ಇಡ್ಯಾಡಿಯಲ್ಲಿ ಭಾರೀ ಗಾಳಿ: ವ್ಯಾಪಕ ಕೃಷಿ ಹಾನಿ

Team Udayavani, Sep 9, 2019, 5:50 AM IST

ಸವಣೂರು : ಕಡಬ ತಾಲೂಕಿನ ಸವಣೂರು ಗ್ರಾಮದ ಇಡ್ಯಾಡಿ ಭಾಗದಲ್ಲಿ ರವಿವಾರ ಮಧ್ಯಾಹ್ನದ ವೇಳೆಗೆ ಬೀಸಿದ ಭಾರೀ ಗಾಳಿಯಿಂದಾಗಿ ಇಲ್ಲಿನ ಅಶ್ವಿ‌ನಿ ಫಾರ್ಮ್ನಲ್ಲಿ ಅಪಾರ ಪ್ರಮಾಣದ ಅಡಿಕೆ ಹಾಗೂ ತೆಂಗಿನ ಗಿಡಗಳು ನಾಶವಾಗಿವೆ.

ರಾಜಾರಾಮ ಪ್ರಭು ಅವರ ಒಡೆತನದ ಕುಮಾಧಾರಾ ನದಿ ತಟದಲ್ಲಿರುವ ಅಶ್ವಿ‌ನಿ ಫಾರ್ಮ್ ಭಾಗದಲ್ಲಿ ಹಠಾತ್ತನೆ ಗಾಳಿ ಬೀಸಿದ್ದು, ಫಲಭರಿತ ನೂರಾರು ಅಡಿಕೆ ಗಿಡಗಳು ಧರೆಗೆ ಉರುಳಿವೆ. ಗಾಳಿ ಆರ್ಭಟಕ್ಕೆ ಏಳು ತೆಂಗಿನ ಮರಗಳು ಮುರಿದು ಬಿದ್ದಿವೆ. ಇತರ ಗಿಡ-ಮರಗಳೂ ಮುರಿದಿದ್ದು ಗಾಳಿಯ ತೀವ್ರತೆಯನ್ನು ಸಾರಿ ಹೇಳುತ್ತಿತ್ತು. ಅಕ್ಕಪಕ್ಕದ ತೋಟಗಳಲ್ಲಿ ಗಾಳಿಯ ಹಾವಳಿ ಇಲ್ಲದಿರುವುದು ಸ್ಥಳೀಯರನ್ನು ಆಶ್ಚರ್ಯಚಕಿತರನ್ನಾಗಿಸಿದೆ. ಎಂಟು ವರ್ಷಗಳ ಹಿಂದೆಯೂ ಈ ರೀತಿ ಗಾಳಿ ಬೀಸಿ, 400 ಅಡಿಕೆ ಗಿಡಗಳು ನಾಶವಾಗಿದ್ದವು ಎಂದು ರಾಜಾರಾಮ ಪ್ರಭು ನೆನಪಿಸಿಕೊಂಡಿದ್ದಾರೆ.ರವಿವಾರ ಬೀಸಿದ ಗಾಳಿಯಿಂದಾಗಿ ಲಕ್ಷಾಂತಾರ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ