ವಿದ್ಯುತ್‌ ಬಿಲ್‌ನಲ್ಲಿ ಅಕ್ಷರಗಳೇ ಮಾಯ!


Team Udayavani, Dec 28, 2018, 11:55 AM IST

28-december-7.jpg

ಮಹಾನಗರ : ತಿಂಗಳ ವಿದ್ಯುತ್‌ ಬಿಲ್‌ ಪಾವತಿ ಮಾಡಲು ಇನ್ನೂ ಸಮಯವಿದೆ ಎಂದು ಕುಳಿತರೆ ಮುಂದಿನ ತಿಂಗಳ ಬಿಲ್‌ ಬರುವ ತನಕ ಕಾಯಬೇಕಾದೀತು. ಏಕೆಂದರೆ ಈ ಬಿಲ್‌ ಪಾವತಿ ಕಾಗದದಲ್ಲಿ ಅಚ್ಚೊತ್ತಿರುವ ಅಕ್ಷರಗಳು ವಾರದಲ್ಲೇ ಅಳಿಸಿ ಹೋಗುತ್ತವೆ!

ಪ್ರತಿ ತಿಂಗಳ ಮೊದಲ ವಾರದಲ್ಲಿ ಮೆಸ್ಕಾಂ ಸಿಬಂದಿ ಮನೆ ಬಾಗಿಲಿಗೇ ಬಂದು ಮೀಟರ್‌ ಓದಿ ಬಿಲ್‌ ನೀಡುತ್ತಾರೆ. ಅಲ್ಲದೆ, ಪಾವತಿಗೆ ಸಾಕಷ್ಟು ಸಮಯಾವಕಾಶವನ್ನೂ ನೀಡಲಾಗುತ್ತದೆ. ಆದರೆ ಸ್ವಲ್ಪ ಆರಾಮವಾಗಿ ಬಿಲ್‌ ಪಾವತಿಸುವ ಎಂದು ಕೊನೆಯ ದಿನದವರೆಗೂ ಕಾದರೆ ಬಿಲ್‌ನಲ್ಲಿ ಅಚ್ಚಾಗಿರುವ ಅಕ್ಷರಗಳೇ ಕಾಣದಾಗಿರುತ್ತವೆ.

ಗ್ರಾಹಕರಿಗೆ ಗೊಂದಲ
ಕೆಲವೊಮ್ಮ ಅನಿವಾರ್ಯವಾಗಿ ಬಿಲ್‌ ಪಾವತಿ ಮಾಡುವುದು ತಡ ವಾದರೆ, ಎಷ್ಟು ಬಿಲ್‌ ಬಂದಿದೆ ಎಂಬುದೇ ತಿಳಿಯುವುದಿಲ್ಲ. ಇದರಿಂದಾಗಿ ಮುಂದಿನ ತಿಂಗಳಿನ ಬಿಲ್‌ ಬರುವವರೆಗೂ ಕಾಯಬೇಕಾಗುತ್ತದೆ ಎನ್ನುತ್ತಾರೆ ಶರ್ಬತ್‌ಕಟ್ಟೆ ನಿವಾಸಿ ಲವೀನಾ ಡಿ’ಸೋಜಾ. ಅಲ್ಲದೆ, ವಿದ್ಯುತ್‌ ಬಿಲ್‌ನಲ್ಲಿ ದಾಖಲಾಗುವ ಮಾಪನ, ಓದಿದ ವಿವರ ಮತ್ತು ಲೆಕ್ಕಾಚಾರಗಳ ವಿವರ ಅಡಿ ಮೇಲಾಗಿ ಮುದ್ರಿತಗೊಂಡಿರುತ್ತವೆ. ಇದರಿಂದ ಬಿಲ್‌ನಲ್ಲಿ ಏನಿದೆ ಎಂಬುದೇ ಗ್ರಾಹಕರಿಗೆ ಓದಲು ಅಸಾಧ್ಯವಾಗಿ ಗೊಂದಲಗಳಾಗುತ್ತಿವೆ. ಎರಡು ವರ್ಷಗಳಿಂದ ಇದೇ ಸಮಸ್ಯೆ ಎನ್ನುತ್ತಾರವರು.

ಕಳಪೆ ಗುಣಮಟ್ಟದ ಪೇಪರ್‌
ವಿದ್ಯುತ್‌ ಮತ್ತು ನೀರಿನ ಬಿಲ್‌ ಬಹು ಬೇಗನೇ ಅಳಿಸಿ ಹೋಗುವುದರಿಂದ ಬಿಲ್‌ ನೀಡಿದ ತತ್‌ಕ್ಷಣ ಅದರಲ್ಲಿ ಮೊತ್ತದ ಸಂಖ್ಯೆಯನ್ನು ಪೆನ್‌ನಲ್ಲಿ ಬರೆದಿಡಬೇಕಾದ್ದು ಅನಿವಾರ್ಯ. ಬಿಲ್‌ ಮುದ್ರಿಸಲು ಬಳಸಲಾಗುತ್ತಿರುವ ಕಳಪೆ ಗುಣಮಟ್ಟದ ಕಾಗದವೇ ಅದಕ್ಕೆ ಕಾರಣ ಎಂಬುದು ಗ್ರಾಹಕರ ವಾದ.

ಪ್ರಸ್ತುತ ಥರ್ಮಲ್‌ ಪೇಪರ್‌ನಲ್ಲಿ ಬಿಲ್‌ ಮುದ್ರಿಸುತ್ತಿರುವುದು ಇದಕ್ಕೆ ಕಾರಣ. ಈ ಹಿಂದೆ ಅಳಿಸಿ ಹೋಗದ ಬಿಲ್‌ ನೀಡಲಾಗುತ್ತಿತ್ತು. ತತ್‌ಕ್ಷಣವೇ ಮೆಸ್ಕಾಂ ಈ ಬಗ್ಗೆ ಗಮನ ಹರಿಸಬೇಕು ಎನ್ನುತ್ತಾರೆ ಗ್ರಾಹಕ ಟಿ.ಕೆ. ಭಟ್‌.

ಕಾಗದದ ಗುಣಮಟ್ಟ ಸರಿಯಾಗಿಲ್ಲದಿರುವುದನ್ನು ಮೆಸ್ಕಾಂ ಅಧಿಕಾರಿಗಳು ಕೂಡ ಒಪ್ಪಿಕೊಂಡಿದ್ದು, ಈಗ ಬಳಸಲಾಗುತ್ತಿರುವ ಥರ್ಮಲ್‌ ಕಾಗದದ ಬದಲಾಗಿ ಗುಣಮಟ್ಟದ ಕಾಗದವನ್ನು ಮುಂದಿನ ದಿನಗಳಲ್ಲಿ ಬಿಲ್‌ ಮುದ್ರಿಸಲು ಬಳಸಲಾಗುವುದು ಎಂದು ತಿಳಿಸಿದ್ದಾರೆ.

ನಿರ್ದೇಶ ನೀಡಲಾಗಿದೆ
ವಿದ್ಯುತ್‌ ಬಿಲ್‌ನಲ್ಲಿರುವ ಅಕ್ಷರಗಳು ಅಳಿಸಿ ಹೋಗುತ್ತಿರುವುದು ಗಮನಕ್ಕೆ ಬಂದಿದೆ. ಅಚ್ಚಾಗುವ ಕಾಗದದ ಗುಣಮಟ್ಟದಲ್ಲಿ ಸ್ವಲ್ಪ ತೊಂದರೆಯಾಗಿದೆ. ಮಂಗಳೂರು ಭಾಗದಲ್ಲಿ ಬಂದಿರುವ ದೂರುಗಳನ್ನಾಧರಿಸಿ ಈಗಿರುವ ಥರ್ಮಲ್‌ ಪೇಪರ್‌ ಬದಲಾಗಿ ಗುಣಮಟ್ಟದ ಪೇಪರ್‌ ಖರೀದಿಸಲು ಸಂಬಂಧಪಟ್ಟ ಕಾರ್ಯಕಾರಿ ಅಭಿಯಂತರರಿಗೆ ನಿರ್ದೇಶ ನೀಡಿದ್ದೇನೆ. ಮುಂದಿನ ದಿನಗಳಲ್ಲಿ ಸಮಸ್ಯೆ ನಿವಾರಣೆಯಾಗಲಿದೆ.
– ರಘುಪ್ರಕಾಶ್‌,
ನಿರ್ದೇಶಕ (ತಾಂತ್ರಿಕ) ಮೆಸ್ಕಾಂ 

ವಿಶೇಷ ವರದಿ

ಟಾಪ್ ನ್ಯೂಸ್

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

Malaysian ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

Malaysia ನೌಕಾಪಡೆಯ 2 ಹೆಲಿಕಾಪ್ಟರ್ ಪತನ; 10 ಮಂದಿ ಮೃತ್ಯು, ಭಯಾನಕ ವಿಡಿಯೋ ಸೆರೆ

BJP ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ, ನಾಳೆ ಕಾಂಗ್ರೆಸ್ ಸೇರ್ಪಡೆ

BJP ಯಿಂದ ನಿರ್ಲಕ್ಷ್ಯ… ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ ಕೆ.ಪಿ.ನಂಜುಂಡಿ

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Kollywood: ಚಿನ್ನದ ಅಡ್ಡೆಗೆ ʼಕೂಲಿʼಯಾಗಿ ಬಂದ ತಲೈವರ್; ಟೈಟಲ್‌ ಟೀಸರ್‌ ಔಟ್

Aravind kejriwal

Insulin: ಶುಗರ್ ಲೆವೆಲ್ ಏರಿಕೆ… ಜೈಲಿನಲ್ಲಿರುವ ಕೇಜ್ರಿವಾಲ್ ಗೆ ಇನ್ಸುಲಿನ್ ನೀಡಿಕೆ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ

Taiwan ನಲ್ಲಿ ಸರಣಿ ಭೂಕಂಪ… ರಾತ್ರಿಯಿಡೀ ಮನೆಯಿಂದ ಹೊರಗುಳಿದ ಮನೆಮಂದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

ಹೊಸ ಸೇರ್ಪಡೆ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

Telangana Election 2024: ಕಳೆಗುಂದಿದ ಬಿಆರ್‌ಎಸ್‌: ಕಾಂಗ್ರೆಸ್-ಬಿಜೆಪಿ ಕಾದಾಟ

5

Crime: ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದು ಪೊಲೀಸರಿಗೆ ಶರಣಾದ ವ್ಯಕ್ತಿ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

ಅಡಕೆ-ಕಾಫಿ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಏಕೆ ಸ್ಪಂದಿಸಿಲ್ಲ: ಜಯಪ್ರಕಾಶ್‌ ಹೆಗ್ಡೆ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

Lok Sabha Election: ಕಾಂಗ್ರೆಸ್‌ನಿಂದ ಜನರಿಗೆ ಸುಳ್ಳಿನ ಗ್ಯಾರಂಟಿ: ಗಾಯಿತ್ರಿ ಸಿದ್ದೇಶ್ವರ

ಉಡುಪಿಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Udupiಗೆ ಸರಕಾರಿ ವೈದ್ಯಕೀಯ ಕಾಲೇಜು, ಎಂಜಿನಿಯರಿಂಗ್‌ ಕಾಲೇಜು: ಜಯಪ್ರಕಾಶ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.