ಹೃದಯಾಘಾತ: ಅಂಗಡಿಯಲ್ಲೇ ಕುಸಿದು ಸಾವು

Team Udayavani, Oct 17, 2019, 8:10 PM IST

ವೇಣೂರು: ಗೂಡಂಗಡಿ ಮಾಲಿಕ ಹೃದಯಾಘಾತದಿಂದ ಅಂಗಡಿಯಲ್ಲೇ ಕುಸಿದು ಬಿದ್ದು ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ನಾರಾವಿಯಲ್ಲಿ ಗುರುವಾರ ಸಂಭವಿಸಿದೆ.

ನಾರಾವಿ ಸಮೀಪದ ನಿವಾಸಿ ಯಲ್ಲಪ್ಪ ಪೂಜಾರಿ ಮೃತಪಟ್ಟವರು. ನಾರಾವಿ ಪೇಟೆಯಲ್ಲಿ ತರಕಾರಿ ಅಂಗಡಿ ನಡೆಸುತ್ತಿದ್ದ ಇವರು ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಗುರುವಾರ ಸಂಜೆ ವೇಳೆಯಲ್ಲಿ ಅಂಗಡಿಯಲ್ಲೇ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಕುಸಿದುಬಿದ್ದು ಮೃತಪಟ್ಟಿದ್ದಾರೆ. ಈ ಸಮಯಲ್ಲೇ ಸಿಡಿಲಿನ ಅಬ್ಬರ ಜೋರಾಗಿತ್ತು. ಅಂಗಡಿಗೆ ಸಿಡಿಲು ಬಡಿದು ವ್ಯಕ್ತಿ ಸಾವು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ