ಸುಳ್ಳು ಹೇಳಿ ಅನ್ಯಕೋಮಿನ ಮಹಿಳೆಯೊಂದಿಗೆ ಮದುವೆ ; 62 ವರ್ಷದ ಗಂಗಾಧರ್‌ ಮೇಲೆ ಅತ್ಯಾಚಾರ ಕೇಸು

Team Udayavani, Mar 26, 2021, 7:10 AM IST

ಸುಳ್ಳು ಹೇಳಿ ಅನ್ಯಕೋಮಿನ ಮಹಿಳೆಯೊಂದಿಗೆ ಮದುವೆ ; 62 ವರ್ಷದ ಗಂಗಾಧರ್‌ ಮೇಲೆ ಅತ್ಯಾಚಾರ ಕೇಸು

ಸಾಂದರ್ಭಿಕ ಚಿತ್ರ

ಮಂಗಳೂರು: ವ್ಯಕ್ತಿಯೊಬ್ಬ ಅನ್ಯಕೋಮಿನ ಯುವತಿ ಯನ್ನು ವಿವಾಹವಾಗಿದ್ದಾನೆ ಎನ್ನುವ ಆರೋಪದ ಪ್ರಕರಣ ತಿರುವು ಪಡೆದುಕೊಂಡಿದ್ದು, ಆತನ ವಿರುದ್ಧವೇ ಪೊಲೀಸರು ಅತ್ಯಾಚಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೋಳಾರದ ಗಂಗಾಧರ್‌ (62) ವಿರುದ್ಧ ಈಗ ಅತ್ಯಾಚಾರ ಪ್ರಕರಣ ದಾಖಲಿಸಲಾಗಿದೆ. ಆತನಿಗೆ ಮೂರು ಮದುವೆಯಾಗಿದ್ದು, ಇನ್ನೂ ಕೆಲವು ಮಹಿಳೆಯರನ್ನು ವಂಚಿಸಿರುವ ಆರೋಪಗಳು ಕೇಳಿ ಬರುತ್ತಿರುವುದರಿಂದ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಗಂಗಾಧರ ಮದುವೆಯಾಗಿದ್ದಾನೆ ಎನ್ನಲಾಗಿರುವ ಮುಸ್ಲಿಂ ಯುವತಿಯೇ ಕದ್ರಿ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆ ಹಿನ್ನೆಲೆಯಲ್ಲಿ ಗಂಗಾಧರನನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಮುಸ್ಲಿಂ ಎಂದು ನಂಬಿಸಿದ್ದರು :

ಗಂಗಾಧರ, ಮುಸ್ಲಿಂ ಯುವತಿ ಯನ್ನು ಕೆಲ ತಿಂಗಳ ಹಿಂದೆ ತನ್ನ ಮಿತ್ರರಾದ ಸೈಯದ್‌, ಶಬೀರ್‌ ಮತ್ತು ಮಹಮ್ಮದ್‌ ಅವರೊಂದಿಗೆ ಸಂಪರ್ಕಿಸಿ, ತನ್ನ ಹೆಸರು ಮಹಮ್ಮದ್‌ ಅನೀಸ್‌ ಎಂದು ಪರಿಚಯಿಸಿಕೊಂಡಿದ್ದ. 22ರ ಹರೆಯದ ಯುವತಿ ಮೂಲತಃ ಪುತ್ತೂರಿನವಳಾಗಿದ್ದು, ಈ ಹಿಂದೆ ಮದುವೆಯಾಗಿ ಪತಿ ಅಪಘಾತದಲ್ಲಿ ಸಾವನ್ನಪ್ಪಿದ್ದು, ಒಂದು ಮಗುವಿದೆ. ಆತನ ಮಿತ್ರರೂ ಆಕೆಯನ್ನು ಅನೀಸ್‌ಗೆ ತರಕಾರಿ ವ್ಯಾಪಾರ ಇದೆ, ಕುಟುಂಬದ ಜವಾಬ್ದಾರಿಯ ಒತ್ತಡದಿಂದ ಮದುವೆಯಾಗಿರಲಿಲ್ಲ. ಈಗ ವಿವಾಹವಾಗುತ್ತಿದ್ದಾನೆ ನಿನ್ನ ಬದುಕು ಕೂಡಾ ಒಳ್ಳೆಯದಾಗುತ್ತದೆ ಎಂದು ನಂಬಿಸಿದ್ದರು.

ಅದರಂತೆ ಕಳೆದ ವರ್ಷ ಡಿ. 21ರಂದು ಇಬ್ಬರ ವಿವಾಹ ನಡೆದಿತ್ತು. ಆದರೆ ಆ ಬಳಿಕ ಕೆಲವೇ ದಿನಗಳಲ್ಲಿ ಮಹಿಳೆಗೆ ಈ ವ್ಯಕ್ತಿ ನನ್ನ ಧರ್ಮದವನಲ್ಲ; ಜತೆಗೆ ಬೇರೆ ಅಕ್ರಮ ಸಂಬಂಧಗಳೂ ಇವೆ ಎನ್ನುವುದು ಗೊತ್ತಾದ ಬಳಿಕ ಆತನಿಂದ ಅಂತರ ಕಾಯ್ದುಕೊಳ್ಳಲು ಯತ್ನಿಸಿದ್ದರು.

ಗಂಗಾಧರ ಯಾನೆ ಅನೀಸ್‌ ಬಲಾತ್ಕಾರವಾಗಿ ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ. ಎರಡು ತಿಂಗಳ ಗರ್ಭಿಣಿಯಾದ ಬಳಿಕ ಲೇಡಿಗೋಶನ್‌ಗೆ ಕರೆದೊಯ್ದು ಮಾತ್ರೆ ತಿನ್ನಿಸಿ ಗರ್ಭಪಾತ ಮಾಡಿಸಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾರೆ.

ಈ ಎಲ್ಲ ವಿದ್ಯಮಾನಗಳ ನಡುವೆ ಮಾ. 23ರಂದು ಗಂಗಾಧರನ ಮೊದಲ ಪತ್ನಿ ಯಶೋದಾ ತನ್ನ ಗಂಡನನ್ನು ಯಾರೋ ಅಪಹರಿಸಿ ಬಲವಂತವಾಗಿ ಮತಾಂತರಗೊಳಿಸಿ ವಿವಾಹ ನಡೆಸಿದ್ದಾರೆ ಎಂದು ದೂರು ನೀಡಿದ್ದರು.

ಪೊಲೀಸರು ಗಂಗಾಧರನನ್ನು ವಿಚಾರಣೆ ನಡೆಸಿದಾಗ ಎಲ್ಲ ವಿಷಯಗಳು ಬೆಳಕಿಗೆ ಬಂದಿವೆ. ಆತನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದ್ದು, ಬಂಧಿಸ‌ಲಾಗಿದೆ ಎಂದು ಆಯುಕ್ತರು ವಿವರಿಸಿದರು. ಡಿಸಿಪಿ ಹರಿರಾಂ ಶಂಕರ್‌ ಸುದ್ದಿಗೋಷ್ಠಿಯಲ್ಲಿದ್ದರು.

 3 ಮದುವೆ; ಐವರು ಮಕ್ಕಳು! :

ಗಂಗಾಧರ್‌ಗೆ ಯಶೋದಾ ಮೊದಲ ಪತ್ನಿಯಾಗಿದ್ದು, ಇಬ್ಬರು ಮಕ್ಕಳು ವಿದೇಶದಲ್ಲಿದ್ದಾರೆ. 25 ವರ್ಷ ಹಿಂದೆಯೇ ಇನ್ನೋರ್ವ ಮಹಿಳೆಯ ಜತೆ ಕೂಡ ವಿವಾಹವಾಗಿದ್ದು, ಆಕೆಯ ಮೂಲಕ ಮೂವರು ಮಕ್ಕಳನ್ನು ಪಡೆದಿದ್ದಾನೆ. ಬಳಿಕ ಮುಸ್ಲಿಂ ಯುವತಿಯನ್ನು ವಿವಾಹವಾಗಿದ್ದಾನೆ. ಈ ಬಗ್ಗೆ ತನಿಖೆ ಮುಂದುವರಿಸಿದ್ದೇವೆ ಎಂದು ಆಯುಕ್ತ ಎನ್‌. ಶಶಿಕುಮಾರ್‌ ತಿಳಿಸಿದರು.

ಟಾಪ್ ನ್ಯೂಸ್

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌

ಮೊಟ್ಟೆ  ಖರೀದಿಗೆ ತಾ| ಹಂತದಲ್ಲಿ ಇ-ಟೆಂಡರ್‌

ಸರಕಾರದ ಯೋಜನೆ ಜನರಿಗೆ ತಲುಪಿಸುವ ಉತ್ಸುಕತೆ ತೋರಿ: ಸಚಿವ ಸುನಿಲ್‌

ಸರಕಾರದ ಯೋಜನೆ ಜನರಿಗೆ ತಲುಪಿಸುವ ಉತ್ಸುಕತೆ ತೋರಿ: ಸಚಿವ ಸುನಿಲ್‌ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಸರಕಾರದ ಯೋಜನೆ ಜನರಿಗೆ ತಲುಪಿಸುವ ಉತ್ಸುಕತೆ ತೋರಿ: ಸಚಿವ ಸುನಿಲ್‌

ಸರಕಾರದ ಯೋಜನೆ ಜನರಿಗೆ ತಲುಪಿಸುವ ಉತ್ಸುಕತೆ ತೋರಿ: ಸಚಿವ ಸುನಿಲ್‌

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ ಕೂಲಿಗಳು !

ಗ್ರಾ.ಪಂ., ತಾ.ಪಂ. ಜಿ.ಪಂ. ಸದಸ್ಯರೂ “ನರೇಗಾ’ ಕೂಲಿಗಳು !

GO-KALAVUA

120ಕ್ಕೂ ಅಧಿಕ ದನಗಳು ಕಟುಕರ ಪಾಲು

MUST WATCH

udayavani youtube

ಹುತಾತ್ಮ ಸೈನಿಕ ಮಗನ ಪ್ರತಿಮೆ ನಿರ್ಮಿಸಿದ ತಾಯಿ

udayavani youtube

ಇಲ್ಲಿದೆ ‘ಶುದ್ಧ’ ಸಾವಯವ ಅಕ್ಕಿ !ನೀವು ಕೇಳಿಯೇ ಇರದ 3 ವಿಶೇಷತೆಗಳು

udayavani youtube

400 ಕೋಟಿ ಬೆಲೆಬಾಳುವ 47 ಕೆಜಿ ಹೆರಾಯಿನ್ವಶಪಡಿಸಿಕೊಂಡ BSF

udayavani youtube

ಪ್ರಾಣವನ್ನೇ ಪಣಕ್ಕಿಟ್ಟು ನಾಯಿಯನ್ನು ರಕ್ಷಿಸಿದ ತೆಲಂಗಾಣ ಪೊಲೀಸ್​​ ಅಧಿಕಾರಿ

udayavani youtube

ಬೀದಿ ದೀಪ, ಸಿಬ್ಬಂದಿ ಸಂಬಳದ್ದೇ ಬಿಸಿ ಬಿಸಿ ಚರ್ಚೆ

ಹೊಸ ಸೇರ್ಪಡೆ

Under 19 WC: Australia won against Pakistan

ಅಂಡರ್ 19 ವಿಶ್ವಕಪ್: ಪಾಕ್ ಮಣಿಸಿ ಸೆಮಿ ಫೈನಲ್ ಪ್ರವೇಶಿಸಿದ ಆಸ್ಟ್ರೇಲಿಯಾ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಕರಪತ್ರ ಹಂಚುವ ಮೂಲಕ ಬಿಜೆಪಿ ಕೋವಿಡ್ ಹರಡುತ್ತಿದೆ: ಅಖಿಲೇಶ್ ಯಾದವ್ ಆರೋಪ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಪ್ರತಿ ಗ್ರಾಮದಲ್ಲೂ ಗೋಶಾಲೆ ಆರಂಭಿಸಿ: ಹೈಕೋರ್ಟ್‌ ಮೌಖಿಕ ಸೂಚನೆ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಕುಲಶೇಖರ: ರೈಲು ಮಾರ್ಗದ 2ನೇ ಸುರಂಗ ಶೀಘ್ರ ಸಂಚಾರಕ್ಕೆ ಮುಕ್ತ

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

ಗ್ರಾ.ಪಂ. ವ್ಯಾಪ್ತಿಯಲ್ಲಿ ಸಣ್ಣ ಬ್ಲಾಕ್‌ಗಳಿಗೆ ಅವಕಾಶ: ಸಚಿವ ಹಾಲಪ್ಪ ಆಚಾರ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.