ಹಂಡೇಲ್‌-ಮುಂಡೇಲ್‌: ಮನೆಗೋಡೆ, ಸೂರು ಕುಸಿದು 2 ಲಕ್ಷ ರೂ.ನಷ್ಟ

Team Udayavani, Jun 29, 2018, 11:31 AM IST

29-june-6.jpg

ಮೂಡಬಿದಿರೆ: ಜೋರಾಗಿ ಸುರಿದ ಮಳೆಯಿಂದಾಗಿ ಮೂಡಬಿದಿರೆ ಪರಿಸರದಲ್ಲಿ ವ್ಯಾಪಕವಾಗಿ ಹಾನಿ ಉಂಟಾಗಿದೆ.
ಗುರುವಾರ ಬೆಳಗ್ಗೆ ಹಂಡೇಲು ಮುಂಡೇಲುನಲ್ಲಿ ಜೈನಾಬಿ ಅವರ ಮನೆಯ ಹಿಂಬದಿಯ ಗೋಡೆಯ ಸೂರು ಕುಸಿದು ಪೀಠೊಪಕರಣ,ಫ್ರಿಜ್‌ ಮತ್ತಿತರ ಸಾಮಗ್ರಿಗಳು ಜಖಂಗೊಂಡಿದ್ದು ಸುಮಾರು 2 ಲಕ್ಷ ರೂ. ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ. ಹಂಡೇಲ್‌ನಲ್ಲಿ ಗುಡ್ಡ ಜರಿದು ಬಶೀರ್‌ ಅವರ ನಿರ್ಮಾಣ ಹಂತದಲ್ಲಿಯಲ್ಲಿದ್ದ ಮನೆಗೆ ಹಾನಿಯುಂಟಾಗಿದೆ.

ಶಾಸಕ ಉಮಾನಾಥ ಕೋಟ್ಯಾನ್‌ ಅವರು ಸ್ಥಳಕ್ಕೆ ಭೇಟಿ ನೀಡಿ ಗರಿಷ್ಟ ಪರಿಹಾರ ಧನ ಒದಗಿಸುವುದಾಗಿ ಭರವಸೆ ನೀಡಿದರು. ಪುತ್ತಿಗೆ ಗ್ರಾಮ ಪಂಚಾಯತ್‌ ಸದಸ್ಯ ಗಿರೀಶ್‌ ಹಂಡೇಲ್‌ ಗ್ರಾಮ ಕರಣಿಕ ಗೋಪಾಲ್‌ ಜತೆಗಿದ್ದರು. ಹಂಡೇಲು ತಿರುವಿನ ಮೂಲ್ಕಿ ಮಾರ್ಗದ ಬದಿ ವಿದ್ಯಾಗಿರಿಯ ಹುಲ್ಲು ಹಾಸಿನ ಅಡಿಯ ಮಣ್ಣಿನ ಭಾಗ ಮಳೆಯಿಂದಾಗಿ ಜಾರಿ ಮಾರ್ಗಕ್ಕೆ ಬಿದ್ದಿದೆ. ರಸ್ತೆಗಿಂತ ಸಾಕಷ್ಟು ದೂರ ಇದ್ದ ಕಾರಣ ವಾಹನ ಸಂಚಾರಕ್ಕೆ ತೊಂದರೆ ಆಗಲಿಲ್ಲ. ಬಿದ್ದ ಮಣ್ಣನ್ನು ಕೂಡಲೇ ತೆರವುಗೊಳಿಸಲಾಯಿತು.

ಸ್ವಯಂಕೃತ ಅಭಿವೃದ್ಧಿ ತಂದೊಡ್ಡಿದ ಅಪಾಯ
ಮೂಡಬಿದಿರೆ ಪೇಟೆಯ ಉತ್ತರ ಭಾಗದಲ್ಲಿರುವ, ಅರಮನೆ ಬಾಗಿಲು ಸಮೀಪದ ಬೈಲಾರೆ ಪ್ರದೇಶದ ಅನೇಕ ಮನೆಗಳಿಗೆ ನೀರು ನುಗ್ಗಿ ಆತಂಕಕಾರಿ ವಾತಾವರಣ ನಿರ್ಮಾಣಗೊಂಡಿತು. ತಗ್ಗು ಪ್ರದೇಶವಾದ ಬೈಲಾರೆ ಪ್ರದೇಶದಲ್ಲಿ ಹೊಲಗದ್ದೆಗಳ ಕನ್ವರ್ಷನ್‌ಗೊಳಪಡಿಸಿ, ಮಣ್ಣು ತುಂಬಿಸಿ ಸೈಟ್‌ಗಳನ್ನು ನಿರ್ಮಿಸುವ ಪ್ರಕ್ರಿಯೆ ದಶಕಗಳಿಂದ ಜೋರಾಗಿ ನಡೆದಿರುವುದರಿಂದ ಮಳೆ ನೀರಿನ ಸಹಜ ಹರಿವಿಗೆ ಅಡ್ಡಿಯುಂಟಾಗಿ ಕೃತಕ ನೆರೆಯ ಪರಿಸ್ಥಿತಿ ನಿರ್ಮಾಣವಾಗಿದೆ. ಪೊನ್ನೆಚಾರಿಯಲ್ಲಿ ತೋಡು ತುಂಬಿ ನೀರು ಹತ್ತಿರದ ಫ್ಲ್ಯಾಟ್‌ಗಳ ತಳದಲ್ಲಿರುವ ಪಾರ್ಕಿಂಗ್‌ ಏರಿಯಾಕ್ಕೆ ನುಗ್ಗಿ ಆತಂಕಕಾರಿ ಸನ್ನಿವೇಶ ನಿರ್ಮಾಣವಾಯಿತು. ತೋಡಿನ ಅಗಲವನ್ನು ಕಿರಿದುಗೊಳಿಸುವಷ್ಟು ಅತಿಕ್ರಮಣ ನಡೆದಿರುವ ಕಾರಣ ಕೃತಕ ನೆರೆ ಉಂಟಾಗುವಂತಾಗಿದೆ.ಮುಂಜಾನೆ ವಿಜಯನಗರ ವಲಯದಲ್ಲಿ ನೀರು ತುಂಬಿ ಕೆಲವು ಅಂಗಡಿಗಳನ್ನು ತೆರೆಯಲಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ವಲಯ ಒಂದು ಕಾಲದಲ್ಲಿ ಬ್ಯಾರಿಬೊಟ್ಟು ಎಂಬ ಹೊಲಗದ್ದೆಗಳಿದ್ದ ಪ್ರದೇಶವಾಗಿತ್ತು. ಎಷ್ಟೋ ಕಡೆ, ಪಟ್ಲ (ತಗ್ಗು ಪ್ರದೇಶ)ಗದ್ದೆಗಳ ಒಡಲಿಗೆ ಮಣ್ಣು ತುಂಬಿಸಿ ಭಾರೀ ಮಹಡಿಗಳ ಕಟ್ಟಡ ಕಟ್ಟಿರುವಲ್ಲೆಲ್ಲ ಪಾರ್ಕಿಂಗ್‌ ಏರಿಯಾದಲ್ಲಿ ನೀರ ಚಿಲುಮೆ ಅಲ್ಲಲ್ಲಿ ಚಿಮ್ಮುತ್ತಿರುವುದೂ ಕಂಡು ಬರುತ್ತಿದೆ.

ಟಾಪ್ ನ್ಯೂಸ್

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

1-RCB

RCB ; ರವಿವಾರ ಕೆಕೆಆರ್‌ ವಿರುದ್ಧ ಈಡನ್‌ನಲ್ಲಿ ಗೋ ಗ್ರೀನ್‌ ಗೇಮ್‌

1-asaasa

250 km per hour; ಶೀಘ್ರದಲ್ಲೇ ಬುಲೆಟ್‌ ರೈಲಿನಲ್ಲೂ ಆತ್ಮನಿರ್ಭರತೆ!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

gold

Gold 10 ಗ್ರಾಂ ಬೆಲೆ 74,100 ರೂ.: ಇದು ನೂತನ ದಾಖಲೆ

1-aqweq

Delhi ತವರಿಗೆ ಮರಳಿದ ಖುಷಿಯಲ್ಲಿ: ಕೋಟ್ಲಾದಲ್ಲಿ ಹೈದರಾಬಾದ್‌ ವಿರುದ್ಧ ಮುಖಾಮುಖಿ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

ರಾಜ್ಯ 2ನೇ ಹಂತ: 337 ಮಂದಿ ಕಣಕ್ಕೆ: ನಾಮಪತ್ರ ಸಲ್ಲಿಕೆ ಮುಕ್ತಾಯ, ಇಂದು ಪರಿಶೀಲನೆ

Baragala (2)

IMD; ಕರ್ನಾಟಕ ಸೇರಿ 23 ರಾಜ್ಯಗಳ 125 ಜಿಲ್ಲೆಗಳಿಗೆ ‘ಬರ’ಸಿಡಿಲು

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Congress ಪಡೆದ ಬಾಂಡ್‌ ಸುಲಿಗೆ ಅಲ್ಲವೇ: ಅಮಿತ್‌ ಶಾ ಪ್ರಶ್ನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.