ಬೆಳ್ಳಾರೆ ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಭಾಗ್ಯ!


Team Udayavani, Aug 3, 2017, 7:15 AM IST

bellare.jpg

ಸುಳ್ಯ: ಪದವಿ, ಸ್ನಾತಕೋತ್ತರ ತರಗತಿ ಹೊಂದಿರುವ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಭಾರ ನೆಲೆಯಲ್ಲಿ ಪ್ರಾಂಶುಪಾಲರೊಬ್ಬರನ್ನು ಹೊರತುಪಡಿಸಿ ಉಳಿದೆಲ್ಲ ಉಪನ್ಯಾಸಕರ ಹುದ್ದೆ ಖಾಲಿ ಇರುವುದರಿಂದ ವಿದ್ಯಾರ್ಥಿಗಳಿಗೆ ಅಘೋಷಿತ ರಜೆ ಲಭಿಸಿದೆ!

ಅತಿಥಿ ಉಪನ್ಯಾಸಕರ ನೇಮಕ ರದ್ದಾದ ಬೆನ್ನಲ್ಲೇ ಕಾಲೇಜಿನಲ್ಲಿ ಪಾಠ ಪ್ರವಚನಕ್ಕೆ ಉಪನ್ಯಾಸಕರೇ ಇಲ್ಲದಂತಾಗಿದೆ. ಹೊಸ ದಾಗಿ ಉಪನ್ಯಾಸಕರ ನೇಮಕ ಆಗುವ ತನಕ ವಿದ್ಯಾರ್ಥಿಗಳಿಗೆ ತರಗತಿ ನಡೆಸುವಂತಿಲ್ಲ. ಕ್ಯಾಂಪಸ್‌ಗೆ ಬಂದರೂ ಪ್ರಯೋಜನವಿಲ್ಲ. ಹಾಗಾಗಿ ಎರಡು ದಿನ ತರಗತಿ ಇಲ್ಲ ಎಂದು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ.

ಹುದ್ದೆಗಳು 13; ಇರುವುದೊಬ್ಬರು !
ಕಾಲೇಜಿಗೆ ಮಂಜೂರಾಗಿರುವ ಹುದ್ದೆಗಳು 13. ಅದರಲ್ಲಿ ಪ್ರಾಂಶುಪಾಲರು ಮತ್ತು ಅರ್ಥಶಾಸ್ತ್ರ ಬೋಧಕರಿದ್ದಾರೆ. ಕೆಲವು ದಿನಗಳ ಹಿಂದೆ ಅರ್ಥಶಾಸ್ತ್ರ ಉಪನ್ಯಾಸಕರೂ ವರ್ಗಾವಣೆ ಗೊಂಡಿದ್ದು, ಅವರು ತರಬೇತಿಗೆ ತೆರಳಿದ್ದಾರೆ. ಪ್ರಸ್ತುತ ಮಂಜೂರಾತಿ ಹುದ್ದೆಯಲ್ಲಿ ಪ್ರಾಂಶುಪಾಲರನ್ನು ಹೊರತುಪಡಿಸಿ, ಉಳಿದೆಲ್ಲ ಹುದ್ದೆ ಖಾಲಿಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ಕಾಲೇಜಿಗೆ ಬಂದರೂ ಪಾಠ ಪ್ರವಚನ ನಡೆಯುವುದಿಲ್ಲ. ಅನಿವಾರ್ಯ ವಾಗಿ ವಿದ್ಯಾರ್ಥಿಗಳಿಗೆ ರಜೆ ದೊರೆತಿದೆ.

ಖಾಯಂ ಉಪನ್ಯಾಸಕರೇ ಇಲ್ಲ
ಮಂಜೂರಾಗಿರುವ ಕನ್ನಡ, ಇಂಗ್ಲಿಷ್‌, ಹಿಂದಿ, ಇತಿಹಾಸ, ಅರ್ಥಶಾಸ್ತ್ರ – (2 ಹುದ್ದೆ), ರಾಜ್ಯಶಾಸ್ತ್ರ, ಸಮಾಜ ಕಾರ್ಯ-2, ವಾಣಿಜ್ಯ ಶಾಸ್ತ್ರ-3, ದೈಹಿಕ ಶಿಕ್ಷಣ ನಿರ್ದೇಶಕ ಹುದ್ದೆಗಳು ಖಾಲಿ ಇವೆ. ಪ್ರಭಾರ ನೆಲೆ ಯಲ್ಲಿನ ಪ್ರಾಂಶುಪಾಲರು ಸಮಾಜಶಾಸ್ತ್ರ ಪಾಠ ಮಾಡುತ್ತಾರೆ. ಜು. 30ರೊಳಗೆ ಅತಿಥಿ ಉಪನ್ಯಾಸಕರು ಇನ್ನುಳಿದ ಎಲ್ಲÉ ಪಠ್ಯಗಳನ್ನು ಬೋಧಿಸುತ್ತಿದ್ದರು. ಆ. 1ರಿಂದ ಅವರ ನೇಮಕಾತಿ ರದ್ದುಗೊಳಿಸಿದ ಕಾರಣ ಅವರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ.

48 ಉಪನ್ಯಾಸಕರಿದ್ದರು!
ಕಳೆದ ಶೈಕ್ಷಣಿಕ ಅವಧಿಯಲ್ಲಿ ಪೂರ್ಣ ಕಾಲಿಕ ಹಾಗೂ ಅತಿಥಿ ಶಿಕ್ಷಕರು 48 ಮಂದಿ ಉಪ ನ್ಯಾಸಕರು ಕರ್ತವ್ಯದಲ್ಲಿದ್ದರು. ಖಾಯಂ ಉಪನ್ಯಾಸಕರ ಪೈಕಿ ಕನ್ನಡ, ರಾಜ್ಯ ಶಾಸ್ತ್ರ ಉಪ ನ್ಯಾಸಕರು ಪುತ್ತೂರು ಮಹಿಳಾ ಕಾಲೇಜಿಗೆ ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಬೆಟ್ಟಂಪಾಡಿ ಪ್ರಥಮ ದರ್ಜೆ ಕಾಲೇಜಿಗೆ ವರ್ಗಾವಣೆಗೊಂಡು ತೆರಳಿ ದ್ದಾರೆ. ಅರ್ಥಶಾಸ್ತ್ರ ಉಪನ್ಯಾಸಕರು ವರ್ಗಾ ವಣೆ ಗೊಂಡಿದ್ದು, ರಿಲೀವ್‌ಗೆ ಬಾಕಿ ಇದೆ. ಅತಿಥಿ ಉಪನ್ಯಾಸಕರ ಆಯ್ಕೆ ರದ್ದಾ ಗಿರುವ ಕಾರಣ, ಈಗ ಉಳಿದಿರುವುದು ಪ್ರಾಂಶುಪಾಲರು ಹಾಗೂ ರಿಲೀವ್‌ಗೆ ಬಾಕಿ ಇರುವ ಓರ್ವ ಉಪನ್ಯಾಸಕ ಮಾತ್ರ. ಈಗಿನ ಅಂಕಿ-ಅಂಶದ ಆಧಾರದಲ್ಲಿ 21 ಅತಿಥಿ ಉಪನ್ಯಾಸಕರು, ಉಳಿದ 12 ಪೂರ್ಣಕಾಲಿಕ ಉಪನ್ಯಾಸಕರ ನೇಮಕ ಅಗತ್ಯವಿದೆ. ಈ ಹುದ್ದೆ ಭರ್ತಿ ಮಾಡದೆ ಕಾಲೇಜಿನಲ್ಲಿ ಪಠ್ಯ ಚಟುವಟಿಕೆಗಳನ್ನು ನಡೆಸಲು ಅಸಾಧ್ಯವಾಗಿದೆ.

472 ವಿದ್ಯಾರ್ಥಿಗಳು
ಕಡಲ ತಡಿಯ ಭಾರ್ಗವ ಡಾ| ಶಿವರಾಮ ಕಾರಂತ ಅವರ ಹೆಸರಿನಲ್ಲಿ ಪೆರುವಾಜೆಯಲ್ಲಿ ಸ್ಥಾಪಿಸಲಾಗಿರುವ ಬೆಳ್ಳಾರೆ ಸರಕಾರಿ ಪ್ರಥಮ ದರ್ಜೆ ಕಾಲೇಜು ತಾಲೂಕಿನ ಮೊದಲ ಸರಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆ ಹೊಂದಿದೆ. ಬಿ.ಎ, ಬಿ.ಕಾಂ., ಬಿಎಸ್‌.ಡಬುÉ é. ಹಾಗೂ ಸ್ನಾತಕೋತ್ತರ ಪದವಿಗಳಾದ ಎಂ.ಕಾಂ, ಎಂ.ಎಸ್‌.ಡಬುÉ é. ತರಗತಿಗಳು ಇಲ್ಲಿವೆ. ಪ್ರಸ್ತಕ ಸಾಲಿನಲ್ಲಿ 310 ಪದವಿ ವಿದ್ಯಾರ್ಥಿ ಗಳು, 162 ಪಿ.ಜಿ. ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಕಾಲೇಜು ಆರಂಭಗೊಂಡು ಒಂದೂವರೆ ತಿಂಗಳಾಗಿದ್ದು, ಮೊದಲ ಇಂಟರ್‌ನಲ್‌ ಪರೀಕ್ಷೆ ಆಗಿದೆ. ಈಗ ಉಪ ನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳು ಮನೆಯಲ್ಲಿ ಕೂರಬೇಕಾದ ಸ್ಥಿತಿ ಉಂಟಾ ಗಿದೆ. ಅತಿಥಿ ಉಪನ್ಯಾಸಕರ ಮರು ನೇಮಕ ಅಥವಾ ಪೂರ್ಣಕಾಲಿಕ ಉಪ ನ್ಯಾಸಕರ ನೇಮಕ ಮಾಡದೇ ಸಮಸ್ಯೆ ಬಗೆಹರಿಯುವುದು ಅಸಾಧ್ಯ.

ಮಂಜೂರಾತಿ ಹುದ್ದೆಯಲ್ಲಿ ಇಬ್ಬರು ಕರ್ತವ್ಯದಲ್ಲಿದ್ದು, ಓರ್ವ ಉಪನ್ಯಾಸಕ ಟ್ರೈನಿಂಗ್‌ನಲ್ಲಿದ್ದಾರೆ. ಅವರಿಗೆ ವರ್ಗಾವಣೆ ಆಗಿದ್ದು, ರಿಲೀವ್‌ ಆಗಬೇಕಷ್ಟೆ. ಉಪನ್ಯಾಸಕರ ಕೊರತೆಯಿಂದ ಮೊದಲ ಅವಧಿಯಲ್ಲಿ ಪಾಠ ಮಾಡಿ, ವಿದ್ಯಾರ್ಥಿಗಳನ್ನು ಬಿಡಲಾಗಿದೆ. ಉಪನ್ಯಾಸಕರು ಬರುವ ನಿರೀಕ್ಷೆ ಇದ್ದು, ಅನಂತರ ಪಾಠ ಪ್ರವಚನ ನಡೆಯಲಿದೆ.
– ಚಂದ್ರಶೇಖರ ಕಾಂತಮಂಗಲ
ಪ್ರಭಾರ ಪ್ರಾಂಶುಪಾಲರು, ಬೆಳ್ಳಾರೆ ಪ್ರ. ಕಾಲೇಜು

- ಕಿರಣ್‌ ಪ್ರಸಾದ್‌ ಕುಂಡಡ್ಕ

ಟಾಪ್ ನ್ಯೂಸ್

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ

21

ಹೊಸ ಚಿತ್ರಕ್ಕೆ ಮಹೇಶ್‌ ಬಾಬು ರೆಡಿ: ‘ವೀರ ಮದಕರಿ’ ಬಾಲ ಕಲಾವಿದೆ ಈಗ ನಾಯಕಿ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್

ಮುಂಬರುವ ಚುನಾವಣೆಗೆ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲ: ಎಂ. ವೈ. ಪಾಟೀಲ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ

Puttur; ಚೌಟರನ್ನು ದಾಖಲೆಯ ಅಂತರದಿಂದ ಗೆಲ್ಲಿಸಿ: ಅಣ್ಣಾಮಲೈ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Uppinangady : ಗ್ರಾ.ಪಂ. ಸಿಬಂದಿ ಆತ್ಮಹತ್ಯೆ

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

Subrahmanya: ಬಸ್ಸಿನಿಂದ ಬಿದ್ದು ಪ್ರಯಾಣಿಕ ಸಾವು

9-aranthodu

Aranthodu: ಬೆಂಕಿ ಅವಘಡ; ತಪ್ಪಿದ ಭಾರೀ ಅನಾಹುತ

8-

Kaniyoor: ಕೆರೆ ಸ್ವಚ್ಛಗೊಳಿಸುವಾಗ ಮುಳುಗಿ ವ್ಯಕ್ತಿ ಸಾವು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

20-shirva-1

ಮೂಡುಬೆಳ್ಳೆ ಶ್ರೀಮಹಾಲಿಂಗೇಶ್ವರ, ಶ್ರೀ ಮಹಾಗಣಪತಿ, ಶ್ರೀ ಸೂರ್ಯನಾರಾಯಣ ದೇಗುಲ

90 ದಿನಗಳಲ್ಲಿ ನೆಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

90 ದಿನದಲ್ಲಿ ನೇಹಾ ಕುಟುಂಬಕ್ಕೆ ನ್ಯಾಯ ಸಿಗುವ ವಿಶ್ವಾಸವಿದೆ..: ರಣದೀಪ್ ಸಿಂಗ್ ಸುರ್ಜೆವಾಲಾ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

Thailandನಲ್ಲಿ ಗುಜರಿ ಮಾಫಿಯಾದ ಕಿಂಗ್‌ ಪಿನ್‌ ರವಿ ಕಾನಾ, ಪ್ರಿಯತಮೆ ಕಾಜಲ್‌ ಜಾ ಬಂಧನ

19-sagara

LS Polls: ರಾಜ್ಯದ ಜನರಿಗೆ ಈಶ್ವರಪ್ಪ ಸ್ಪರ್ಧೆ ವಿಷಯ ಈಗ ಖಚಿತ: ಈಶ್ವರಪ್ಪ

23

ಹೂಡಿಕೆದಾರರಿಗೆ ಲಾಭಾಂಶ ನೀಡದ ಆರೋಪ ʼManjummel Boysʼ ನಿರ್ಮಾಪಕರ ವಿರುದ್ದ ದೂರು ದಾಖಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.