ಗುರುಪುರ: ನೆರೆ ತಡೆಯಲು ಮೋರಿ ಅಳವಡಿಕೆ
ವರದರಾಜ ವೆಂಕಟರಮಣ ದೇವಸ್ಥಾನ ರಸ್ತೆ
Team Udayavani, Jun 7, 2019, 6:00 AM IST
ಗುರುಪುರ: ಕಳೆದ ವರ್ಷದ ಸುರಿದ ಮಳೆಗೆ ಗುರುಪುರ ಸಂಪೂರ್ಣವಾಗಿ ಮುಳುಗಿ ಹೋಗಿದ್ದ ಹಿನ್ನೆಲೆಯಲ್ಲಿ ಈ ಬಾರಿ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ವರದರಾಜ ವೆಂಕಟರಮಣ ದೇವಸ್ಥಾನದ ಸಮೀಪದ ರಸ್ತೆಗೆ ಮೋರಿ ಅಳವಡಿಸಲಾಗಿದೆ. ಆದರೆ ಇಕ್ಕೆಲಗಳಲ್ಲಿ ಸೂಕ್ತ ಚರಂಡಿ ನಿರ್ಮಿಸದಿದ್ದರೆ ಮಳೆಗಾಲದಲ್ಲಿ ಸಮಸ್ಯೆ ಉಂಟಾ ಗುವ ಸಾಧ್ಯತೆಯಿದೆ.
ಕಳೆದ ಬಾರಿ ಮಳೆಗೆ ಗುರುಪುರದ ಹೆದ್ದಾರಿಯಲ್ಲೇ ನೀರು ಹರಿದು ಪ್ರವಾಹ ಸ್ಥಿತಿ ಉಂಟಾಗಿ ಸಂಚಾರ ದುಸ್ತರವಾಗಿತ್ತು. ಅಲ್ಲದೆ ಡಾಮರು ಕಿತ್ತುಹೋಗಿ, ರಸ್ತೆಯ ಮಧ್ಯೆ ಅಳವಡಿಸಿದ್ದ ಮೋರಿ ಮಣ್ಣಿನಿಂದ ಭರ್ತಿಗೊಂಡು ನೀರು ಸರಾಗವಾಗಿ ಹರಿದಾಡಲು ಸಾಧ್ಯವಾಗದೇ ನೆರೆ ಸ್ಥಿತಿ ಉಂಟಾಗಿತ್ತು.
ಈ ಮಳೆಗಾಲದಲ್ಲಿ ಈ ಪರಿಸ್ಥಿತಿ ಅರಿತ ಹೆದ್ದಾರಿ ಇಲಾಖೆ ಮೋರಿ ಅಳವಡಿಸಲು ಮುಂದಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಕಳೆದ ಶನಿವಾರ ಮಧ್ಯರಾತ್ರಿ ವಾಹನ ಸಂಚಾರವನ್ನು ಪೊಲೀಸರು ನಿರ್ಬಂಧಿಸಿ, ಬಂಗ್ಲಗುಡ್ಡೆ ಮುಖಾಂತರ ಸಂಚಾರಕ್ಕೆ ಅವಕಾಶ ಕಲ್ಪಿಸಿದ್ದರು.
ಹಳೆಯ ಮೋರಿಯನ್ನು ತೆಗೆದು ಸುಮಾರು 6 ಅಡಿಯಷ್ಟು ಗುಂಡಿ ತೋಡಿ ಹೊಸತಾಗಿ ಮೋರಿ ಅಳವಡಿಸಲಾಗಿದೆ. ಆದರೆ ಮೋರಿ ಅಳವಡಿಸಿದ ಭಾಗದಲ್ಲಿ ಉಬ್ಬು ಉಂಟಾಗಿದೆ.
ಹಲವು ಕಾಮಗಾರಿ ಬಾಕಿ ಇದೆ. ಮುಖ್ಯವಾಗಿ ರಸ್ತೆ ಬದಿಯಲ್ಲಿ ಚರಂಡಿ ನಿರ್ಮಿಸಿ, ರಸ್ತೆಗೆ ಅಗೆದ ಸ್ಥಳವನ್ನು ಸಮತಟ್ಟುಗೊಳಿಸಿ ಡಾಮರು ಹಾಕಬೇಕಾಗಿದೆ. ಆದರೆ ಮಳೆ ಇನ್ನೇನು ಆರಂಭ ವಾಗುತ್ತದೆ ಎನ್ನುವ ಸ್ಥಿತಿಯಿದ್ದು, ಕಾಮಗಾರಿ ವಿಳಂಬವಾಗಬಾರದು ಎಂದು ಸಾರ್ವಜನಿಕರು ವಿನಂತಿಸಿದ್ದಾರೆ.
ಮುಂಜಾಗ್ರತೆ ವಹಿಸಲಾಗುವುದು
ಮಳೆ ಬಂದರೆ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವ ಹಿನ್ನಲೆಯಲ್ಲಿ ಮೋರಿಯನ್ನು ಸರಿಪಡಿಸಲು ಮನವಿ ಬಂದಿದ್ದು, ಹಾಗಾಗಿ ನೂತನವಾಗಿ ಮೋರಿ ಅಳವಡಿಸಿದೆ. ನೀರು ಸರಾಗವಾಗಿ ಹರಿದುಹೋಗಲು ಚರಂಡಿಯ ಹೂಳೆತ್ತುವ ಕೆಲಸ ನಡೆಸಲಾಗುತ್ತಿದೆ. ಮುಂದೆ ಯಾವುದೇ ಸಮಸ್ಯೆ ಉಂಟಾಗದಂತೆ ಮುಂಜಾಗ್ರತೆ ವಹಿಸಲಾಗುವುದು.
– ಮುರುಗೇಶ್,
ಅಸಿಸ್ಟೆಂಟ್ ಎಂಜಿನಿಯರ್,ರಾ.ಹೆ.ಇ.
ಸಂಚಾರ ಸಮಸ್ಯೆ ನಿವಾರಣೆ
ಗುರುಪುರ ವರದರಾಜ ವೆಂಕಟರಮಣ ದೇವಸ್ಥಾನದ ಸಮೀಪ ರಸ್ತೆಯಲ್ಲಿ ಅಳವಡಿಸಿದ್ದ ಮೋರಿ ಮಣ್ಣಿನಿಂದ ಭರ್ತಿಯಾಗಿದ್ದರಿಂದ ನೀರು ಅದರೊಳಗಡೆ ಹೋಗುವ ಬದಲು ರಸ್ತೆಯ ಮೇಲೆಯೇ ಹರಿದು ದೇವಸ್ಥಾನ ಅಂಗಡಿ ಮಂಗಟ್ಟುಗಳಿಗೆ ಹೋಗುತ್ತಿತ್ತು.ಈ ಹಿನ್ನೆಲೆಯಲ್ಲಿ ಹೆದ್ದಾರಿ ಇಲಾಖೆಗೆ ಮನವಿ ಮಾಡಿದ್ದು,ಅದರಂತೆ ಇಲ್ಲಿ ಕೆಲಸ ಕಾರ್ಯ ನಡೆಯುತ್ತಿದೆ. ಆದ್ದರಿಂದ ಈ ಬಾರಿ ಸಮಸ್ಯೆ ಉಂಟಾಗಲು ಸಾಧ್ಯವಿಲ್ಲ.
– ಪಾಂಡುರಂಗ,
ಅಧ್ಯಕ್ಷರು ಗುರುಪುರ ಗ್ರಾ.ಪಂ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಗುದನಾಳದಲ್ಲಿಟ್ಟು ಚಿನ್ನ ಕಳ್ಳಸಾಗಾಣಿಕೆ : ಮಂಗಳೂರು ಕಸ್ಟಮ್ಸ್ ಅಧಿಕಾರಿಗಳ ವಶಕ್ಕೆ
ಅತಿಕ್ರಮಣ ವಿರುದ್ಧ ಕಟ್ಟು ನಿಟ್ಟಿನ ಕ್ರಮ; ಅಧಿಕಾರಿಗಳಿಗೆ ಡಾ| ಕೆ.ವಿ. ರಾಜೇಂದ್ರ ಸೂಚನೆ
ತರಗತಿ, ಲೈಬ್ರೆರಿಗೆ ಹಿಜಾಬ್ ನಿಷಿದ್ಧ; ಮಂಗಳೂರು ವಿ.ವಿ. ಕಾಲೇಜಿನ ಸಮಿತಿಯಿಂದ ನಿರ್ಧಾರ
ಜೂ. 1: ಮೂಡುಬಿದಿರೆಗೆ ಮುಖ್ಯಮಂತ್ರಿ ಬೊಮ್ಮಾಯಿ; ವಿದ್ಯಾರ್ಥಿಗಳ ಜತೆಗೆ ಸಂವಾದ
5 ಬಸ್ ತಂಗುದಾಣಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ