ಹಳೆಯಂಗಡಿ: ತ್ಯಾಜ್ಯ ಮುಕ್ತಿಗೆ ಸಾರ್ವಜನಿಕರ ಆಗ್ರಹ
Team Udayavani, Feb 19, 2021, 10:36 PM IST
ಹಳೆಯಂಗಡಿ: ಇಲ್ಲಿನ ಪಕ್ಷಿಕೆರೆ ರಸ್ತೆಯಲ್ಲಿನ ಇಂದಿರಾನಗರದ ರೈಲ್ವೇ ಗೇಟ್‌ನ ಬಳಿಯಲ್ಲಿ ತ್ಯಾಜ್ಯ ಸಂಗ್ರಹಗೊಂಡಿದ್ದು ಇದನ್ನು ಕೂಡಲೇ ತೆರವುಗೊಳಿಸಬೇಕೆಂದು ಸಾರ್ವಜನಿಕರು ಅಗ್ರಹಿಸಿದ್ದಾರೆ.
ಹಳೆಯಂಗಡಿ ಗ್ರಾ.ಪಂ.ನ ಇದೇ ಸ್ಥಳದಲ್ಲಿ ನಾಗರಿಕರಿಗೆ ಎಚ್ಚರಿಕೆಯ ಹಾಗೂ ನೀತಿ ಬೋಧಕ ಫಲಕವನ್ನು ಅಳವಡಿಸಿದ್ದರೂ ಸಹ ಅಸಭ್ಯತೆಯ ವರ್ತನೆಯು ಅನಾವರಣಗೊಂಡಿದೆ ಎಂದು ಪಂಚಾಯತ್ ಹೇಳಿಕೊಂಡಿದೆ. ಹಸಿ ಕಸ- ಒಣ ಕಸದ ಬಗ್ಗೆ ಸ್ಥಳೀಯ ಅಂಗನವಾಡಿ ಕೇಂದ್ರಗಳಿಗೆ ನೀಡಬಹುದು ಎಂದು ಸೂಚನೆಯನ್ನು ನೀಡಿದ್ದರು. ಸಹ ಇಲ್ಲಿನ ತ್ಯಾಜ್ಯ ಹಾಕುವ ಸಂಪ್ರದಾಯ ಮುಂದುವರಿದಿರುವುದು ಸಹ ಪಂಚಾಯತ್‌ನ ನಿದ್ದೆ ಗೆಡಿಸಿದೆ.
ಸ್ಥಳೀಯವಾಗಿ ದಿನಕ್ಕೆ ನೂರಾರು ವಾಹನಗಳು ಸಂಚರಿಸುವ ಈ ರಸ್ತೆಯಲ್ಲಿ ಹೊರಗಿನ ಗ್ರಾಮ ಸ್ಥರೊಂದಿಗೆ ಹತ್ತಿರದವರು ಸಹ ವಾಹನಗಳಿಂದ ನೇರವಾಗಿ ತ್ಯಾಜ್ಯ ಬಿಸಾಡುವುದನ್ನು ಬಿಡಬೇಕು ಇಲ್ಲದಿದ್ದಲ್ಲಿ ಕಾನೂನು ಕ್ರಮವನ್ನು ಕೈಗೊಳ್ಳುವ ಎಚ್ಚರಿಕೆ ಯನ್ನು ಪಂಚಾ ಯತ್ ನೀಡಿದೆ. ದುರ್ವಾ ಸನೆ ಬೀರು ತ್ತಿರುವುದರಿಂದ ತ್ಯಾಜ್ಯವನ್ನು ಕೂಡಲೇ ವಿಲೇವಾರಿ ಮಾಡಬೇಕು ಹಾಗೂ ತ್ಯಾಜ್ಯ ಬಿಸಾಡುವವವರ ವಿರುದ್ಧ ಕಠಿನ ಕ್ರಮವನ್ನು ಕೈಗೊಳ್ಳಬೇಕು ಎಂದು ಸ್ಥಳೀಯರು ಗ್ರಾ. ಪಂ.ನ್ನು ಆಗ್ರಹಿಸಿದ್ದಾರೆ.