Udayavni Special

ಯುಗ ಪುರುಷರ ಹೆಸರಿಡಲು ಬೇಡಿಕೆ ಹೆಚ್ಚಳ


Team Udayavani, Jul 16, 2018, 12:47 PM IST

16-july-9.jpg

ಮಹಾನಗರ: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕರಾವಳಿಯ ವೀರ ಪುರುಷರು ಅಥವಾ ವೀರ ಮಹಿಳೆಯರ ಹೆಸರು ಇಡಬೇಕೆಂಬ ಕೂಗು ಈಗ ಕರಾವಳಿ ಭಾಗದಲ್ಲಿ ಜೋರಾಗತೊಡಗಿದೆ.

ರಾಜ್ಯದಲ್ಲಿ ಬೆಂಗಳೂರಿನ ದೇವನ ಹಳ್ಳಿಯಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಅನಂತರದ 2ನೇ ಅತಿದೊಡ್ಡ ವಿಮಾನ ನಿಲ್ದಾಣ ಮಂಗಳೂರಿನದ್ದು. ಆದರೆ ಬೆಂಗಳೂರಿನಂತೆಯೇ ಇದಕ್ಕೆ ಇಲ್ಲಿನ ಯುಗ ಪುರುಷರ ಹೆಸರು ಇಡಬೇಕೆಂಬ ಒತ್ತಾಯ ಇತ್ತು. ಈಗ ಅದಕ್ಕೆ ಮರು ಜೀವ ಬಂದಿದ್ದು, ಕರಾವಳಿ ಪ್ರದೇಶದ ಕೆಲವು ಸಂಘಟನೆಗಳು ಈ ಪ್ರದೇಶದ ವೀರ ಪುರುಷರು ಅಥವಾ ವನಿತೆಯರ ಹೆಸರನ್ನಿಡಬೇಕೆಂಬ ಬೇಡಿಕೆಯನ್ನಿಟ್ಟಿದ್ದಾರೆ. ಇದಕ್ಕೆ ಪೂರಕವಾಗಿಯೇ ಕೆಲವು ದಿನಗಳ ಹಿಂದೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ರ ಹೆಸರು ನಾಮಕರಣ ಮಾಡುವಂತೆ ಒತ್ತಾಯಿಸುವುದಕ್ಕೆ ಕೆಲವು ಬಿಲ್ಲವ ಸಮುದಾಯದವರು ಸಭೆ ಸೇರಿ ನಿರ್ಣಯ ತೆಗೆದುಕೊಂಡಿದ್ದರು.

ಮಂಗಳೂರು ವಿಮಾನ ನಿಲ್ದಾಣಕ್ಕೆ ಕರಾವಳಿಗೆ ಅಪಾರ ಕೊಡುಗೆ ನೀಡಿರುವ ಮಹನೀಯರ ಹೆಸರು ಸೂಚಿಸಬೇಕೆಂಬ
ಒತ್ತಾಯ ಈ ಹಿಂದೆಯೂ ಜೋರಾಗಿ ಕೇಳಿ ಬಂದಿತ್ತು. ವೀರರಾಣಿ ಅಬ್ಬಕ್ಕ ಹೆಸರಿಡುವ ಬಗ್ಗೆ ಜಿಲ್ಲಾ ಪಂಚಾಯತ್‌ ಸಾಮಾನ್ಯ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿತ್ತು. ಮಾ. 7ರಂದು ನಡೆದ ಜಿ.ಪಂ. ಸಭೆಯಲ್ಲಿ ನಿರ್ಣಯ ಕೈಗೊಂಡು, ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರಕಾರಕ್ಕೆ ಸಲ್ಲಿಸಲಾಗಿದೆ.

ಇನ್ನೊಂದೆಡೆ, ಮಂಗಳೂರು ವಿಮಾನ ನಿಲ್ದಾಣಕ್ಕೆ ‘ವೀರ ರಾಣಿ ಅಬ್ಬಕ್ಕ’ನವರ ಹೆಸರಿಡುವಂತೆ ಕೇಂದ್ರ ಸರಕಾರಕ್ಕೆ ಶಿಫಾರಸು ಮಾಡುವುದಾಗಿ ಸಚಿವ ಯು.ಟಿ. ಖಾದರ್‌ ಅವರು ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದಿದ್ದ ರಾಣಿ ಅಬ್ಬಕ್ಕ ಉತ್ಸವದಲ್ಲಿ ಭರವಸೆ ನೀಡಿದ್ದರು. ಈ ನಡುವೆ, ಮಂಗಳೂರು ವಿಮಾನ ನಿಲ್ದಾಣವನ್ನು ಆರಂಭಿಸಿದ ಕೀರ್ತಿ ಯು. ಶ್ರೀನಿವಾಸ ಮಲ್ಯ ಅವರಿಗೆ ಸಲ್ಲುತ್ತದೆ. ಹಾಗಾಗಿ ಅವರ ಹೆಸರನ್ನು ಇಡಬೇಕೆಂಬ ದೊಡ್ಡ ಮಟ್ಟದ ಬೇಡಿಕೆ ಕೂಡ ಇದೆ.

ಇದರ ಹೊರತಾಗಿಯೂ ಮಂಗಳೂರು ವಿಮಾನ ನಿಲ್ದಾಣ ನಿರ್ಮಾಣಕ್ಕೆ ದಲಿತ ಕುಟುಂಬಗಳು ಜಮೀನು ನೀಡಿರುವ ಹಿನ್ನೆಲೆಯಲ್ಲಿ ಡಾ| ಅಂಬೇಡ್ಕರ್‌ ಅವರ ಹೆಸರು ಇಡಬೇಕೆಂದು ದಲಿತ ಸಂಘಟನೆಗಳು ಬೇಡಿಕೆಯಿಟ್ಟಿವೆ. ಈ ಸಂಬಂಧ ಮಳವೂರು ಗ್ರಾಮಸಭೆಯಲ್ಲಿ ವರ್ಷದ ಹಿಂದೆ ತೀರ್ಮಾನ ತೆಗೆದುಕೊಳ್ಳಲಾಗಿತ್ತು.

ನಾಡಪ್ರಭು ಕೆಂಪೇಗೌಡರು ಬೆಂಗಳೂರಿನ ನಿರ್ಮಾತೃ ಎಂಬ ಕಾರಣಕ್ಕೆ ಅವರ ಕೊಡುಗೆ ಆಧರಿಸಿ ಸಾಕಷ್ಟು ರಾಜಕೀಯ ಒತ್ತಡ ಹಾಗೂ ಜನ ಸಂಘಟನೆಗಳ ಹೋರಾಟದ ಬಳಿಕ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಅವರ ಹೆಸರನ್ನು ಇಡಲಾಗಿದೆ. ಹೀಗಿರುವಾಗ, ಮಂಗಳೂರು ವಿಮಾನ ನಿಲ್ದಾಣಕ್ಕೂ ಇಲ್ಲಿನ ಮಹಾಪುರುಷರು ಅಥವಾ ವೀರ ವನಿತೆಯ ಹೆಸರನ್ನು ಏಕೆ ಇಡಬಾರದು ಮತ್ತು ಆ ದಿಕ್ಕಿನಲ್ಲಿ ಜನಪ್ರತಿನಿಧಿಗಳು ಬಲವಾದ ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸುವ ಜತೆಗೆ ಜನ ಸಂಘಟನೆಗಳು ಕೂಡ ಹೋರಾಟಕ್ಕೆ ಮುಂದಾಗಬೇಕು ಎನ್ನುವುದು ಕರಾವಳಿಗರ ಆಗ್ರಹ.

ಪ್ರಧಾನಿಗೆ ಪತ್ರ 
ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ‘ಕೋಟಿ ಚೆನ್ನಯ’ರ ಹೆಸರು ನಾಮಕರಣ ಮಾಡಬೇಕು ಎಂದು ಬೆಳ್ತಂಗಡಿ ತಾಲೂಕಿನ ಶಿಬಾಜೆಯ ವಿಜೇತ್‌ ಅವರು ಪ್ರಧಾನಿ ನರೇಂದ್ರ ಮೋದಿ ಕಚೇರಿಗೆ ಮತ್ತು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರಕ್ಕೆ 12 ಪುಟಗಳ ಪತ್ರವನ್ನು ಕಳುಹಿಸುವ ಮೂಲಕ ಮನವಿ ಮಾಡಿದ್ದಾರೆ.

ಮನವಿ ಮಾಡುತ್ತೇನೆ
ಮಂಗಳೂರು ವಿಮಾನ ನಿಲ್ದಾಣದ ಹೆಸರು ಬದಲಾವಣೆ ಆದರೆ ಒಳ್ಳೆಯದು. ಈ ಸಂಬಂಧ ರಾಜ್ಯ ಸರಕಾರಕ್ಕೆ ಮನವಿ ಬಂದರೆ ಖಂಡಿತವಾಗಿಯೂ ಜಿಲ್ಲಾ ಸಂಸದರನ್ನೊಳಗೊಂಡಂತೆ ನಾನು ಕೂಡ ಕೇಂದ್ರ ಸರಕಾರಕ್ಕೆ ಈ ಬಗ್ಗೆ ಮನವಿ ಮಾಡುತ್ತೇನೆ.
– ಯು. ಟಿ. ಖಾದರ್‌,
ನಗರಾಭಿವೃದ್ಧಿ ಸಚಿವ 

ವಿರೋಧ ಇಲ್ಲ
ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರ ಪುರುಷರ ಅಥವಾ ವೀರ ಮಹಿಳೆಯರ ಹೆಸರನ್ನಿಡುವುದಕ್ಕೆ ನನ್ನ ವಿರೋಧ ಇಲ್ಲ. ಯಾವುದೇ ಸಂಘಟನೆಗಳು ಈ ಬಗ್ಗೆ ಬೇಡಿಕೆ ಇಟ್ಟರೆ ನಿಯೋಗದೊಂದಿಗೆ ಪ್ರಧಾನಿ ಅವರನ್ನು ಭೇಟಿಯಾಗಿ ಮನವಿ ಮಾಡಲಾಗುವುದು.
 - ನಳಿನ್‌ ಕುಮಾರ್‌ ಕಟೀಲು, 
    ಜಿಲ್ಲಾ ಸಂಸದ

 ವಿಶೇಷ ವರದಿ

ಟಾಪ್ ನ್ಯೂಸ್

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

EXAM

ಫೇಲಾದವರು ಒಂದು ವರ್ಷ ಕಾಯಲೇಬೇಕು; ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಲ್ಲ

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೆಪದಲ್ಲಿ ಸಾರ್ವಜನಿಕರಿಗೆ ತೊಂದರೆ ತರವೇ?

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ಬಂದ್‌ ನೀರಸ; ಪಂಜಾಬ್‌, ಹರಿಯಾಣದಲ್ಲಿ ಯಶಸ್ವಿ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ರಾಜ್ಯಸಭೆಗೆ ಹಲವರ ಅವಿರೋಧ ಆಯ್ಕೆ

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ಸನ್‌ರೈಸರ್ ಹೈದರಾಬಾದ್‌ಗೆ ದ್ವಿತೀಯ ಗೆಲುವು

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನಕ್ಕೆ ಸಂಬಂಧಿಸಿ ವಿಟಿಯು ಜತೆ ಚರ್ಚೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೇವಸ್ಥಾನಕ್ಕೆ ಬೀಗ ದೇವರ ದರ್ಶನಕ್ಕಾಗಿ ಬಾಗಿಲ ಬಳಿ ಕಾದು ನಿಂತ ಬಸವ

udayavani youtube

ತಾಳಿಕೋಟೆ ಬಳಿ ಡೋಣಿ ಸೇತುವೆ ಕುಸಿತ : ಸಂಚಾರ ಬಂದ್, ಪ್ರಯಾಣಿಕರ ಪರದಾಟ

udayavani youtube

ಭಾರತದಲ್ಲಿ ಹಸಿರು ಕ್ರಾಂತಿ: ಫಲ ಏನಾಯ್ತು?

udayavani youtube

ಪ್ರಿಯಕರನ ಮೋಹಕ್ಕೆ ಬಿದ್ದು ತಾಳಿ ಕಟ್ಟಿದ ಗಂಡನಿಗೇ ಇಟ್ಳು ಮುಹೂರ್ತ

udayavani youtube

Horror, Romance, Comedyಯಲ್ಲಿ ಅನಂತ ನಾಗ್ ಅವ್ರ ಆಯ್ಕೆ ಯಾವುದಂದ್ರೆ…?

ಹೊಸ ಸೇರ್ಪಡೆ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಮೀನುಗಾರರ ಸಂಕಷ್ಟ ನಿವಾರಿಸದ ಪರಿಹಾರ ನಿಧಿ

ಮುಚ್ಚಿದ್ದ ಮೇಗದ್ದೆ ಶಾಲೆ ತೆರೆದರೂ ಶಿಕ್ಷಕರು ಬರುತ್ತಿಲ್ಲ!

ಮುಚ್ಚಿದ್ದ ಮೇಗದ್ದೆ ಶಾಲೆ ತೆರೆದರೂ ಶಿಕ್ಷಕರು ಬರುತ್ತಿಲ್ಲ!

EXAM

ಫೇಲಾದವರು ಒಂದು ವರ್ಷ ಕಾಯಲೇಬೇಕು; ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ ಇಲ್ಲ

ಹಲವು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ

ಹಲವು ವರ್ಷಗಳಿಂದ ಕಾಡುತ್ತಿದ್ದ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಪ್ರಯತ್ನ

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ

ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕ ಯೋಜನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.