ಪಾಲಿಕೆ, ಆರೋಗ್ಯ ಇಲಾಖೆಯಿಂದ ಬೃಹತ್‌ ವ್ಯಾಕ್ಸಿನ್‌ ಮೇಳ


Team Udayavani, Nov 26, 2021, 3:30 AM IST

ಪಾಲಿಕೆ, ಆರೋಗ್ಯ ಇಲಾಖೆಯಿಂದ ಬೃಹತ್‌ ವ್ಯಾಕ್ಸಿನ್‌ ಮೇಳ

ಮಹಾನಗರ: ನಗರದಲ್ಲಿ ಕೋವಿಡ್‌ ರೋಗ ನಿರೋಧಕ ಲಸಿಕೆ ಪ್ರಗತಿ ಹೆಚ್ಚಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮತ್ತು ಮಹಾನಗರ ಪಾಲಿಕೆ “ಬೃಹತ್‌ ವ್ಯಾಕ್ಸಿನ್‌ ಮೇಳ’ ಆರಂಭಿ ಸಲು ಮುಂದಾಗಿದೆ. ಅದರಂತೆ ಇಂದು, ನಾಳೆ (ಶುಕ್ರವಾರ, ಶನಿವಾರ) ನಗರದ ಜನನಿಬಿಡ ಪ್ರದೇಶಕ್ಕೆ ತೆರಳಿ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಜಿಲ್ಲೆಯಲ್ಲಿ ಮೊದಲ ಮತ್ತು 2ನೇ ಡೋಸ್‌ ಪಡೆಯಲು ಬಾಕಿ ಇರುವವರ ಮನವೊಲಿಸಲು  ಪಾಲಿಕೆ, ಆರೋಗ್ಯಇಲಾಖೆ ಮುಂದಾಗಿದೆ. ಅದರಂತೆ ನ. 26 ಮತ್ತು 27ರಂದು ಬೆಳಗ್ಗೆಯಿಂದ ಸಂಜೆಯ ವರೆಗೆ ಪಾಲಿಕೆ ವ್ಯಾಪ್ತಿಯ ಮಾಲ್‌ಗ‌ಳು, ಮಾರುಕಟ್ಟೆ, ಅಂಗಡಿಗಳು, ಸೂಪರ್‌ ಮಾರ್ಕೆಟ್‌ ಸಹಿತ ಹೆಚ್ಚು ಜನ ಸೇರುವಲ್ಲಿ ಪ್ರತ್ಯೇಕ ತಂಡ ತೆರಳಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲಿದೆ.

ಮೊದಲ ಡೋಸ್‌ ಮತ್ತು ಎರಡನೇ ಡೋಸ್‌ ಲಸಿಕೆ ಪಡೆಯಲು ಬಾಕಿ ಇರುವವರು ಸ್ಥಳದಲ್ಲಿಯೇ ಲಸಿಕೆ ಪಡೆ ಯಲು ಅವಕಾಶ ಕಲ್ಪಿಸಲಾಗಿದೆ. ಈ ಅಭಿ ಯಾನಕ್ಕೆ ಸಿಗುವ ಜನಸ್ಪಂದನೆಯನ್ನು ಅವಲೋಕಿಸಿ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ಈ ಅಭಿಯಾನ ಮುಂದುವರಿಸಲು ಆರೋಗ್ಯ ಇಲಾಖೆ ತೀರ್ಮಾನಿಸಿದೆ.

ವಾರದಲ್ಲಿ ಅರ್ಧ ಲಕ್ಷಕ್ಕೂ ಹೆಚ್ಚು ಮಂದಿಗೆ ಲಸಿಕೆ:

ದ.ಕ. ಜಿಲ್ಲೆಯಲ್ಲಿ ಸದ್ಯ ಲಸಿಕೆ ಅಭಿ ಯಾನಕ್ಕೆ ತುಸು ವೇಗ ದೊರಕಿದೆ. ನ. 15ರಿಂದ 19ರ ವರೆಗೆ ಜಿಲ್ಲೆಯಲ್ಲಿ ಒಟ್ಟು 4,128 ಮಂದಿ ಮೊದಲ ಡೋಸ್‌ ಮತ್ತು 45,352 ಮಂದಿ 2ನೇ ಡೋಸ್‌ ಸೇರಿ ಒಟ್ಟು 49,480 ಮಂದಿ ಲಸಿಕೆ ಪಡೆದಿದ್ದಾರೆ. ಆದರೆ ಮುಂದಿನ 5 ದಿನ ಲಸಿಕೆ ನೀಡಿಕೆ ಮತ್ತಷ್ಟು ಏರಿಕೆಯಾಗಿದ್ದು, 4,598 ಮಂದಿ ಮೊದಲ ಡೋಸ್‌ ಮತ್ತು 60,608 ಮಂದಿ 2ನೇ ಡೋಸ್‌ ಲಸಿಕೆ ಪಡೆದು ಒಟ್ಟು ಐದು ದಿನಗಳಲ್ಲಿ 60,608 ಮಂದಿ ಲಸಿಕೆ ಪಡೆದಿದ್ದಾರೆ.

ಮನಪಾ ಆಯುಕ್ತ ಅಕ್ಷಯ್‌ ಶ್ರೀಧರ್‌ ಅವರು “ಉದಯವಾಣಿ ಸುದಿನ’ಕ್ಕೆ ಪ್ರತಿಕ್ರಿಯಿಸಿ, “ಪಾಲಿಕೆ ವ್ಯಾಪ್ತಿಯ ಎಲ್ಲರೂ ಲಸಿಕೆ ಪಡೆಯಲು ಪ್ರೇರೇಪಿ ಸುವ ಉದ್ದೇಶದಿಂದ ಪಾಲಿಕೆಯಲ್ಲಿ ಈಗ ಪ್ರತ್ಯೇಕ ವಾರ್‌ ರೂಂ ತೆರೆಯಲಾಗಿದೆ.

ನಗರ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಮೊದಲ ಡೋಸ್‌, ಎರಡನೇ ಡೋಸ್‌ ಲಸಿಕೆಗೆ ಬಾಕಿ ಇರುವವರ ಮಾಹಿತಿಯನ್ನು ಸಂಗ್ರಹಿಸಿ ಅಂತಹವರಿಗೆ ವಾರ್‌ ರೂಂನಿಂದ ಕರೆ ಮಾಡಿ ಲಸಿಕೆ ಪಡೆಯಲು ಸೂಚಿಸಲಾಗುತ್ತದೆ. ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬಂದಿ ಜತೆ ಜಿಲ್ಲೆಯ ವಿವಿಧ ಕಾಲೇಜಿನ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಕೂಡ ಮನೆ  ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸ್ತುದ್ದಾರೆ’ ಎನ್ನುತ್ತಾರೆ.

ಇಂದು ಪಾಲಿಕೆ ಕಚೇರಿಯಲ್ಲಿ  ಚಾಲನೆ :

ಕೋವಿಡ್‌ ನಿರೋಧಕ ಲಸಿಕೆ ಮೇಳವು ನ. 26ರಂದು ಬೆಳಗ್ಗೆ 9ಗಂಟೆಗೆ ಪಾಲಿಕೆ ಕಚೇರಿ ಮುಂಭಾಗದಲ್ಲಿ ಚಾಲನೆಗೊಂಡು, 9.30ಕ್ಕೆ ಒಷಿಯನ್‌ ಪರ್ಲ್ ಬಳಿ ಬರಲಿದೆ. ಈ ವ್ಯಾಪ್ತಿಯಲ್ಲಿ ಬರುವ ಕಾಲೇಜುಗಳ ಎನ್ನೆಸ್ಸೆಸ್‌ ವಿದ್ಯಾರ್ಥಿಗಳು ಅಲ್ಲಿ ಸೇರಿ ಲಸಿಕೆ ಪಡೆಯಲು ಹುರಿದುಂಬಿಸಲು ಲಸಿಕಾ ಮಿತ್ರ ಗುರುತಿನ ಚೀಟಿ ಜತೆ ವಿವಿಧ ಆಕರ್ಷಕ ಲಸಿಕಾ ಮಿತ್ರನ ವೇಷ ಭೂಷಣದೊಂದಿಗೆ ಕಾಣಿಸಗೊಳ್ಳಲಿದ್ದಾರೆ. ನಗರ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 7.30ರಿಂದ ಸಂಜೆ 7.30ರ ವರೆಗೆ ಲಸಿಕೆ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಡಿಎಚ್‌ಒ ತಿಳಿಸಿದ್ದಾರೆ.

ಗುರಿ/   ಮೊದಲ ಡೋಸ್‌/    ಶೇ.

ಆರೋಗ್ಯ ಕಾರ್ಯಕರ್ತರು

52,523 50,926 96.96

ಮುಂಚೂಣಿ ಕಾರ್ಯಕರ್ತರು

15,911 15,911 100

18 ರಿಂದ 44 ವರ್ಷದೊಳಗಿನವರು

9,65,554           7,97,734           82.62

45 ರಿಂದ 60 ವರ್ಷದೊಳಗಿನವರು

4,16,123           4,12,138           99.04

60 ವರ್ಷ ಮೇಲ್ಪಟ್ಟವರು

2,69,000           2,50,642           93.18

ಲಸಿಕೆ ಪಡೆದುಕೊಳ್ಳಲು ಮುಂದೆ ಬನ್ನಿ :

ಲಸಿಕೆ ಪಡೆಯಲು ಬಾಕಿ ಇರುವವರನ್ನು ಮನವೊಲಿಸುವ ಕೆಲಸ ಆರೋಗ್ಯ ಇಲಾಖೆಯಿಂದ ಮಾಡಲಾಗುತ್ತಿದೆ. ಮೆಗಾ ಲಸಿಕೆ ಮೇಳದಲ್ಲಿ ಒಂದು ಲಕ್ಷ ಲಸಿಕೆ ನೀಡುವ ಗುರಿ ಇದೆ. 18 ವರ್ಷ ಮೇಲ್ಪಟ್ಟ ಮೊದಲ ಮತ್ತು ಎರಡನೇ ಡೋಸ್‌ ಪಡೆಯಲು ಬಾಕಿ ಇರುವವರೆಲ್ಲ ಲಸಿಕೆ ಪಡೆದುಕೊಳ್ಳಬೇಕು.-ಡಾ| ಕಿಶೋರ್‌ ಕುಮಾರ್‌, ದ.ಕ. ಜಿಲ್ಲಾ ಆರೋಗ್ಯಾಧಿಕಾರಿ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

Bike thief: ಬಜಪೆ ಪೊಲೀಸರಿಂದ ಅಂತರ್‌ ಜಿಲ್ಲಾ ಬೈಕ್‌ ಕಳ್ಳನ ಬಂಧನ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

12-baikampady

Fire; ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿ ಅಗ್ನಿ ಅವಘಡ

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

Pilikula: “ಫ್ಯಾನ್‌-ನೀರು’ ಆಶ್ರಯ; ಬಿಸಿಲ ಬೇಗೆಗೆ “ಪಿಲಿಕುಳ’ದಲ್ಲಿ ಪ್ರಾಣಿಗಳೂ ಸುಸ್ತು!

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.