ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಗಣನೀಯ ಏರಿಕೆ !


Team Udayavani, Aug 5, 2021, 8:10 AM IST

Untitled-1

ಸಾಂದರ್ಭಿಕ ಚಿತ್ರ

ಮಹಾನಗರ: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಗಣನೀಯ ಏರಿಕೆ ಕಂಡಿದ್ದು ಲಾಕ್‌ಡೌನ್‌ ದಿನಗಳಲ್ಲಿ ಇಂಥ ಕೃತ್ಯ ಹೆಚ್ಚಾಗಿ ನಡೆದಿರುವ ಶಂಕೆ ವ್ಯಕ್ತವಾಗಿದೆ.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳ (ಪೋಕ್ಸೋ) ತನಿಖೆ ನಡೆಸುವ ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯ ಮಹಿಳಾ ಪೊಲೀಸ್‌ ಠಾಣೆಯಲ್ಲಿ 2 ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಅತೀ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬಹುತೇಕ ಪ್ರಕರಣಗಳಲ್ಲಿ ಆರೋಪಿಗಳ ಬಂಧನವಾಗಿದ್ದು, ಅನೇಕ ಪ್ರಕರಣಗಳು ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇವೆ.

6 ತಿಂಗಳುಗಳಲ್ಲಿ 16 ಪ್ರಕರಣ: 

ಮಂಗಳೂರು ಮಹಿಳಾ ಪೊಲೀಸ್‌ ಠಾಣೆಯಲ್ಲಿ 2019ರ ಜ. 1ರಿಂದ ಡಿ. 31ರ ವರೆಗೆ 11 ಪೊಕೊÕà ಪ್ರಕರಣಗಳು, 2020ರ ಜ. 1ರಿಂದ ಡಿ. 31ರವರೆಗೆ 14 ಪೋಕ್ಸೋ ಪ್ರಕರಣಗಳು ದಾಖಲಾಗಿದ್ದರೆ ಈ ವರ್ಷ ಕೇವಲ ಆರು ತಿಂಗಳಲ್ಲೇ 16 ಪೋಕ್ಸೋ ಪ್ರಕರಣಗಳು ದಾಖಲಾಗಿವೆ.

ಬಾಲಕಿಯರ ಸಂಖ್ಯೆ ಅಧಿಕ :

18 ವರ್ಷದೊಳಗಿನ ಯಾವುದೇ ಮಕ್ಕಳ ಮೇಲೆ ದೌರ್ಜನ್ಯ ಎಸಗಿದರೆ ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಾಗುತ್ತದೆ. ಮಹಿಳಾ ಪೊಲೀಸ್‌ ಠಾಣೆಯಲ್ಲಿ ಮೂರು ವರ್ಷಗಳಲ್ಲಿ ದಾಖಲಾದ ಪೋಕ್ಸೋ ಪ್ರಕರಣಗಳಲ್ಲಿ 38 ಮಂದಿ ಬಾಲಕಿಯರು ದೌರ್ಜನ್ಯಕ್ಕೊಳಗಾದವರು. ಇಬ್ಬರು ಬಾಲಕರು ಇದ್ದಾರೆ. ಇದರಲ್ಲಿ ಸಂತ್ರಸ್ತ ಮಕ್ಕಳೆಲ್ಲರೂ ದ.ಕ ಜಿಲ್ಲೆಯವರೇ ಎಂಬುದು ಕೂಡ ಗಮನಾರ್ಹ.

ಜಾಗೃತಿಯೂ ಹೆಚ್ಚಳ:

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಬೆಳಕಿಗೆ ಬರುತ್ತಿವೆ. ಇಂತಹ ಕೃತ್ಯಗಳು ಹೆಚ್ಚುತ್ತಿರುವ ಸಾಧ್ಯತೆ ಇದೆ. ಆದರೆ ಜನರಲ್ಲಿ ಇಂತಹ ಪ್ರಕರಣಗಳ ಬಗ್ಗೆ ಜಾಗೃತಿ ಮೂಡಿರುವುದರಿಂದ ದೂರು ದಾಖಲಾಗುತ್ತಿದೆ. ಅಪರಾಧಿಗಳಿಗೆ ಶಿಕ್ಷೆ ಯಾಗುತ್ತಿದೆ. ಕೆಲವು ಪ್ರಕರಣಗಳಲ್ಲಿ ಬಾಲಪರಾಧಿಗಳು ಕೂಡ ಇದ್ದಾರೆ. ಅಂತೆಯೇ ಕಾಯಿದೆಯ ದುರು ಪಯೋಗ ವಾಗದಂತೆ ನೋಡಿಕೊಳ್ಳುವುದು ಕೂಡ ಅಗತ್ಯವಾಗಿರುತ್ತದೆ ಎನ್ನುತ್ತಾರೆ ಪೊಕೊÕà ಪ್ರಕರಣ ಗಳನ್ನು ನಿರ್ವಹಿಸುತ್ತಿರುವ ಪೊಲೀಸ್‌ ಅಧಿಕಾರಿಗಳು.

ಹೆತ್ತವರೇ ಎಚ್ಚರ :

ಅನೇಕ ಸಂದರ್ಭಗಳಲ್ಲಿ ಬಾಲಕರು, ಬಾಲಕಿಯರು ಏನೂ ಅರಿಯದೆ ಲೈಂಗಿಕ ದೌರ್ಜನ್ಯಕ್ಕೆ ಒಳಪಡುತ್ತಾರೆ. ಇನ್ನು ಕೆಲವೊಮ್ಮೆ ಕುತೂಹಲ, ಸ್ವಯಂ ಆಸಕ್ತಿಯಿಂದ ಇಂತಹ ಕೃತ್ಯದಲ್ಲಿ ತೊಡಗಿ ಆರೋಪಿಗಳಿಗೆ ಸಹಕರಿಸುವ ಅಪಾ ಯಗಳೂ ಇರುತ್ತವೆ. ಹಾಗಾಗಿ ಹೆತ್ತವರು ಮಕ್ಕಳ ಪ್ರತಿಯೊಂದು ನಡವಳಿಕೆ, ಚಟುವಟಿಕೆ ಬಗ್ಗೆಯೂ ಹೆಚ್ಚು ಕಾಳಜಿ ವಹಿಸುವುದು ಅಗತ್ಯ ಎನ್ನುತ್ತಾರೆ ಮಾನಸಿಕ ಆರೋಗ್ಯ ತಜ್ಞರು.

ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯಕ್ಕೆ ಅನೇಕ ಕಾರಣಗಳಿವೆ. ಇದರಲ್ಲಿ ಲಾಕ್‌ಡೌನ್‌ ಕೂಡ ಒಂದು ಕಾರಣವಾಗಿರುವ ಸಾಧ್ಯತೆ ಇದೆ. ಸಂಬಂಧಿಕರಿಂದಲೇ ದೌರ್ಜನ್ಯ ನಡೆದಿರುವ ಪ್ರಕರಣಗಳೂ ಇವೆ. ಲಾಕ್‌ಡೌನ್‌ ಸಂದರ್ಭ ಮನೆಯಲ್ಲೇ ಇದ್ದು ಮಾನಸಿಕವಾಗಿ ದುರ್ಬಲರಾಗಿ, ಅತಿಯಾದ ಮದ್ಯಸೇವನೆ ಮಾಡಿದ ಸಂಬಂಧಿಕರು, ತೀರಾ ಪರಿಚಿತರೇ ಇಂಥ ಕೃತ್ಯ ನಡೆಸಿರುವುದು ವರದಿಯಾಗಿದೆ. ಜತೆಗೆ ಮಕ್ಕಳು ಮೊಬೈಲ್‌ನಲ್ಲಿ ಅಂತರ್ಜಾಲ ಮೂಲಕ ಅಶ್ಲೀಲ ಚಿತ್ರ, ದೃಶ್ಯಗಳನ್ನು ವೀಕ್ಷಿಸಿ ಕುತೂಹಲ ಉಂಟಾಗಿ ಅದು ಅವರನ್ನು ಲೈಂಗಿಕ ದೌರ್ಜನ್ಯಕ್ಕೆ ಒಳಗಾಗುವವರೆಗೂ ಕೊಂಡೊಯ್ದಿರುವ ಸಾಧ್ಯತೆಗಳೂ ಇವೆ. ಹಾಗಾಗಿ ಮಕ್ಕಳು ಶೈಕ್ಷಣಿಕ ಅಥವಾ ಇನ್ನಿತರ ಉದ್ದೇಶಕ್ಕೆ ಆನ್‌ಲೈನ್‌ ಬಳಕೆ ಮಾಡುವಾಗ ಅದರ ಮೇಲೆ ಹೆತ್ತವರು ನಿಗಾ, ನಿಯಂತ್ರಣ ಹೊಂದಿರುವುದು ಅಗತ್ಯ.  –ಡಾ| ರಮಿಳಾ ಶೇಖರ್‌,

ಮಾನಸಿಕ ಆರೋಗ್ಯತಜ್ಞೆ 

ಮಕ್ಕಳು ಲೈಂಗಿಕ ದೌರ್ಜನ್ಯಕ್ಕೆ ಒಳಗಾದರೆ ಅವರ ಇಡೀ ಬದುಕು ಕತ್ತಲಾಗುವ ಅಪಾಯ ವಿರುತ್ತದೆ. ಅದು ದೇಶದ ಮಾನವ ಸಂಪನ್ಮೂಲದ ಮೇಲೆ ಪ್ರಭಾವ ಬೀರುತ್ತದೆ. ಹಾಗಾಗಿ ಸರಕಾರವು ವಿಶ್ವದಲ್ಲೇ ಕಠಿನವೆನಿಸಿದ ಪೋಕ್ಸೋ ಕಾಯಿದೆಯನ್ನು ಜಾರಿಗೆ ತಂದಿದ್ದು, ಈ ಕಾಯ್ದೆಯಡಿ ಅಪರಾಧಿಗಳಿಗೆ ಗರಿಷ್ಠ ಜೀವಾವಧಿ ಕಠಿನ ಕಾರಾ ಗೃಹ, ಮರಣದಂಡನೆ ಶಿಕ್ಷೆ ವಿಧಿಸಲು ಕೂಡ ಅವಕಾಶವಿದೆ. -ವಿಜಯ ವಾಸು ಪೂಜಾರಿ, ನ್ಯಾಯವಾದಿ

 

-ಸಂತೋಷ್‌ ಬೊಳ್ಳೆಟ್ಟು

 

ಟಾಪ್ ನ್ಯೂಸ್

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

ಪಲ್ಟಿಯಾಗಿ ಕಾಲುವೆಗೆ ಬಿದ್ದ ಕಾರು: ಸ್ಥಳದಲ್ಲೇ ನಾಲ್ವರ ಸಾವು

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

100 ಕೋಟಿ ಡೋಸ್‌: ಪಾರಂಪರಿಕ ತಾಣಗಳಲ್ಲಿ ತ್ರಿವರ್ಣ ಬೆಳಕಿನ ಚಿತ್ತಾರ

1

ಚಿತ್ರೀಕರಣ ಮುಗಿಸಿ ಕುಂಬಳಕಾಯಿ ಹೊಡೆದ ಭಟ್ರು ಟೀಮ್ : ಶೀಘ್ರದಲ್ಲೇ ಬಾಕಿ ಸುದ್ದಿ

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಯಾರು ಹೊಣೆ? ಆಟೋ ಬಾಡಿಗೆ 100 ರೂ., ತೆತ್ತ ದಂಡ 6000 ರೂ.: ಆಟೋ ಚಾಲಕನ ನತದೃಷ್ಟ ಕಥೆಯಿದು

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಕೋವಿಡ್19: ನಮ್ಮ ದೇಶ ಕರ್ತವ್ಯ ಪಾಲಿಸಿದೆ, ಭಾರತೀಯರಲ್ಲಿ ಹೊಸ ಭರವಸೆ ಮೂಡಿಸಿದೆ: ಮೋದಿ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಐಪಿಎಲ್‌ ಪ್ರಸಾರಕ್ಕೆ 36,000 ಕೋಟಿ ಮೌಲ್ಯ! ಇತಿಹಾಸದಲ್ಲೇ ಗರಿಷ್ಠ ಮೊತ್ತ ಸಿಗುವ ನಿರೀಕ್ಷೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

ಸವಾಲಿನ ನಡುವೆಯೂ ಬಿಸಿಯೂಟ ಸಾಂಗ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ಆರಂಭ: ವಿದ್ಯಾರ್ಥಿಗಳ ಸಂಭ್ರಮ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ ನ.8ರಂದು ರಾಷ್ಟಪತಿಗಳಿಂದ ಪದ್ಮಶ್ರೀ ಪ್ರಶಸ್ತಿ ಪುರಸ್ಕಾರ

1-AAA

ನಕ್ಸಲ್ ನಂಟು : ವಿಠಲ ಮಲೆಕುಡಿಯ,ತಂದೆ ನಿರ್ದೋಷಿ ಎಂದ ಕೋರ್ಟ್

ಬಂಧಿಸಲು ಹೋದ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಎಸ್ಕೇಪ್ : ಓರ್ವನ ಬಂಧನ

ಬಂಧಿಸಲು ಹೋದ ಪೊಲೀಸರಿಗೆ ತಲವಾರು ತೋರಿಸಿ ರೌಡಿ ಶೀಟರ್ ಎಸ್ಕೇಪ್ : ಓರ್ವನ ಬಂಧನ

MUST WATCH

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

udayavani youtube

ದುಬಾರಿ ಗಿಫ್ಟ್ ಗಳನ್ನು ಮಾರಿ ತಿಂದರೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ?

udayavani youtube

Brazilian Golden Spoon Cherry ಸುಲಭವಾಗಿ ಬೆಳೆಸಿ ಕೈತುಂಬಾ ಸಂಪಾದಿಸಿ

udayavani youtube

ಶ್ರೀರಂಗಪಟ್ಟಣ ಬಾರಿ ಮಳೆಗೆ ಕೊಚ್ಚಿ ಹೋದ ರೈತರ ಬದುಕು

ಹೊಸ ಸೇರ್ಪಡೆ

police14

ಪೊಲೀಸರು-ಸೈನಿಕರು ದೇಶದ ಕಣ್ಣುಗಳಿದ್ದಂತೆ

ತೆಪ್ಪೋತ್ಸವ, ದೇವಿಗೆ ತೀರ್ಥ ಸ್ನಾನ, udayavanipaper, kannadanews,

ತೆಪ್ಪೋತ್ಸವ ಬದಲು ದೇವಿಗೆ ತೀರ್ಥ ಸ್ನಾನ

13

ಅಕ್ಕಮಹಾದೇವಿ ವಿವಿಗೆ ನಿರಾಸಕ್ತಿಯ ಬರೆ

ಮಕ್ಕಳು, ಗುಣಮಟ್ಟದ ಆಹಾರ, udayavanipaper, kannadanews,

ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ಪೊಲೀಸರು ತಪ್ಪಿತಸ್ಥರಲ್ಲ ಎಂದ ಸರ್ಕಾರ

ಸಿಎಎ ವಿರೋಧಿಸಿ ಮಂಗಳೂರು ಗಲಭೆ ಪ್ರಕರಣ: ‘ಪೊಲೀಸರು ತಪ್ಪಿತಸ್ಥರಲ್ಲ’ ಎಂದ ಸರ್ಕಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.