ತಾಲೂಕಿನೊಂದಿಗೆ ಸಮುದಾಯ ಆಸ್ಪತ್ರೆಗೂ ಉದ್ಘಾಟನೆ ಭಾಗ್ಯ

Team Udayavani, Mar 8, 2019, 4:30 AM IST

8-march-1.jpg

ಕಡಬ: ನೂತನ ಕಡಬ ತಾಲೂಕಿನ ಉದ್ಘಾಟನೆಯೊಂದಿಗೆ ಸಮುದಾಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿರುವ ಕಡಬದ ಸರಕಾರಿ ಆಸ್ಪತ್ರೆಗೆ 4.85 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ನೂತನ ಕಟ್ಟಡವೂ ಮಾ. 8ರಂದು ಲೋಕಾರ್ಪಣೆಗೊಳ್ಳಲಿದೆ. ಅಗತ್ಯ ಸಲಕರಣೆಗಳೊಂದಿಗೆ ನೂತನ ಕಟ್ಟಡ ಉದ್ಘಾಟನೆಗೆ ಸಿದ್ಧಗೊಂಡಿದೆ.

ಆರು ಹಾಸಿಗೆಗಳ ಇಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸರಕಾರವು 9 ವರ್ಷಗಳ ಹಿಂದೆಯೇ 30 ಹಾಸಿಗೆಗಳ ಸಮುದಾಯ ಆರೋಗ್ಯ ಕೇಂದ್ರವಾಗಿ ಮೇಲ್ದರ್ಜೆಗೇರಿಸಿತ್ತು. ಅದರಂತೆ ಕಡಬ ಆಸ್ಪತ್ರೆಗೆ ಪ್ರಸೂತಿ ತಜ್ಞರು, ಶಿಶು ತಜ್ಞರ ಸಹಿತ ನಾಲ್ವರು  ವೈದ್ಯಾಧಿಕಾರಿಗಳು, ಓರ್ವ ದಂತ ವೈದ್ಯರು – ಹೀಗೆ ಒಟ್ಟು 34 ಹುದ್ದೆಗಳು ಮಂಜೂರಾಗಿವೆ. ಪ್ರಸ್ತುತ ನೂತನ ಕಟ್ಟಡದಲ್ಲಿ ಮಂಚ, ಹಾಸಿಗೆ ಸಹಿತ ಕೆಲವು ಅಗತ್ಯ ಸಲಕರಣೆಗಳು ಮಾತ್ರ ಸರಬರಾಜಾಗಿವೆ. ಸಮುದಾಯ ಆಸ್ಪತ್ರೆಗೆ ನೇಮಕವಾಗಬೇಕಾದ ತಜ್ಞ ವೈದ್ಯರು ಹಾಗೂ ಅಗತ್ಯ ಸಿಬಂದಿ ನೇಮಕ ಇನ್ನಷ್ಟೇ ಆಗಬೇಕಿದೆ.

8 ಗ್ರಾಮಗಳ ವ್ಯಾಪ್ತಿ
ಕಡಬ, ಕೋಡಿಂಬಾಳ, ಬಂಟ್ರ, 102ನೇ ನೆಕ್ಕಿಲಾಡಿ, ಕುಟ್ರಾಪ್ಪಾಡಿ, ಬಲ್ಯ, ನೂಜಿಬಾಳ್ತಿಲ ಹಾಗೂ ರೆಂಜಿಲಾಡಿ – ಹೀಗೆ 8 ಗ್ರಾಮಗಳ ವ್ಯಾಪ್ತಿಯನ್ನು ಈ ಆಸ್ಪತ್ರೆ ಹೊಂದಿದೆ. ಆದರೆ ಕುಂತೂರು, ಆಲಂಕಾರು, ಕೊಂಬಾರು, ಸಿರಿಬಾಗಿಲು, ಐತ್ತೂರು, ಕೊಣಾಜೆ, ಕಾಣಿಯೂರು, ಚಾರ್ವಾಕ, ಸುಳ್ಯ ತಾಲೂಕಿನ ಸುಬ್ರಹ್ಮಣ್ಯ, ಪಂಜ, ಏನೆಕಲ್‌, ಬಳ್ಪ, ಕೇನ್ಯ, ಎಡಮಂಗಲದ ಜನರು ಇದೇ ಆಸ್ಪತ್ರೆಗೆ ಬರುತ್ತಿರುವುದರಿಂದ ವ್ಯಾಪ್ತಿ ದೊಡ್ಡದಾಗಿ ವಿಸ್ತರಿಸಿದೆ.

ಸವಲತ್ತು ನೀಡಲು ಕ್ರಮ
ಸಮುದಾಯ ಆಸ್ಪತ್ರೆಗೆ ಸವಲತ್ತುಗಳನ್ನು, ಸಿಬಂದಿ ನೇಮಕ ಹಾಗೂ ಅಗತ್ಯ ಸಲಕರಣೆಗಳನ್ನು ಒದಗಿಸುವುದು ನಮ್ಮ ಮೊದಲ ಗುರಿ. ಸರಕಾರಕ್ಕೆ ಈ ಕುರಿತು ಬೇಡಿಕೆ ಇಡಲಾಗಿದೆ. ಹಂತ ಹಂತವಾಗಿ ಎಲ್ಲ ಬೇಡಿಕೆಗಳು ಈಡೇರಲಿವೆ. ಹೊಸ ತಾಲೂಕುಗಳಾದ ಕಡಬ ಹಾಗೂ ಮೂಡುಬಿದಿರೆಯ ಸರಕಾರಿ ಆಸ್ಪತ್ರೆಗಳನ್ನು 100 ಹಾಸಿಗೆಗಳ ತಾಲೂಕು ಮಟ್ಟದ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಕಡಬಕ್ಕೂ ತಾಲೂಕು ಆಸ್ಪತ್ರೆಯ ಮಾನ್ಯತೆ ಸಿಗಲಿದೆ.
– ಡಾ| ರಾಮಕೃಷ್ಣ ರಾವ್‌
ಜಿಲ್ಲಾ ಆರೋಗ್ಯಾಧಿಕಾರಿ

ನಾಗರಾಜ್‌ ಎನ್‌.ಕೆ.

ಟಾಪ್ ನ್ಯೂಸ್

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ಎವೈ.4.2 ಆತಂಕಕಾರಿಯಲ್ಲ: ಐಸಿಎಂಆರ್‌ ವಿಜ್ಞಾನಿ ಸಮೀರನ್‌ ಪಾಂಡಾ ಪ್ರತಿಪಾದನೆ

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ನವೆಂಬರ್‌ನಲ್ಲಿ ಬ್ಯಾಂಕುಗಳಿಗೆ 10 ದಿನ ರಜೆ!

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ರಸಗೊಬ್ಬರ ಕೊರತೆ ಇಲ್ಲ: ಸಚಿವ ಬಿ.ಸಿ. ಪಾಟೀಲ್‌

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ವಿಂಡೀಸ್‌ ಮತ್ತೆ ಪಲ್ಟಿ; ಖಾತೆ ತೆರೆದ ದ. ಆಫ್ರಿಕಾ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಆಧುನಿಕ ಪದ್ಧತಿಯೊಂದಿಗೆ ಬ್ಯಾಡಗಿ ಮೆಣಸಿನಕಾಯಿ ಕೃಷಿಗೆ ಮುಂದಾದ ಅಡಕೆ ಕೃಷಿಕ

udayavani youtube

ಬಸ್ ಕಂಡಕ್ಟರ್‌ನಿಂದ ಸೂಪರ್ ಸ್ಟಾರ್ ಆದ ರಜನಿಕಾಂತ್ ಕಥೆ

udayavani youtube

ಈ ಪ್ರೌಢ ಶಾಲೆಯಲ್ಲಿ ಒಂದಲ್ಲ, ಎರಡಲ್ಲ ಹಲವಾರು ಸಮಸ್ಯೆಗಳು!

udayavani youtube

ಪಾಕಿಸ್ಥಾನದ ವಿಜಯವನ್ನು ಸಂಭ್ರಮಿಸಿದ ರಾಜಸ್ಥಾನದ ಟೀಚರ್

udayavani youtube

ಸಾಮಾಜಿಕ ಸಂದೇಶ ಹೊತ್ತು 3500 ಕಿ.ಮೀ ಸೈಕಲ್ ಪ್ರಯಾಣ!

ಹೊಸ ಸೇರ್ಪಡೆ

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

ಐದರ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ: 10 ವರ್ಷ ಜೈಲು

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ನ್ಯಾಯಾಧೀಶರಿಂದ ಪರಿಶೀಲನೆ, ಅಧಿಕಾರಿಗಳಿಗೆ ತರಾಟೆ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

ಗೆಲುವಿನ ಓಟ ಮುಂದುವರಿಸಿದ ಪಾಕಿಸ್ಥಾನ

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

2 ಡೋಸ್‌ ಲಸಿಕೆ ಪಡೆದವರಿಗೆ ಹೊಸ ತಳಿ ಪರಿಣಾಮ ಬೀರದು

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

ಕಿಷ್ಕಿಂದಾ ಅಂಜನಾದ್ರಿಯೇ ಹನುಮ ಜನಿಸಿದ ಸ್ಥಳ: ವಿಶ್ವಪ್ರಸನ್ನತೀರ್ಥ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.