Udayavni Special

ಕಳವು ಕೃತ್ಯ ಹೆಚ್ಚಳ: ಮೂರು ತಿಂಗಳುಗಳಲ್ಲಿ 94 ಪ್ರಕರಣ

Team Udayavani, Oct 30, 2020, 5:12 AM IST

ಕಳವು ಕೃತ್ಯ ಹೆಚ್ಚಳ: ಮೂರು ತಿಂಗಳುಗಳಲ್ಲಿ 94 ಪ್ರಕರಣ

ಸಾಂದರ್ಭಿಕ ಚಿತ್ರ

ಮಹಾನಗರ: ಕೊರೊನೋತ್ತರ ಅವಧಿಯಲ್ಲಿ ಮಂಗಳೂರು ನಗರ ಸಹಿತ ದ.ಕ., ಉಡುಪಿ ಜಿಲ್ಲೆಗಳಲ್ಲಿ ಕಳ್ಳತನ ಮತ್ತು ಸುಲಿಗೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಆತಂಕಕ್ಕೆ ಒಳಗಾಗಿದ್ದಾರೆ.

ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ, ಬೆಳಗ್ಗೆ ಮತ್ತು ಸಂಜೆ ವೇಳೆ ವಾಕಿಂಗ್‌ ಹೋಗುವಾಗ, ಜನರ ಓಡಾಟ ಕಡಿಮೆ ಇರುವ ಪ್ರದೇಶಗಳಲ್ಲಿ, ಒಂಟಿಯಾಗಿ ಮಹಿಳೆ ಸಂಚರಿಸುವಾಗ ಸರ ಕಳ್ಳತನ, ಮೊಬೈಲ್‌ ಫೋನ್‌ ಕಳವು, ರಾತ್ರಿ ವೇಳೆ ಪೆಟ್ರೋಲ್‌ ಪಂಪ್‌ ಕಚೇರಿಗೆ ನುಗ್ಗಿ ಸುಲಿಗೆ, ಒಂಟಿ ಮಹಿಳೆ ಇರುವ ಮನೆಗೆ ನುಗ್ಗಿ ಸುಲಿಗೆ, ಕೊಲೆ ಇತ್ಯಾದಿ ಪ್ರಕರಣಗಳು ಅಲ್ಲಲ್ಲಿ ಆಗಿಂದಾಗ್ಗೆ ವರದಿಯಾಗುತ್ತಿವೆ.

2020ರ 10 ತಿಂಗಳುಗಳ ಅವಧಿಯಲ್ಲಿ (ಜನವರಿಯಿಂದ ಅಕ್ಟೋಬರ್‌ 14ರ ತನಕ) ಮಂಗಳೂರು ಪೊಲೀಸ್‌ ಕಮಿಷನರೆಟ್‌ ವ್ಯಾಪ್ತಿಯಲ್ಲಿ 234 ವಿವಿಧ ಕಳವು ಪ್ರಕರಣಗಳು ನಡೆದಿವೆ. ಈ ಪೈಕಿ ಕೊರೊ ನೋತ್ತರ ಅವಧಿಯ ಜುಲೈ, ಆಗಸ್ಟ್‌, ಸೆಪ್ಟಂಬರ್‌ ತಿಂಗಳುಗಳಲ್ಲಿ ಅಧಿಕ ಸಂಖ್ಯೆಯ ಕಳ್ಳತನಗಳು ವರದಿಯಾಗಿವೆ. ಜುಲೈನಲ್ಲಿ 24, ಆಗಸ್ಟ್‌ನಲ್ಲಿ 37, ಸೆಪ್ಟಂಬರ್‌ನಲ್ಲಿ 33 ಕಳವು ಪ್ರಕರಣ ಸಹಿತ ಕೇವಲ 3 ತಿಂಗಳುಗಳಲ್ಲಿ 94 ಪ್ರಕರಣಗಳು ನಡೆದ ಬಗ್ಗೆ ಪೊಲೀಸ್‌ ಕಮಿಷನರೆಟ್‌ನ ಅಂಕಿ ಅಂಶಗಳು ತಿಳಿಸಿವೆ. ಲಾಕ್‌ಡೌನ್‌ ಬಳಿಕ ಉಂಟಾದ ನಿರುದ್ಯೋಗ ಮತ್ತು ತತ್ಸಂಬಂಧಿತ ಅಂಶಗಳು ಕಳವು ಪ್ರಕರಣ ಹೆಚ್ಚಲು ಕಾರಣ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. “ಕೊರೊನಾದಿಂದಾಗಿ ಅನೇಕ ಮಂದಿ ಉದ್ಯೋಗ ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಹಾಗಾಗಿ ಕೆಲವರು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಸಾಧ್ಯತೆ ಇದೆ ಎಂದು ಓರ್ವ ಹಿರಿಯ ಪೊಲೀಸ್‌ ಅಧಿಕಾರಿ ಉದಯವಾಣಿಗೆ ತಿಳಿಸಿದ್ದಾರೆ. “ದೊಡ್ಡ ಮಟ್ಟದ ಕಳವು ಪ್ರಕರಣಗಳು ಇಲ್ಲದಿದ್ದರೂ ಸಣ್ಣ ಪುಟ್ಟ ಕಳ್ಳತನಗಳು ಅಲ್ಲಲ್ಲಿ ನಡೆಯುತ್ತಿವೆ. ಕಳ್ಳರಿಗೆ ಈಗ ಎಷ್ಟು ಸಿಕ್ಕಿದರೂ ಸಾಕು ಎಂಬಂತೆ ಕೈಗೆ ಸಿಕ್ಕಿದಷ್ಟನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಆದ್ದರಿಂದ ಜನರು ವಿಶೇಷ ಜಾಗೃತರಾಗಿ ಇರಬೇಕು’ ಎಂದವರು ಸಲಹೆ ಮಾಡಿದ್ದಾರೆ.

ಕಾರ್ಯಾಚರಣೆ ಬಿಗಿ
ಇತ್ತೀಚೆಗೆ ಅಲ್ಲಲ್ಲಿ ಕಳ್ಳತನ ಪ್ರಕರಣಗಳು ನಡೆಯುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹಾಗಾಗಿ ರಾತ್ರಿ ವೇಳೆ ಪೊಲೀಸ್‌ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿದೆ. ಕೋವಿಡ್ ಸೋಂಕಿದ ಪೊಲೀಸರಲ್ಲಿ ಈಗ ಬಹುತೇಕ ಮಂದಿ ಗುಣಮುಖರಾಗಿ ಕರ್ತವ್ಯಕ್ಕೆ ಮರಳಿದ್ದಾರೆ. 253 ಮಂದಿ ಪೊಲೀಸರಿಗೆ ಕೊರೊನಾ ವೈರಸ್‌ ಸೋಂಕಿದ್ದು, ಸುಮಾರು 20 ಮಂದಿ ಮಾತ್ರ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಉಳಿದವರೆಲ್ಲರೂ ಬಿಡುಗಡೆ ಆಗಿದ್ದಾರೆ. ಗಸ್ತು ಕಾರ್ಯಕ್ಕೆ ಯುವ ಪೊಲೀಸರನ್ನೇ ಅಧಿಕ ಸಂಖ್ಯೆಯಲ್ಲಿ ನಿಯೋಜನೆ ಮಾಡಲಾಗಿದೆ. ಈಗಾಗಲೇ ಕೆಲವು ಕಳವು ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಲಾಗಿದೆ.
– ವಿನಯ್‌ ಎ. ಗಾಂವ್‌ಕರ್‌, ಡಿಸಿಪಿ

ಕಳವು ಪ್ರಕರಣಗಳ ವಿವರ
ಜನವರಿ 35
ಫೆಬ್ರವರಿ 25
ಮಾರ್ಚ್‌ 20
ಎಪ್ರಿಲ್‌ 7
ಮೇ 19
ಜೂನ್‌ 23
ಜುಲೈ 24
ಆಗಸ್ಟ್‌ 37
ಸೆಪ್ಟಂಬರ್‌ 33
ಅಕ್ಟೋಬರ್‌11
(ಅ. 14 ರ ತನಕ)
ಒಟ್ಟು 234

ಜನರಿಗೆ ಪೊಲೀಸರ ಸಲಹೆ
– ಜನರು ಹಣ, ಚಿನ್ನಾಭರಣಗಳನ್ನು ಲಾಕರ್‌ನಲ್ಲಿ ಇರಿಸಬೇಕು.
– ಮನೆ ಬಿಟ್ಟು ಹೋಗುವಾಗ ಸ್ಥಳೀಯ ಪೊಲೀಸ್‌ ಠಾಣೆಗೆ ತಿಳಿಸುವುದು.
– ಮನೆಯ ಬಾಗಿಲು, ಗ್ರಿಲ್ಸ್‌ಗಳನ್ನು ಭದ್ರ ಪಡಿಸುವುದು.
– ಮನೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ನಗದನ್ನು ಮಾತ್ರ ಇರಿಸುವುದು.
– ಅಪರಿಚಿತರು ಮನೆ ಸುತ್ತ ಸುಳಿದಾಡುತ್ತಿದ್ದರೆ ಪೊಲೀಸರಿಗೆ ಮಾಹಿತಿ ನೀಡಿ
– ಸ್ಥಿತಿವಂತರು ಮನೆಗೆ ಸೈರನ್‌/ಅಲರಾಂ/ ಸಿ.ಸಿ. ಕೆಮರಾ ಅಳವಡಿಸುವುದು.
– ವಾಕಿಂಗ್‌/ ಜಾಗಿಂಗ್‌ ಹೋಗುವಾಗ ಚಿನ್ನಾಭರಣ ಧರಿಸದಿರುವುದು.
– ಬೈಕ್‌/ ಸ್ಕೂಟರ್‌ಗಳನ್ನು ಲಾಕ್‌ ಮಾಡಿ ಇಡುವುದು.
– ಮನೆ ಕೆಲಸದವರು ಇದ್ದರೆ ಅವರ ವಿಳಾಸ, ಹಿನ್ನೆಲೆ ತಿಳಿದುಕೊಂಡಿರುವುದು.
– ಮನೆಯಲ್ಲಿ ಒಂಟಿಯಾಗಿ ವಾಸವಾಗಿದ್ದರೆ ಸ್ಥಳೀಯ ಪೊಲೀಸ್‌ ಠಾಣೆಗೆ ಮುಂಚಿತವಾಗಿ ಮಾಹಿತಿ ನೀಡುವುದು.
– ಸಾಧ್ಯವಾದರೆ ಅಂಗಡಿ/ ವ್ಯಾಪಾರ ಮಳಿಗೆಗಳನ್ನು ರಾತ್ರಿ ವೇಳೆ ತೆರೆದಿಡುವುದನ್ನು ನಿಲ್ಲಿಸಿದರೆ ಒಳಿತು.

ಜಾಗೃತರಾಗಿ
ಖಾಲಿ ಇರುವ ಮನೆಗಳು, ಅಪಾರ್ಟ್‌ ಮೆಂಟ್‌, ಒಂಟಿ ಮನೆಗಳನ್ನು ಕೇಂದ್ರವಾಗಿರಿಸಿ ಕಳವು ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಬಗ್ಗೆ ಸಾರ್ವಜನಿಕರು ಜಾಗೃತರಾಗಿ. ಮುಖ್ಯವಾಗಿ ಮನೆ, ಅಪಾರ್ಟ್‌ ಮೆಂಟ್‌ನಿಂದ ಬಹಳಷ್ಟು ದಿನಗಳವರೆಗೆ ದೂರ ಪ್ರವಾಸ ಹೋಗುವ ಸಂದರ್ಭ ಸಂಬಂಧಪಟ್ಟ ಪೊಲೀಸ್‌ ಠಾಣೆ, ಬೀಟ್‌ ಪೊಲೀಸರಿಗೆ ಸೂಚನೆ ನೀಡಬೇಕು. ಆ ಮನೆಯ ಮೇಲೆ ಪೊಲೀಸರು ವಿಶೇಷ ನಿಗಾ ಇರಿಸಲಿದ್ದಾರೆ. ಮಾತ್ರವಲ್ಲದೆ ಅಪಾರ್ಟ್‌ಮೆಂಟ್‌ ವಾಚ್‌ಮೆನ್‌ಗೂ ಮಾಹಿತಿ ನೀಡಬೇಕು.
– ವಿಕಾಸ್‌ ಕುಮಾರ್‌, ಪೊಲೀಸ್‌ ಕಮಿಷನರ್‌

 ಹಿಲರಿ ಕ್ರಾಸ್ತಾ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ, ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ನಿದ್ದೆ ಮಾತ್ರೆ ಸೇವಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸರಕಾರದಿಂದ ದಿಢೀರ್ ಸುತ್ತೋಲೆ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ಕಲ್ಲಿದ್ದಲು ಹೊಗೆಯಿಂದ ಉಸಿರುಕಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು

ಆಟವಾಡುತ್ತಿದ್ದ 5 ಮಕ್ಕಳು ನಾಪತ್ತೆ: ಘಟನೆ ನಡೆದ ಒಂದೇ ಗಂಟೆಯಲ್ಲಿ ಪತ್ತೆಹಚ್ಚಿದ ಪೊಲೀಸರು

ಹುಬ್ಬಳ್ಳಿ : ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ ಎಂದು ಮನವಿ ಮಾಡಿದ ಸಿಬ್ಬಂದಿಗಳು

ಹುಬ್ಬಳ್ಳಿ :ದಯವಿಟ್ಟು ನಮ್ಮನ್ನು ಬೇರೆ ಠಾಣೆಗೆ ವರ್ಗಾವಣೆ ಮಾಡಿ! ಪೊಲೀಸ್ ಸಿಬ್ಬಂದಿಗಳ ಮನವಿ

ಗೋವಾದಲ್ಲಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆ

ಗೋವಾದಲ್ಲಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ್ ಪುತ್ರನ ಅದ್ಧೂರಿ ಮದುವೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

barke police station

ಮಂಗಳೂರು: ಬೊಕ್ಕ ಪಟ್ನ ಬೋಟ್ ಯಾರ್ಡ್ ಬಳಿ ರೌಡಿ ಶೀಟರ್ ಬರ್ಬರ ಹತ್ಯೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಆದೇಶಕ್ಕೆ 16 ವರ್ಷ: ಇನ್ನೂ ಆಗದ ಅಧಿಸೂಚನೆ

ಕೆಎಸ್ಸಾರ್ಟಿಸಿ ಹಳೆ ಬಸ್‌ ಇನ್ನು ಸಂಚಾರಿ ಗ್ರಂಥಾಲಯ

ಕೆಎಸ್ಸಾರ್ಟಿಸಿ ಹಳೆ ಬಸ್‌ ಇನ್ನು ಸಂಚಾರಿ ಗ್ರಂಥಾಲಯ

ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಕರೆ: ಇಬ್ಬರ ಬಂಧನ

ಅಶ್ಲೀಲ ಚಿತ್ರ ಸಂಗ್ರಹಿಸಿ ಪೊಲೀಸ್ ಅಧಿಕಾರಿಯ ಹೆಸರಿನಲ್ಲಿ ಬೆದರಿಕೆ ಕರೆ: ಇಬ್ಬರ ಬಂಧನ

MUST WATCH

udayavani youtube

ತಾರಸಿಯಲ್ಲಿ ಹೂ, ಹಣ್ಣು, ತರಕಾರಿ ತರಾವರಿ

udayavani youtube

25 ವರ್ಷಗಳಿಂದ ಮಸಾಲೆ ಉದ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದ ಉಡುಪಿಯ ಮಹಿಳೆ

udayavani youtube

ಮಂಗಳೂರು: ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಲಷ್ಕರ್ ಉಗ್ರರ ಪರ ಗೋಡೆ ಬರಹ

udayavani youtube

ಮಂಗಳೂರು ವಿಮಾನನಿಲ್ದಾಣಕ್ಕೆ ಮಧ್ವಶಂಕರ ಹೆಸರು: ಪುತ್ತಿಗೆ ಶ್ರೀ ಒಲವು

udayavani youtube

ಶತಮಾನಗಳಿಂದಲೂ ನಡೆಯುತ್ತಿರುವ ತುಳುವರ ಭೂಮಿಪೂಜೆ ಗದ್ದೆಕೋರಿ ಈಗಲೂ ಇಲ್ಲಿ ಜೀವಂತ

ಹೊಸ ಸೇರ್ಪಡೆ

ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ನಿದ್ದೆ ಮಾತ್ರೆ ಸೇವಿಸಿ ಸಿಎಂ ರಾಜಕೀಯ ಕಾರ್ಯದರ್ಶಿ ಎನ್.ಆರ್. ಸಂತೋಷ್ ಆತ್ಮಹತ್ಯೆ ಯತ್ನ

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

ತನಿಖೆ ಚುರುಕು: ಡಾಕ್ಟರ್‌ ಮೋಟು ಮತ್ತಷ್ಟು ದಿನ ಜೈಲಿನಲ್ಲಿ!

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸರಕಾರದಿಂದ ದಿಢೀರ್ ಸುತ್ತೋಲೆ

ರಾಜ್ಯ ಸರಕಾರಿ ಕಚೇರಿಗಳಲ್ಲಿ ಇನ್ನು ಮುಂದೆ ಕನ್ನಡ ಕಡ್ಡಾಯ! ಸುತ್ತೋಲೆ ಹೊರಡಿಸಿದ ಸರಕಾರ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ರಾಜ್ಯದ ಅಭಿವೃದ್ಧಿ ಯೋಜನೆ ಕುರಿತು ಎರಡು ತಿಂಗಳಿಗೊಮ್ಮೆ ಸಂಸದರೊಂದಿಗೆ ಸಭೆ: ಸಿಎಂ

ಕಲ್ಲಿದ್ದಲು ಹೊಗೆಯಿಂದ ಉಸಿರುಕಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

ಕಲ್ಲಿದ್ದಲು ಹೊಗೆಯಿಂದ ಉಸಿರುಗಟ್ಟಿ ಯುವತಿ ಸಾವು, ಮೂವರು ಅಸ್ವಸ್ಥ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.