ಪ್ರಯತ್ನಿಸುವೆ. ಈಗ ಜಿಲ್ಲಾಧಿಕಾರಿಗಳು ನಿಮ್ಮ ಬಳಿಗೆ ಬರುವ ಅವಕಾಶ ಸರಕಾರ ಮಾಡಿಕೊಟ್ಟಿದೆ ನಿಮ್ಮ ಸಮಸ್ಯೆಗಳನ್ನು ಅವರಿಗೆ ವಿವರಿಸಿ ಸೂಕ್ತ ಪರಿಹಾರ ಪಡೆಯಲು ಇದು ಸೂಕ್ತ ಕಾಲ ಎಂದರು.
ಜಿ. ಪಂ. ಸಿಇಒ ಡಾ| ಕುಮಾರ್, ಮಂಗಳೂರು ಸಹಾಯಕ ಆಯುಕ್ತ ಮದನ್ ಕುಮಾರ್, ಮೂಲ್ಕಿ ತಾ. ಪಂ. ಇಒ ದಯಾವತಿ, ಪಂ. ಉಪಾಧ್ಯಕ್ಷೆ ಶಶಿಕಲಾ, ಎಡಿಎಲ್‌ಆರ್ ನಿರಂಜನ್, ಮೂಲ್ಕಿ ತಹಶೀಲ್ದಾರ್ ಗುರುಪ್ರಸಾದ್, ಭೂ ದಾಖಲೆಗಳ ಉಪನಿರ್ದೇಶಕ ಕೃಷ್ಣ ಮೂರ್ತಿ ಉಪಸ್ಥಿತರಿದ್ದರು. ಪಂಚಾಯತ್ ಪಿಡಿಒ ಪ್ರಕಾಶ್ ಸ್ವಾಗತಿಸಿದರು. ಅಶ್ವಿನಿ ನಿರೂಪಿಸಿದರು.
ಅಹವಾಲು ಸ್ವೀಕರಿಸಿದ ಜಿಲ್ಲಾಧಿಕಾರಿ
ಅಜೆಕಾರು : ಹಿರ್ಗಾನ ಗ್ರಾಮದಲ್ಲಿ ಶನಿವಾರ ನಡೆದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಭಾಗವಹಿಸಿ ನಾಗರಿಕರಿಂದ ಅಹವಾಲು ಸ್ವೀಕರಿಸಿದರು.
ಸಭೆಯಲ್ಲಿ ಕಂದಾಯ ಇಲಾಖೆಗೆ ಸಂಬಂಧ ಪಟ್ಟ 8, ಪಂಚಾಯತ್‌ರಾಜ್ ಇಲಾಖೆಗೆ 6, ಭೂಮಾಪನ 1, ಮೆಸ್ಕಾಂ 1, ಅರಣ್ಯ, ಕೃಷಿ 1, ಐಟಿಡಿಪಿ 2 ಸೇರಿದಂತೆ 20 ಮನವಿ ನಾಗರಿಕರಿಂದ ಸಲ್ಲಿಕೆಯಾದವು. ಜಿಲ್ಲಾಧಿಕಾರಿ ಯವರು ಗ್ರಾಮದ ರಾಜೀವ ನಗರ ಶ್ಮಶಾನ ಹಾಗೂ ಚಿಕ್ಕಲ್‌ಬೆಟ್ಟು ಪಡ್ಡಾಯಿಗುಡ್ಡೆ ಪ.ಜಾತಿ, ಪ.ಪಂಗಡದ ಕಾಲನಿಗೆ ಭೇಟಿ ನೀಡಿ ದರು. ಹಲವು ವರ್ಷಗಳ ಹಿಂದೆ ಹಕ್ಕುಪತ್ರ ಹೊಂದಿರುವವರಿಗೆ ತ್ವರಿತವಾಗಿ ಪಹಣಿ ಪತ್ರ ನೀಡಲು ಕ್ರಮ ವಹಿಸುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.
ಹಿರ್ಗಾನ ಗ್ರಾ. ಪಂ. ಅಧ್ಯಕ್ಷ ಸಂತೋಷ್ ಶೆಟ್ಟಿ, ಜಿ. ಪಂ. ಸಿಇಒ ಪ್ರಸನ್ನ ಎಚ್., ಸಹಾಯಕ ಆಯುಕ್ತ ರಾಜು, ತಾ. ಪಂ. ಇಒ ಗುರುದತ್, ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್ ವಿವಿಧ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.
ಟಾಪ್ ನ್ಯೂಸ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಜಿ.ಶಂಕರ್ ಮಣಿಪಾಲ ಆರೋಗ್ಯ ಸುರಕ್ಷಾ ಕಾರ್ಡ್: ಫೆ.10ರ ತನಕ ನೋಂದಣಿ ಅವಧಿ ವಿಸ್ತರಣೆ

ಶಿರ್ವ ಆರೋಗ್ಯ ಮಾತಾ ದೇವಾಲಯ :ವಾರ್ಷಿಕ ಮಹೋತ್ಸವಕ್ಕೆ ಚಾಲನೆ

ಉಡುಪಿ: ನಾಗಬನದಲ್ಲಿ ಶ್ರೀಗಂಧ ಮರ ಕಳವು… ಆರೋಪಿ ಬಂಧನ, ಸೊತ್ತು ವಶ

ಕಾರ್ಕಳ: ಗೇರು ಬೀಜ ಫ್ಯಾಕ್ಟರಿಯಲ್ಲಿ ಲಾರಿ ಚಾಲಕನ ಕೊಲೆ

ಉಡುಪಿ ಸಂತೆಕಟ್ಟೆ: ವಿದ್ಯಾರ್ಥಿಗಳಿದ್ದ ಕಾರಿಗೆ ಲಾರಿ ಢಿಕ್ಕಿ; ಲಾರಿ ಸಹಿತ ಚಾಲಕ ಪರಾರಿ
MUST WATCH

ಕಾಫಿನಾಡಲ್ಲಿ ಮುಂದುವರಿದ ಮತದಾನ ಬಹಿಷ್ಕಾರದ ಕೂಗು

ಅನುದಾನ ನೀಡಿ ವರ್ಷವಾದರೂ ಆರಂಭವಾಗದ ಕಾಮಗಾರಿ ; ಗ್ರಾಮಸ್ಥರಿಂದ ಚುನಾವಣಾ ಬಹಿಷ್ಕಾರದ ಎಚ್ಚರಿಕೆ

ಮರಳಿನಲ್ಲಿ ಅರಳಿತು ತುಳುನಾಡ ನಾಗಾರಾಧನೆ | Malpe Beach Uthsava 2023 | Udupi – Udayavani

Beach Utsavaದಲ್ಲಿ ತರ ತರಹದ ಸ್ಪರ್ಧೆ, ಚಟುವಟಿಕೆಗಳು !ರಘುಪತಿ ಭಟ್ಟರು ಹೇಳಿದ್ದೇನು ?
