ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ


Team Udayavani, Oct 17, 2021, 6:40 AM IST

ಕರಾವಳಿಯಲ್ಲಿ ಭಾರೀ ಮಳೆ; ಸಂಚಾರಕ್ಕೆ ತೊಂದರೆ

ಮಂಗಳೂರು/ಉಡುಪಿ:ಕರಾವಳಿಯಾದ್ಯಂತ ಶನಿವಾರ ಅಪರಾಹ್ನ ಮತ್ತು ಸಂಜೆ ವೇಳೆಗೆ ಉತ್ತಮ ಮಳೆಯಾಗಿದೆ. ಮಂಗಳೂರು ನಗರದಲ್ಲಿ ರಾತ್ರಿ ವೇಳೆಗೆ ಭಾರೀ ಮಳೆ ಸುರಿದಿದ್ದು, ವಿವಿಧ ಕಡೆಗಳಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಯಿತು.

ಸುಳ್ಯ, ಪುತ್ತೂರು ವಿಟ್ಲದ ವಿವಿಧ ಭಾಗಗಳಲ್ಲಿ ಭಾರೀ ಮಳೆ ಸುರಿದಿದೆ. ಬಂಟ್ವಾಳ, ಬೆಳ್ತಂಗಡಿ, ಮಂಗಳೂರು ತಾಲೂಕುಗಳಲ್ಲಿ ಹಗಲು ಹೊತ್ತು ಮೋಡ ಕವಿದ ವಾತಾವರಣ ಇತ್ತು. ಉಡುಪಿ ಜಿಲ್ಲೆಯಲ್ಲಿ ಹಗಲಿನಲ್ಲಿ ಬಿಸಿಲಿದ್ದರೂ ಸಂಜೆಯಾಗುತ್ತಿದ್ದಂತೆ ಉಡುಪಿ, ಮಣಿಪಾಲ, ಕಾಪು, ಶಿರ್ವ, ಕಟಪಾಡಿ, ಕಲ್ಯಾಣಪುರ ಸಂತೆಕಟ್ಟೆ ಸೇರಿದಂತೆ ವಿವಿಧೆಡೆ ಭಾರೀ ಮಳೆ ಬಂದಿದೆ. ನಗರದ ರಸ್ತೆಗಳಲ್ಲಿಯೂ ಭಾರೀ ಪ್ರಮಾಣ ದಲ್ಲಿ ನೀರು ಹರಿಯಿತು. ವಾರಾಂತ್ಯ ಮತ್ತು ಭಾರೀ ಮಳೆಯ ಕಾರಣ ಉಡುಪಿಯ ಕಲ್ಸಂಕ, ಕರಾವಳಿ ಜಂಕ್ಷನ್‌ ಮೊದಲಾದೆಡೆ ವಾಹನಗಳ ದಟ್ಟಣೆ ಹೆಚ್ಚಿಗೆ ಕಂಡುಬಂದು ಟ್ರಾಫಿಕ್‌ ಜಾಮ್‌ ಆಯಿತು. ಕಾರ್ಕಳ ಮತ್ತು ಕುಂದಾಪುರ ತಾಲೂಕಿನಲ್ಲಿ ಲಘು ಪ್ರಮಾಣದಲ್ಲಿ ಮಳೆಯಾಯಿತು.

ಬಂಟ್ವಾಳ, ಧರ್ಮಸ್ಥಳ: ಹೆದ್ದಾರಿಯಲ್ಲಿ ನೀರು ಬಂಟ್ವಾಳ ತಾ| ಕೇಂದ್ರ ಬಿ.ಸಿ. ರೋಡು ಸೇರಿದಂತೆ ತಾಲೂಕಿನ ಹಲವೆಡೆ ಶನಿವಾರ ರಾತ್ರಿ ಸಿಡಿಲು ಸಹಿತ ಉತ್ತಮ ಮಳೆಯಾಗಿದ್ದು, ಕೈಕಂಬದಿಂದ ಫರಂಗಿಪೇಟೆ ವರೆಗೆ ಹೆದ್ದಾರಿಯಲ್ಲಿ ಮಳೆ ನೀರು ನಿಂತು ಸುಗಮ ವಾಹನ ಅಡಚಣೆಯಾ ಯಿತು. ಧರ್ಮಸ್ಥಳ ಸ್ನಾನ ಘಟ್ಟ ದಿಂದ ಮುಂದೆ ಸಾಗುವಾಗ ಮಣ್ಣ ಪಳ್ಳದ ಕಿರು ಸೇತುವೆಯ ಮೇಲೆ ನೀರು ಹರಿದ ಕಾರಣ ಒಂದೂವರೆ ತಾಸಿಗೂ ಅಧಿಕ ಸಮಯ ರಸ್ತೆ ಸಂಚಾರಕ್ಕೆ ತಡೆಯಾಯಿತು.

ಅಂಗಡಿಗಳಿಗೆ ನೀರು
ರಾತ್ರಿ ವೇಳೆ ದಿಢೀರ್‌ ಮಳೆ ಬಂದ ಕಾರಣ ನಗರದ ತಗ್ಗು ಪ್ರದೇಶಗಳ ರಸ್ತೆಗಳಲ್ಲಿ ನೀರು ತುಂಬಿ ವಾಹನ ಸಂಚಾರಕ್ಕೆ ತಡೆಯುಂಟಾಯಿತು. ಕೊಟ್ಟಾರ, ಫೋರ್ತ್‌ಮೈಲ್‌ ಪ್ರದೇಶ ಗಳಲ್ಲಿ ಚ‌ರಂಡಿಯಲ್ಲಿ ನೀರು ತುಂಬಿ ಅಂಗಡಿಗಳಿಗೆ ನುಗ್ಗಿದೆ.

ಇದನ್ನೂ ಓದಿ:ಜೆಡಿಎಸ್ ಪಕ್ಷದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಸ್ಥಾನದ ಅಭ್ಯರ್ಥಿಯೆಂದು ಘೋಷಣೆ ಮಾಡಲಿ

ಪಡೀಲ್‌ ಅಂಡರ್‌ಪಾಸ್‌ನಲ್ಲಿ ನೀರು ತುಂಬಿದ್ದು, ವಾಹನಗಳು ನಿಧಾನವಾಗಿ ಚಲಿಸುತ್ತಿವೆ. ಕೊಡಿಯಾಲಬೈಲ್‌ ಅಕ್ಕಪಕ್ಕದ ಕೆಲವು ಭಾಗಗಳಲ್ಲಿ ಚರಂಡಿ ತುಂಬಿ ರಸ್ತೆಯಲ್ಲಿ ನೀರು ಹರಿದಿದೆ. ತಡರಾತ್ರಿ ವರೆಗೂ ಮಳೆ ಮುಂದುವರಿದಿತ್ತು.

ಮತ್ತಷ್ಟು ಮಳೆ ಸಂಭವ
ಅರಬಿ ಸಮುದ್ರದಲ್ಲಿ ನಿಮ್ನ ಒತ್ತಡ ಸೃಷ್ಟಿಯಾದ ಹಿನ್ನೆಲೆಯಲ್ಲಿ ಕರಾವಳಿ ಸಹಿತ ರಾಜ್ಯದ ವಿವಿಧೆಡೆ ರವಿವಾರವೂ ಗುಡುಗು ಸಹಿತ ಮಳೆ ಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

3 ವಿಮಾನ ಇಳಿಯದೆ ವಾಪಸ್‌ ಬೆಂಗಳೂರಿಗೆ
ಮಂಗಳೂರಿಗೆ ಶನಿವಾರ ಸಂಜೆ 7 ಗಂಟೆಯಿಂದ ರಾತ್ರಿ 9ರ ನಡುವೆ ಚೆನ್ನೈ, ಹೈದರಾಬಾದ್‌ ಮತ್ತು ಬೆಂಗಳೂರಿನಿಂದ ಆಗಮಿಸಿದ 3 ವಿಮಾನಗಳು ಮಳೆ ಕಾರಣ ಇಳಿಯಲಾಗದೆ ಬೆಂಗಳೂರಿಗೆ ವಾಪಸಾಗಿವೆ.

ಪರಿಸ್ಥಿತಿ ಯಥಾ ಸ್ಥಿತಿಗೆ ಮರಳಿದರೆ ತಡರಾತ್ರಿ ಈ ವಿಮಾನಗಳು ಮಂಗಳೂರಿಗೆ ಹಿಂದಿರುಗುವ ಸಾಧ್ಯತೆ ಇದೆ. ಇಲ್ಲದಿದ್ದರೆ ರವಿವಾರ ಬರಲಿವೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.

ಶಾರದೆ ವಿಸರ್ಜನೆಗೂ ಸಮಸ್ಯೆ
ಮಂಗಳೂರು ರಥಬೀದಿಯ ಸಾರ್ವಜನಿಕ ಶ್ರೀ ಶಾರದಾ ಮಹೋತ್ಸವ ಸಮಿತಿಯ ಆಶ್ರಯದಲ್ಲಿ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ವಸಂತ ಮಂಟಪದಲ್ಲಿ 99ನೇ ವರ್ಷದ ಶಾರದ ಮಹೋತ್ಸವದಲ್ಲಿ ಪೂಜಿಸಿದ ಶಾರದಾ ಮಾತೆಯ ವಿಸರ್ಜನಾ ಮೆರವಣಿಗೆ ಶನಿವಾರ ರಾತ್ರಿ ಜರಗಿತು. ಭಾರೀ ಮಳೆಯಿಂದಾಗಿ ಮೆರವಣಿಗೆ ವಿಳಂಬವಾಗಿ ಸಾಗಿತು.

ಟಾಪ್ ನ್ಯೂಸ್

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಭಾರತಕ್ಕೆ ಬಂದವು ಅತ್ಯಾಧುನಿಕ ಹೆರಾನ್‌ ಡ್ರೋನ್‌ಗಳು

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

ಒಮಿಕ್ರಾನ್‌: ಭಾರತೀಯರು ಸುರಕ್ಷಿತ

bommai

ಬೂಸ್ಟರ್ ಡೋಸ್ ಕುರಿತು ಕೇಂದ್ರ ಸಚಿವರೊಂದಿಗೆ ಚರ್ಚೆ ನಡೆಸುತ್ತೇವೆ: ಸಿಎಂ ಬೊಮ್ಮಾಯಿ

ಕ್ರೆಡಿಟ್ ಕಾರ್ಡ್ ನಿಂದ ಬೆಂಕಿಪೊಟ್ಟಣ ದರದವರೆಗೆ..: ಇಂದಿನಿಂದ ಏನೇನು ಬದಲಾವಣೆ?

ಕ್ರೆಡಿಟ್ ಕಾರ್ಡ್ ನಿಂದ ಬೆಂಕಿಪೊಟ್ಟಣ ದರದವರೆಗೆ..: ಇಂದಿನಿಂದ ಏನೇನು ಬದಲಾವಣೆ?ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ದ.ಕ.: 4 ವರ್ಷಗಳಲ್ಲಿ 133 ಮಂದಿ ನಾಪತ್ತೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಪ್ರಥಮ ಪ್ರಾಶಸ್ತ್ಯ ಮತಕ್ಕಷ್ಟೆ ತಂತ್ರ; ಬಿಜೆಪಿ, ಕಾಂಗ್ರೆಸ್‌ನಿಂದ ತಂತ್ರಗಾರಿಕೆ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಸೋಂಕಿತರ ಪತ್ತೆಗೆ ಎಚ್ಚರಿಕೆ ಕ್ರಮ: ಜಿಲ್ಲಾಧಿಕಾರಿ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ಕೋವಿಡ್‌ ನೆಗೆಟಿವ್‌ ವರದಿ ಇಲ್ಲದಿದ್ದರೆ ಸ್ಥಳದಲ್ಲೇ ಪರೀಕ್ಷೆ: ದ.ಕ. ಡಿಎಚ್‌ಒ

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

ವಿದ್ಯಾರ್ಥಿನಿ ಮೇಲೆ ಅತ್ಯಾಚಾರ: 7 ವರ್ಷ ಜೈಲು

MUST WATCH

udayavani youtube

ಹೊಂಡ ಗುಂಡಿಯ ರಸ್ತೆಗೆ ಸಾರ್ವಜನಿಕರಿಂದ ಪೂಜೆ !

udayavani youtube

ಕಾಪು ಪರಿಸರದಲ್ಲಿ ಗಾಳಿ, ಗುಡುಗು, ಮಿಂಚು ಸಹಿತ ಭಾರೀ ಮಳೆ

udayavani youtube

ದನಗಳ್ಳರನ್ನು ಹಿಡಿಯಲು ಹೋದವರ ಮೇಲೆ ವಾಹನ ಚಲಾಯಿಸಿ ಹಲ್ಲೆ: ಇಬ್ಬರಿಗೆ ಗಂಭೀರ ಗಾಯ

udayavani youtube

ಸುಟ್ಟಗಾಯ ಸಂರ್ಪೂಣ ನಿವಾರಣೆ ಆಗಲು ಈ ನಾಟಿ ವೈದ್ಯರ ಬಳಿ ಇದೆ ಔಷಧಿ.

udayavani youtube

ಕಸ್ತೂರಿರಂಗನ್ ಸಮೀಕ್ಷೆ ಅವೈಜ್ಞಾನಿಕ !?

ಹೊಸ ಸೇರ್ಪಡೆ

high court

ಸಿಡಿ ತನಿಖಾ ವರದಿ ಅನುಮೋದಿಸಿದ ಎಸ್‌ಐಟಿ

Anil kumble spoke about reason behind not to retain KL Rahul

ನಾವು ರಾಹುಲ್ ರನ್ನು ಉಳಿಸಿಕೊಳ್ಳಲು ಬಯಸಿದ್ದೆವು, ಆದರೆ..: ಕೋಚ್ ಅನಿಲ್ ಕುಂಬ್ಳೆ

fight

ತಹಶೀಲ್ದಾರ್ ಕಚೇರಿ ಆವರಣದಲ್ಲಿ ಎರಡು ತಂಡಗಳ ನಡುವೆ ಹೊಡೆದಾಟ

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ಟ್ವಿಟರ್‌ ಸಂಸ್ಥೆಯ ಸಿಇಒ ಪರಾಗ್‌ಗೆ ಕೋಟಿ ಲೆಕ್ಕದ ಪಗಾರ!

ದೆಹಲಿ ಬೈಕ್‌ ಮಾಲೀಕರಿಗೆ “ಸೆಕ್ಸ್‌’ ಸಮಸ್ಯೆ

ದೆಹಲಿ ಬೈಕ್ ಮಾಲೀಕರಿಗೆ ಶುರುವಾದ “ಸೆಕ್ಸ್” ಸಮಸ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.