ಮಳೆ ಬಂದರೆ ಸೋರುತ್ತದೆ; ಇದು ಸೆಂಟ್ರಲ್‌ ರೈಲು ನಿಲ್ದಾಣ ಮಹಿಮೆ!


Team Udayavani, Oct 29, 2018, 11:50 AM IST

29-october-6.gif

ಮಹಾನಗರ: ತಿಂಗಳಿನಿಂದ ಕೆಟ್ಟು ನಿಂತಿರುವ ಎಸ್ಕಲೇಟರ್‌, ಮಳೆ ಬಂದರೆ ಜೋರಾಗಿ ಸೋರುವ ನಿಲ್ದಾಣದ ಆವರಣ. ಜತೆಗೆ ಅಲ್ಲಲ್ಲಿ ತೂತು ಬಿದ್ದಿರುವ ಮೇಲ್ಛಾವಣಿ ಹಾಗೂ ಪ್ರಯಾಣಿಕರ ತಲೆಯ ಮೇಲೆಯೇ ಬೀಳುವ ಸ್ಥಿತಿಯಲ್ಲಿರುವ ನಿಲ್ದಾಣದ ಪ್ರವೇಶ ದ್ವಾರದ ಸಿಮೆಂಟ್‌ ಪ್ಲಾಸ್ಟರಿಂಗ್‌..!

ಇದು ಜನ ಸಂಪರ್ಕವೇ ಇಲ್ಲದೆ ಪಾಳು ಬಿದ್ದಿರುವ ಯಾವುದೋ ಕಟ್ಟಡದ ಸ್ಥಿತಿಯಲ್ಲ. ಬದಲಿಗೆ, ಪ್ರತಿದಿನ ಪ್ರಮುಖ ಮಹಾನಗರಗಳನ್ನು ಸಂಪರ್ಕಿಸುವ ರೈಲುಗಳು ಹಾದು ಹೋಗುವ ಹಾಗೂ ಸಾವಿರಾರು ಮಂದಿ ಪ್ರಯಾಣಿಕರು ಬಂದು ಹೋಗುವ ಜತೆಗೆ, ದಕ್ಷಿಣ ರೈಲ್ವೇ ವಲಯದ ಪಾಲಿಗೆ ಹೆಚ್ಚಿನ ಆದಾಯ ತಂದು ಕೊಡುತ್ತಿರುವ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಸದ್ಯದ ಪರಿಸ್ಥಿತಿ.

ಸಾಕಷ್ಟು ಆದಾಯ ತಂದು ಕೊಡುತ್ತಿರುವ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಪ್ರಯಾಣಿಕರ ಸಮಸ್ಯೆಗಳಿಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲದಂತಾಗಿದೆ. ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವು ಕೇರಳ ಹಾಗೂ ತಮಿಳುನಾಡಿನ ವ್ಯಾಪ್ತಿಯಲ್ಲಿ ಬರುವ ದಕ್ಷಿಣ ರೈಲ್ವೇ ವಲಯಕ್ಕೆ ಸೇರಿದೆ ಎಂಬ ಕಾರಣಕ್ಕೆ ಇಲ್ಲಿ ಕಲ್ಪಿಸಬೇಕಾಗಿರುವ ಸವಲತ್ತು ಹಾಗೂ ಈ ಭಾಗದ ಪ್ರಯಾಣಿಕರ ಬೇಡಿಕೆಗಳನ್ನು ಸಂಪೂರ್ಣ ಕಡೆಗಣಿಸಲಾಗಿದೆ. ಇದಕ್ಕೆಲ್ಲ ಸಾಕ್ಷಿ ಸೂಕ್ತ ಮೂಲಸೌಕರ್ಯ ವ್ಯವಸ್ಥೆಗಳಿಲ್ಲದೆ ಅವ್ಯವಸ್ಥೆಗಳ ಆಗರವಾಗಿದೆ.

ದೇಶದ ವಿವಿಧ ಮೂಲೆಗಳಿಂದ ಮಂಗಳೂರಿಗೆ ಆಗಮಿಸುವ ಹಾಗೂ ಮಂಗಳೂರಿನಿಂದ ಹೊರಭಾಗಗಳಿಗೆ ತೆರಳುವ ಸಾವಿರಾರು ಪ್ರಯಾಣಿಕರು ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದು, ಇಲ್ಲಿನ ಅವ್ಯವಸ್ಥೆ ನೋಡಿ ನಗುವಂತಾಗಿದೆ. ಫ್ಲಾಟ್‌ಫಾರಂ ನ ನೆಲದ ಹಾಸು ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಕಾಮಗಾರಿ ನಡೆದಿದೆ. ಆದರೆ ಕೇವಲ ಬಿರುಕು ಬಿಟ್ಟಿರುವ ಭಾಗದಲ್ಲಿ ಮಾತ್ರವೇ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಈ ಕಾಮಗಾರಿ ಮುಗಿದ ಕೆಲವೇ ಸಮಯಗಳಲ್ಲಿ ಕೆಲಸ ಮಾಡದ ಭಾಗಗಳಲ್ಲಿ ಸಮಸ್ಯೆ ಎದುರಾಗಲಿದೆ.

ಕೆಟ್ಟು ನಿಂತ ಎಸ್ಕಲೇಟರ್‌
ಪ್ರಯಾಣಿಕರಿಗೆ ಒಂದು ಫ್ಲಾಟ್‌ ಫಾರಂನಿಂದ ಇನ್ನೊಂದು ಫ್ಲಾಟ್‌ ಫಾರಂಗಳಿಗೆ ತೆರಳಲು ನೆರವಾಗುವ ನಿಟ್ಟಿನಲ್ಲಿ ಮಾಡಲಾದ ಎಸ್ಕಲೇಟರ್‌ ಹಲವು ಸಮಯದಿಂದ ಕೆಟ್ಟು ನಿಂತಿದೆ. ಹಾಗಾಗಿ ಪ್ರಯಾಣಿಕರು ಎಸ್ಕಲೇಟರ್‌ ಮೂಲಕವೇ ನಡೆದುಕೊಂಡು ಬರಬೇಕಾದ ಸ್ಥಿತಿ ನಿರ್ಮಾಣವಾಗಿದೆ.

ಇನ್ನೂ ಮಳೆ ಬಂದಾಗ ರೈಲು ನಿಲ್ದಾಣದೊಳಗೆ ಕಾಲಿಡುವುದೇ ಕಷ್ಟ ಎಂಬಂತಾಗಿದೆ. ಮೇಲ್ಛಾವಣಿಯಲ್ಲಿ ಮೂಡಿದ ಬಿರುಕಿನಿಂದಾಗಿ ನಿಲ್ದಾಣದೊಳಗೆ ಮಳೆ ನೀರು ಹರಿದು ಬರುತ್ತದೆ. ಅದರೊಂದಿಗೆ ಮಾಡಿನಿಂದ ಮಳೆ ನೀರು ಸರಾಗವಾಗಿ ಹರಿಯಲು ವ್ಯವಸ್ಥೆಗಳಿಲ್ಲ. ಹೀಗಾಗಿ ಫ್ಲಾಟ್‌ಫಾರಂ ಕಂಬಗಳ ಮೇಲಿರುವ ವಿದ್ಯುತ್‌ ಬಾಕ್ಸ್‌ಗಳ ಒಳಗಿನಿಂದ ಮಳೆ ನೀರು ಹರಿದುಬರುತ್ತದೆ.

ಫ್ಲಾಟ್‌ಫಾರಂ ಪ್ರವೇಶ ದ್ವಾರ ಹಾಗೂ ಒಂದನೇ ಫ್ಲಾಟ್‌ಫಾರಂನ ಬಹುತೇಕ ಎಲ್ಲ ಕಂಬಗಳ ಮಧ್ಯೆ ನೀರು ಫ್ಲಾಟ್‌ಫಾರಂಗೆ ಹರಿಯುತ್ತಿದೆ. ಅಲ್ಲದೆ ನಿಲ್ದಾಣದ ಒಳಭಾಗದಲ್ಲಿ ಅಧಿಕ ವೋಲ್ಟೆಜ್‌ ವಿದ್ಯುತ್‌ ಪ್ರವಹಿಸುವ ತಂತಿಗಳು ಇದ್ದು, ಮಳೆ ನೀರು ಅದರ ಮೇಲೆ ಬಿದ್ದರೆ ಏನಾದರೂ ಅಪಾಯ ಸಂಭವಿಸುವ ಸಾಧ್ಯತೆ ಇದೆ. ಈ ಸಮಸ್ಯೆ ಹಲವು ಸಮಯಗಳಿಂದ ಇದ್ದು, ಈ ಬಗ್ಗೆ ಕ್ರಮ ತೆಗೆದುಕೊಳ್ಳುವಲ್ಲಿ ರೈಲ್ವೇ ಇಲಾಖೆ ನಿರಾಸಕ್ತಿ ತೋರಿಸುತ್ತಿದೆ ಎನ್ನಲಾಗಿದೆ.

ನಿಲ್ದಾಣದೊಳಗೆ ನಾಯಿಗಳ ಕಾಟ!
ಮಳೆಯಾದರೆ ಫ್ಲಾಟ್‌ಫಾರಂನಲ್ಲಿ ಓಡಾಡುವುದು, ಲ್ಯಾಗೇಜ್‌ಗಳನ್ನು ಇಡುವುದು ಹೇಗೆ ಎಂಬ ಚಿಂತೆ ಒಂದೆಡೆಯಾದರೆ ಅತ್ತಿತ್ತ ಓಡಾಡುವ ನಾಯಿಗಳ ಕಾಟ ಬೇರೆ. ನಿಲ್ದಾಣದಲ್ಲಿ ತಿನ್ನಲು ಕುಳಿತರೆ ನಾಯಿಗಳ ಗುಂಪು ನಮ್ಮೆದುರು ಪ್ರತ್ಯಕ್ಷವಾಗುತ್ತದೆ.

ಸಿಬಂದಿಗೆ ಸ್ಥಳೀಯ ಭಾಷೆ ತಿಳಿದಿಲ್ಲ
ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣದಲ್ಲಿ ಸ್ಥಳೀಯ ಭಾಷೆ ಬರುವ ಅಧಿಕಾರಿಗಳಿಲ್ಲ. ಮಲಯಾಳಿಗಳೇ ಹೆಚ್ಚಿದ್ದಾರೆ. ಅವರಲ್ಲಿ ಸೂಕ್ತ ಮಾಹಿತಿ ಹಾಗೂ ಸಮಸ್ಯೆಗಳ ಬಗ್ಗೆ ತಿಳಿಸಿದರೆ ಅವರಿಗೆ ಅರ್ಥವಾಗುವುದಿಲ್ಲ. ಈ ನಿಟ್ಟಿನಲ್ಲಿ ಈ ಭಾಗದ ಜನರು ಸಿಬಂದಿಗಳೊಂದಿಗೆ ಚರ್ಚಿಸುವ ಗೋಜಿಗೆ ಹೋಗುವುದಿಲ್ಲ. ಹೀಗಾಗಿ ಸ್ಥಳೀಯ ಭಾಷೆ ಬರುವ ಅಧಿಕಾರಿಗಳನ್ನು ಇಲ್ಲಿ ನಿಯೋಜಿಸಬೇಕು.

ಮಂಗಳೂರು ವಿಭಾಗ ಕಡೆಗಣನೆ
ಮಂಗಳೂರು ರೈಲು ನಿಲ್ದಾಣ ಪಾಲ್ಘಾಟ್‌ ವಿಭಾಗಕ್ಕೊಳಪಟ್ಟಿದ್ದು, ಈ ಹಿನ್ನಲೆಯಲ್ಲಿ ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣವನ್ನು ಕಡೆಗಣಿಸಲಾಗುತ್ತಿದೆ ಎನ್ನುವ ಆರೋಪ ಕೇಳಿಬರುತ್ತಿದೆ. ಅಲ್ಲದೆ ಮಂಗಳೂರಿನಿಂದ ಕೇರಳ ಭಾಗಕ್ಕೆ ತೆರಳು ರೈಲುಗಳಿಗೆ ಹೆಚ್ಚು ಪ್ರಾಮುಖ್ಯತೆ ನೀಡಲಾಗುತ್ತಿದೆ. ಮಂಗಳೂರಿನಿಂದ ಕೇರಳ ಹೊರತುಪಡಿಸಿ ಬೇರೆ ಭಾಗಗಳಿಗೆ ತೆರಳುವ ರೈಲುಗಳಿಗೆ ಬೇಡಿಕೆ ಇದ್ದರೂ ಅದಕ್ಕೆ ಮನ್ನಣೆ ನೀಡದೆ ಕೇರಳ ಭಾಗಕ್ಕೆ ಹೆಚ್ಚುವರಿ ರೈಲುಗಳನ್ನು ನೀಡಲಾಗುತ್ತಿದೆ ಎಂಬ ಆರೋಪವೂ ಇದೆ.

ಹಲವು ವರ್ಷಗಳ ಸಮಸ್ಯೆ 
ಮಂಗಳೂರು ಸೆಂಟ್ರಲ್‌ ರೈಲ್ವೇ ನಿಲ್ದಾಣ ಕಟ್ಟಡ 100 ವರ್ಷ ಹಳೆಯದಾಗಿದ್ದು, ಮೇಲಿಂದ ಮೇಲೆ ನವೀಕರಣ ಕೆಲಸಗಳನ್ನು ಮಾಡುತ್ತಿದ್ದಾರೆ. ಅದು ವೈಜ್ಞಾನಿಕವಾಗಿ ಇಲ್ಲ ಎನ್ನುವುದಕ್ಕೆ ಮಳೆಗಾಲದಲ್ಲಿ ನಿಲ್ದಾಣದೊಳಗೆ ನೀರು ಬರುವುದೇ ಸಾಕ್ಷಿ. ಈ ಸಮಸ್ಯೆ ಬಗ್ಗೆ ಹಲವು ಬಾರಿ ದೂರಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ.
 – ಅನಿಲ್‌ ಹೆಗ್ಡೆ, ತಾಂತ್ರಿಕ ಸಲಹೆಗಾರರು,
ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಮಂಗಳೂರು

ಟಾಪ್ ನ್ಯೂಸ್

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

RenukaSwamy ತಂದೆ ಹೇಳಿಕೆ ಬೆನ್ನಲ್ಲೇ ಮತ್ತೊಮ್ಮೆ ಮಹಜರು

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ರಾಜಕಾಲುವೆಯಲ್ಲಿ ಹುಡುಕಿದರೂ ಸಿಗದ ರೇಣುಕಾಸ್ವಾಮಿ ಮೊಬೈಲ್‌!

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು

ದರ್ಶನ್‌, ಚಿಕ್ಕಣ್ಣ ಸಮಕ್ಷಮ ಪಬ್‌ನಲ್ಲಿ ಸ್ಥಳ ಮಹಜರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಈದ್ಗಾ ಮೈದಾನದಲ್ಲಿ ನಡೆದ ಬಕ್ರೀದ್ ಆಚರಣೆಯಲ್ಲಿ ಪ್ರಾರ್ಥನೆ ಸಲ್ಲಿಸಿದ ಆರ್ ಬಿ ತಿಮ್ಮಾಪುರ

udayavani youtube

ಮಾನಸಿಕ ಸಮಸ್ಯೆಯ ಲಕ್ಷಣಗಳೇನು?

udayavani youtube

ಈ ಇಳಿವಯಸ್ಸಿನಲ್ಲಿ ಇಂತದ್ದೆಲ್ಲ ಒಳ್ಳೆಯದಲ್ಲ… BSY ಕುರಿತು ಸಚಿವ ತಿಮ್ಮಾಪುರ ಹೇಳಿಕೆ

udayavani youtube

ಸಿದ್ದರಾಮಯ್ಯ ಡಿಕೆ ಶಿವಕುಮಾರ್ ಆಡಳಿತ ಮಾಡಲು ಅಸಮರ್ಥರು

udayavani youtube

ಬಿಜೆಪಿ ಹಿರಿಯ ಮುಖಂಡ ಎಂ.ಬಿ‌.ಭಾನುಪ್ರಕಾಶ್ ಹೃದಯಾಘಾತದಿಂದ ನಿಧನ

ಹೊಸ ಸೇರ್ಪಡೆ

BJP 2

Election: ಮಹಾರಾಷ್ಟ್ರ ಸೇರಿ 4 ರಾಜ್ಯ ಉಸ್ತುವಾರಿ ನೇಮಿಸಿದ ಬಿಜೆಪಿ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರೈತರ ಸಾಲ ಮನ್ನಾ ಸಂದರ್ಭದಲ್ಲೂ ಪೆಟ್ರೋಲ್‌ ದರ ಏರಿಸಿರಲಿಲ್ಲ: ಎಚ್‌ಡಿಕೆ

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ರಾಜ್ಯದಲ್ಲಿ ಪೆಟ್ರೋಲ್‌ ಶತಕ ಗಡಿ ದಾಟಿಸಿದ್ದೇ ಬಿಜೆಪಿ: ಜಮೀರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

ಗ್ಯಾರಂಟಿಗಾಗಿ ತೈಲ ದರ ಏರಿಕೆ ವ್ಯಾಖ್ಯಾನ ತಪ್ಪು: ಪರಮೇಶ್ವರ್‌

bjpತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

ತೈಲ ದರ ಇಳಿಸದಿದ್ದರೆ ನಾಡಿದ್ದು ಸಂಚಾರ ತಡೆ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.