ಹಳೆಯಂಗಡಿ: ನದಿಯಲ್ಲಿ ಶವ ಪತ್ತೆ
Team Udayavani, Jan 18, 2022, 3:13 PM IST
ಹಳೆಯಂಗಡಿ : ಇಲ್ಲಿನ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಹಳೆಯಂಗಡಿ ಬಳಿಯ ಕೊಪ್ಪಳದ ಅಣೆಕಟ್ಟು ಬಳಿಯ ರೈಲ್ವೆ ಸೇತುವೆ ಕೆಳಗಡೆ ವ್ಯಕ್ತಿಯೊಬ್ಬರ ಶವ ನಂದಿನಿ ನದಿಯ ನೀರಿನಲ್ಲಿ ಪತ್ತೆಯಾಗಿದೆ.
ಪಡುಪಣಂಬೂರು ಗ್ರಾಮ ಪಂಚಾಯತ್‌ನ ಬೆಳ್ಳಾಯರು ಗ್ರಾಮದ ನಿವಾಸಿ ಗಿರಿಯಪ್ಪ ಶೆಟ್ಟಿಗಾರ್ (74) ಎಂದು ಗುರುತಿಸಲಾಗಿದೆ.
ಅವರು ತಮ್ಮ ಮನೆಯಿಂದ ಕಟ್ಟಿಗೆ ತರಲು ತೆರಳಿದ್ದರು ಎಂದು ತಿಳಿದು ಬಂದಿದ್ದು, ತೆಂಗಿನ ಕಟ್ಟೆ ಕಟ್ಟುವುದು ಸಹಿತ ಕೂಲಿ ಕೆಲಸ ನಿರ್ವಹಿಸುತ್ತಿದ್ದರು ಎನ್ನಲಾಗಿದೆ.
ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.