ಇವರು  ಛಾವಣಿ ನೀರನ್ನಷ್ಟೆ ಅಲ್ಲ ; ರಸ್ತೆಯ ನೀರನ್ನೂ ಇಂಗಿಸುತ್ತಾರೆ !


Team Udayavani, Apr 26, 2017, 6:13 PM IST

26-PUT-4.jpg

ಎಕ್ಕಾರು: ಜಲ ಸಂರಕ್ಷಣೆಯಲ್ಲಿ ಎಲ್ಲರದ್ದೂ ಒಂದೇ ವಿಧಾನವಿದೆ ಎಂದೇನೂ ಇಲ್ಲ. ಒಬ್ಬೊಬ್ಬರದ್ದು ಒಂದೊಂದು ವಿಧಾನ. ಆದರೆ ಗುರಿ ಮಾತ್ರ ಒಂದೇ. ಅದು ಜಲ ಸಂರಕ್ಷಣೆ. ಎಕ್ಕಾರು ಗ್ರಾಮ ಪಂಚಾಯತ್‌ ವ್ಯಾಪ್ತಿಯ  ತೆಂಕ ಎಕ್ಕಾರಿನ ಕ್ಲೇರೆನ್ಸ್‌ ಡಿ’ ಕುನ್ಹಾ  ಬರೀ ತಮ್ಮ ಆರ್‌ ಸಿಸಿ ಮನೆ ಛಾವಣಿಯ ನೀರನ್ನಷ್ಟೇ ಇಂಗಿಸು ವುದಿಲ್ಲ. ರಸ್ತೆ ಯಲ್ಲಿ ಹರಿ ಯುವ ನೀರನ್ನೂ ತಮ್ಮ ಮನೆಯ ಬಾವಿ ಸಮೀಪ ಹೊಂಡ ತೆಗೆದು ಇಂಗಿಸುತ್ತಾರೆ. ಇದರಿಂದ ಅವರಂತೂ ಬೇಸಗೆಯಲ್ಲಿ ತಲೆ ಬಿಸಿ ಮಾಡಿಕೊಳ್ಳುವುದಿಲ್ಲ.

ಮನೆಯ ಛಾವಣಿಯ ನೀರನ್ನೇ ರಸ್ತೆಯಲ್ಲಿ ಅಥವಾ ಚರಂಡಿಗೆ ಬಿಟ್ಟು ತಣ್ಣಗೆ ಕುಳಿತು ಟಿವಿ ನೋಡುತ್ತಾ ಕಾಲ ಕಳೆಯುವ ಪರಿಸ್ಥಿತಿ ಇಂದಿನದು. ಅಂಥದ್ದರಲ್ಲಿ ಕೃಷಿಕ ಕ್ಲೇರೆನ್ಸ್‌  ಡಿ’ಕುನ್ಹಾ ಅವರು ಆರ್‌ಸಿಸಿ ಛಾವಣಿಯಲ್ಲಿ ಸಂಗ್ರಹವಾಗುವ ಮಳೆನೀರನ್ನು ಪೈಪಿನ ಮೂಲಕ ಒಂದೆಡೆ ಬೀಳುವಂತೆ ಮಾಡುತ್ತಾರೆ. ಅದನ್ನು ಇಂಗು ಗುಂಡಿಗೆ ಹರಿಸಿ ಇಂಗಿಸು ತ್ತಾರೆ. ಜತೆಗೆ ಮನೆ ಎದುರಿನ ರಸ್ತೆಯಲ್ಲಿ ಬಿದ್ದು ಸಾಗುವ ನೀರನ್ನೂ ಆ ಹೊಂಡಕ್ಕೆ ಹರಿಸಿ ಇಂಗಿಸುತ್ತಾರೆ.ಅದಕ್ಕಾಗಿ ಒಂದು ಸಣ್ಣ ತೋಡನ್ನು ನಿರ್ಮಿಸಿದ್ದು, ಅದರ ಮೂಲಕ ನೀರು ಹೊಂಡಕ್ಕೆ ಬೀಳುತ್ತದೆ. 1999ರಲ್ಲಿ ಅವರು  25 ಅಡಿಯಷ್ಟು ಆಳದ ಬಾವಿಯನ್ನು ತೋಡಿದ್ದರು. 2002ರಲ್ಲಿ ಮನೆ ಕಟ್ಟಿದರು. ನೀರು ಸಾಕಾಗದು ಎನಿಸತೊಡಗಿತು. ಮತ್ತೆ 10 ಅಡಿ ಆಳ ತೋಡಿದರು. ಆಗಲೂ ನೆಮ್ಮದಿಯಾಗಲಿಲ್ಲ. ಬಳಿಕ ಇಂಗುಗುಂಡಿಯ ಮೊರೆ ಹೋದರು.

ಬಾವಿಯ ಸಮೀಪವೇ 10 ಅಡಿ ಅಳ ಹಾಗೂ 8 ಅಡಿ ಅಗಲ, 5ಅಡಿ ಉದ್ದದ ಹೊಂಡ ತೋಡಿದರು.ಅದಕ್ಕೆ ಮೊದಲಿಗೆ ಜಲ್ಲಿ ಹಾಗೂ ಮರಳನ್ನು ಹಾಕಿ ತುಂಬಿಸಿದರು. ಮನೆ ಆರ್‌ಸಿಸಿ ಆದ ಕಾರಣ ಮಳೆ ನೀರು ಒಂದು ಪೈಪು ಮೂಲಕ ಒಂದೆಡೆ ಬಂದು ಈ ಹೊಂಡಕ್ಕೆ ಬೀಳುವಂತೆ ಮಾಡಿದರು. ಅದು ಸಾಲದೆಂದು ಮಳೆಗಾಲ ದಲ್ಲಿ ಮನೆಯ ಎದುರಿನ ಲ್ಲಿರುವ ರಸ್ತೆಯಲ್ಲಿ ಹರಿಯುವ ನೀರಿಗೂ ತೋಡು ಮಾಡಿ ಹರಿಸಿದರು. ಇದೆಲ್ಲದರ ಪರಿಣಾಮ ಇವರ ಬಾವಿಯಲ್ಲಷ್ಟೇ ನೀರು ಬಂದಿಲ್ಲ; ಸುತ್ತಲಿನ ಬಾವಿಗಳಲ್ಲೂ ನೀರಿನ ಮಟ್ಟ ಹೆಚ್ಚಾಗಿದೆ.

ಈ ಹೊಂಡ ಮಾಡಿದ ಮೇಲೆ ನನಗೆ ನೀರಿನ ಸಮಸ್ಯೆ ಬಂದಿಲ್ಲ.ರಸ್ತೆ ಹಾಗೂ ಮನೆ ಛಾವಣಿಯ ನೀರು ಪೋಲಾಗದಂತೆ ನೋಡುತ್ತಿದ್ದೇನೆ. ಈ ಬೇಸಗೆಯಲ್ಲೂ ನನಗೆ ನೀರು ಕಡಿಮೆಯಾಗಿಲ್ಲ. ಮಲ್ಲಿಗೆ,ಕರಿಮೆಣಸು,ತೆಂಗು , ಕಂಗು ,ವೀಳ್ಯದೆಲೆ ಕೃಷಿಯನ್ನು ಮಾಡುತ್ತಿದ್ದೇನೆ.ವರ್ಷ ವರ್ಷ ಹೊಂಡಕ್ಕೆ ಬಿದ್ದ ಮಣ್ಣು ಮಾತ್ರ ತೆಗೆಯುತ್ತೇನೆ.ಇದರಿಂದ ನೀರು ಇಂಗುತ್ತದೆ.ಸುಲಭ ವಿಧಾನ, ಶುದ್ಧ ನೀರು ಸಿಗುತ್ತದೆ.ಎಲ್ಲರೂ ಮಾಡಿದರೆ ಎಲ್ಲರಿಗೂ ಲಾಭವಿದೆ.ತಾನು ಇಂಗಿಸಿದ ನೀರು ತನಗೆ ಸಿಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಆದರೆ ನೀರಿಗೆ ತೊಂದರೆಯಾಗುವುದಿಲ್ಲ ಎನ್ನುತ್ತಾರೆ ಕ್ಲೇರೆನ್ಸ್‌.

ಹೀಗೂ ಉಳಿಸಿ
ನೀವು ಪ್ರವಾಸಕ್ಕೆ ಹೋಗುತ್ತೀರಾ ಎಂದುಕೊಳ್ಳಿ. ಅಲ್ಲಿನ ಹೊಟೇಲ್‌ಗ‌ಳಲ್ಲಿ ಕೊಡುವ ಟವೆಲ್‌ಗ‌ಳನ್ನು ಅಗತ್ಯವಿದ್ದರೆ ಮಾತ್ರ ನಿತ್ಯವೂ ಬಳಸಿ.ಇಲ್ಲದಿದ್ದರೆ ಎರಡು ದಿನ ಕ್ಕೊಮ್ಮೆ ಒಂದು ಟವೆಲ್‌ ಬಳಸಿದರೂ ನೀವು ಜಲಸಂರಕ್ಷಣೆಯಲ್ಲಿ ಭಾಗಿಯಾದಂತೆ.

ನೀರಿನ ಗಣಿತ
ಸುಮಾರು 4 ಲೀಟರ್‌ ಮುಸುಕಿನ ಜೋಳದ ಮೂಲಕ ತೆಗೆಯುವ ಎಥನಾಲ್‌ ಅನ್ನು ಉತ್ಪತ್ತಿ ಮಾಡಲು ಕನಿಷ್ಠ 645 ಲೀಟರ್‌ ನೀರನ್ನು ಬಳಸಬೇಕು. ಇದು ಮುಸುಕಿನ ಜೋಳದ ಉತ್ಪಾದನೆಯಿಂದ (ಕೃಷಿ) ಸಂಸ್ಕರಣೆ ಮಾಡುವವರೆಗೂ ಅನ್ವಯ. ನೀರಿಲ್ಲದೇ ಯಾವುದೂ ಇಲ್ಲ.

ಸುಬ್ರಾಯ ನಾಯಕ್‌ 

ಟಾಪ್ ನ್ಯೂಸ್

cash prize in ipl 2022

ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?

ಸಿದ್ದಾಪುರ: ಮೀನು ಬೇಟೆಯಲ್ಲಿ ಸಿಗದ ಮೀನು; ಆಕ್ರೋಶಿತ ಜನರಿಂದ ಆಯೋಜಕರು,ಪೊಲೀಸರ ಮೇಲೆ ಹಲ್ಲೆ

ಸಿದ್ದಾಪುರ: ಮೀನು ಬೇಟೆಯಲ್ಲಿ ಸಿಗದ ಮೀನು; ಆಕ್ರೋಶಿತ ಜನರಿಂದ ಆಯೋಜಕರು,ಪೊಲೀಸರ ಮೇಲೆ ಹಲ್ಲೆ

oyc

ತಾಜ್ ಮಹಲ್ ಅಡಿಯಲ್ಲಿ ಪ್ರಧಾನಿಯ ಡಿಗ್ರಿ ಹುಡುಕುತ್ತಿದ್ದಾರೆ: ಓವೈಸಿ ವ್ಯಂಗ್ಯ

ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ಮತ್ತೊಂದು ಪವಾಡ : ನಿಜ ನಾಗರ ಹಾವು ಪ್ರತ್ಯಕ್ಷ !

ಶಿವಪುರ ಕೊರಗಜ್ಜನ ಕ್ಷೇತ್ರದಲ್ಲಿ ಮತ್ತೊಂದು ಪವಾಡ : ನಿಜ ನಾಗರ ಹಾವು ಪ್ರತ್ಯಕ್ಷ !

ಕೊನೆಗಾಣದ ಕಾಡಾನೆ, ಮಾನವ ಸಂಘರ್ಷ ಸಮಸ್ಯೆ

ಕೊನೆಗಾಣದ ಕಾಡಾನೆ, ಮಾನವ ಸಂಘರ್ಷ ಸಮಸ್ಯೆ

thumb 7

ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ

1-asdsad

ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

water-source

ನೀರಿನ ಮೂಲಗಳನ್ನು ಸಂರಕ್ಷಿಸಬೇಕು

belthangady

ಬೆಳ್ತಂಗಡಿ ತಾಲೂಕಿನ 6 ಕಡೆಗಳಲ್ಲಿ ಕಾಳಜಿ ಕೇಂದ್ರ

ಅಕಾಲಿಕ ಮಳೆ ರಂಬುಟಾನ್‌ ಕೃಷಿಗೆ ಭಾರೀ ಹೊಡೆತ; ಮಾಗುವ ಮೊದಲೇ ಮಣ್ಣುಪಾಲು

ಅಕಾಲಿಕ ಮಳೆ ರಂಬುಟಾನ್‌ ಕೃಷಿಗೆ ಭಾರೀ ಹೊಡೆತ; ಮಾಗುವ ಮೊದಲೇ ಮಣ್ಣುಪಾಲು

ಅಡಿಕೆ ಹಳದಿ ಎಲೆ ರೋಗ ಬಾಧೆ : ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಧನ

ಅಡಿಕೆ ಹಳದಿ ಎಲೆ ರೋಗ ಬಾಧೆ : ಪರ್ಯಾಯ ಬೆಳೆ ಬೆಳೆಯಲು ಪ್ರೋತ್ಸಾಹಧನ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

ಶಿಶಿಲ ದೇವಸ್ಥಾನ: ನದಿ ಪ್ರದೇಶದ ಕಸಕಡ್ಡಿ ತೆರವು ಜತೆಗೆ ರಾತ್ರಿ ಕಾವಲಿಗೆ ಚಿಂತನೆ

MUST WATCH

udayavani youtube

ಕಾರು ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ | ಕೊಟ್ಟಿಗೆಹಾರ

udayavani youtube

ಮಸೀದಿಗಳಾಗಿ ಮಾರ್ಪಾಡಾದ 30 ಸಾವಿರ ದೇವಾಲಯಗಳನ್ನೂ ವಾಪಸ್ ಪಡೆಯುತ್ತೇವೆ : ಮುತಾಲಿಕ್

udayavani youtube

ಜೀರ್ಣೋದ್ದಾರ ನೆಪದಲ್ಲಿ ಪಂಪಾ ಸರೋವರದ ಮೂರ್ತಿಗಳ ಸ್ಥಳಾಂತರ : ಸಂಜೀವ ಮರಡಿ ವಿರೋಧ

udayavani youtube

ಗ್ರಾ.ಪಂ ಸದಸ್ಯನಿಗೆ ಕಪಾಳ ಮೋಕ್ಷ : ಪಿಎಸ್ ಐ ಅಮಾನತ್ತಿಗೆ ಒತ್ತಾಯಿಸಿ ಠಾಣೆಗೆ ಮುತ್ತಿಗೆ

udayavani youtube

ಅಂಬೇಡ್ಕರ್ ಅವರ ಕಿವಿಮಾತನ್ನು ನೆಹರು ಕೇಳಲಿಲ್ಲ : ಬಸನಗೌಡ ಪಾಟೀಲ್ ಯತ್ನಾಳ

ಹೊಸ ಸೇರ್ಪಡೆ

cash prize in ipl 2022

ಐಪಿಎಲ್ ಫೈನಲ್: ಯಾವ ತಂಡಕ್ಕೆ ಎಷ್ಟು ಹಣ ಸಿಗಲಿದೆ? ಆರ್ ಸಿಬಿಗೆ ಸಿಗುವ ಮೊತ್ತವೆಷ್ಟು?

23

ಪ್ರಥಮ ಪಿಯು ಪ್ರವೇಶಕ್ಕೆ ಪರದಾಟ

ಸಿದ್ದಾಪುರ: ಮೀನು ಬೇಟೆಯಲ್ಲಿ ಸಿಗದ ಮೀನು; ಆಕ್ರೋಶಿತ ಜನರಿಂದ ಆಯೋಜಕರು,ಪೊಲೀಸರ ಮೇಲೆ ಹಲ್ಲೆ

ಸಿದ್ದಾಪುರ: ಮೀನು ಬೇಟೆಯಲ್ಲಿ ಸಿಗದ ಮೀನು; ಆಕ್ರೋಶಿತ ಜನರಿಂದ ಆಯೋಜಕರು,ಪೊಲೀಸರ ಮೇಲೆ ಹಲ್ಲೆ

labi

ಮಂತ್ರಿಗಿರಿಗಾಗಿ ಲಾಬಿ ಮಾಡಲು ಹೋಗಲ್ಲ

22

ಮಳೆಗಾಗಿ ಗೊಂಬೆಗಳ ಅದ್ಧೂರಿ ಮದುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.