Udayavni Special

ಹಮ್‌ ಜೀತೇಂಗೆ: ಮಂಗಳೂರಿನಲ್ಲಿ ಮತ್ತೆ ಮೋದಿ


Team Udayavani, May 10, 2018, 6:00 AM IST

s-17.jpg

ಮಂಗಳೂರು: “ಕರ್ನಾಟಕ ಮೇ ಹಮ್‌ ಜೀತೇಂಗೆ…(ಕರ್ನಾಟಕದಲ್ಲಿ ನಾವು ಗೆಲ್ಲುತ್ತೇವೆ)’. ಪ್ರಧಾನಿ ನರೇಂದ್ರ ಮೋದಿ ಅವರು ಬುಧವಾರ ಮಂಗಳೂರಿನಲ್ಲಿ ಬಿಜೆಪಿ ನಾಯಕರನ್ನು ಹುರಿದುಂಬಿಸಿ ಹೇಳಿದ ಮಾತಿದು.

ಬೆಳಗಾವಿಯಲ್ಲಿ ಬುಧವಾರ ಸಂಜೆ ಆಯೋಜಿಸಲಾಗಿದ್ದ ಬಿಜೆಪಿ ಸಮಾವೇಶದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ 4ರ ಸುಮಾರಿಗೆ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದರು. ಚಿಕ್ಕಮಗಳೂರಿನಿಂದ ಹೆಲಿಕಾಪ್ಟರ್‌ ಮೂಲಕ ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ಅವರನ್ನು ದ.ಕ. ಜಿಲ್ಲಾ ಬಿಜೆಪಿ ಪ್ರಮುಖರಾದ ಕ್ಯಾ| ಗಣೇಶ್‌ ಕಾರ್ಣಿಕ್‌, ಮೋನಪ್ಪ ಭಂಡಾರಿ, ಕ್ಯಾ| ಬೃಜೇಶ್‌ ಚೌಟ, ಚಂದ್ರಶೇಖರ್‌ ಉಚ್ಚಿಲ, ನಮಿತಾ ಶ್ಯಾಮ್‌, ಡಾ| ಅಣ್ಣಯ್ಯ ಕುಲಾಲ್‌, ಸಂದೇಶ್‌ ಶೆಟ್ಟಿ, ಹರೀಶ್‌ ಮೂಡುಶೆಡ್ಡೆ  ಸ್ವಾಗತಿಸಿದರು.

ಈ ಸಂದರ್ಭ ಬಿಜೆಪಿ ಪ್ರಮುಖರ ಜತೆ ಕುಶಲೋಪರಿ ನಡೆಸಿದ ಪ್ರಧಾನಿ, “ಚುನಾವಣೆ ಸಂಬಂಧ ಕರಾವಳಿ ಭಾಗದಲ್ಲಿ ಪ್ರಸ್ತುತ ವಾತಾವರಣ ಹೇಗಿದೆ?’ ಎಂದು ಕೇಳಿದರು. ಅದಕ್ಕೆ ಉತ್ತರಿಸಿದ ಬಿಜೆಪಿ ಪ್ರಮುಖರು, “ಪಕ್ಷದ ಪರ ಜನರಿಂದ ಉತ್ತಮ ಸ್ಪಂದನೆ ಲಭ್ಯವಾಗುತ್ತಿದೆ. ತಾವು ಮಂಗಳೂರು ಸೇರಿದಂತೆ ರಾಜ್ಯದಲ್ಲಿ ಪ್ರಚಾರ ಕೈಗೊಂಡ ಬಳಿಕ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸ ಹೆಚ್ಚಿದೆ. 

ಅಮಿತ್‌ ಶಾ ಅವರ ರೋಡ್‌ ಶೋ ಕೂಡ ಯಶಸ್ವಿಯಾಗಿದೆ’ ಎಂದರು. ಇದಕ್ಕೆ ಉತ್ತರಿಸಿದ ಮೋದಿ “ಕರ್ನಾಟಕದಲ್ಲಿ ನಾವೇ ಗೆಲುವು ಸಾಧಿಸುತ್ತೇವೆ’ ಎಂದರು. ಸಂಜೆ ಸುಮಾರು 4.10ಕ್ಕೆ ಪ್ರಧಾನಿ ಅವರು ಮಂಗಳೂರಿನಿಂದ ಬೆಳಗಾವಿಗೆ ವಿಶೇಷ ವಿಮಾನದಲ್ಲಿ ತೆರಳಿದರು.

ಪ್ರಧಾನಿ ಮೋದಿ ಅವರು ಈ ಹಿಂದೆ ನಾಲ್ಕು ಬಾರಿ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿ ಅಲ್ಲಿಂದ ಇತರ ಕಡೆಗಳಿಗೆ ತೆರಳಿದ್ದರು. ಕೇರಳದಲ್ಲಿ ನಡೆದ ಚುನಾವಣಾ ಪ್ರಚಾರ, ಶ್ರೀ ಕ್ಷೇತ್ರ ಧರ್ಮಸ್ಥಳ ಕಾರ್ಯಕ್ರಮ, ಲಕ್ಷದ್ವೀಪಕ್ಕೆ ಪ್ರಯಾಣ ಹಾಗೂ ಇತ್ತೀಚೆಗೆ ಉಡುಪಿ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳುವ ಹಿನ್ನೆಲೆಯಲ್ಲಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿ, ಇಲ್ಲಿಂದ ಹೆಲಿಕಾಪ್ಟರ್‌ ಮೂಲಕ ತೆರಳಿದ್ದರು.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ಮೋದಿ ಸೂಚನೆ? ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಸುಧಾಕರ್

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಪಿನಾಕಿನಿ ಪ್ರವಾಹಕ್ಕೆ ಮಟ್ಟುಗುಳ್ಳ ಬೆಳೆ ಹಾನಿ: ಪ್ರದೇಶಕ್ಕೆ ಜಿಲ್ಲಾಧಿಕಾರಿ ಭೇಟಿ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ

ಐಪಿಎಲ್ ನಲ್ಲಿ ರೋಹಿತ್ ಶರ್ಮಾ ದ್ವಿಶತಕ: ಏನಿದು ಹೊಸ ದಾಖಲೆ






ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಾಸ್ಕ್ ಕಡ್ಡಾಯ; ಧರಿಸದಿದ್ದರೆ ದಂಡ: ಡಿಸಿ

ಮಾಸ್ಕ್ ಕಡ್ಡಾಯ; ಧರಿಸದಿದ್ದರೆ ದಂಡ: ಡಿಸಿ

ಮಂಗಳೂರು ಪಾಲಿಕೆಗೆ 725 ಕೋ.ರೂ. ಸಾಲದ ಹೊರೆ !

ಮಂಗಳೂರು ಪಾಲಿಕೆಗೆ 725 ಕೋ.ರೂ. ಸಾಲದ ಹೊರೆ !

“ಕ್ಲಾಕ್‌ ಟವರ್‌’ ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

“ಕ್ಲಾಕ್‌ ಟವರ್‌’ ವೃತ್ತದ ವಿಸ್ತರಣೆಗೆ ತಾತ್ಕಾಲಿಕ ತಡೆ

Permit trading on Sunday also: Manohar Shetty

ರವಿವಾರವೂ ಸಂತೆ ವ್ಯಾಪಾರಕ್ಕೆ ಅನುಮತಿ ನೀಡಿ: ಮನೋಹರ್‌ ಶೆಟ್ಟಿ

ಜಂಕ್ಷನ್‌ಗಳಲ್ಲಿ ಅಳವಡಿಸಿದ್ದ ರಬ್ಬರ್‌ ಕೋನ್‌ ಬದಲಾವಣೆಗೆ ನಿರ್ಧಾರ

ಜಂಕ್ಷನ್‌ಗಳಲ್ಲಿ ಅಳವಡಿಸಿದ್ದ ರಬ್ಬರ್‌ ಕೋನ್‌ ಬದಲಾವಣೆಗೆ ನಿರ್ಧಾರ

MUST WATCH

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavani

udayavani youtube

Hospet : Tungabhadra Dam Gates Are Opened | TB Dam | Udayavani

udayavani youtube

ಸುರತ್ಕಲ್ ಕಳ್ಳತನ ಪ್ರಕರಣ: ಕೇರಳದ ಇಬ್ಬರು ಸೇರಿ ನಾಲ್ವರು ಆರೋಪಿಗಳನ್ನು ಬಂಧಿಸಿದ ಪೊಲೀಸರು



ಹೊಸ ಸೇರ್ಪಡೆ

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ತೀರ್ಥಹಳ್ಳಿ ಸಮೀಪ ಕುಸಿದ ಸೇತುವೆ: ಶಿವಮೊಗ್ಗ- ಉಡುಪಿ ನಡುವಿನ ಸಂಚಾರ ಸಂಪುರ್ಣ ಬಂದ್

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಇಲ್ಲ: ಸಚಿವ ಸುಧಾಕರ್ ಸ್ಪಷ್ಟನೆ

ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲು ಮೋದಿ ಸೂಚನೆ? ಊಹಾಪೋಹಗಳಿಗೆ ತೆರೆ ಎಳೆದ ಸಚಿವ ಸುಧಾಕರ್

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ತಮಿಳು ನಟನನ್ನು ಫಾಲೋ ಮಾಡಿದ ಜಸ್ಟಿನ್‌ ಬೈಬರ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ಲಡಾಖ್‌ಗೆ ಹೊರಡಲು ಚೀನೀ ಸೈನಿಕರ ಅಳುಕು: ಸಾಮಾಜಿಕ ಜಾಲತಾಣಗಳಲ್ಲಿ ವೀಡಿಯೋ ವೈರಲ್‌

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

ದೆಹಲಿಯಲ್ಲಿ ಇಂದು ಸಂಜೆ ನಾಲ್ಕು ಗಂಟೆಗೆ ಸುರೇಶ್ ಅಂಗಡಿ ಅಂತ್ಯಕ್ರಿಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.