ಅಪಘಾತ ರಹಿತ ಚಾಲನೆಗೆ ಗೌರವ

Team Udayavani, Feb 4, 2018, 12:35 PM IST

4-Feb-12.jpg

ಪುತ್ತೂರು: ಪ್ರಯಾಣಿಕರನ್ನು ನಮ್ಮವರೆಂಬ ಭಾವನೆಯಿಂದ ಸುರಕ್ಷಿತವಾಗಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ತಲು
ಪಿಸುವ ಮಹತ್ವದ ಕಾರ್ಯ ಮಾಡುವ, ಸೇವಾ ಬದ್ಧತೆ ಪ್ರದರ್ಶಿಸುವ ಸಿಬಂದಿಯನ್ನು ಗುರುತಿಸುವ ಪದ್ಧತಿಯನ್ನು ಬೆಳೆಸಿಕೊಂಡಿರುವ ಕೆಎಸ್‌ಆರ್‌ಟಿಸಿ ಕಾರ್ಯ ಶ್ಲಾಘನೀಯ ಎಂದು ಸಂಸದೀಯ ಕಾರ್ಯದರ್ಶಿ ಹಾಗೂ ಪುತ್ತೂರು ಶಾಸಕಿ ಶಕುಂತಳಾ ಟಿ. ಶೆಟ್ಟಿ ಅವರು ಹೇಳಿದರು.

ಶನಿವಾರ ಮುಕ್ರಂಪಾಡಿಯಲ್ಲಿರುವ ಕೆಎಸ್‌ಆರ್‌ಟಿಸಿ ಡಿಪೋದಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅಪಘಾತ ರಹಿತ ಚಾಲಕರಿಗೆ ಬೆಳ್ಳಿ ಪದಕ ವಿತರಿಸಿ ಮಾತನಾಡಿದರು. ಸುರಕ್ಷಿತವಾಗಿ ಚಲಾಯಿಸಿ ಪ್ರಯಾಣಿಕರನ್ನು ಒಯ್ಯುವ ಅತ್ಯಂತ ದೊಡ್ಡ ಜವಾಬ್ದಾರಿ ಚಾಲಕನ ಮೇಲಿದೆ. ಕೆಎಸ್‌ಆರ್‌ಟಿಸಿ ಬಸ್ಸು ಚಾಲಕರು ಸುರಕ್ಷಿತ ಚಾಲನೆಗೆ ಮಾದರಿಯಾಗಿದ್ದಾರೆ. ಇದು ಇತರ ಚಾಲಕರಿಗೂ ಪ್ರೇರಣೆ ನೀಡುತ್ತದೆ ಎಂದರು.

ಪುತ್ತೂರು ವಿಭಾಗಕ್ಕೆ 189 ಬಸ್ಸುಗಳ ಆವಶ್ಯಕತೆ ಇತ್ತು. ಈಗ 181 ಬಸ್ಸುಗಳು ಬಂದಿವೆ. ಉಳಿದ 8 ಬಸ್ಸುಗಳು ಶೀಘ್ರ
ಬರುವ ನಿರೀಕ್ಷೆ ಇದೆ. ಸಾರಿಗೆ ನಿಗಮದ ಎಂಡಿ ಉದಯಶಂಕರ್‌ ದಕ್ಷತೆಯಿಂದ ಕೆಲಸ ಮಾಡುತ್ತಿದ್ದಾರೆ. ಪುತ್ತೂರು ಕೆಎಸ್‌ ಆರ್‌ಟಿಸಿ ಆರ್ಥಿಕ ಪ್ರಗತಿ ಸಾಧಿಸುತ್ತಿದ್ದು, ಇದು ರಾಜ್ಯದಲ್ಲಿಯೇ ಮಾದರಿ ಹಾಗೂ ಅಭಿವೃದ್ಧಿಯ ವಿಭಾಗವಾಗಬೇಕು. ಅಧಿಕಾರಿಗಳು ನಿಮ್ಮನ್ನು ಪ್ರೀತಿಯಿಂದ ಕಂಡರೆ ಅದೇ ನಿಮಗೆ ಸಿಗುವ ನಿಜವಾದ ಚಿನ್ನದ ಪದಕವಾಗುತ್ತದೆ ಎಂದು ಅವರು ಹೇಳಿದರು.

ವೇದಿಕೆಯಲ್ಲಿ ವಿಭಾಗೀಯ ಯಾಂತ್ರಿಕ ಅಭಿಯಂತರ ವೇಣುಗೋಪಾಲ್‌ ಉಪಸ್ಥಿತರಿದ್ದರು. ವಿಭಾಗೀಯ ಸಂಚಲನಾ
ಧಿಕಾರಿ ಮುರಳೀಧರ ಆಚಾರ್ಯ ಸ್ವಾಗತಿಸಿ, ಸಿಬಂದಿ ಜೈಕರ್‌ ಶೆಟ್ಟಿ ವಂದಿಸಿದರು. ರಮೇಶ್‌ ಕಾರ್ಯಕ್ರಮ ನಿರ್ವಹಿಸಿದರು.

ಬೆಳ್ಳಿ ಪದಕ ಪಡೆದವರು
ಮಡಿಕೇರಿ ಘಟಕದ ಚಾಲಕರಾದ ಎ.ರ್‌. ಸುರೇಶ್‌, ಸತೀಶ್‌, ಕೆ.ಟಿ. ಮಹಮ್ಮದ್‌, ಪುತ್ತೂರು ಘಟಕದ ಚಾಲಕರಾದ ಚಂದ್ರಶೇಖರ್‌, ಆನಂದ ಗೌಡ ಕೆ, ಬಿ.ಸಿ.ರೋಡ್‌ ಘಟಕದ ಯತೀಶ್‌ ಪೂಜಾರಿ, ಬಸಪ್ಪ ಈರಪ್ಪ, ಮೌಲಾ ಸಾಬ್‌, ಧರ್ಮಸ್ಥಳ ಘಟಕದ ಎಸ್‌.ಪಿ. ರತ್ನಾಕರ, ಎಸ್‌.ಎಸ್‌. ಹರೀಶ್‌, ಸುದರ್ಶನ್‌, ವೆಂಕಪ್ಪ ಗೌಡ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.

ಕೆಎಂಪಿಎಲ್‌ನಲ್ಲಿ ಸಾಧನೆ ಮಾಡಿದ ಚಾಲಕರಾದ ಪುತ್ತೂರು ಘಟಕದ ಉಮಾನಾಥ ಭಟ್‌, ರಾಜು ಎಚ್‌.ಪಿ., ಬಿ.ಸಿ. ರೋಡ್‌ ಘಟಕದ ರಂಗಪ್ಪ ಪೂಜಾರಿ, ಮಡಿಕೇರಿ ಘಟಕದ ತಿಮ್ಮಪ್ಪ ಎಂ.ಎನ್‌., ಸುಳ್ಯ ಘಟಕದ ಜಗನ್ನಾಥ ವಿ.ಟಿ. ಅವರಿಗೆ ನಗದು ಬಹುಮಾನ ನೀಡಿ ಗೌರವಿಸಲಾಯಿತು. ಮೂರು ವರ್ಷಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ನಿರ್ವಾಹಕರಾದ ಧರ್ಮಸ್ಥಳ ಘಟಕದ ಗಿರಿಯಪ್ಪ ಪೂಜಾರಿ, ಪುತ್ತೂರು ಘಟಕದ ಗೋಪಾಲ ನಾಯ್ಕ ಹಾಗೂ ಬಿ.ಸಿ. ರೋಡ್‌ ಘಟಕದ ಮಧು ಬಿ.ಆರ್‌. ಅವರಿಗೆ ‘ಅತ್ಯುತ್ತಮ ನಿರ್ವಾಹಕ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜನವರಿಯಲ್ಲಿ ನಿವೃತ್ತರಾದ ಪುತ್ತೂರು ಘಟಕದ ಚಾಲಕರಾದ ಕೇಶವ ಗೌಡ ಹಾಗೂ ನಾರಾಯಣ ಗೌಡರನ್ನು ಸಮ್ಮಾನಿಸಲಾಯಿತು. ಅಪರಾಧ ಹಾಗೂ ಅಪಘಾತ ರಹಿತ ಚಾಲನೆಗೆ ಮುಖ್ಯಮಂತ್ರಿಗಳು ನೀಡುವ ಚಿನ್ನದ ಪದಕಕ್ಕೆ ಆಯ್ಕೆಯಾದ ಚಾಲಕರಾದ ಪುತ್ತೂರು ಘಟಕದ ಜಯರಾಮ ಪುರುಷ, ಉಮಾನಾಥ ಭಟ್‌, ಪೆರ್ಗಡೆ ಗೌಡ, ಗೋಪಾಲ ಗೌಡ, ಪ್ರಪುಲ್ಲಚಂದ್ರ ರೈ ಹಾಗೂ ಬಿ.ಸಿ. ರೋಡ್‌ ಘಟಕದ ಆನಂದ ಕೆ., ಚಿನ್ನದ ಪದಕ ಪಡೆದು ನಿವೃತ್ತರಾದ ಫ್ರಾನ್ಸಿಸ್‌ ಡಿ’ಕುನ್ಹಾ, ಶ್ರೀಧರ ಕೆ. ಹಾಗೂ ಆನಂದ ಅವರನ್ನು ಗೌರವಿಸಲಾಯಿತು.

ಅನನ್ಯ ಕೊಡುಗೆ
ಅಧ್ಯಕ್ಷತೆ ವಹಿಸಿದ ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗ ನಿಯಂತ್ರಣಾಧಿಕಾರಿ ನಾಗರಾಜ್‌ ಶಿರಾಲಿ ಮಾತನಾಡಿ, ಪುತ್ತೂರು ಕೆಎಸ್‌ಆರ್‌ಟಿಸಿಯ ಬೆಳವಣಿಗೆಯಲ್ಲಿ ಸಹೋದ್ಯೋಗಿಗಳ ಕೊಡುಗೆ ಅನನ್ಯ. ಶಾಸಕರೂ ಕೆಎಸ್‌ಆರ್‌ಟಿಸಿ ಬೆಳವಣಿಗೆಯನ್ನು ಸಾಕಷ್ಟು ಶ್ರಮವಹಿಸಿದ್ದಾರೆ. ಇಂದು 12 ಚಾಲಕರು ತಮ್ಮ ನಿಸ್ವಾರ್ಥ ಸೇವೆಯಿಂದ ಅಭಿನಂದನೆಗೆ ಅರ್ಹರಾಗಿದ್ದಾರೆ. ಸಂಸ್ಥೆಯ ಕೆಲಸವೆಂದರೆ ಸಾರ್ವಜನಿಕರ ಕೆಲಸ ಎಂದು ಭಾವಿಸಬೇಕು ಎಂದರು.

ಟಾಪ್ ನ್ಯೂಸ್

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

Veerappa Moily ಬಿಜೆಪಿ ವಿರುದ್ಧ ಅಸಮಾಧಾನ ಜ್ವಾಲಾಮುಖಿ ಸ್ಫೋಟ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಮತದಾರರ ಚೀಟಿಯಲ್ಲಿ ಕ್ಯುಆರ್‌ ಕೋಡ್‌! ಮಂಗಳೂರು ದಕ್ಷಿಣ-ಉತ್ತರದಲ್ಲಿ ಅನುಷ್ಠಾನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

Dharmasthala; ಕೆಎಸ್ಸಾರ್ಟಿಸಿ ಬಸ್‌ನಡಿ ಸಿಲುಕಿ ಮಹಿಳೆ ಸಾವು

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

ಮಾದಕವಸ್ತು ಕಳ್ಳಸಾಗಣೆ: ಸುಳ್ಯದ ಇಬ್ಬರು ಕೇರಳ ಪೋಲಿಸ್‌ ವಶಕ್ಕೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Aranthodu ಕಾಂಗ್ರೆಸ್‌ ಕಾರ್ಯಕರ್ತನ ಮೇಲೆ ಹಲ್ಲೆ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

Subramanya ಏನೆಕಲ್ಲು: ಕಾರಿಗೆ ಗೂಡ್ಸ್‌ ಆಟೋ ಢಿಕ್ಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೋಮುಸೂಕ್ಷ್ಮ ಹಣೆಪಟ್ಟಿ ಕಳಚಿ, ಅಭಿವೃದ್ಧಿಗಾಗಿ ಕಾಂಗ್ರೆಸ್‌ ಬೆಂಬಲಿಸಿ: ಪದ್ಮರಾಜ್‌ ಪೂಜಾರಿ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ಕೆಂಪಡಿಕೆ ಧಾರಣೆ ಏರಿಕೆ; ಚಾಲಿ ಅಡಿಕೆಗೂ ಬೇಡಿಕೆ: ಚುನಾವಣೆ ಬಳಿಕ ಮತ್ತಷ್ಟು ಹೆಚ್ಚಳ ಸಾಧ್ಯತೆ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

ದಕ್ಷಿಣ ಕನ್ನಡ, ಉಡುಪಿ ಚಿಕ್ಕಮಗಳೂರು ಕ್ಷೇತ್ರಗಳು ; ಬಹಿರಂಗ ಪ್ರಚಾರ ಅಂತ್ಯ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Kodagu: ಕಾನೂನು ಸುವ್ಯವಸ್ಥೆಗೆ 1,600 ಪೊಲೀಸರ ನಿಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.