Udayavni Special

 ನಗರದಲ್ಲಿ ಹೆಚ್ಚಾಗುತ್ತಿದೆ ನಿಷೇಧಿತ ಪ್ಲಾಸ್ಟಿಕ್‌ ಬಳಕೆ


Team Udayavani, Aug 25, 2018, 11:18 AM IST

25-agust-6.jpg

ಮಹಾನಗರ: ಪ್ಲಾಸ್ಟಿಕ್‌ ನಿಷೇಧ ಕಾನೂನು ರಾಜ್ಯಾದ್ಯಂತ ಜಾರಿಯಲ್ಲಿದ್ದರೂ, ನಗರದಲ್ಲಿ ಬಹಳಷ್ಟು ಅಂಗಡಿಗಳಲ್ಲಿ ಎಗ್ಗಿಲ್ಲದೆ ಪ್ಲಾಸ್ಟಿಕ್‌ ಚೀಲಗಳ ಮಾರಾಟ-ಬಳಕೆ ನಡೆಯುತ್ತಿದೆ. ಅಂಗಡಿಗಳಿಗೆ ತೆರಳಿ ದಂಡ ಹಾಕಬೇಕಿದ್ದ ಪಾಲಿಕೆ ಅಧಿಕಾರಿಗಳಿಗೆ ಈ ವಿಚಾರ ತಿಳಿದರೂ, ಮೌನವಾಗಿದ್ದಾರೆ. ಇದೀಗ ಎಚ್ಚೆತ್ತುಕೊಂಡಿರುವ ಪಾಲಿಕೆಯು ಮೂರು ತಂಡ ರಚನೆ ಮಾಡಿ ಅನಧಿಕೃತವಾಗಿ ಪ್ಲಾಸ್ಟಿಕ್‌ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಾರ್ಯಾಚರಣೆ ನಡೆಸಲು ಮುಂದಾಗಿದೆ.

ರಾಜ್ಯದಲ್ಲಿ 4 ರಿಂದ 5 ಮೈಕ್ರಾನ್‌ ಪ್ಲಾಸ್ಟಿಕ್‌ ಚೀಲಗಳ ಮಾರಾಟ ನಿಷೇಧವಿದೆ. ಈ ಪ್ರಮಾಣದ ಪ್ಲಾಸ್ಟಿಕ್‌ಗಳನ್ನು ಮಾರಾಟ ಮಾಡಿದರೆ ಅಂಗಡಿ ಮಾಲಕರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂಬ ನಿಯಮ 2015- 16ರಲ್ಲಿ ಜಾರಿಗೆ ಬಂದಿದೆ. ಅಲ್ಲದೆ, ಅಂಗಡಿಗಳಿಗೆ ಪರವಾನಗಿ ನೀಡುವ ವೇಳೆ ಪ್ಲಾಸ್ಟಿಕ್‌ ಬಳಸಬಾರದೆಂಬ ಸ್ಪಷ್ಟ ನಿಯಮ ಮತ್ತು ಎಚ್ಚರಿಕೆಯನ್ನೂ ಪಾಲಿಕೆ ನೀಡುತ್ತದೆ. ಆದರೆ ಮಂಗಳೂರಿನ ಹೆಚ್ಚಿನ ಅಂಗಡಿ ಮಾಲಕರು ಈ ನಿಯಮಗಳಿಗೆ ಕ್ಯಾರೇ ಅನ್ನುತ್ತಿಲ್ಲ.

ಮೂರು ತಂಡ ರಚನೆ
ಅನಧಿಕೃತವಾಗಿ ಪ್ಲಾಸ್ಟಿಕ್‌ ಚೀಲ ಮಾರಾಟ ಮಾಡುವ ಅಂಗಡಿಗಳ ಬಗ್ಗೆ ನಿಗಾ ಇಡಲು ಪಾಲಿಕೆಯು ಇದೀಗ ಮೂರು ತಂಡಗಳನ್ನು ರಚನೆ ಮಾಡಿದೆ. ಈ ತಂಡದಲ್ಲಿ ಆರೋಗ್ಯ ಅಭಿಯಂತರ, ಆರೋಗ್ಯ ನಿರೀಕ್ಷಕರು, ಪರಿಸರ ಅಭಿಯಂತರರು ಇರುತ್ತಾರೆ. ಮುಂದಿನ ವಾರದಲ್ಲಿಯೇ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ಜತೆ ಮೂರೂ ತಂಡದ ಸದಸ್ಯರು ನಗರದ ನಾನಾ ಕಡೆಗಳಲ್ಲಿ ಕಾರ್ಯಾಚರಣೆ ನಡೆಸಲು ತೀರ್ಮಾನಿಸಿದ್ದಾರೆ.

ನಗರಕ್ಕೆ ಬರುತ್ತಿದೆ ಲೋಡ್‌ಗಟ್ಟಲೆ ಪ್ಲಾಸ್ಟಿಕ್‌
ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶಶಿಧರ ಶೆಟ್ಟಿ ಅವರು ‘ಸುದಿನ’ಕ್ಕೆ ಪ್ರತಿಕ್ರಿಯಿಸಿ ‘ಮಂಗಳೂರಿನಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ ಮಾಡುವಂತಹ ಕೈಗಾರಿಕೆ ಇಲ್ಲದ ಕಾರಣ ಗುಜರಾತ್‌ ಮತ್ತು ಬೆಂಗಳೂರಿನಿಂದ ನಗರಕ್ಕೆ ಲೋಡ್‌ಗಟ್ಟಲೆ ಪ್ಲಾಸ್ಟಿಕ್‌ಗಳು ಅನಧಿಕೃತವಾಗಿ ಬರುತ್ತಿವೆ. ಪಾಲಿಕೆ ಅಧಿಕಾರಿಗಳಿಗೆ ಈ ವಿಚಾರ ತಿಳಿದಿದ್ದರೂ ಮೌನವಾಗಿದ್ದಾರೆ. ಟ್ರಾಫಿಕ್‌ ಪೊಲೀಸರು ನಡು ರಸ್ತೆಯಲ್ಲಿ ಯಾವ ರೀತಿ ವಾಹನ ತಪಾಸಣೆ ನಡೆಸುತ್ತಾರೆಯೋ, ಪಾಲಿಕೆ ಅಧಿಕಾರಿಗಳು ಅದೇ ರೀತಿ ಅಂಗಡಿಗಳಿಗೆ ತೆರಳಿ ತಪಾಸಣೆ ನಡೆಸಿ ತಪ್ಪಿತಸ್ಥರನ್ನು ಶಿಕ್ಷೆಗೆ ಗುರಿಪಡಿಸಬೇಕು ಎಂದು ತಿಳಿಸಿದ್ದಾರೆ. 

ವರ್ಷಕ್ಕೆ 1,460 ಟನ್‌ ಪ್ಲಾಸ್ಟಿಕ್‌
ನಗರದಲ್ಲಿ ಮನೆ-ಮನೆಗೆ ತೆರಳಿ ಕಸ ವಿಲೇವಾರಿ ಮಾಡಲಾಗುತ್ತದೆ. ಆ ಸಮಯದಲ್ಲಿ ಸಿಗುವಂತಹ ಪ್ಲಾಸ್ಟಿಕ್‌ಗಳು ವರ್ಷಕ್ಕೆ ಸುಮಾರು 1,460 ಟನ್‌, ದಿನಕ್ಕೆ ಶೇ.3ರಷ್ಟು ಪ್ಲಾಸ್ಟಿಕ್‌ ನಗರದಲ್ಲಿಯೇ ಉತ್ಪಾದನೆಯಾಗುತ್ತದೆ. ಇವುಗಳನ್ನು ಪಚ್ಚನಾಡಿ ಬಳಿಕ ಲ್ಯಾಂಡ್‌ ಫಿಲ್‌ ಸೈಟ್‌ಗೆ ರವಾನಿಸಲಾಗುತ್ತದೆ.  

ಹಲವೆಡೆ ಜಾಗೃತಿ
ರಾಜ್ಯ ಸರಕಾರ ಪ್ಲಾಸ್ಟಿಕ್‌ ಬಳಕೆಯನ್ನು ಈಗಾಗಲೇ ನಿಷೇಧ ಮಾಡಿದೆ. ಮಂಗಳೂರು ನಗರದಲ್ಲಿ ಪ್ಲಾಸ್ಟಿಕ್‌ ಉತ್ಪಾದನೆ ಮಾಡುವಂತಹ ಯಾವುದೇ ಕೈಗಾರಿಕೆಗಳಿಲ್ಲ. ಪ್ಲಾಸ್ಟಿಕ್‌ ವಸ್ತುಗಳ ಬಳಕೆ ನಿಷೇಧಕ್ಕೆ ಸಂಬಂಧ ಪಟ್ಟಂತೆ ಈಗಾಗಲೇ ಅನೇಕ ಕಡೆಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
 -ಜಯಪ್ರಕಾಶ್‌ ನಾಯಕ್‌,
ಹಿರಿಯ ವೈಜ್ಞಾನಿಕ ಅಧಿಕಾರಿ

ಮುಂದಿನ ವಾರವೇ ಕಾರ್ಯಾಚರಣೆ
ನಗರದಲ್ಲಿ ಅನಧಿಕೃತವಾಗಿ ಪ್ಲಾಸ್ಟಿಕ್‌ ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕಠಿನ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಪಾಲಿಕೆಯಿಂದ ಮೂರು ತಂಡಗಳನ್ನು ಗುರುತಿಸಲಾಗಿದೆ. ಮುಂದಿನ ವಾರದಿಂದಲೇ ಕಾರ್ಯಾಚರಣೆ ಪ್ರಾರಂಭವಾಗುತ್ತದೆ.
– ಮಧು,ಪಾಲಿಕೆ ಪರಿಸರ
ಅಭಿಯಂತರ

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಸಚಿನ್‌ ಪ್ರತಾಪ್

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಲಿನ ಆಘಾತದಲ್ಲೂ ಕೊಹ್ಲಿಗೆ 12 ಲಕ್ಷ ರೂ. ದಂಡ: ಅಷ್ಟಕ್ಕೂ ಕೊಹ್ಲಿ ಮಾಡಿದ್ದೇನು?

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

ಸೋಂಕು ತಡೆಗೆ ಪರೀಕ್ಷೆ ಹೆಚ್ಚಿಸಲು ಸಜ್ಜು

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

ಆರು ತಿಂಗಳಿಗೊಮ್ಮೆ ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸಲಿ, ನನಗೂ ವಿಶ್ವಾಸ ಬರುತ್ತೆ: BSY

ಕಡೂರು ಪಟ್ಟಣದಲ್ಲಿ ಮನೆಯಲ್ಲಿಯೇ ಗಾಂಜಾ ದಾಸ್ತಾನು: ತಂದೆ-ಮಗಳ ಬಂಧನ

ಕಡೂರು ಪಟ್ಟಣದಲ್ಲಿ ಮನೆಯಲ್ಲಿಯೇ ಗಾಂಜಾ ದಾಸ್ತಾನು: ತಂದೆ-ಮಗಳ ಬಂಧನ

ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

ಸಚಿನ್‌ ಪುತ್ರಿ ಸಾರಾ-ಶುಬ್ಮನ್‌ ನಡುವೆ ಪ್ರಣಯ ಪ್ರಸಂಗ? ಸಚಿನ್ ಅಳಿಯನಾಗುತ್ತಾನಾ ಗಿಲ್

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ

ವಿಚಾರಣೆಗೆ ಕರೆದಿದ್ದಾರಷ್ಟೇ, ನಾನು ಅಪರಾಧಿಯಲ್ಲ: ಸಿಸಿಬಿ ವಿಚಾರಣೆಗೆ ಮಂಗಳೂರಿನತ್ತ ಅನುಶ್ರೀ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ತೋಟದ ನಡುವೆ ಸಾಗುವ ಮಿನಿ ಟಿಪ್ಪರ್ ಆವಿಷ್ಕಾರ ಮಾಡಿದ ಪಾಲ್ತಾಡಿಯ ಯುವಕ

udayavani youtube

Udupi Krishna temple to be open for public from September 28 | Udayavani

udayavani youtube

ಕೋವಿಡ್ ‌ಕಾಲದಲ್ಲಿ ರಸ್ತೆ ರಾಜಕಾರಣ: ಪ್ರತಿಕ್ರಿಯಿಸಿದ ಸಂತ ಅಲೋಶಿಯಸ್ ಸಂಸ್ಥೆ

udayavani youtube

ಮಂಗಳೂರು ನಗರದ ಲೈಟ್ ಹೌಸ್ ರೋಡ್ ಗೆ ‘ಮುಲ್ಕಿ ಸುಂದರರಾಮ ಶೆಟ್ಟಿ ರಸ್ತೆ’ ಎಂದು ಮರುನಾಮಕರಣ

udayavani youtube

District Excise Department seized Millions worth of Marijuana | Udayavaniಹೊಸ ಸೇರ್ಪಡೆ

rn-tdy-1

ಕಸ ವಿಲೇವಾರಿ ಘಟಕಕ್ಕೆ ರೈತರ ವಿರೋಧ

ಡೇರಿ ಆಡಳಿತ ಪಾರದರ್ಶಕವಾಗಿರಲಿ

ಡೇರಿ ಆಡಳಿತ ಪಾರದರ್ಶಕವಾಗಿರಲಿ

ಸಚಿನ್‌ ಪ್ರತಾಪ್

ರಾ. ಕಬಡ್ಡಿ ಸಂಭಾವ್ಯ ತಂಡಕ್ಕೆ ಆಯ್ಕೆಯಾಗಿದ್ದ ರಾಜ್ಯದ ಆಟಗಾರನಿಗೆ ತರಬೇತಿಗಿಲ್ಲ ಆಹ್ವಾನ!

ಪಾಲಿಕೆ ಆಸ್ತಿ ಸಂರಕ್ಷಣೆಗೆ ಆಸ್ತಿಗಳ ತಾಳೆ ಪರಿಶೀಲನೆ

ಪಾಲಿಕೆ ಆಸ್ತಿ ಸಂರಕ್ಷಣೆಗೆ ಆಸ್ತಿಗಳ ತಾಳೆ ಪರಿಶೀಲನೆ

bng-tdy-2

ಪಾಲಿಕೆಯಿಂದ ನಾಲ್ಕು ಖಾಸಗಿ ಆಸ್ಪತ್ರೆಗಳ ವಿರುದ್ಧ ಎಫ್ಐಆರ್‌?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.