ಮಳೆ ಬಾರದಿದ್ದರೆ ನೀರಿನ ಸಮಸ್ಯೆ ಮತ್ತಷ್ಟು ತೀವ್ರ


Team Udayavani, May 12, 2019, 6:00 AM IST

15

ನೀರಿಲ್ಲದೇ ತಳ ಕಾಣುತ್ತಿರುವ ಅದ್ಯಪಾಡಿ ಬಾವಿ.

ಬಜಪೆ: ಕಂದಾವರ ಗ್ರಾಮ ಪಂಚಾಯತ್‌ ವ್ಯಾಪ್ತಿಯ ಅದ್ಯಪಾಡಿ ಕೊಲ್ಲೊಟ್ಟು, ಅರ್ಬಿ, ದೈವಂಗಳಗುಡ್ಡೆ, ದೇವಸ್ಥಾನ ಬಳಿಯ ಪ್ರದೇಶದಲ್ಲಿ ಸುಮಾರು 300ಮನೆಗಳಿಗೆ ಈಗ ನೀರಿನ ಸಮಸ್ಯೆ ಎದುರಾಗಿದೆ. ಈ ಪ್ರದೇಶದಲ್ಲಿ ಸುಮಾರು 200 ಬಾವಿಗಳಿದ್ದು ಅದರೆ ನೀರು ಇರುವ ಬಾವಿಗಳು 15 ಮಾತ್ರ.ಅದು ಕೂಡ ಒಂದು ಅಡಿಗಳಷ್ಟು ಮಾತ್ರ ನೀರು ಇದೆ. ಒಂದು ವಾರದೊಳಗೆ ಮಳೆ ಬಾರ ದಿದ್ದರೆ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳಿವೆ.

ಗುರುಪುರ ನದಿಯ ಸಮೀಪ ಅದ್ಯಪಾಡಿಯಲ್ಲಿ ಬಾವಿ, ಕೆರೆಗಳು ನೀರಿನ ಆಸರೆಗಳು. ಈಗ ಬಾವಿಗಳಲ್ಲಿ ನೀರಿಲ್ಲ ವಾಗಿರುವುದು ದೊಡ್ಡ ಚಿಂತೆಯಾಗಿ ಪರಿಣಮಿಸಿದೆ. ಸದ್ಯ ಕುಡಿಯುವ ನೀರಿಗೆ ಅಲ್ಲಿನ ನಿವಾಸಿಗಳು ಟ್ಯಾಂಕರ್‌ ನೀರನ್ನೇ ಅಶ್ರಿತರಾಗಿದ್ದಾರೆ. ಬೇಸಗೆಯಲ್ಲಿಯೂ ನೀರು ಇಂಗದಿರು ವ ಬಾವಿಗಳು ಈ ಬಾರಿ ಕೆಸರು ಕಾಣಸಿಗುವ ಪರಿಸ್ಥಿತಿಯಲ್ಲಿದೆ. ನೀರಿನ ಪರಿಸ್ಥಿತಿ, ಅಂತರ್ಜಲ ಮಟ್ಟ ಎಷ್ಟರವರೆಗೆ ಕುಸಿದಿದೆ ಎಂಬುವುದು ತಿಳಿಯಬಹುದು. ಮನೆಗಳ ಬಾವಿಯಲ್ಲಿ ನೀರಿಲ್ಲದೆ ಕಾರಣ ಒಂದು ಕಿ.ಮೀ.ದೂರದಿಂದ ಜನರು ಕೊಡದಲ್ಲಿ ನೀರು ತರುತ್ತಿದ್ದಾರೆ. ಕೆಲವರು ಈಗಾಗಲೇ ಟ್ಯಾಂಕರ್‌ ಮೂಲಕ ನೀರು ತರಿಸುತ್ತಿದ್ದಾರೆ.

ಕೊಳವೆಬಾವಿಗಳ ಅಂತರ್ಜಲ ಕುಸಿತ
ಈ ಪ್ರದೇಶದಲ್ಲಿ ಸಾರ್ವಜನಿಕ ಒಂದು ಬಾವಿ, ಕೊಳವೆಬಾವಿಗಳಿಂದ ಇಲ್ಲಿನ ಜನರಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಕೊಳವೆಬಾವಿಯಲ್ಲಿಯೂ ಕೂಡ ಅಂತರ್ಜಲಮಟ್ಟ ಕುಸಿದ ಕಾರಣ ಅರ್ಧ ತಾಸಿಗೆ ಒಮ್ಮೆ ನೀರು ಸರಬರಾಜು ಮಾಡಲಾಗುತ್ತದೆ. ಹೆಚ್ಚು ಬಾವಿಗಳು ಇರುವುದರಿಂದ ಪಂಚಾಯತ್‌ನಿಂದ ನೀಡಲಾಗುವ ಕುಡಿಯುವ ನೀರಿಯನ್ನು ಇಲ್ಲಿನ ನಿವಾಸಿಗಳು ತೆಗೆದುಕೊಂಡಿಲ್ಲ. ಈಗ ಬಾವಿಗಳಲ್ಲಿ ನೀರಿಲ್ಲದ್ದರಿಂದ ಜನರಿಗೆ ಸಮಸ್ಯೆಯಾಗಿದೆ.

ಅದ್ಯಪಾಡಿ ದೇವಸ್ಥಾನದ ಬಳಿಯ ಬಾವಿಯಲ್ಲಿ ನೀರಿಲ್ಲ ಎಂದು ಕೆಸರನ್ನು ತೆಗೆದರೂ ಈಗ ದಿನದಲ್ಲಿ ಮುಕ್ಕಾಲು ತಾಸು ನೀರು ಸಿಗುತ್ತದೆ. ಇದು 200 ಮನೆಗಳಿಗೆ ವಾರಕ್ಕೊಂದು ಬಾರಿಯಂತೆ ನೀರು ನೀಡಲಾಗುತ್ತದೆ. ಈ ಪ್ರದೇಶದಲ್ಲಿ ಈ ಬಾವಿಯೇ ಕುಡಿಯುವ ನೀರಿಗೆ ಅಶ್ರಯವಾಗಿದೆ.

ತಳ ಕಾಣುತ್ತಿರುವ ಬಾವಿಗಳು
ಈ ಪ್ರದೇಶ ಹೆಚ್ಚಿನ ಬಾವಿಗಳು 30ರಿಂದ 40 ಅಡಿ ಅಳವಾಗಿದೆ. ಗುರುಪುರ ನದಿ ಸಮೀಪದಲ್ಲಿ ಹರಿಯುವ ಕಾರಣ ಹೆಚ್ಚು ಅಳದ ಬಾವಿಯನ್ನು ಕೊರೆಯುವ ಆವಶ್ಯಕತೆಯಿರಲಿಲ್ಲ, ಆದರೆ ಈಗ ಬಾವಿಗಳಲ್ಲಿ ನೀರಿಲ್ಲರಿರುವುದರಿಂದ ಬಾವಿಗಳನ್ನು ಇನ್ನೂ ಅಳಕ್ಕೆ ಕೊರೆಯಬೇಕಾದ ಪರಿಸ್ಥಿತಿಯಲ್ಲಿದ್ದಾರೆ ಇಲ್ಲಿನ ನಿವಾಸಿಗಳು.

ಪಂಚಾಯತ್‌ಗೆ ಈ ಪ್ರದೇಶದಲ್ಲಿ ನೀರಿಲ್ಲದ ಬಗ್ಗೆ ಗಮನಕ್ಕೆ ತರಲಾಗಿದೆ. ಅದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂಬುವುದು ಇಲ್ಲಿನ ನಿವಾಸಿಗಳ ಅಳಲು. ಕೆರೆ, ಬಾವಿಗಳು ಹೂಳು, ಕೆಸರಿನಿಂದ ತುಂಬಿದ್ದು ಸ್ವತ್ಛ ಕಾರ್ಯ ಎಲ್ಲೆಡೆ ನಡೆಯಬೇಕಾಗಿದೆ. ಹೆಚ್ಚಿನ ಖಾಸಗಿ ಹಾಗೂ ಸಾರ್ವಜನಿಕ ನೀರಿನ ಅಶ್ರಯವಾದ ಬಾವಿ, ಕೆರೆ, ಮದಕಗಳು ಇಂದು ಮುಚ್ಚಿ ಹೋಗುತ್ತಿದೆ. ಇದಕ್ಕೆ ಉದ್ಯೋಗ ಖಾತರಿ ಯೋಜನೆ ಅನ್ವಯವಾಗುವಂತೆ ಮಾಡಬೇಕಾಗಿದೆ. ಇದು ಒಂದು ಪ್ರಯತ್ನವಾದಲ್ಲಿ ನೀರಿನ ಸಮಸ್ಯೆಗಳು ಕಡಿಮೆಯಾಗಬಹುವುದು.ಬಾವಿಗಳು, ಕೆರೆಗಳು, ಮದಕಗಳು ಉಳಿಯಬಹುವುದು. ನಳ್ಳಿ ನೀರಿನ ಉಪಯೋಗದಿಂದಾಗಿ ಬಾವಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದು ಎಲ್ಲೆಡೆ ಬಾವಿಗಳನ್ನು ಮುಚ್ಚುತ್ತಿರುವುದು ಕಂಡು ಬರುತ್ತಿದೆ.

 ಟ್ಯಾಂಕರ್‌ ಮೂಲಕ ನೀರು ಸರಬರಾಜು
ಟ್ಯಾಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಮಾಟೆಬೈಲಿನಲ್ಲಿ ಕೊಳವೆಬಾವಿಗೆ ಪೈಪ್‌ಲೈನ್‌ ವಿಸ್ತರಣೆ ಕಾಮಗಾರಿ ನಡೆದಿದೆ. ದೈವಂಗಳಗುಡ್ಡೆಯ ಬಾವಿಯ ನೀರು ಒಳ್ಳೆದಿಲ್ಲದಿರುವುದರಿಂದ ನೀರನ್ನು ಎರಡು ದಿನಗಳಿಗೊಮ್ಮೆ ನೀಡಲಾಗುತ್ತದೆ.ಅದ್ಯಪಾಡಿಯಲ್ಲಿ ಬಾವಿಗಳಲ್ಲಿ ನೀರು ಕಡಿಮೆಯಾಗಿದ್ದು, ಟ್ಯಾಂಕರ್‌ ಮೂಲಕ ಸರಬರಾಜು ಮಾಡಲು ಬೇಡಿಕೆ ಬಂದಿಲ್ಲ, ಬಂದರೆ ನೀಡಲಾಗುತ್ತದೆ.
– ರೋಹಿಣಿ ಬಿ., ಪಿಡಿಒ, ಕಂದಾವರ ಗ್ರಾಮ ಪಂಚಾಯತ್‌

-ಸುಬ್ರಾಯ ನಾಯಕ್‌ ಎಕ್ಕಾರು

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IMD

Dakshina Kannada ಜಿಲ್ಲೆಯಲ್ಲಿ ಮುಂದುವರಿದ ಉರಿಬಿಸಿಲು:ಮಳೆಯ ಮುನ್ಸೂಚನೆ ಇಲ್ಲ

5-harikrishna

LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ

3-dinesh

33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್‌ ಗುಂಡೂರಾವ್‌

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

Today World Malaria Day; ಕರಾವಳಿಯಲ್ಲಿ ಇಳಿಕೆಯಾಗುತ್ತಿದೆ ಮಲೇರಿಯಾ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

ಹಿಂದುತ್ವಕ್ಕೆ ಬದ್ಧತೆ, ಸಮಗ್ರ ಅಭಿವೃದ್ಧಿಗೆ ಆದ್ಯತೆ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.